ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲೆ

ಬೀದರ್‌ನಲ್ಲಿ ಋತುಮಾನದ ಅತಿ ಕಡಿಮೆ ತಾಪಮಾನ ಎನ್ನಲಾದ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 2019ರ ಜ.೧ರಂದು 6.0 ಡಿಗ್ರಿ ಸೆಲ್ಸಿಯಸ್ ಹಾಗೂ ಕಳೆದ ನವೆಂಬರ್‌ನಲ್ಲಿ 7 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು. ವಿಜಯಪುರದಲ್ಲಿ 9.5, ಧಾರವಾಡ 10.2, ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ 11 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಉತ್ತರದಿಂದ ಒಣ ಹವೆ, ಶೀತಗಾಳಿ ಬೀಸುತ್ತಿರುವುದು, ಮೋಡರಹಿತ ಆಕಾಶ ಹಾಗೂ ಲಾನಿನೊ ಪ್ರಭಾವದಿಂದ ತಾಪಮಾನ ಇಳಿಕೆಯಾಗುತ್ತಿದೆ. ಮುಂಜಾನೆಯಿಂದಲೇ ದಟ್ಟ ಮಂಜು ಆವರಿಸುತ್ತಿದ್ದು, ಚಳಿ ಹೆಚ್ಚುತ್ತಿದೆ. ಕೆಲ ಬೆಳೆಗಳಿಗೆ ಈ ಹವೆ ಪೂರಕ ಎಂದು ಇಲಾಖೆ ಹೇಳಿದೆ.

Courtesyg: Google (photo)

 

Journalist,Translator,avid bibliophile

Leave a Reply

Your email address will not be published. Required fields are marked *

Back To Top