6ನೇ ಸುತ್ತಿನ ತರಂಗಾಂತರ ಹರಾಜು ಪ್ರಕ್ರಿಯೆ ಮಾರ್ಚ್ 1ರಿಂದ ಆರಂಭವಾಗಲಿದೆ. 3.92 ಲಕ್ಷ ಕೋಟಿ ರೂ. ಮೌಲ್ಯದ ೨,೨೫೧.೨೫ ಮೆಗಾ ಹರ್ಟ್ಸ್ ತರಂಗಾಂತರದ ಹರಾಜು ಪ್ರಸ್ತಾವಕ್ಕೆ ಡಿ.12ರಂದು ಕೇಂದ್ರ ಒಪ್ಪಿಗೆ ನೀಡಿತ್ತು. ಹರಾಜು ಪ್ರಕ್ರಿಯೆಗೆ ಮುನ್ನ ಜ.12ರಂದು ಸಭೆ ನಡೆಯಲಿದೆ. ಸ್ಪಷ್ಟೀಕರಣ ಪಡೆಯಲು ಜ.28 ಕೊನೆ ದಿನ. ಟೆಲಿಕಾಂ ಕಂಪನಿಗಳು ಫೆ.5ರೊಳಗೆ ಅರ್ಜಿ ಸಲ್ಲಿಸಬೇಕು. ಬಿಡ್ನಲ್ಲಿ ಪಾಲ್ಗೊಳ್ಳುವವರ ಪಟ್ಟಿಯನ್ನು ಫೆ.24ರಂದು ಪ್ರಕಟಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
Courtesyg: Google (photo)