ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಪ್ರವೇಶಕ್ಕೆ ನಡೆಯುವ ಜೆಇಇ- ಅಡ್ವಾನ್ಸ್ಡ್ ಪರೀಕ್ಷೆ ಜು.3ರಂದು ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಐಐಟಿ ಖರಗ್ಪುರದಲ್ಲಿ ಜು.೩ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲು ದ್ವಿತೀಯ ಪಿಯುನಲ್ಲಿ ಶೇ.75 ಅಂಕ ಇರಬೇಕು ಎನ್ನುವ ಶರತ್ತನ್ನು ಕೋವಿಡ್ನಿಂದ ಕಳೆದ ವರ್ಷ ಸಡಿಲಿಸಲಾಗಿತ್ತು. ಸಡಿಲಿಕೆ ಈ ವರ್ಷವೂ ಮುಂದುವರಿಯಲಿದೆ. ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಜೆಇಇ-ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಮಾತ್ರ ಜೆಇಇ- ಅಡ್ವಾನ್ಸ್ಡ್ ಪರೀಕ್ಷೆ ಬರೆಯಬಹುದು.
Courtesyg: Google (photo)