ಬಿಜೆಪಿ ಸರಣಿ ವಿಜಯ: ಕಾಂಗ್ರೆಸ್, ಪ್ರತಿಪಕ್ಷಗಳ ಕಾರ್ಯನೀತಿ ಏನು?
ಐದು ರಾಜ್ಯಗಳ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಕೇರಳದಲ್ಲಿ ಎಡ ರಂಗ ಸೋಲುಂಡಿವೆ. ಅಸ್ಸಾಮಿನಲ್ಲಿ ಎನ್‌ಡಿಎ 3ನೇ ಅವಧಿಗೆ ಹಾಗೂ ಪುದು ಚೆರಿಯಲ್ಲಿ ಎನ್.ರಂಗಸ್ವಾಮಿ ಮತ್ತೊಮ್ಮೆ ಗದ್ದುಗೆ ಹಿಡಿದಿದ್ದಾರೆ. ಪ್ರತಿಪಕ್ಷಗಳಿಗೆ 2024ರ ಲೋಕಸಭೆ ಚುನಾವಣೆ ತೆರೆದಿದ್ದ ಬಾಗಿಲು ಈಗ ಬಹುತೇಕ ಮುಚ್ಚಿಹೋಗಿದೆ; ಧರ್ಮ, ಭಾಷೆ ಮತ್ತು ಜಾತಿಗಳ ವಿಸ್ತೃತ ವೈವಿಧ್ಯವಿದ್ದರೂ, ಶೇ.80 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಮತ್ತು ಕಾಂಗ್ರೆಸ್ ನಾಲ್ಕು ರಾಜ್ಯಗಳಿಗೆ ಸೀಮಿತವಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ […]
ತಮಿಳುನಾಡು ಚುನಾವಣೆ: ದ್ರಾವಿಡ ವಿ/ಎಸ್ ರಾಷ್ಟ್ರೀಯವಾದಿ ಸಿದ್ಧಾಂತದ ಹಣಾಹಣಿ
ತಮಿಳುನಾಡು ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಅವರನ್ನು ಕರೂರು ಕಾಲ್ತುಳಿತ ಹಾಗೂ ವಿಚ್ಛೇದನ ಪ್ರಕರಣಗಳು ಕಾಡುತ್ತಿವೆ. ಎಐಎಡಿಎಂಕೆ ನಿಶ್ಶಕ್ತವಾಗಿದೆ ಮತ್ತು ಬಿಜೆಪಿಯ ಕೋಮುವಾದಿ ಸಂಕ ಥನಗಳಿಗೆ ಜನ ಮರುಳಾದಂತೆ ಕಾಣುತ್ತಿಲ್ಲ. ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ)ವು ಕಾಂಗ್ರೆಸ್‌ಗೆ 28 […]

