ಶನಿ, ಗುರು ಮಹಾ ಸಂಯೋಗ

400 ವರ್ಷಗಳ ಬಳಿಕ ಖಗೋಳ ವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನ ಸೋಮವಾರ ಘಟಿಸಲಿದೆ. ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿರುವ ಈ ಘಟನೆಯನ್ನು ಮಹಾ ಸಂಯೋಗ ಎನ್ನಲಾಗುತ್ತದೆ. ಈ ವಿದ್ಯಮಾನ ಮತ್ತೆ ಘಟಿಸುವುದು 60 ವರ್ಷಗಳ ನಂತರ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.

ಎರಡೂ ಗ್ರಹಗಳು ಡಿ.13ರಿಂದಲೇ ಸಮೀಪಕ್ಕೆ ಬರಲಾರಂಭಿಸಿವೆ. ಇಂದು(ಸೋಮವಾರ) ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದು, 22ರ ನಂತರ ದೂರವಾಗಲಿವೆ. ಶನಿ ಗ್ರಹ ಮೇಲ್ಭಾಗ ಹಾಗೂ  ಗುರು ಗ್ರಹ ಕೆಳಭಾಗದಲ್ಲಿ ಗೋಚರಿಸಿದೆ. ಸೋಮವಾರ ರಾತ್ರಿಯಿಂದ ಗುರು ಗ್ರಹ  ಮೇಲೆ ಮತ್ತು ಶನಿ ಗ್ರಹವು ಕೆಳಭಾಗದಲ್ಲಿ ಗೋಚರಿಸಲಿದೆ.

ಶನಿ ಮತ್ತು ಗುರು ಗ್ರಹಗಳು ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಪರಸ್ಪರ ಹಾದುಹೋಗಲಿವೆ. ಪ್ರತಿ 20 ವರ್ಷಗಳಿಗೊಮ್ಮೆ ಇದು ಸಂಭವಿಸುತ್ತದೆ. ಆದರೆ, ಈ ಬಾರಿ ಈ ಎರಡೂ ಗ್ರಹಗಳಿಗೆ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿದ್ದು, ವಿದ್ಯಮಾನ ಗೋಚರಿಸಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

1610ರಲ್ಲಿ ಗೆಲಿಲಿಯೊ ಗೆಲಿಲಿ,ಗುರು ಗ್ರಹ ಮತ್ತು ಅದರ ನಾಲ್ಕು ಚಂದ್ರಗಳನ್ನು ಗುರುತಿಸಿದ್ದರು. 1623ರಲ್ಲಿ ಮತ್ತೊಮ್ಮೆ ಗುರು ಗ್ರಹವನ್ನು ವೀಕ್ಷಿಸುವಾಗ ಶನಿ ಗ್ರಹ ಅತ್ಯಂತ ಸಮೀಪದಲ್ಲಿ ಗೋಚರಿಸಿತ್ತು. ಆನಂತರ ಈವರೆಗೆ ಇಂತಹ ವಿದ್ಯಮಾನ ಘಟಿಸಿಲ್ಲ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top