ಹಳೆ ವಾಹನಗಳನ್ನು ಗುಜರಿಗೆ ಹಾಕಲು ರೂಲ್ಸ್
ಬೆಂಗಳೂರು: ನಿಮ್ಮ ಬಳಿ ಹಳೆ ವಾಹನಗಳಿದ್ದರೆ ಅವು ಇನ್ಮುಂದೆ ರಸ್ತೆಗಿಳಿಯುವಂತಿಲ್ಲ. ಹಳೆ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ವಾಯುಮಾಲಿನ್ಯ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಹಳೆ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರ ರೂಲ್ಸ್ ತರುತ್ತಿದೆ. ಬೆಂಗಳೂರಿನಲ್ಲಿ ಹಳೆ ವಾಹನಗಳನ್ನು ಬ್ಯಾನ್ ಮಾಡಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಸದ್ಯದಲ್ಲೇ ಗುಜರಿ ಸೇರಲಿವೆ ಲಕ್ಷಾಂತರ ವಾಹನಗಳು
ಹಳೆ ವಾಹನಗಳ ಬ್ಯಾನ್ ಮಾಡುವ ಬಗ್ಗೆ ತಯಾರಿ ಮಾಡುವಂತೆ RTO ಗೆ ರಾಜ್ಯ ಸರ್ಕಾರದಿಂದ ಮೌಖಿಕ ಆದೇಶ ಲಭಿಸಿದೆ. 15 ವರ್ಷ ಮೇಲ್ಪಟ್ಟ ಕಮರ್ಷಿಯಲ್ ವಾಹನ, 20 ವರ್ಷ ಮೇಲ್ಟಟ್ಟ ಪರ್ಸನಲ್ ವಾಹನ ಬ್ಯಾನ್. ಈಗಾಗಲೇ 15 ವರ್ಷ ಮೇಲ್ಪಟ್ಟ 2 ಸ್ಟ್ರೋಕ್ ಆಟೋವನ್ನು ಸರ್ಕಾರ ಬ್ಯಾನ್ ಮಾಡಿದೆ.
ಇನ್ಮುಂದೆ ಎಲ್ಲಾ 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು Rto ನಿರ್ಧರಿಸಿದೆ. ಹೊಸ ರೂಲ್ಸ್ ಬಂದ್ರೆ ಲಕ್ಷಾಂತರ ವಾಹಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಸರ್ಕಾರ ರೂಲ್ಸ್ ಜಾರಿ ಮಾಡಿದ್ರೆ ಹಳೆ ವಾಹನಗಳನ್ನು ಏನ್ ಮಾಡೋದು, ಗುಜರಿ ವಾಹನಗಳನ್ನ ಸೇಲ್ ಮಾಡೋದು ಹೇಗೆ ಇವೇ ಮುಂತಾದ ಸಮಸ್ಯೆಗಳ ಬಗ್ಗೆ ಸರ್ಕಾರ ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಿದೆ.