ಉಪ ನಗರ ರೈಲು: ಕೇಂದ್ರ ಸಮ್ಮತಿ

ಬೆೆಂಗಳೂರಿಗರಿಗೆ ಇದೊಂದು ಸಿಹಿ ಸುದ್ದಿ. ಜನ-ವಾಹನ ದಟ್ಟಣೆಗೆ ಸಿಲುಕಿ ನರಳುತ್ತಿರುವ ಬೆಂಗಳೂರಿಗರು ಭವಿಷ್ಯದಲ್ಲಿ ಒಂದಿಷ್ಟು ನಿರಾಳ ಆಗಬಹುದು. ವಾಹನ ದಟ್ಟಣೆ ನಿವಾರಣೆಗೆ ಯೋಜಿಸಿರುವ ಉಪನಗರ ರೈಲು ಯೋಜನೆಗೆ ಅಗತ್ಯವಿರುವ 19.000 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ಈ ಯೋಜನೆ 148.17 ಕಿಮೀ ಇರಲಿದೆ. ಟರ್‌ಅಂತರದ ಈ ಯೋಜನೆಗೆ ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ. ಆದರೆ, ವಿಧಾನ ಪರಿಷತ್ ಚುನಾವಣೆ ಮತ್ತು ವಿಧಾನಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿಇರುವುದರಿಂದ, ಅಧಿಕೃತ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಮೀಸಲಿಟ್ಟಿತ್ತು. ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.20 ಅನುದಾನ ನೀಡಲಿದ್ದು, ಉಳಿದ ಮೊತ್ತವನ್ನು ಬ್ಯಾಂಕ್‌ಗಳಿAದ ಸಾಲ ಪಡೆಯಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ರಾಜ್ಯ ಸರ್ಕಾರದ ಈ ಯೋಜನೆ ಕಳೆದ 37 ವರ್ಷದಿಂದ ನನೆಗುದಿಗೆ ಬಿದ್ದಿದ್ದು, ಕೇಂದ್ರ ೨೦೧೮ರಲ್ಲಿ ಸಮ್ಮತಿ ನೀಡಿತ್ತು. ಆದರೆ, ಬೆಂಗಳೂರು ಮೆಟ್ರೋ ಮಾರ್ಗದಲ್ಲಿನ ಗೊಂದಲದಿAದ  ಇನ್ನಷ್ಟು ತಡವಾಗಿತ್ತು. ರೈಲ್ವೆ ಮಂಡಳಿ ನವೆಂಬರ್ 2019ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿದ ಬಳಿಕ ಹಣಕಾಸು ಸಚಿವಾಲಯ ಅನುಮೋದಿಸಿತ್ತು. ಯೋಜನೆಯ ಮಾರ್ಗಕ್ಕೆ ಸಂಬAಧಿಸಿದAತೆ ಕೆಲ ಮಾರ್ಪಾಡು ಮಾಡಿ, ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ರೈಲ್ವೆ ಮಂಡಳಿ ಸೂಚಿಸಿತ್ತು. ನೆಲ ಮಟ್ಟದ 57 ನಿಲ್ದಾಣಗಳಿಗೆ ಅನುಮತಿ ನೀಡಿ, 57 ನಿಲ್ದಾಣಗಳನ್ನು ಕೈಬಿಡುವಂತೆ ಹಾಗೂ ಎತ್ತರಿಸಿದ ನಿಲ್ದಾಣಗಳ ಸಂಖ್ಯೆಯನ್ನು 31 ರಿಂದ 22 ಕ್ಕೆ ಇಳಿಸಿತ್ತು.

“ಮೆಟ್ರೋ ಸೌಲಭ್ಯ ಇರುವ ಕಡೆ ಉಪನಗರ ರೈಲು ಯೋಜನೆ ಬೇಡ’ ಎಂಬ ಷರತ್ತನ್ನು ಸಡಿಲಗೊಳಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಮಂಡಳಿ, ಯೋಜನೆಯ ಅನುಷ್ಠಾನಕ್ಕಾಗಿ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ಪಿವಿ) ಸ್ಥಾಪಿಸಲಿದೆ. ಬೆಂಗಳೂರು ನಗರ ನಿಲ್ದಾಣ- ರಾಜಾನುಕುಂಟೆ, ಕೆಂಗೇರಿ- ವೈಟ್‌ಫೀಲ್ಡ್, ನೆಲಮಂಗಲ- ಬೈಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ-ದೇವನಹಳ್ಳಿಗೆ ಸಂಚಾರ ಸುಗಮವಾಗಲಿದೆ. ಯಶವಂತಪುರ, ಕೆಂಗೇರಿ, ಕಂಟೋನ್ಮೆAಟ್, ವೈಟ್‌ಫೀಲ್ಡ್, ಕೆ.ಆರ್.ಪುರ, ಬೈಯಪ್ಪನಹಳ್ಳಿ, ಜ್ಞಾನಭಾರತಿ ಮತ್ತು ನಾಯಂಡಹಳ್ಳಿ ನಿಲ್ದಾಣ ಸೇರಿದಂತೆ ಕನಿಷ್ಠ 10 ಮೆಟ್ರೋ ನಿಲ್ದಾಣಗಳೊಂದಿಗೆ ಉಪನಗರ ರೈಲು ನಿಲ್ದಾಣಗಳು ಸಂಪರ್ಕ ಸಾಧಿಸಲಿವೆ.

Courtesyg: Google Huff Post India (Photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top