ನಿಜ ನಾಗರಗಳು ಬಡವರನ್ನೇ ಕಚ್ಚುತ್ತವೆ…….
ಇಂಡಿಯ ಸೇರಿದಂತೆ ಕಡಿಮೆ-ಮಧ್ಯಮ ಆದಾಯದ ದೇಶಗಳಲ್ಲಿ ಹಾವು ಕಡಿತದಿಂದ ಉಂಟಾಗುವ ಸಾವು ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆ. ದೇಶದಲ್ಲಿ 2024ರಲ್ಲಿ 64,000 ಮಂದಿ ಮೃತಪಟ್ಟಿದ್ದಾರೆ. ಇದು ಜಗತ್ತಿನಲ್ಲಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇ.80. ಇದರಿಂದಾಗಿಯೇ ದೇಶವನ್ನು ಹಾವು ಕಡಿತದಲ್ಲಿ ʼಜಗತ್ತಿನ ರಾಜಧಾನಿʼ ಎಂದು ಹೆಸರಿಸಲಾಗಿದೆ. ಈ ಸಮಸ್ಯೆಯ ಮೂಲ-ಹಾವು, ಮಾನವ ಮತ್ತು ಪರಿಸರದ ನಡುವಿನ ಸಂಘರ್ಷ. ಇದು ಸಾಮಾಜಿಕ, ಆರ್ಥಿಕ, ಮಾನವಿಕ, ವೃತ್ತಿ ಸಂಬಂಧಿತ, ಪರಿಸರ ಹಾಗೂ ಧಾರ್ಮಿಕ ಆಯಾಮಗಳಿರುವ ಸಂಕೀರ್ಣ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) […]
ʻಸಂವಿಧಾನ ಹತ್ಯಾ ದಿವಸ್ʼ ಆಚರಣೆಯಿಂದ ವಾಸ್ತವ ಬದಲಾಗುವುದಿಲ್ಲ
ತುರ್ತು ಪರಿಸ್ಥಿತಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೂನ್ 25ನ್ನು ʻಸಂವಿಧಾನ ಹತ್ಯಾ ದಿವಸ್ʼ ಎಂದು ಆಚರಿಸುವುದಾಗಿ ಹೇಳಿಕೊಂಡಿದೆ. ಕಾಂಗ್ರೆಸ್‌ನ್ನು ಹೀಗಳೆಯುವ ಯಾವುದೇ ಅವಕಾಶವನ್ನು ಬಿಜೆಪಿ ಬಿಡುವುದಿಲ್ಲ; ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಈ ಆಡಳಿತದಲ್ಲಿ ನಿಂತಿದೆಯೇ: ಇಲ್ಲ. ಇನ್ನಷ್ಟು ಬಿರುಸಿನಿಂದ ಮುನ್ನಡೆದಿದೆ. ಸಿನಿಮಾ ಸೇರಿದಂತೆ ಪ್ರದರ್ಶನ ಕಲೆಗಳ ಮೇಲೆ ಸೆನ್ಸಾರ್‌ನ ಕತ್ತಿ ನೇತಾಡುತ್ತಲೇ ಇದೆ. ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಸ್ಟ್ರೀಮಿಂಗ್ ಕಾರ್ಯಕ್ರಮಗಳಿಗೆ ಇದು ಕರಾಳ ಯುಗ. ಇದಕ್ಕೆ ಇತ್ತೀಚಿನ ಉದಾಹರಣೆ- ಜಾನಕಿ ವಿ/ಎಸ್ […]
ಸಿಂಧೂ ಜಲ ಒಪ್ಪಂದದ ಅಮಾನತಿನ ಪರಿಣಾಮಗಳೇನು?
ಪಹಲ್ಗಾಮ್ ಮಾರಕ ದಾಳಿ ನಂತರ ಸಿಂಧೂ ಜಲ ಒಪ್ಪಂದ(ಇಂಡಸ್ ವಾಟರ್ ಟ್ರೀಟಿ, ಐಡಬ್ಯುಟಿ)ವನ್ನು ತಡೆಹಿಡಿಯುವುದಾಗಿ ಭಾರತ ಹೇಳಿದೆ. ಪ್ರತಿಯಾಗಿ, ತಾನು ಸಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗೆ ಮಾಡಿಕೊಂಡಿರುವ ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿ ಇಡುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ನೀರಿನ ಮೂಲಕ ಪಾಕಿಸ್ತಾನದ ಉಸಿರು ಕಟ್ಟಿಸಲು ಸಾಧ್ಯವೇ? ಐಡಬ್ಯ್ಲುಟಿಗೆ ಜವಹರಲಾಲ್ ನೆಹರೂ ಹಾಗೂ ಜನರಲ್ ಅಯೂಬ್ ಖಾನ್ ಸೆಪ್ಟೆಂಬರ್ 19,1960ರಂದು ಸಹಿ ಹಾಕಿದರು. ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಂಜಾಬಿನ ಸಂಸದ ಇಕ್ಬಾಲ್ ಸಿಂಗ್, ಇದರಿಂದ ತಮ್ಮ ರಾಜ್ಯದಲ್ಲಿ ಆಹಾರ […]
ಪಾರಿವಾಳಗಳ ಪ್ರೀತಿಯಿಂದ ರೋಗಕ್ಕೆ ಆಹ್ವಾನ
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿವೆ. ಮಾಲಿನ್ಯ, ಆಹಾರದ ಕೊರತೆ, ವಾಹನ ದಟ್ಟಣೆ ಇತ್ಯಾದಿ ಇದಕ್ಕೆ ಕಾರಣ. ಗುಬ್ಬಿಗಳ ಜಾಗವನ್ನು ಪಾರಿವಾಳಗಳು ಆಕ್ರಮಿಸಿಕೊಂಡಿದ್ದು, ಗುಬ್ಬಚ್ಚಿಗಳ ಅವನತಿಗೆ ಕಾರಣವಾದ ಅಂಶಗಳೇ ಪಾರಿವಾಳಗಳಿಗೆ ಪೂರಕವಾಗಿ ಪರಿಣಮಿಸಿವೆ. ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮಾನವ ಹಸ್ತಕ್ಷೇಪ ಮತ್ತು ಪರಿಸರ ಮಾಲಿನ್ಯ ಕಾರಣ. ನಗರೀಕರಣ, ಆಧುನೀಕರಣ ಮತ್ತು ಅರಣ್ಯನಾಶದಿಂದ ಗುಬ್ಬಿಗಳ ಸಾಂಪ್ರದಾಯಿಕ ಆವಾಸಸ್ಥಾನ ನಾಶವಾಗಿದೆ; ಆಧುನಿಕ ಕಟ್ಟಡ ಗಳ ವಿನ್ಯಾಸದಿಂದ ಗುಬ್ಬಚ್ಚಿಗಳು ಗೂಡು ಕಟ್ಟಲು ತಾವು ಇಲ್ಲವಾಗಿದೆ. ಕೀಟನಾಶಕಗಳ ವ್ಯಾಪಕ ಬಳಕೆಯಿಂದ ಆಹಾರ […]
ರಾಜ್ಯಪಾಲರ ʻಪಾಕೆಟ್ ವಿಟೋʼ ಅಧಿಕಾರ ಅಂತ್ಯ
ಸುಪ್ರೀಂ ಕೋರ್ಟ್‌ನ ಒಂದು ಮಹತ್ವದ ತೀರ್ಪು ರಾಜ್ಯಪಾಲರ ʻಪಾಕೆಟ್ ವಿಟೋ’ವನ್ನು ಕೊನೆಗೊಳಿಸಿದೆ. ಆದರೆ, ಕಪಾಳಮೋಕ್ಷದಿಂದ ಬುದ್ದಿ ಕಲಿಯದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಮದುರೈನ ಕಾಲೇಜೊಂ ದರಲ್ಲಿ ʻಜೈ ಶ್ರೀರಾಂʼ ಎಂದು ಮೂರು ಬಾರಿ ಘೋಷಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ವಿವಾದ ಸೃಷ್ಟಿಸಿದ್ದಾರೆ. ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆಯಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಬಿಜೆಪಿ ಆಯ್ಕೆಯಾದ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ, ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರದ ಮಗ್ಗಲುಮುಳ್ಳಾಗಿ ಪರಿಣಮಿಸಿದ್ದರು. ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಹೊರನಡೆದಿದ್ದು ಸೇರಿದಂತೆ, ಹಲವು […]
ʻಗಂಟೆ ಬಾರಿಸುತ್ತಿರುವುದು ಒಬ್ಬರಿಗೆ ಮಾತ್ರವಲ್ಲ, ಎಲ್ಲರಿಗೂʼ
ಸಂಸತ್ತು ವಕ್ಫ್ ಮಸೂದೆಯನ್ನು ಅಂಗೀಕರಿಸಿದೆ. ದೇಶದ ಕೆಲವೆಡೆ ಪ್ರತಿಭಟನೆ ವ್ಯಕ್ತವಾಗಿದೆ ಹಾಗೂ ವ್ಯವಸ್ಥೆ ಕಠೋರವಾಗಿ ದಮನಕ್ಕೆ ಮುಂದಾಗಿದೆ. 11 ವರ್ಷದ ಬಳಿಕ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ʻಆರ್‌ಎಸ್‌ಎಸ್ ಆಲದ ಮರʼ ಎಂದು ಶ್ಲಾಘಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಅತ್ಯಂತ ಉತ್ಸಾಹದಿಂದ ವಕ್ಫ್ ಕಾನೂನು ಜಾರಿಗೆ ಮುಂದಾಗಿವೆ. ಮಸೂದೆ ಕುರಿತು ಕೇರಳದ ಕಯಂಕುಲಂ ಮೂಲದ ದೆಹಲಿ ವಾಸಿ, ಕೇರಳ ಕ್ಲಬ್ ಅಧ್ಯಕ್ಷ ಎ.ಜೆ. ಫಿಲಿಪ್ ಎಂಬುವರು ಸಚಿವ ಕಿರಣ್ ರಿಜಿಜು […]
ಕ್ಷೇತ್ರ ಮರುವಿಂಗಡಣೆ ಎಂಬ ಉರುಳು
ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡಣೆ ಕುರಿತ ಜಂಟಿ ಕ್ರಿಯಾ ಸಮಿತಿ(ಜೆಎಸಿ) ಸಭೆ ಚೆನ್ನೈಯಲ್ಲಿ ಮಾರ್ಚ್ 22ರಂದು ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ತೆಲಂಗಾಣದ ರೇವಂತ್ ರೆಡ್ಡಿ, ಪಂಜಾಬಿನ ಭಗವಂತ್ ಮಾನ್, ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಹಾಗೂ ವಿಡಿಯೋ ಕಾನ್ಫೆರೆನ್ಸ್ ಮೂಲಕ ಒಡಿಷಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಳವನ್ನು 25 ವರ್ಷ ಕಾಲ ಅಮಾನತಿನಲ್ಲಿ ಇರಿಸಬೇಕು ಎಂದು ಸಭೆ ಒತ್ತಾಯಿಸಿದೆ. […]
ನರೇಗಾಕ್ಕೆ 20: ವೇತನ ಬಾಕಿ, ಅನುದಾನ ವಿಳಂಬ ಹೆಚ್ಚಳ
ಗ್ರಾಮೀಣರ ಉಪಾದಾಯ ಮೂಲವಾದ ನರೇಗಾ(ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಕ್ಕೆ ಈಗ 20ರ ಹರೆಯ. ಗಟ್ಟಿಯಾಗಿ ಬೆಳೆದು ಗ್ರಾಮೀಣರು-ಕೃಷಿ ಕಾರ್ಮಿಕರ ಕೈ ಹಿಡಿಯಬೇಕಿದ್ದ ಈ ಕಾರ್ಯಕ್ರಮವು ಆಡಳಿಶಾಹಿಯ ನಿರ್ಲಕ್ಷ್ಯದಿಂದ ದಿನೇದಿನೇ ಬಲಗುಂದುತ್ತಿದೆ. ಕೃಷಿ ಸಂಕಷ್ಟ, ಹವಾಮಾನ ಬದಲಾವಣೆಯಿಂದ ಆದ ವ್ಯತ್ಯಯ ಹಾಗೂ ಆದಾಯ ಸ್ಥಗಿತಗೊಂಡಿರುವ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ ಎಂಜಿ ನರೇಗಾದ ಮೊದಲ ಹೆಸರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ […]

