ತೊಗರಿಬೇಳೆ ದರ ದಿಢೀರ್ ಏರಿಕೆಯಾಗಿದ್ದು, ಕೆ.ಜಿ.ಗೆ ಸರಾಸರಿ 125 ರೂ. ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಮತ್ತು ತೊಗರಿಬೇಳೆ ಉತ್ಪಾದಿಸುವ ಕಲಬುರ್ಗಿಯಲ್ಲೇ ವರ್ತಕರು ಬೇಳೆಯನ್ನು 140 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ತೊಗರಿಕಾಳಿನ ದಾಸ್ತಾನು ಕಡಿಮೆ ಇರುವುದರಿಂದ ಬೇಡಿಕೆಯಷ್ಟು ಬೇಳೆ ಪೂರೈಕೆ ಇಲ್ಲ. ಪ್ರಸಕ್ತ ಹಂಗಾಮು ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿದೆ. ರೈತರ ಬಳಿಯೂ ತೊಗರಿಕಾಳಿನ ದಾಸ್ತಾನು ಇಲ್ಲ. ಸೋಮವಾರ ರಾಜ್ಯದ ಒಂಬತ್ತು ಎಪಿಎಂಸಿಗಳಿಗೆ ಒಟ್ಟು 885 ಕ್ವಿಂಟಲ್ ತೊಗರಿಕಾಳು ಹಾಗೂ ಶಿವಮೊಗ್ಗ ಎಪಿಎಂಸಿಗೆ ಕೇವಲ 40 ಕ್ವಿಂಟಲ್ ತೊಗರಿಬೇಳೆ ಆವಕವಾಗಿತ್ತು. ಕಳೆದ ಹಂಗಾಮಿನಲ್ಲಿ ಕೇಂದ್ರ ಸರ್ಕಾರವು ರಾಷ್ಟಿçÃಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮೂಲಕ ಬೆಂಬಲ ಬೆಲೆಯಡಿ ಪ್ರತಿ ರೈತರಿಂದ ಮೊದಲು 10 ಕ್ವಿಂಟಲ್, ನಂತರ ಹೆಚ್ಚುವರಿಯಾಗಿ 10 ಕ್ವಿಂಟಲ್ ಖರೀದಿಸಿದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 5,800 ರೂ. ಹಾಗೂ ರಾಜ್ಯ ಸರ್ಕಾರ 300 ರೂ. ಪ್ರೋತ್ಸಾಹಧನ ನೀಡಿತ್ತು. ಲಾಕ್ಡೌನ್, ಸರ್ಕಾರ ಬೆಂಬಲ ಬೆಲೆಯಡಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದರಿಂದ ಮಿಲ್‌ಗಳಲ್ಲಿ ತೊಗರಿಕಾಳಿನ ದಾಸ್ತಾನು ಇಲ್ಲ. ಮಳೆ ಮತ್ತಿತರ ಕಾರಣದಿಂದಾಗಿ ಕೆಲವೆಡೆ ಸಂಸ್ಕರಣೆಗೂ ಸಮಸ್ಯೆಯಾಗಿದೆ. ಹೀಗಾಗಿ ತೊಗರಿಬೇಳೆ ದರ ಪ್ರತಿ ಕೆಜಿಗೆ 125 ರೂ ತಲುಪಿದೆ ಎನ್ನುತ್ತಾರೆ ವರ್ತಕರು. ನಾಫೆಡ್‌ನಲ್ಲಿ ದಾಸ್ತಾನಿರುವ ತೊಗರಿಕಾಳನ್ನು ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದೊಂದೇ ಈ ಸಮಸ್ಯೆಗೆ ಪರಿಹಾರ.
Courtesyg: Google (photo)