2021-22ರಲ್ಲಿ ಆಟೊಮೊಬೈಲ್ ಉದ್ದಿಮೆ ಬೆಳವಣಿಗೆ

2021-22ನೇ ಆರ್ಥಿಕ ವರ್ಷದಲ್ಲಿ ಭಾರತದ ಆಟೊಮೊಬೈಲ್ ಉದ್ದಿಮೆಯು ಹೆಚ್ಚಿನ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ನೊಮುರ ಸಂಶೋಧನಾ ಸಂಸ್ಥೆ ಅಂದಾಜಿಸಿದೆ. ವಿದ್ಯುತ್ ಚಾಲಿತ ವಾಹನಗಳು, ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನಗಳು, ಕೂಡ ಹೆಚ್ಚಿನ ಮಾರಾಟವನ್ನು ಕಾಣಲಿವೆ ಎಂದು ಅದು ಹೇಳಿದೆ.ವೈಯಕ್ತಿಕ ಉಪಯೋಗಕ್ಕೆ ಬಳಸುವ ವಾಹನಗಳ ವಿಭಾಗದಲ್ಲಿ 2018–19ರಲ್ಲಿ ಕಂಡಿದ್ದ ಮಾರಾಟ ಪ್ರಮಾಣವನ್ನು ಉದ್ದಿಮೆ ಮತ್ತೆ ಕಾಣುವುದು 2022–23ರಲ್ಲಿ ಎಂದು ಅದು ಅಂದಾಜು ಮಾಡಿದೆ. 2018-19ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣದಲ್ಲಿ ಶೇ. 2.7ರಷ್ಟು ಹೆಚ್ಚಳ ಆಗಿತ್ತು ಎಂದು ಭಾರತೀಯ ಆಟೊಮೊಬೈಲ್ ತಯಾ ರಕರ ಸಂಘ ಮಾಹಿತಿ ನೀಡಿದೆ.

ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಸುವ ಕೋಶಗಳ ತಯಾರಿಕೆ ಭಾರ ತದಲ್ಲಿ ಆರಂಭವಾಗುತ್ತಿದೆ. ೨೦೨೧–೨೨ರಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರಾಟದ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ ಕಾಣಸಿಗಲಿದೆ. ಎಂದು ಎನ್‌ಆಐð ಕನ್ಸಲ್ಟಿಂಗ್ ಆ್ಯಂಡ್ ಸಲ್ಯೂ ಷನ್ಸ್ ಇಂಡಿಯಾ ಕಂಪನಿಯ ಆಶಿಮ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top