Author: Rutha Editor

Journalist,Translator,avid bibliophile

ದೇಶಿ ಕೃಷಿ ಮೇಲೆ ಎಲ್‌ ನಿನೋ ʻಗಾಡ್ಜಿಲ್ಲಾ’ ಆಘಾತ

ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮುಂಗಾರು ಹಿನ್ನಡೆ ಅನುಭವಿಸಿದೆ. 2026ರಲ್ಲಿ ಮುಂಗಾರು ವಾಡಿಕೆಗಿಂತ ದುರ್ಬಲ ಆಗಲಿದೆ ಎಂದು ಈ ಹಿಂದೆಯೇ ಸೂಚನೆ ಇತ್ತು. ರಾಷ್ಟ್ರ ಮಟ್ಟದಲ್ಲಿ ಶೇ.43 ಹಾಗೂ ರಾಜ್ಯದಲ್ಲಿ ಸರಾಸರಿ ಶೇ.37 ರಷ್ಟು ಮಳೆ ಕೊರತೆ ಆಗಿದೆ; ದಕ್ಷಿಣ ಒಳನಾಡಿನ 3, ಉತ್ತರ ಒಳನಾಡಿನ 5, ಮಲೆನಾಡಿನ 4 ಮತ್ತು ಕರಾವಳಿಯ 3 ಸೇರಿದಂತೆ 15 ಜಿಲ್ಲೆಗಳಲ್ಲಿ ಕೊರತೆ ತೀವ್ರವಾಗಿದೆ; ಬೀದರ್‌ ಗರಿಷ್ಠ(ಶೇ.67) ಮತ್ತು ಮೈಸೂರು ಕನಿಷ್ಠ(ಶೇ.42). ತುಂಗಭದ್ರಾ ಸೇರಿದಂತೆ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಮಲೆನಾಡು […]

ರಸಗೊಬ್ಬರ, ಬಿತ್ತನೆ ಬೀಜ ಕೊರತೆ : ಕೃಷಿ ಸಂಕಷ್ಟದ ಸಣ್ಣ ತುಣುಕು

ರಾಜ್ಯದೆಲ್ಲೆಡೆ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದೊಂದು ವಾರ್ಷಿಕ ಕಾರ್ಯಕ್ರಮದಂತೆ ಆಗಿಬಿಟ್ಟಿದೆ. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಮೇ 30, 2008ರಂದು ಅಧಿಕಾರ ಸ್ವೀಕರಿಸಿತ್ತು. ಹಾವೇರಿಯ ಎಪಿಎಂಸಿ ಅಂಗಳದಲ್ಲಿ ಮುಂಗಾರು ಪೂರ್ವ ಬಿತ್ತನೆಗೆ ಸಬ್ಸಿಡಿ ರಸಗೊಬ್ಬರಗಳ ಕೊರತೆಯನ್ನು ಪ್ರತಿಭಟಿಸಿದ ರೈತರ ಮೇಲೆ ಪೊಲೀಸರು ಜೂನ್‌ 10 ರಂದು ಗುಂಡು ಹಾರಿಸಿದರು. ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನಟ್ಟಿ ಬಲಿಯಾಗಿ, 13 ಮಂದಿ ಗಾಯಗೊಂಡರು. ಸರ್ಕಾರ ವಿಚಾರಣೆಗೆ ನೇಮಿಸಿದ ಸುಪ್ರೀಂ ಕೋರ್ಟ್‌ ನಿವೃತ್ತ […]

ಕರಿಯರದೊ ಬಿಳಿಯರದೊ ಯಾರದಾದರೆ ಏನು……

ಬಿಡದಿಯಲ್ಲಿ ಸರ್ಕಾರ ಸ್ಥಾಪಿಸಲು ಪ್ರಸ್ತಾಪಿಸಿರುವ ಗ್ರೇಟರ್‌ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್(ಜಿಬಿಐಟಿ) ರೈತರಲ್ಲಿ ಆತಂಕ ಮೂಡಿಸಿದೆ. ದೇಶದ ಮೊದಲ ಎಐ ಚಾಲಿತ ಉಪನಗರ ಇದಾ ಗಿದ್ದು, ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುತ್ತದೆ; ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಸುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ರೈತರು ಪ್ರಾಥಮಿಕ ಅಧಿಸೂಚನೆ ಹೊರಡಿ ಸಿದ ಬಳಿಕ ಮಾರ್ಚ್‌ 2025ರಿಂದ ಪ್ರತಿಭಟನೆ ಆರಂಭಿಸಿದ್ದಾರೆ. ʻನನ್ನ ಭೂಮಿ, ನನ್ನ ಹಕ್ಕುʼ ಎಂದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಶೇ.80 ರಷ್ಟು ರೈತರು ಜಮೀನು ನೀಡಲು […]

ನೀಟ್‌ ಅವ್ಯವಸ್ಥೆ: ನಿರ್ಲಕ್ಷ್ಯ, ಉತ್ತರದಾಯಿತ್ವವಿಲ್ಲದ ಆಡಳಿತದ ಫಲ

ಮೇ 3, 2026ರಂದು ನೀಟ್-ಯುಜಿಸಿ(ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತೆ ಪರೀಕ್ಷೆ) ಪರೀಕ್ಷೆ ನಡೆದ 9 ದಿನಗಳ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಿತು; ಸರ್ಕಾರ ಸಿಬಿಐ ತನಿಖೆಗೆ ಮುಂದಾಯಿತು. ವೈದ್ಯರ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ ಕದ ತಟ್ಟಿತು. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಒಂದು ವಿಷವೃತ್ತ. ರಾಜಕೀಯ ನಾಯಕರ ಖಾಸಗಿ ವೈದ್ಯ ಕಾಲೇಜುಗಳು, ಹಲವು ಸಾವಿರ ಕೋಟಿ ರೂ. ಮೌಲ್ಯದ ಕೋಚಿಂಗ್‌ ಉದ್ಯಮ ಮತ್ತು ವೈದ್ಯ ಪದವಿಯ ಸಾಮಾಜಿಕ ಪ್ರತಿಷ್ಠೆ ಇದರಲ್ಲಿ ಕೈ […]

ಬಿಜೆಪಿ ಸರಣಿ ವಿಜಯ: ಕಾಂಗ್ರೆಸ್‌, ಪ್ರತಿಪಕ್ಷಗಳ ಕಾರ್ಯನೀತಿ ಏನು?

ಐದು ರಾಜ್ಯಗಳ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಹಾಗೂ ಕೇರಳದಲ್ಲಿ ಎಡ ರಂಗ ಸೋಲುಂಡಿವೆ. ಅಸ್ಸಾಮಿನಲ್ಲಿ ಎನ್‌ಡಿಎ 3ನೇ ಅವಧಿಗೆ ಹಾಗೂ ಪುದು ಚೆರಿಯಲ್ಲಿ ಎನ್.ರಂಗಸ್ವಾಮಿ ಮತ್ತೊಮ್ಮೆ ಗದ್ದುಗೆ ಹಿಡಿದಿದ್ದಾರೆ. ಪ್ರತಿಪಕ್ಷಗಳಿಗೆ 2024ರ ಲೋಕಸಭೆ ಚುನಾವಣೆ ತೆರೆದಿದ್ದ ಬಾಗಿಲು ಈಗ ಬಹುತೇಕ ಮುಚ್ಚಿಹೋಗಿದೆ; ಧರ್ಮ, ಭಾಷೆ ಮತ್ತು ಜಾತಿಗಳ ವಿಸ್ತೃತ ವೈವಿಧ್ಯವಿದ್ದರೂ, ಶೇ.80 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಮತ್ತು ಕಾಂಗ್ರೆಸ್‌ ನಾಲ್ಕು ರಾಜ್ಯಗಳಿಗೆ ಸೀಮಿತವಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ […]

ಶತಕ ಬಾರಿಸಿದ ಸರ್‌ ಡೇವಿಡ್‌ ಅಟೆನ್‌ಬರೋ

ʻಹಲ್ಲು ಬಹಳ ದೊಡ್ಡ ಇದೆʼ ಎಂಬ ಕಾರಣಕ್ಕೆ ಕ್ಯಾಮೆರಾ ಎದುರು ಅವಕಾಶ ಸಿಗದ ಯುವಕನೊಬ್ಬ 70 ವರ್ಷ ಕಾಲ ವನ್ಯಜೀವಿಗಳ ಕುರಿತು ನಿರಂತರವಾಗಿ ಕಾರ್ಯಕ್ರಮ ನೀಡುತ್ತ ಅರಿವು ಮೂಡಿ ಸಿದ್ದು ಒಂದು ಸೋಜಿಗ. ಅವರೇ ಸರ್‌ ಡೇವಿಡ್‌ ಅಟೆನ್‌ಬರೋ. ಸಾರ್ಥಕ ನೂರು ವರ್ಷ ಪೂರೈಸಿರುವ ಅವರು ಕಳೆದ 70 ವರ್ಷದಿಂದ ಬ್ರಿಟನ್‌ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆಯ ಜನರನ್ನು ವನ್ಯಜೀವಿ ಪ್ರಪಂಚಕ್ಕೆ ಪರಿಚಯಿಸಿದ ಶ್ರೇಷ್ಠ ಪ್ರಸಾರಕರಲ್ಲಿ ಒಬ್ಬರು. ತಂದೆ ಫ್ರೆಡೆರಿಕ್‌ ಅಟೆನ್‌ಬರೋ, ಲೀಸೆಸ್ಟರ್‌ ಯೂನಿವರ್ಸಿಟಿ ಕಾಲೇಜಿನ ಪ್ರಾಚಾರ್ಯ. ತಾಯಿ […]

ತೂಗುಯ್ಯಾಲೆಯಲ್ಲಿರುವ ಆಪ್‌ ಮತ್ತು ಕೇಜ್ರಿವಾಲ್‌ ಭವಿಷ್ಯ

2021-22ರ ದೆಹಲಿ ಮದ್ಯ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌, ಮನಿಶ್‌ ಸಿಸೋಡಿಯಾ ಸೇರಿದಂತೆ 23 ಮಂದಿಗೆ ನ್ಯಾಯಾಲಯ ಉಪಶಮನ ನೀಡಿದೆ. 100 ಕೋಟಿ ಲಂಚ ಪಡೆಯಲಾಗಿದೆ ಎಂಬುದು ಊಹಾತ್ಮಕ ಮತ್ತು ಅದಕ್ಕೆ ಪುರಾವೆ ನೀಡುವಲ್ಲಿ ವಿಫಲವಾಗಿದೆ ಎಂದು ಹೇಳಿದೆ. ಇದೇ ಹೊತ್ತಿನಲ್ಲಿ 7 ಸಂಸದರು ಆಮ್‌ ಆದ್ಮಿ ಪಕ್ಷವನ್ನು ತೊರೆದು, ಬಿಜೆಪಿ ಸೇರಿದ್ದಾರೆ. 2027ರಲ್ಲಿ ನಡೆಯಲಿರುವ ಪಂಜಾಬ್‌ ವಿಧಾನಸಭೆ ಚುನಾವಣೆ ಗೆ ಬಿಜೆಪಿ ಹತಾರಗಳನ್ನು ಸಜ್ಜುಗೊಳಿಸಲು ಆರಂಭಿಸಿದೆ. ದೆಹಲಿ ವಿಧಾನಸಭೆ ಚುನಾವಣೆ ವೇಳೆ ಮಫ್ಲರ್‌ ಧರಿಸಿ, ಕೆಮ್ಮುತ್ತ, ಭ್ರಷ್ಟಾಚಾರ […]

ಐಟಿ ಕಾಯಿದೆಗೆ ಮತ್ತೊಂದು ತಿದ್ದುಪಡಿ: ಹಳ್ಳ ಹಿಡಿದ ಅಭಿವ್ಯಕ್ತಿ ಸ್ವಾತಂತ್ರ್ಯ

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ)ವು ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಹಾಗೂ ಡಿಜಿಟಲ್‌ ಮಾಧ್ಯಮ ನೀತಿಸಂಹಿತೆ) ನಿಯಮಗಳು 2021ಕ್ಕೆ ಮತ್ತೊಂದು ತಿದ್ದುಪಡಿ ತರಲು ಕರಡು ಪ್ರಸ್ತಾಪವನ್ನು ಪ್ರಕಟಿಸಿದೆ. ಒಂದು ವೇಳೆ ಅಂಗೀಕೃತಗೊಂಡರೆ, ವಾಕ್‌ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಇನ್ನಷ್ಟು ಬಿಗಿ ಯಾಗಲಿದೆ. ಶಾಸಕಾಂಗದ ಸಮ್ಮತಿ ಇಲ್ಲದೆ, ಸಂಸತ್ತಿನಲ್ಲಿ ಚರ್ಚೆ ನಡೆಸದೆ ಜನರ ಮೂಲಭೂತ ಹಕ್ಕುಗಳನ್ನು ಕಸಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಐಟಿ ಕಾಯಿದೆಯನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟ್ ಆನ್‌ಲೈನ್ ಗೋಪ್ಯತೆ ಮತ್ತು […]

ಅಸ್ಸಾಂ: ಮಾಘ್‌ ಬಿಹು ಬಳಿಕ ಸರ್ಕಾರ ರಚಿಸುವವರು ಯಾರು?

ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳ 789 ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರಗಳಲ್ಲಿ ಸಂಗ್ರಹವಾಗಿದೆ. 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಹೊಸ ವರ್ಷವನ್ನು ಸ್ವಾಗತಿಸಲು ನಡೆಯುವ ಮಾಘ್‌ ಬಿಹು 15ರಿಂದ ಆರಂಭವಾಗಲಿದ್ದು, ಹಬ್ಬ ಮುಗಿದ ಬಳಿಕ ಹೊಸ ಸರ್ಕಾರ ರಚನೆಯಾಗಲಿದೆ. ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌, ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಹಣಿಯುವುದೇ? ರಾಜ್ಯದ 35 ಜಿಲ್ಲೆಗಳನ್ನು 5 ವಿಭಾಗವಾಗಿ ವಿಭಜಿಸಲಾಗಿದೆ; ಕೆಳ ಅಸ್ಸಾಂ, ಉತ್ತರ ಅಸ್ಸಾಂ, ಮೇಲಣ ಅಸ್ಸಾಂ, ಕೇಂದ್ರ […]

Back To Top