ಪಾತಾಳಕ್ಕಿಳಿದ ರೂಪಾಯಿ ಮತ್ತು ಮೂರು ಭಾರತಗಳು
ಸಂಕ್ರಾತಿ ಹಿಂದಿನ ದಿನ ರೂಪಾಯಿ 66 ಪೈಸೆ ಕುಸಿತ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ; ಡಾಲರ್‌ಗೆ 86.79 ರೂ. ಆಗಿದೆ. ಕಳೆದ 2 ವರ್ಷದಲ್ಲಿ ಕಂಡ ತೀವ್ರ ಕುಸಿತ ಇದಾಗಿದ್ದು, 2024ರಲ್ಲಿ ರೂಪಾಯಿ ಬೆಲೆ ಶೇ.3ರಷ್ಟು ಕುಸಿಯಿತು; ಡಾಲರ್ ಎದುರು ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ. ಇದು ಆರಂಭಗೊಂಡಿದ್ದು-ಅಮೆರಿಕದ ಫೆಡರಲ್ ಬ್ಯಾಂಕ್ ಸೆಪ್ಟೆಂಬರ್ 18, 2024ರಂದು ಬಡ್ಡಿಯನ್ನು 50 ಬೇಸ್ ಪಾಯಿಂಟ್(ಬಿಪಿ ಎಸ್)ಗಳಿಂದ ಕಡಿತಗೊಳಿಸಿದ ಬಳಿಕ. ಆನಂತರ ನವೆಂಬರ್ 17 ಹಾಗೂ ಡಿಸೆಂಬರ್ 18ರಂದು ಮತ್ತೊಮ್ಮೆ 25 […]
ಭೂಸ್ವಾಧೀನ ವಿರುದ್ಧದ ಹೋರಾಟಕ್ಕೆ ಸಾವಿರ ದಿನ
ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೇವಾಲ್ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಸೇರಿದಂತೆ ನಾನಾ ಕಾಯಿದೆಗಳ ಜಾರಿಗೆ ಆಗ್ರಹಿಸಿ ನವೆಂಬರ್ 26, 2024 ರಿಂದ ನಿರಶನ ನಡೆಸುತ್ತಿದ್ದಾರೆ. ಅವರನ್ನು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿ ಭೇಟಿ ಮಾಡಿ, ವೈದ್ಯಕೀಯ ನೆರವು ಪಡೆಯಲು ಕೋರಿದೆ. ಆದರೆ, ಅವರು ನಿರಾಕರಿಸಿದ್ದು, ಅವರ ಆರೋಗ್ಯ ಹದಗೆಡುತ್ತಿದೆ. ಇದೇ ಹೊತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ಭೂಮಿ ಕೊಡುವುದಿಲ್ಲ ಎಂದು ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ […]
ʻಒಂದು ದೇಶ, ಒಂದು ಚಂದಾʼ ಎಂಬುದು ಕ್ರಾಂತಿಕಾರ ನಡೆಯೇ?
ʻಒಂದು ದೇಶ, ಒಂದು ಚುನಾವಣೆʼ ಮಸೂದೆಯು ಜಂಟಿ ಸಂಸದೀಯ ಸಮಿತಿಯ ಅವಗಾಹನೆಗೆ ಹೋಗಿದೆ. ಇಂಥದ್ದೇ ಹಲವು ಹರಾಕಿರಿಗಳನ್ನು ಮಾಡಿರುವ ಎನ್‌ಡಿಎ 3.0 ಸರ್ಕಾರದ ಇನ್ನೊಂದು ಉಪಕ್ರಮ ʻಒಂದು ದೇಶ, ಒಂದು ಚಂದಾʼ(ಒನ್ ನೇಷನ್, ಒನ್ ಸಬ್‌ಸ್ಕ್ರಿಪಕ್ಷನ್; ಒಎನ್‌ಒಎಸ್). ಶೈಕ್ಷಣಿಕ ಕ್ಷೇತ್ರಕ್ಕೆ ಆಯವ್ಯಯ ಬೆಂಬಲ ವರ್ಷೇವರ್ಷೇ ಕಡಿಮೆಯಾಗುತ್ತಿರುವ, ಶೈಕ್ಷಣಿಕ ರಂಗದ ಎಲ್ಲ ಹಂತಗಳಲ್ಲಿ (ಪ್ರಾಥಮಿಕದಿಂದ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಶ್ರೇಷ್ಠತಾ ಸಂಸ್ಥೆಗಳು) ಬೋಧಕರು ಸೇರಿದಂತೆ ಮಾನವ ಸಂಪನ್ಮೂಲ ಕಡಿಮೆಯಾಗುತ್ತಿರುವ ಹಾಗೂ ಸಂಶೋಧನೆ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ […]
ಸಮಾನತೆಯ ಚರಿತ್ರೆ – ಥಾಮಸ್ ಪಿಕೆಟ್ಟಿ. ಸಂಗ್ರಹಾನುವಾದ: ಟಿ ಎಸ್ ವೇಣುಗೋಪಾಲ್
ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಸಮಾನತೆ, ಅಸಮಾನತೆ ಹಾಗೂ ಬಡತನವನ್ನು ಕುರಿತು ಅಪಾರ ಅಧ್ಯಯನ ನಡೆಸಿರುವ ವಿದ್ವಾಂಸ. ಅವರು ಸಂಪತ್ತಿನ ಕೇಂದ್ರೀಕರಣ ಹಾಗೂ ಅಸಮಾನತೆ ಕುರಿತ ಅಧ್ಯಯನವನ್ನು ವಿಶ್ಲೇಷಣೆಗೆ ಸೀಮಿತಗೊಳಿಸದೆ, ಪರಿಹಾರವನ್ನೂ ಸೂಚಿಸುತ್ತಾರೆ. ಆದ್ದರಿಂದ, ಸಮಸಮಾಜದ ನಿರ್ಮಾಣದ ಕನಸನ್ನು ಇಟ್ಟುಕೊಂಡವರು ಈ ಚರ್ಚೆಯಲ್ಲಿ ಅವಶ್ಯವಾಗಿ ಪಾಲ್ಗೊಳ್ಳಬೇಕಿದೆ. ಅವರ ಪ್ರಕಾರ, ಎಲ್ಲರಿಗೂ ಶಿಕ್ಷಣ ದೊರೆಯಬೇಕು. ಕೆಳಸ್ತರದ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಹಾಗೂ ಅದಕ್ಕೆ ಸಂಪನ್ಮೂಲ ಕ್ರೋಡೀಕರಣ ನಮ್ಮ ಗುರಿ ಆಗಿರಬೇಕು. ಇಲ್ಲಿ ಹಣ ಮುಖ್ಯವಲ್ಲ. ಅದರ […]
ತಾಯಂದಿರ ಸಾವು: ಈ ಅನ್ಯಾಯಕ್ಕೆ ಸರ್ಕಾರಗಳೇ ಹೊಣೆ
ಬಳ್ಳಾರಿಯ ಆಸ್ಪತ್ರೆಯಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದಿಂದ ಆರು ತಾಯಂದಿರು ಮೃತಪಟ್ಟ ಘಟನೆ ಬಳಿಕ ಚಿಕ್ಕಮಗಳೂರು ಜಿಲ್ಲೆ ಹಾಗೂ ಬೆಂಗಳೂರಿನ ಪೀಣ್ಯದಲ್ಲಿ ಮತ್ತಿಬ್ಬರು ತಾಯಂದಿರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ಆದರೆ, ಸಂಬಂಧಿಸಿದವರು ಆರೋಪ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಡೆದಿರುವ ತಾಯಂದಿರ ಸಾವಿನ ಆಡಿಟ್‌ಗೆ ಸರ್ಕಾರ ಆದೇಶಿಸಿದೆ. ಮೃತರಲ್ಲಿ ಇಬ್ಬರಲ್ಲಿ ಇಲಿ ಜ್ವರ ಪತ್ತೆಯಾಗಿರುವುದರಿಂದ, ಚಿಕಿತ್ಸಾ ತನಿಖೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇವು ಅನ್ಯಾಯದ ಸಾವುಗಳು. […]
ಪೆರಿಯಾರ್, ವೈಕಂ ಚಳವಳಿ ಮತ್ತು ದೇವನೂರು ಮಹಾದೇವ
ಸುಮಾರು 100 ವರ್ಷಗಳ ಹಿಂದೆ ನಡೆದ ಸಾಟಿಯಿಲ್ಲದ ಸಾಮಾಜಿಕೋ-ರಾಜಕೀಯ ಹೋರಾಟ; ವೈಕಂ ಚಳವಳಿ. ಅದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ವಿರುದ್ಧ ನಡೆದ ದೇಶದ ಮೊಟ್ಟಮೊದಲ ಹೋರಾಟ; ದೇಶದ ಸಾಮಾಜಿಕ ಸುಧಾರಣೆ ಪಥವನ್ನು ರೂಪಿಸಿತು. ಇನ್ನೇನು ಚದುರಿ ಹೋಗಲಿದ್ದ ಈ ಚಳವಳಿಗೆ ಹುರುಪು ತುಂಬಿ, ದಿಗ್ದರ್ಶನ ಮಾಡಿದವರು ಪೆರಿಯಾರ್ ಇ.ವಿ. ರಾಮಸ್ವಾಮಿ. ಆನಂತರ ಅವರು ಆರಂಭಿಸಿದ ದ್ರಾವಿಡ ಚಳವಳಿ ಹಾಗೂ ಸ್ವಾಭಿಮಾನ ಚಳವಳಿಗಳು ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿದವು. ಅವರ ನೆನಪಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ […]
ಭೂಮಿ, ಸಾಗರದಲ್ಲೂ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯ
ಭೂಮಿ, ತಾಯಿಮಾಸು(ಸೆತ್ತೆ)ಯಿಂದ ಹಿಡಿದು ಮೀನು ಸೇರಿದಂತೆ ಸಮುದ್ರದ ಜೀವಿಗಳಲ್ಲೂ ಇರುವ ವಸ್ತು ಒಂದಿದೆ: ಅದು ಪ್ಲಾಸ್ಟಿಕ್. ತಥಾಗಥನು ಹೇಳಿದಂತೆ, ಸಾವಿಲ್ಲದ ಮನೆಯಿಂದ ಸಾಸಿವೆ ತರಬಹುದೇನೋ; ಆದರೆ, ಪ್ಲಾಸ್ಟಿಕ್ ಮಾಲಿನ್ಯ ಇಲ್ಲದ ದೇಶ, ವಸ್ತು-ಜೀವಿ ಇರಲಾರದು. ಎಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ? ಪರಿಸರದಲ್ಲಿ ಅತಿ ಹೆಚ್ಚು ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯ ಯಾವುದು? ಪ್ಲಾಸ್ಟಿಕ್ ತ್ಯಾಜ್ಯ ಮಾರಕವಾಗಿದ್ದರೂ, ಕೆಲವು ದೇಶಗಳು ಅದರ ಉತ್ಪಾದನೆಯನ್ನು ನಿಯಂತ್ರಿಸಲು ಏಕೆ ಹಿಂಜರಿಯುತ್ತಿವೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ವಿಶ್ವಸಂಸ್ಥೆ ನೇತೃತ್ವದ […]
ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡ ವಿದ್ವಾಂಸ, ಭಾಷಾ ವಿಜ್ಞಾನಿ, ವಿಮರ್ಶಕ ಪ್ರೊ.ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಅವರ ‘ನುಡಿಗಳ ಅಳಿವು’ ಎಂಬ ಸಾಹಿತ್ಯ ವಿಮರ್ಶೆ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ 1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಕೆವಿ ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓಎಲ್ ನಾಗಭೂಷಣಸ್ವಾಮಿ, ಡಾ.ಹಳೆಮನಿ ನಾಗರಾಜ್ ಮತ್ತು […]
ಬಾಕು ಹವಾಮಾನ ಶೃಂಗ: ಕೈ ತಪ್ಪಿದ ಇನ್ನೊಂದು ಅವಕಾಶ
ತಮಿಳುನಾಡಿನಲ್ಲಿ ಜೀವ-ಆಸ್ತಿ ನಷ್ಟಕ್ಕೆ ಕಾರಣವಾದ ಫೆಂಜಲ್, ರಚ್ಚೆ ಹಿಡಿದ ಮಗುವಿನಂತೆ ಬೆಂಗಳೂರನ್ನೂ ಬಿಟ್ಟೂ ಬಿಡದೆ ಕಾಡಿತು. ಇದೇ ಹೊತ್ತಿನಲ್ಲಿ ರಾಷ್ಟ್ರಧಾನಿ ದಿಲ್ಲಿಯಲ್ಲಿ ಹೊಂಜು ಒಂದು ವಾರ್ಷಿಕ ಕಾರ್ಯಕ್ರಮದಂತೆ ಜನರ ಜೀವ ಹಿಂಡುತ್ತಿದೆ. ಹವಾಮಾನ ಬದಲಾವಣೆಯಿಂದ ಚಂಡಮಾರುತ, ಭೂಕುಸಿತದಂಥ ಪ್ರಾಕೃತಿಕ ಅವಘಡಗಳ ತೀವ್ರತೆ ಮತ್ತು ಸಂಭವನೀಯತೆ ಎರಡೂ ಹೆಚ್ಚುತ್ತಿದೆ. ಈ ಸಂಬಂಧ ಚರ್ಚಿಸಲು ಅಜರ್‌ಬೈಜಾನಿನ ಬಾಕುವಿನಲ್ಲಿ ನಡೆದ 29ನೇ ಹವಾಮಾನ ಶೃಂಗಸಭೆ ಒಂದರ್ಥದಲ್ಲಿ ಟುಸ್ ಎಂದಿದೆ. ರಿಯೋ ಡಿಜನೈರೋನ ಮೊದಲ ಶೃಂಗದಿಂದ ಹಿಡಿದು ಬಾಕು ಶೃಂಗದವರೆಗಿನ ಅವಧಿಯಲ್ಲಿ ಜಗತ್ತಿನ […]