ಸಂರಕ್ಷಣೆ ಕಾಯಿದೆಗಳು ನಿಶ್ಶಕ್ತ : ಭ್ರಷ್ಟಾಚಾರ, ಉದ್ಯಮಕ್ಕೆ ಕಾಡುಗಳ ಬಲಿ
ಆಗುಂಬೆಯ ಅರಣ್ಯದಲ್ಲಿ ಕಾಳಿಂಗ ಸರ್ಪಗಳ ದುರ್ಬಳಕೆ ಬಹಿರಂಗಗೊಂಡು ಈಸಂಬಂಧ ದೂರು ಸಲ್ಲಿಕೆಯಾಗಿದ್ದರೂ, ಅರಣ್ಯ ಇಲಾಖೆ-ಸರ್ಕಾರ ಮೌನವಾಗಿವೆ; ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್)ಯ ದೇವದಾರಿ ಗಣಿ ವಿರುದ್ಧ ಗ್ರಾಮಸಭೆ ನಿರ್ಣಯ ಕೈಗೊಂಡಿದೆ. ಕರ್ನಾಟಕ ವಿದ್ಯುತ್ ನಿಗಮ ಯೋಜಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್(ಪಿಎಸ್‌ಪಿ) ಕುರಿತ ಸಾರ್ವಜನಿಕ ಅಹವಾಲು ಸಭೆಯಲ್ಲಿ ಯೋಜನೆ ವಿರುದ್ಧ ಸುಮಾರು 10 ಸಾವಿರ ಅಹವಾಲುಗಳು ಸಲ್ಲಿಕೆಯಾಗಿವೆ ಮತ್ತು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜನ ಎಚ್ಚರಿಸಿದ್ದಾರೆ. ದೇಶದೆಲ್ಲೆಡೆ ಅರಣ್ಯಗಳು ಉದ್ಯಮಕ್ಕೆ, ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿವೆ. ಸಂಪನ್ಮೂಲ ಸಮೃದ್ಧ ಛತ್ತೀಸ್‌ಗಢ ರಾಜ್ಯದಲ್ಲಿ […]
ಅರುಂಧತಿ ಆತ್ಮಕಥನ: ಮೇರಿ ಅವರ ಕ್ರಾಂತಿ ಇನ್ನೂ ಅಪೂರ್ಣ
ನರ್ಮದಾ ಆಂದೋಲನ ಕುರಿತ ಅರುಂಧತಿ ರಾಯ್ ಅವರ ಲೇಖನಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಬ್ರಿಟಿಷ್ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕ ಜಾನ್ ಬರ್ಗರ್, ʻನಿಮ್ಮ ಕಾದಂಬರಿಗಳು ಮತ್ತು ಕಾದಂಬರಿಯೇತರ ಬರಹಗಳು ನಿಮ್ಮೆರಡು ಕಾಲುಗಳಂತೆ ಜಗತ್ತಿನೆಲ್ಲೆಡೆ ಸುತ್ತುತ್ತವೆʼ ಎಂದು ಹೇಳಿದ್ದರು. ಇದನ್ನು ʻಮದರ್ ಮೇರಿ ಕಮ್ಸ್ ಟು ಮಿʼ ಹೊತ್ತಗೆಯಲ್ಲಿ ಉಲ್ಲೇಖಿಸಿರುವ ಅರುಂಧತಿ, ʼತಮ್ಮ ಎರಡು ರೀತಿಯ ಬರಹಗಳು ಒಂದರೊಂದಿಗೆ ಇನ್ನೊಂದು ಸಂಘರ್ಷದಲ್ಲಿ ಇಲ್ಲ ಎಂಬುದನ್ನು ಗುರುತಿಸಿದ ಕೆಲವೇ ಕೆಲವು ಜನರಲ್ಲಿ ಬರ್ಗರ್ ಒಬ್ಬರುʼ ಎಂದು ಹೇಳಿಕೊಂಡಿದ್ದಾರೆ. ಅರುಂಧತಿ ಅವರ […]
ಭೌಗೋಳಿಕ ಮಾನ್ಯತೆ ಮತ್ತು ಕಲಾಪ್ರಕಾರಗಳ ದುರ್ಬಳಕೆ ಸಮಸ್ಯೆ
ಇಟಲಿ ಮೂಲದ ಫ್ಯಾಷನ್ ಬ್ರಾಂಡ್ ಪ್ರಾಡಾ, ಕೊಲ್ಲಾಪುರ ಚಪ್ಪಲಿ ಮತ್ತು ಅಸ್ಸಾಂನ ಬೋಡೋಲ್ಯಾಂಡ್ ಟೆರಿಟೋರಿಯಲ್ ರೀಜನ್(ಬಿಟಿಆರ್) ಮಂಡಳಿಯ ಚುನಾವಣೆ; ಈ ಮೂರನ್ನು ಒಂದೆಳೆಯಲ್ಲಿ ಪೋಣಿಸಿದ ಸಂಗತಿಯೊಂದು ಇದೆ- ಭೌಗೋಳಿಕ ಮಾನ್ಯತೆ(ಜಿಯಾಗ್ರಫಿಕಲ್ ಇಂಡಿಕೇಷನ್, ಜಿಐ). ಮಿಲಾನ್ ಫ್ಯಾಷನ್ ಮೇಳದಲ್ಲಿ ಕೊಲ್ಲಾಪುರಿ ಚಪ್ಪಲಿಯನ್ನು ಹೋಲುವ ವಿನ್ಯಾಸವೊಂದನ್ನು ಪ್ರಾಡಾ ಪ್ರದರ್ಶಿಸಿತ್ತು. ದೇಶಿ ಉತ್ಪನ್ನವನ್ನು ನಕಲು ಮಾಡಲಾಗಿದೆ. ಇದು ʻದೇಶದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳ ದುರ್ಬಳಕೆʼ ಎಂದು ವ್ಯಾಪಕ ಟೀಕೆಗೆ ಒಳಗಾಯಿತು. ʻಜಿಐ ಉಲ್ಲಂಘನೆ ಆಗಿದೆʼ ಎಂದು ಲಿಡ್ಕರ್(ಡಾ.ಬಾಬು ಜಗಜೀವನ್‌ರಾಂ […]
ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯನೀತಿ: ಎಷ್ಟು ಸೂಕ್ತ?
ದೇಶದೆಲ್ಲೆಡೆ ಶೇ.20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್(ಇ20) ಮಾತ್ರ ಪೂರೈಕೆಯಾಗುತ್ತಿದೆ. ದೇಶ ಶೇ.85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು ವಿದೇಶಿ ಅವಲಂಬನೆ ಯನ್ನು ಕಡಿಮೆಗೊಳಿಸಲು ಮತ್ತು ವಿದೇಶಿ ವಿನಿಮಯ ಉಳಿಸಲು ಇಂಥ ಕ್ರಮ ಅಗತ್ಯವಾಗಿತ್ತು ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಇ20 ಪ್ರಯೋಜನಗಳು ಪ್ರಶ್ನಾರ್ಹ ವಾಗಿವೆ. ದೇಶ ವಿಶ್ವದ ಮೂರನೇ ಅತಿ ದೊಡ್ಡ ಕಾರು ಮಾರುಕಟ್ಟೆ. ದುಬಾರಿ ಕಚ್ಚಾ ತೈಲ ಆಮದು ಕಡಿಮೆಗೊಳಿಸಲು ಮತ್ತು ಪರಿಸರಸ್ನೇಹಿ ಶುದ್ಧ ಇಂಧನ ಪೂರೈಸುವ ಉದ್ಧೇಶದಿಂದ ಇಬಿಪಿ(ಎಥೆನಾಲ್ ಬ್ಲೆಂಡಿಂಗ್ ಪಾಲಿಸಿ)ಯನ್ನು 2001ರಲ್ಲಿ ಮಹಾರಾಷ್ಟ್ರ/ಉತ್ತರಪ್ರದೇಶದಲ್ಲಿ […]
ಎಲ್ಲೆಲ್ಲೂ ಇರುವ ಅವಿನಾಶಿ ಪ್ಲಾಸ್ಟಿಕ್
ಸಾವು ಸಂಭವಿಸದ ಮನೆಗಳು ಇರಬಹುದು; ಆದರೆ, ಪ್ಲಾಸ್ಟಿಕ್ ಇಲ್ಲದ ಮನೆಗಳನ್ನು ಹುಡುಕುವುದು ಕಷ್ಟ ಎನ್ನುವಷ್ಟು ಅದು ಎಲ್ಲೆಡೆ ವ್ಯಾಪಿಸಿಬಿಟ್ಟಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ಸಂಬಂಧ ಸ್ವಿಟ್ಜರ್ಲೆಂಡ್‌ನ ಜಿನೇವಾದಲ್ಲಿ ಇತ್ತೀಚೆಗೆ (ಆಗಸ್ಟ್ 5 ರಿಂದ ಆಗಸ್ಟ್ 14, 2025) ಸಮಾವೇಶವೊಂದು ನಡೆಯಿತು. ಆದರೆ, ಎರಡು ಭಾಗವಾಗಿ ಒಡೆದಿರುವ ಜಗತ್ತಿನಲ್ಲಿ ಒಮ್ಮತವಿಲ್ಲದೆ ಈ ಸಂಬಂಧ ಯಾವುದೇ ಒಪ್ಪಂದಕ್ಕೆ ಬರಲು ಆಗಲಿಲ್ಲ. ಜಿನೀವಾದಲ್ಲಿ ನಡೆದ ಅಂತರ ಸರ್ಕಾರ ಸಮಾಲೋಚನಾ ಸಮಿತಿಯ ಐದನೇ ಅಧಿವೇಶನ (ಐಎನ್‌ಸಿ-5.2)ದಲ್ಲಿ 184 ದೇಶಗಳು ಪಾಲ್ಗೊಂಡಿದ್ದವು. 70 ದೇಶಗಳ […]
ಮತ ಕಳವು ಮತ್ತು ಚುನಾವಣೆ ಆಯೋಗದ ವಿಶ್ವಾಸಾರ್ಹತೆ ಪ್ರಶ್ನೆ
ರಾಹುಲ್ ಗಾಂಧಿ ಆಗಸ್ಟ್ 7, 2025 ರಂದು ಪತ್ರಿಕಾಗೋಷ್ಠಿಯಲ್ಲಿ ʻ1,00,250 ಮತ ಕಳವುʼ ಆರೋಪ ಹೊರಿಸಿದರು. ಆದರೆ, ಈ ಕುರಿತು ತನಿಖೆ ನಡೆಸದ ಚುನಾವಣೆ ಆಯೋಗವು ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕೆಂದು ರಾಹುಲ್ ಅವರಿಗೆ ನೋಟಿಸ್ ನೀಡಿತು; ಸಂದೇಶವಾಹಕನಿಗೆ ಗುಂಡಿಕ್ಕಿ ಸಂದೇಶವನ್ನು ನಿರ್ಲಕ್ಷಿಸಲು ಮುಂದಾಯಿತು. ಇಂಡಿಯಾ ಒಕ್ಕೂಟ ಮತ ಕಳವು ಪ್ರತಿಭಟಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ; ಇದೇ ಹೊತ್ತಿನಲ್ಲಿ ʻಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮತಪಟ್ಟಿ ಸಿದ್ಧಪಡಿಸಲಾಗಿತ್ತುʼ ಎಂದ ಸಚಿವ ಕೆ.ಎನ್.ರಾಜಣ್ಣ […]
ಲಾಭಕೋರತನ, ಮಿಲಿಟರೀಕರಣ ಹಾಗೂ ಹವಾಮಾನ ಬದಲಾವಣೆ
ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಪೋಟದಿಂದ ಊರೊಂದು ಕೊಚ್ಚಿಹೋಗಿದೆ. ಯುರೋಪಿನ ನಾಗರಿಕರು ಉಷ್ಣ ಅಲೆಯಿಂದ ಬಳಲುತ್ತಿರುವ ಹೊತ್ತಿನಲ್ಲೇ ಅಮೆರಿಕ ಪ್ರವಾಹ/ಚಂಡಮಾರುತಕ್ಕೆ ಈಡಾಗಿದೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಳೆ ಋತುಗಳೇ ಬದಲಾಗಿವೆ. ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಪ್ರತಿದಿನ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ಪ್ರಮಾಣ 90.5 ದಶಲಕ್ಷ ಟನ್ ಮುಟ್ಟಿದೆ (2020). 1850ರಲ್ಲಿ ಭೂಮಿಯ ತಾಪಮಾನವನ್ನು ದಾಖಲಿಸಲು ಆರಂಭಿಸಿದ ಬಳಿಕ 2024ರಲ್ಲಿ ಅತಿ ಹೆಚ್ಚು ಉಷ್ಣತೆ ದಾಖಲಾಗಿದೆ. ಹವಾಮಾನ ಸಂಕಷ್ಟ ಎನ್ನುವುದು ಹೊಸಿಲು ದಾಟಿ ಒಳಗೆ ಪ್ರವೇಶಿಸಿದೆ. ಇದರ […]
ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ʻಆಪರೇಷನ್ ಸಿಂಧೂರʼ ಸರ್ಕಾರ-ಪ್ರತಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಗದ್ದಲದಿಂದ ನ್ಯಾಯಾಂಗ, ಕಾರ್ಯಾಂಗ ಮತ್ತು ನ್ಯಾಯಾಧೀಶರ ನೇಮಕ-ವರ್ಗಾವಣೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದ ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ ಅವರ ಪ್ರಕರಣ ಹಿನ್ನೆಲೆಗೆ ಸರಿದಿದೆ. ಮಾರ್ಚ್ 14, 2025ರಂದು ದಿಲ್ಲಿ ಹೈಕೋರ್ಟಿನ ಹಿರಿಯ ನ್ಯಾಯಾಧೀಶ ನ್ಯಾ. ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದ ಹೊರ ಮನೆಯಲ್ಲಿ ಸುಟ್ಟ 500 ರೂ. ನೋಟುಗಳ ಚೀಲಗಳು ಸಿಕ್ಕಿದವು. ಸುಪ್ರೀಂ ಕೋರ್ಟ್ ಮು.ನ್ಯಾ. ಸಂಜೀವ್ ಖನ್ನಾ ಅವರು ಈ […]
ಚುನಾವಣೆ ಆಯೋಗದ ಕುತಂತ್ರ ಮತ್ತು ವೋಟ್‌ಬಂದಿ
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ʻಅದೊಂದು ಸಾಂವಿಧಾನಿಕ ಹೊಣೆಗಾರಿಕೆʼ ಎಂದಿರುವ ಸುಪ್ರೀಂ ಕೋರ್ಟ್(ಜುಲೈ 10,2025 ರಂದು), ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿದೆ. ತೀರ್ಪಿನಿಂದ ಉತ್ತೇಜಿತವಾಗಿರುವ ಆಯೋಗ, ದೇಶಾದ್ಯಂತ ಈ ಪ್ರಕ್ರಿಯೆಯನ್ನು ನಡೆಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂದು ವಿಡಿಯೋ ಮಾಡಿದ್ದ ಪತ್ರಕರ್ತ/ಯುಟ್ಯೂಬರ್ ಅಜಿತ್ ಅಂಜುಂ ಮೇಲೆ ಜುಲೈ 15ರಂದು ಎಫ್‌ಐಆರ್ ದಾಖಲಿಸಲಾಗಿದೆ. ಪರಿಷ್ಕರಣೆಯನ್ನು ವಿರೋಧಿಸಿದ್ದ ಪ್ರತಿ ಪಕ್ಷಗಳು, ಸುಪ್ರೀಂ ಮೆಟ್ಟಿಲೇರಿವೆ. ಜುಲೈ 28ರಂದು ಈ ಸಂಬಂಧ ವಿಚಾರಣೆ ಬಾಕಿ […]

