2021ರಿಂದ ವರ್ಷದಲ್ಲಿ ನಾಲ್ಕು ಬಾರಿ ಜೆಇಇ(ಮುಖ್ಯ ಪರೀಕ್ಷೆ) ಆಯೋಜಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಅಂಕ ಗಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ. ಕನ್ನಡ, ತಮಿಳು, ತೆಲುಗು ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಯುತ್ತದೆ. ೨೦೨೧ರ ಮೊದಲ ಜೆಇಇ (ಮುಖ್ಯ ಪರೀಕ್ಷೆ) ಫೆ.೨೩ರಿಂದ ೨೬ರವರೆಗೆ ನಡೆಯಲಿದೆ ಎಂದರು.
Courtesyg: Google (photo)