ಈಡೇರದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ ಅವರ ವಾಗ್ದಾನ

ʻಪ್ರತಿಯೊಂದು ಕ್ಷಣವೂ ಕ್ರಿಯೆಯ ಸಮಯ. ಸುರಂಗದ ಕೊನೆಯಲ್ಲಿ ಕಂಡುಬರುವ ಬೆಳಕು ನಮಗೆ ದಕ್ಕದೆ ಇರಬಹುದು; ಆದರೆ, ಅದರ ಮಿನುಗುವಿಕೆ ಮತ್ತು ಪ್ರತಿಫಲನಗಳಿಂದ ನಮ್ಮ ದಾರಿ ಕಂಡುಕೊಳ್ಳಬಹುದುʼ

 

ದೇಶ ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದೆ. ಅಮೆರಿಕದಲ್ಲಿ ಟ್ರಂಪ್‌ 2.0 ಆರಂಭಗೊಂಡಿದೆ. ಭಾರತದಲ್ಲಿ ಪ್ರಗತಿಪರ ಚಳವಳಿಗಳು ಮಕಾಡೆ ಮಲಗಿವೆ. ಎರಡೂ ದೇಶಗಳು ಪ್ರಜಾಪ್ರಭುತ್ವದ ಆದರ್ಶಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಹೆಣಗಾಡುತ್ತಿವೆ; ಅದರಲ್ಲಿ ಎಡವುತ್ತಿವೆ. ಇಂಥ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌(ಎಂಎಲ್‌ಕೆ) ಅವರ ಬದುಕಿನಿಂದ ನಾವು ಕಲಿಯಬೇಕಿದೆ.

1963 ರಲ್ಲಿ ಟೈಮ್ ಮ್ಯಾಗಸಿನ್‌ನ ಮುಖಪುಟದಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಫೊಟೋ ಪ್ರಕಟವಾಗಿತ್ತು. ಮುಖ ಮ್ಲಾನವಾಗಿತ್ತು; ಚಿಂತೆ ತುಂಬಿದ್ದ ಕಣ್ಣುಗಳು ಮತ್ತು ಭುಜಗಳು ಇಳಿಬಿದ್ದಿದ್ದವು. ನ್ಯಾಯದ ಮಾರ್ಗವು ಸ್ಪೂರ್ತಿದಾಯಕ ಭಾಷಣ ಗಳಿಗಿಂತ ಹೆಚ್ಚಿನದನ್ನು ಬಯಸುತ್ತದೆ; ಅಪಾರ ಹೊರೆ ಹೊರಿಸುತ್ತದೆ. ಕಿಂಗ್ ಜೂನಿಯರ್ ಅವರ ಜೀವನ ಮತ್ತು ನಿರಂಕುಶ ಶಕ್ತಿ ವಿರುದ್ಧದ ಅಹಿಂಸಾತ್ಮಕ ಪ್ರತಿರೋಧವು ಆತ್ಯಂತಿಕ ಸ್ಪಷ್ಟತೆಯಿಂದ ಹೇಳುವ ಮತ್ತು ಅವರು ಸಮಕಾಲೀನ ಚಳವಳಿಗಳಿಗೆ ನೀಡುವ ಪ್ರಮುಖ ಪಾಠ ಇಂತಿದೆ: ಆರಂಭದಲ್ಲಿ ಉದ್ದೇಶ ವೊಂದನ್ನು ಬೆಂಬಲಿಸುವ ಜನರು ಅಸ್ತಿತ್ವದಲ್ಲಿರುವುದಿಲ್ಲ. ಅವರನ್ನು ಮೊದಲಿಗೆ ಕಲ್ಪಿಸಿಕೊಳ್ಳಬೇಕು; ಆನಂತರ ನಿರಂತರ ನೈತಿಕ ಸವಾಲುಗಳನ್ನು ಎದುರಿಸುವ  ಹಾಗೂ ಭರವಸೆ ಮೂಡಿಸುವ ಮೂಲಕ ಆಗುಮಾಡಬೇಕು.

ವರ್ಣಭೇದದ ವಿರುದ್ಧ ಹೋರಾಟ: 1950ರ ದಶಕದಲ್ಲಿ ಅಮೆರಿಕದಲ್ಲಿ ಎಲ್ಲಾ ಜನಾಂಗದ ಜನರು ಒಟ್ಟಿಗೆ ಬದುಕಬಹುದು ಎಂಬ ಆಲೋಚನೆ ಕೆಲವರಿಗೆ ಅಪಾಯಕಾರಿ ಎನ್ನಿಸಿತು. ಕಿಂಗ್ ಡಿಸೆಂಬರ್ 1955 ರಲ್ಲಿ ಅಲಬಾಮಾದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಜನಾಂಗೀ ಯ ಪ್ರತ್ಯೇಕತೆ‌ ವಿರೋಧಿಸಿ, ಮಾಂಟೆಗೊಮೆರಿ ಬಸ್ ಬಹಿಷ್ಕಾರವನ್ನು ಆರಂಭಿಸಿ ದಾಗ, ಕಪ್ಪು ಜನರ ಹೋರಾಟಗಳ ಬಗ್ಗೆ ಸ್ವಲ್ಪವೂ ಸಹಾನುಭೂತಿ ಯಿಲ್ಲದವರು ಹೆಚ್ಚು ಸಂಖ್ಯೆಯಲ್ಲಿದ್ದರು. ಜನರ ಆತ್ಮಸಾಕ್ಷಿಗೆ ಮನವಿ ಮಾಡುವ ಮೂಲಕ ತಮ್ಮ ಉದ್ದೇಶವನ್ನು ಬೆಂಬಲಿಸುವ ಜನರನ್ನು ಸೃಷ್ಟಿಸಬಹುದು ಎಂಬುದು ಕಿಂಗ್‌ ಅವರಿಗೆ ಗೊತ್ತಿತ್ತು. ಅವರು ಯುವಜನರ ಮೂಲಕ ಭವಿಷ್ಯದ ಅಮೆರಿಕದ ದೊಟ್ಟಿಗೆ ಸಂವಾದ ನಡೆಸುತ್ತಿದ್ದರು. ಈ ನೈತಿಕ ಕಲ್ಪನೆಯು ವ್ಯಾಪಕ ಬೆಂಬಲ ಪಡೆದುಕೊಂಡಿತು; ಅಂತಿಮವಾಗಿ ಜನಾಂಗೀಯ ತಾರತಮ್ಯ ಮತ್ತು ಪ್ರತ್ಯೇಕತೆ ಯನ್ನು ಕಾನೂನುಬಾಹಿರಗೊಳಿಸುವ 1964 ರ ನಾಗರಿಕ ಹಕ್ಕುಗಳ ಕಾಯಿದೆಗೆ ದಾರಿಮಾಡಿಕೊಟ್ಟಿತು.

ಅಮೆರಿಕದ ನಾಗರಿಕ ಹಕ್ಕುಗಳ ಆಂದೋಲನದ ಇತಿಹಾಸ ತಿಳಿಸುವುದೇನೆಂದರೆ, ನ್ಯಾಯದ ಮಾರ್ಗವು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು. ಕಿಂಗ್‌ ಅವರ ಆಂತರಿಕ ಮತ್ತು ಬಾಹ್ಯ ಹೋರಾಟಗಳನ್ನು ಬೇರ್ಪಡಿಸಲು ಆಗುವುದಿಲ್ಲ. ಅವರು ತಮ್ಮ ವೈಯಕ್ತಿಕ ಹೋರಾಟವನ್ನು ಸಾರ್ವಜನಿಕ ಬದಲಾವಣೆಗೆ ಬಳಸುವಲ್ಲಿ ಯಶಸ್ವಿಯಾದರು.

ಒಂದು ವರ್ಷ ಕಾಲ ನಡೆದ ಮಾಂಟೆಗೊಮೆರಿ ಬಸ್ ಬಹಿಷ್ಕಾರ ಹೋರಾಟದ ವೇಳೆ ಹಲವು ಬಾರಿ ಜೀವ ಬೆದರಿಕೆ ಎದುರಿಸಿದರು; ಮನೆ ಮೇಲೆ ಬಾಂಬ್ ದಾಳಿ ನಡೆಯಿತು. ಒಂದು ತಡರಾತ್ರಿ ಅಡುಗೆಮನೆ ಮೇಜಿನ ಬಳಿ ಚಳವಳಿಯನ್ನು ಮುನ್ನಡೆಸುವ ತಮ್ಮ ಸಾಮರ್ಥ್ಯವನ್ನು ಪ್ರಶ್ನಿಸಿಕೊಂಡು, ಹೋರಾಟವನ್ನು ಕೈ ಬಿಡಬೇಕೆಂದುಕೊಂಡಿದ್ದ ಸ್ಥಿತ್ಯಂತರ ಕ್ಷಣದಲ್ಲಿ ವೈಯಕ್ತಿಕ ದೇವರ ಕಲ್ಪನೆಯಲ್ಲಿ ಶಕ್ತಿಯನ್ನು ಕಂಡುಕೊಂಡರು. ಅವರ ನಾಯಕತ್ವವನ್ನು ಆಂತರಿಕ ನಂಬಿಕೆ ಮತ್ತು ಬಾಹ್ಯದ ಅವಶ್ಯಕತೆಗಳು ಮುನ್ನಡೆಸಿದವು.

ಆದರೆ, ಜಾರ್ಜಿಯಾದ ಆಲ್ಬನಿಯಲ್ಲಿ ನಡೆದ 1961ರ ವರ್ಣಭೇದ ವಿರೋಧ ಚಳವಳಿಯು ಅವರ ಅಹಿಂಸಾತ್ಮಕ ಕಾರ್ಯತಂತ್ರ ಮತ್ತು ಅವರ ನಂಬಿಕೆಯನ್ನು ಪರೀಕ್ಷಿಸಿತು. ಆಲ್ಬನಿಯ ಪೊಲೀಸ್ ಮುಖ್ಯಸ್ಥ ಲಾರಿ ಪ್ರಿಟ್ಚೆಟ್ ಪ್ರತಿಭಟನೆಯನ್ನು ಹತ್ತಿಕ್ಕಿದಂತೆ, ಕಿಂಗ್ ವೈಫಲ್ಯ ಮತ್ತು ಅಹಿಂಸಾತ್ಮಕ ಪ್ರತಿರೋಧ ಕುರಿತ ಅನು ಮಾನಗಳೊಂದಿಗೆ ಸೆಣಸಾಡಿದರು. ಆದರೆ, ವೈಯಕ್ತಿಕ ನೋವು ಸಾಮಾಜಿಕ ಪರಿವರ್ತನೆಗೆ ಹೇಗೆ ವೇಗವರ್ಧಕವಾಗಬಹುದು ಎಂಬುದನ್ನು ಅರ್ಥಮಾಡಿ ಕೊಳ್ಳಲು 1959 ರ ಭಾರತ ಪ್ರವಾಸ ಸಹಾಯ ಮಾಡಿತು.

ಅಹಿಂಸಾತ್ಕಕ ಪ್ರತಿರೋಧ: 1963ರಲ್ಲಿ ಬರ್ಮಿಂಗ್‌ಹ್ಯಾಮ್ ನಲ್ಲಿ ನಡೆದ ವರ್ಣಭೇದ ನೀತಿ ವಿರುದ್ಧ ಪ್ರತಿಭಟನೆ-ಚಳವಳಿ ಸಮಯದಲ್ಲಿ ಈ ನೀತಿಯನ್ನು ಕಾರ್ಯರೂಪಕ್ಕೆ ತಂದರು. ಪೊಲೀಸ್ ಕಮಿಷನರ್ ಯುಜೀನ್ ʻಬುಲ್ʼ ಕಾನರ್ ಯುವಜನರ ಮೇಲೆ ಜಲ ಫಿರಂಗಿ ಬಳಸಿ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಮಣಿಸಿದಾಗ, ಚಳವಳಿಗಾರರ ಸುರಕ್ಷತೆ ಕುರಿತ ತಮ್ಮ ಖಾಸಗಿ ದುಃಖವನ್ನು ನೈತಿಕ ಪ್ರಶ್ನೆಯಾಗಿ ಪರಿವರ್ತಿಸಿ ದರು: ಅವರ ಭಾವನಾತ್ಮಕ ಭಾಷಣಗಳು ಅಮೆರಿಕನ್ನರಿಗೆ ಕ್ರೌರ್ಯದ ವ್ಯಾಪಕತೆ ಯನ್ನು ತಿಳಿಸಲು ನೆರವಾದವು. ಯುವಜನರು, ಮಕ್ಕಳ ಮೇಲೆ ಜಲಪಿರಂಗಿ ಬಳಕೆಯು ಸಾರ್ವಜನಿಕರನ್ನು ಆಘಾತಗೊಳಿಸಿತು. ವೈಯಕ್ತಿಕ ತ್ಯಾಗ ಮತ್ತು ಸಾಮೂಹಿಕ ವಿಮೋಚನೆ ನಡುವೆ ನಿಕಟ ಸಂಬಂಧವಿದೆ ಎಂಬ ಗ್ರಹಿಕೆಯನ್ನು ಕಿಂಗ್ ಬಳಸಿಕೊಂಡರು.

ಬ್ರೌನ್ ವಿ/ಎಸ್‌ ಶಿಕ್ಷಣ ಮಂಡಳಿ ಪ್ರಕರಣದಲ್ಲಿ ಶಾಲೆಗಳಲ್ಲಿ ವರ್ಣಭೇದ ನೀತಿ ಅಸಾಂವಿಧಾನಿಕ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೂ, ವರ್ಣಭೇದ ಮುಂದುವರಿಯಿತು. ದೇಶದ ಅತ್ಯಂತ ಪ್ರಮುಖ ನಾಗರಿಕ ಹಕ್ಕುಗಳ ನಾಯಕನಾಗಿದ್ದರೂ, 1963ರಲ್ಲಿ ಅವರ ಸ್ವಂತ ಮಗನಿಗೆ ಅಟ್ಲಾಂಟಾದ ಖಾಸಗಿ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಯಿತು. ಕಾನೂನಿನಿಂದ ಮಾತ್ರವೇ ಸಮಾಜವನ್ನು ಪರಿವರ್ತಿಸಲು ಆಗುವುದಿಲ್ಲ; ನ್ಯಾಯಾಲಯದ ತೀರ್ಪುಗಳೊಟ್ಟಿಗೆ ಸಮಾಜ ಮತ್ತು ಸಂಸ್ಥೆಗಳ ಹೃದಯ ಪರಿವರ್ತನೆಯೂ ಆಗಬೇಕು ಎಂಬುದಕ್ಕೆ ಇದು ಸಾಕ್ಷಿ.

ನಾಗರಿಕ ಹಕ್ಕುಗಳ ಆಂದೋಲನದ ಶಕ್ತಿ ಇದ್ದುದು ಕಾನೂನು ಸವಾಲುಗಳನ್ನು ನೇರ ಕ್ರಿಯೆದೊಂದಿಗೆ ಸಂಯೋಜಿಸುವುದರಲ್ಲಿ; ವಕೀಲರು ನ್ಯಾಯಾಲಯದಲ್ಲಿ ವಾದಿಸಿದರೆ, ಕಾರ್ಯಕರ್ತರು ರಸ್ತೆಗಳಲ್ಲಿ ಮುಷ್ಕರ ನಡೆಸಿದರು. ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋದಾಗ, ಸಮುದಾಯಗಳು ಪ್ರತಿಭಟನೆ ನಡೆಸಿದವು. ಸಮಕಾಲೀನ ಚಳವಳಿಗಳಿಗೆ ಕಾನೂನು ಮತ್ತು ಸಾಮಾಜಿಕ ಒಗ್ಗಟ್ಟಿನ ಇಂಥ ದ್ವಂದ್ವ ಕಾರ್ಯತಂತ್ರ ಅಗತ್ಯವಿದೆ.

ಶಾಶ್ವತ ಬದಲಾವಣೆಗೆ ಗಟ್ಟಿ ಕಾನೂನು ಮತ್ತು ನಿರಂತರ ಸಾರ್ವಜನಿಕ ಎಚ್ಚರ-ಹೋರಾಟ ಅಗತ್ಯ ಎಂಬುದನ್ನು ಕಿಂಗ್ ಅವರ ಹೋರಾಟ ತಿಳಿಸಿಕೊಡುತ್ತದೆ. ಸಾರ್ವಜನಿಕ ಪ್ರಜ್ಞೆಯ ಪರಿವರ್ತನೆಯೊಟ್ಟಿಗೆ ತಳಮಟ್ಟದ ಕ್ರಿಯಾಶೀಲತೆ ಸೇರಿ ಕೊಂಡಾಗ ಮಾತ್ರ ಸಾಂವಿಧಾನಿಕ ಖಾತ್ರಿಗಳು ಅರ್ಥ ಕಂಡುಕೊಳ್ಳುತ್ತವೆ. ಗಾಂಧಿ ಅವರಂತೆ ಕಿಂಗ್‌ ಅವರ ಅಹಿಂಸಾತ್ಮಕ ಮಾರ್ಗವು ರಾಜಕೀಯವನ್ನು ಮೇಲೆ ತ್ತುವ ಮೂಲಕ ನೈತಿಕ ಮುಖಾಮುಖಿಗೆ ಎಡೆ ಮಾಡಿಕೊಡುತ್ತದೆ. ಅನಿಯಂತ್ರಿತ ಶಕ್ತಿ ವಿರುದ್ಧದ ಪ್ರತಿರೋಧ ಮತ್ತು ನ್ಯಾಯಕ್ಕಾಗಿ ತೀವ್ರ ಹಂಬಲಿಸುವಿಕೆ ರೂಪ ದಲ್ಲಿ ಅಭಿವ್ಯಕ್ತಗೊಳ್ಳುತ್ತದೆ.

ಕಿಂಗ್‌ ಅವರ ಅಹಿಂಸಾತ್ಮಕ ಪ್ರತಿರೋಧವು ಅವರ ವಿರೋಧಿಗಳ ವಿಧಾನಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿತ್ತು: ಪೊಲೀಸ್ ಕಮಿಷನರ್ ಯುಜೀನ್ ಕಾನರ್ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಕ್ಕಳು ಸೇರಿದಂತೆ ಯುವ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ನಾಯಿಗಳನ್ನು ಬಿಟ್ಟರು ಮತ್ತು ಜಲಪಿರಂಗಿ ಪ್ರಯೋಗಿಸಿದರು; ಪೊ ಲೀಸ್ ಮುಖ್ಯಸ್ಥ ಲಾರಿ ಪ್ರಿಟ್ಚೆಟ್ ಅಲ್ಬನಿಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ ದರು; ಕಿಂಗ್‌ ಅವರ ಮೇಲೆ ಎಫ್‌ಬಿಐ(ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇ ಶನ್) ಮುಖ್ಯಸ್ಥ ಜೆ. ಎಡ್ಗರ್ ಹೂವರ್ ಕಣ್ಗಾವಲು ಇರಿಸಿ, ಅವರ ಅಪಖ್ಯಾತಿ ಗೆ ಪ್ರಯತ್ನಿಸಿದರು. ಆದರೆ, ಕಿಂಗ್‌ ಇದೆಲ್ಲಕ್ಕೂ ಘನತೆಯಿಂದ ಪ್ರತಿಕ್ರಿಯಿಸಿದರು: ಕ್ರೌರ್ಯವನ್ನು ನೈತಿಕ ಬಲದಿಂದ, ಹತ್ತಿಕ್ಕುವಿಕೆಯನ್ನು ಆತ್ಮಸಾಕ್ಷಿ ಮೂಲಕ ಎದುರಿಸಿದರು.

ತಮ್ಮ ಹತ್ಯೆಗೆ ಒಂದು ದಿನ ಮೊದಲು, ಏಪ್ರಿಲ್ 3, 1968 ರಂದು ಮೆಂಫಿಸ್‌ ನಲ್ಲಿ ವಾಗ್ದಾನ(ಪ್ರಾಮಿಸ್ಡ್‌ ಲ್ಯಾಂಡ್)ಗಳ ಬಗ್ಗೆ ಕಿಂಗ್‌ ಮಾತನಾಡಿದರು. ಆ ವಾಗ್ದಾನಗಳು ತಲುಪಬೇಕಾದ ಗಮ್ಯ‌ ಸ್ಥಾನ ಮಾತ್ರ ಆಗಿರಲಿಲ್ಲ; ಬದಲಿಗೆ, ಅಧಿ ಕಾರಕ್ಕಾಗಿ ಅಪವಿತ್ರ ಹೋರಾಟಕ್ಕಿಂತ ರಾಜಕೀಯವನ್ನು ಉನ್ನತ ಸ್ಥಾನಕ್ಕೇರಿಸುವ ಬದ್ಧತೆಯಾಗಿತ್ತು; ಸತ್ಯದ ಹಾದಿಯಲ್ಲಿ ಉಳಿಯಲು, ಹಿಂಸೆಯನ್ನು ಅಹಿಂಸೆಯಿಂ ದ ಮತ್ತು ದ್ವೇಷವನ್ನು ಪ್ರೀತಿಯಿಂದ ಎದುರಿಸುವಿಕೆಯ ಮಾರ್ಗ ಅದಾಗಿತ್ತು.

ಕಿಂಗ್‌ ಹಾಗೂ ಸಮಕಾಲೀನರಾದ ಜೇಮ್ಸ್ ಬಾಲ್ಡ್‌ವಿನ್, ಲೋರೆನ್ ಹ್ಯಾನ್ಸ್‌ಬೆರಿ ಮತ್ತು ಮೆಡ್ಗರ್ ಎವರ್ಸ್‌ ಮತ್ತಿತರರ ಕ್ರಿಯಾಶೀಲತೆ ಮತ್ತು ಪ್ರಯತ್ನಗಳಿಂದ ಗೊತ್ತಾಗುವುದೇನೆಂದರೆ, ʻಪ್ರತಿಯೊಂದು ಕ್ಷಣವೂ ಕ್ರಿಯೆಯ ಸಮಯʼ. ಸುರಂಗದ ಕೊನೆಯ ಬೆಳಕು ನಮಗೆ ದಕ್ಕದೆ ಇರಬಹುದು; ಆದರೆ, ಅದರ ಮಿನುಗುವಿಕೆ ಮತ್ತು ಪ್ರತಿಫಲನಗಳಿಂದ ನಮ್ಮ ದಾರಿ ಕಂಡುಕೊಳ್ಳಬಹುದು. ಕಿಂಗ್ ಬಹಳ ಹಿಂದೆಯೇ ನೇಪಥ್ಯಕ್ಕೆ ಸರಿದಿದ್ದಾರೆ; ಆದರೆ, ಆತ್ಮಸಾಕ್ಷಿಗೆ ಕಿವಿಗೊಡಬೇಕು ಎಂಬ ಅವರ ಕರೆಯು ಕಾಲ ಮತ್ತು ದೇಶವನ್ನು ಮೀರಿರುವಂಥದ್ದು. ದುರಂತವೆಂದರೆ, ಏಪ್ರಿಲ್‌ 4, 1968ರಲ್ಲಿ ಜೇಮ್ಸ್‌ ಅರ್ಲ್‌ ರೇ ಎಂಬ ಹಂತಕನ ಗುಂಡಿಗೆ ಅವರು ಬಲಿಯಾದರು. ರೇ ಗೆ 99 ವರ್ಷ ಸೆರೆವಾಸ ವಿಧಿಸಲಾಯಿತು..

ಪ್ರಸ್ತುತದ ಬಿಕ್ಕಟ್ಟು: ಆದರೆ, ಪ್ರಸ್ತುತದಲ್ಲಿ ಪರಿಸ್ಥಿತಿ ಸಂಕೀರ್ಣವಾಗಿದೆ. ಪತ್ರಿಕೆ ವರ ದಿಗಳ ಪ್ರಕಾರ, ಟ್ರಂಪ್‌ ಅವರ ಅಧಿಕಾರಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಂಬಾನಿ ದಂಪತಿ 8.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಮತ್ತು ಪ್ಯಾರಿಸ್‌ ಒಪ್ಪಂದದಿಂದ ಹೊರಬರು ವುದಾಗಿ ಘೋಷಿಸಿದ್ದಾರೆ. ಬಡದೇಶಗಳಿಗೆ ಮಲೇರಿಯ, ಎಚ್‌ಐವಿ ಔಷಧಗಳ ಪೂರೈಕೆಯನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. 194 ದೇಶಗಳು ಸದಸ್ಯ ರಾಗಿರುವ ಡಬ್ಲ್ಯುಎಚ್‌ಒ, ಆ ರೋಗ್ಯ ಕ್ಷೇತ್ರದ ಪ್ರಮುಖ ಸಂಸ್ಥೆ; ಸೋಂಕು ರೋಗಗಳು ಅಧಿಕಗೊಳ್ಳುತ್ತಿರುವ, ಹವಾಮಾನ ಹೆಚ್ಚಳದ ಜಗತ್ತಿನಲ್ಲಿ ಡಬ್ಲ್ಯುಎಚ್‌ಒ ಕೆಲಸ ಬಹಳ ಮುಖ್ಯವಾದುದು. ಈ ಸಂಸ್ಥೆಗೆ ಹೆಚ್ಚು ದೇಣಿಗೆ ನೀಡುತ್ತಿರುವುದು ಅಮೆರಿಕ. ಗ್ರೀನ್‌ಲ್ಯಾಂಡ್‌ ಅಮೆರಿಕಕ್ಕೆ ಸೇರಿದ್ದು ಎಂದು ಟ್ರಂಪ್‌ ಹೇಳಿದ್ದಾರೆ. ಅಮೆರಿಕದಲ್ಲಿ ಆದಾಯ ತೆರಿಗೆಯೇ ಇಲ್ಲವಾಗುವ ಸಾಧ್ಯತೆಯೂ ಇದೆ. ಇತ್ತಕಡೆ, ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ʻಒಂದು ದೇಶ, ಒಂದು ಚುನಾವಣೆʼ ಯನ್ನು ಬೆಂಬಲಿಸಿ ಮಾತಾಡಿದ್ದಾರೆ. ರಾಷ್ಟ್ರಪತಿ/ರಾಜ್ಯಪಾಲರು  ಸರ್ಕಾರದ ಕಾರ್ಯಕ್ರಮಗಳನ್ನು ಉಲ್ಲೇಖಿಸುವುದು/ಸಮರ್ಥಿಸಿಕೊಳ್ಳುವುದು ಸಂಪ್ರದಾಯ. ಇದೇ ಹೊತ್ತಿನಲ್ಲಿ ʻಒಂದು ರಾಷ್ಟ್ರ, ಒಂದೇ ಸಮಯʼ ನೀತಿಯ ಕರಡು ಮಾರ್ಗಸೂಚಿ ಪ್ರಕಟಗೊಂಡಿದೆ. ಕುಂಭ ಮೇಳದಲ್ಲಿ ಹಿಂದೂ ಸಂವಿಧಾನ ಕೂಡ ಬಿಡುಗಡೆಯಾಗಿದೆ. ʻಪ್ರತಿಯೊಬ್ಬರ ಸುರಕ್ಷತೆ ಖಾತ್ರಿಯಾಗು ವವರೆಗೆ ಯಾರೊಬ್ಬರೂ ಸುರಕ್ಷಿತರಲ್ಲʼ ಎಂಬ ಮಾತು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತ. ಇನ್ನೊಂದು ಮುಖ್ಯ ಅಂಶವೆಂದರೆ, ಅಮೆರಿಕನ್ನರು ತಮ್ಮ ಪೂರ್ವಿಕರ ಕೃತ್ಯಗಳಿಗೆ ಕನಿಷ್ಠ ಪಶ್ಚಾತ್ತಾಪ ಪಡುತ್ತಾರೆ; ಆದರೆ, ನಮ್ಮಲ್ಲಿ ನೈತಿಕತೆ ಎನ್ನುವುದು ಪಾತಾಳ ಮುಟ್ಟಿದೆ. ಇಂದಿಗೂ ಹಿಂದಿನವರ ಅನೈತಿಕ ಕೃತ್ಯಗಳನ್ನು, ಅಸ್ಪೃಶ್ಯತೆ, ಜಾತಿ ದ್ವೇಷ, ಕೋಮುವೈಷಮ್ಯ ಇತ್ಯಾದಿಯನ್ನು ಮುಂದುವರಿಸಿದ್ದೇವೆ; ಸಮರ್ಥಿಸಿಕೊಳ್ಳುತ್ತೇವೆ. ಜಾತಿ ಆಧಾರಿತ ಹಿಂಸಾ ಚಾರ, ಬಡತನ, ಮಿಲಿಟರೀಕರಣ ಮತ್ತು ಆರ್ಥಿಕ ಅಸಮಾನತೆ ಹೆಚ್ಚಿದೆ.

1950ರಲ್ಲಿ ಎಲ್ಲ ಜನರೂ ಒಟ್ಟಿಗೆ ಬದುಕಬೇಕು ಎಂಬ ಆಲೋಚನೆ ಕೆಲವು ಅಮೆರಿಕನ್ನರಿಗೆ ಅಪಾಯಕಾರಿ ಎನ್ನಿಸಿತ್ತು. 2025ರಲ್ಲೂ ಅದು ಮುಂದುವರಿದಿದೆ. ಇದರಿಂದ, ಕಿಂಗ್‌ ಅವರು ನೀಡಿದ  ವಾಗ್ದಾನಗಳು ಈಡೇರಿಲ್ಲ ಎಂಬು ದನ್ನು ಪ್ರತಿದಿನ ನೆನಪಿಸಿಕೊಳ್ಳಬೇಕಾಗುತ್ತದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top