Author: Rutha Editor

Journalist,Translator,avid bibliophile

ತಾಯಂದಿರ ಸಾವು: ಈ ಅನ್ಯಾಯಕ್ಕೆ ಸರ್ಕಾರಗಳೇ ಹೊಣೆ

ಬಳ್ಳಾರಿಯ ಆಸ್ಪತ್ರೆಯಲ್ಲಿ ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣದಿಂದ ಆರು ತಾಯಂದಿರು ಮೃತಪಟ್ಟ ಘಟನೆ ಬಳಿಕ ಚಿಕ್ಕಮಗಳೂರು ಜಿಲ್ಲೆ ಹಾಗೂ ಬೆಂಗಳೂರಿನ ಪೀಣ್ಯದಲ್ಲಿ ಮತ್ತಿಬ್ಬರು ತಾಯಂದಿರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ಆದರೆ, ಸಂಬಂಧಿಸಿದವರು ಆರೋಪ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಡೆದಿರುವ ತಾಯಂದಿರ ಸಾವಿನ ಆಡಿಟ್‌ಗೆ ಸರ್ಕಾರ ಆದೇಶಿಸಿದೆ. ಮೃತರಲ್ಲಿ ಇಬ್ಬರಲ್ಲಿ ಇಲಿ ಜ್ವರ ಪತ್ತೆಯಾಗಿರುವುದರಿಂದ, ಚಿಕಿತ್ಸಾ ತನಿಖೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇವು ಅನ್ಯಾಯದ ಸಾವುಗಳು. […]

ಪೆರಿಯಾರ್‌, ವೈಕಂ ಚಳವಳಿ ಮತ್ತು ದೇವನೂರು ಮಹಾದೇವ

ಸುಮಾರು 100 ವರ್ಷಗಳ ಹಿಂದೆ ನಡೆದ ಸಾಟಿಯಿಲ್ಲದ ಸಾಮಾಜಿಕೋ-ರಾಜಕೀಯ ಹೋರಾಟ; ವೈಕಂ ಚಳವಳಿ. ಅದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ವಿರುದ್ಧ ನಡೆದ ದೇಶದ ಮೊಟ್ಟಮೊದಲ ಹೋರಾಟ; ದೇಶದ ಸಾಮಾಜಿಕ ಸುಧಾರಣೆ ಪಥವನ್ನು ರೂಪಿಸಿತು. ಇನ್ನೇನು ಚದುರಿ ಹೋಗಲಿದ್ದ ಈ ಚಳವಳಿಗೆ ಹುರುಪು ತುಂಬಿ, ದಿಗ್ದರ್ಶನ ಮಾಡಿದವರು ಪೆರಿಯಾರ್‌ ಇ.ವಿ. ರಾಮಸ್ವಾಮಿ. ಆನಂತರ ಅವರು ಆರಂಭಿಸಿದ ದ್ರಾವಿಡ ಚಳವಳಿ ಹಾಗೂ ಸ್ವಾಭಿಮಾನ ಚಳವಳಿಗಳು ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿದವು. ಅವರ ನೆನಪಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ […]

ಭೂಮಿ, ಸಾಗರದಲ್ಲೂ ತುಂಬಿರುವ ಪ್ಲಾಸ್ಟಿಕ್‌ ತ್ಯಾಜ್ಯ

ಭೂಮಿ, ತಾಯಿಮಾಸು(ಸೆತ್ತೆ)ಯಿಂದ ಹಿಡಿದು ಮೀನು ಸೇರಿದಂತೆ ಸಮುದ್ರದ ಜೀವಿಗಳಲ್ಲೂ ಇರುವ ವಸ್ತು ಒಂದಿದೆ: ಅದು ಪ್ಲಾಸ್ಟಿಕ್‌. ತಥಾಗಥನು ಹೇಳಿದಂತೆ, ಸಾವಿಲ್ಲದ ಮನೆಯಿಂದ ಸಾಸಿವೆ ತರಬಹುದೇನೋ; ಆದರೆ, ಪ್ಲಾಸ್ಟಿಕ್‌ ಮಾಲಿನ್ಯ ಇಲ್ಲದ ದೇಶ, ವಸ್ತು-ಜೀವಿ ಇರಲಾರದು. ಎಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಯಾಗುತ್ತಿದೆ? ಪರಿಸರದಲ್ಲಿ ಅತಿ ಹೆಚ್ಚು ಕಾಣಸಿಗುವ ಪ್ಲಾಸ್ಟಿಕ್‌ ತ್ಯಾಜ್ಯ ಯಾವುದು? ಪ್ಲಾಸ್ಟಿಕ್‌ ತ್ಯಾಜ್ಯ ಮಾರಕವಾಗಿದ್ದರೂ, ಕೆಲವು ದೇಶಗಳು ಅದರ ಉತ್ಪಾದನೆಯನ್ನು ನಿಯಂತ್ರಿಸಲು ಏಕೆ ಹಿಂಜರಿಯುತ್ತಿವೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ವಿಶ್ವಸಂಸ್ಥೆ ನೇತೃತ್ವದ […]

ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕನ್ನಡ ವಿದ್ವಾಂಸ, ಭಾಷಾ ವಿಜ್ಞಾನಿ, ವಿಮರ್ಶಕ ಪ್ರೊ.ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಅವರ ‘ನುಡಿಗಳ ಅಳಿವು’ ಎಂಬ ಸಾಹಿತ್ಯ ವಿಮರ್ಶೆ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ 1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಕೆವಿ ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓಎಲ್ ನಾಗಭೂಷಣಸ್ವಾಮಿ, ಡಾ.ಹಳೆಮನಿ ನಾಗರಾಜ್ ಮತ್ತು […]

ಬಾಕು ಹವಾಮಾನ ಶೃಂಗ: ಕೈ ತಪ್ಪಿದ ಇನ್ನೊಂದು ಅವಕಾಶ

ತಮಿಳುನಾಡಿನಲ್ಲಿ ಜೀವ-ಆಸ್ತಿ ನಷ್ಟಕ್ಕೆ ಕಾರಣವಾದ ಫೆಂಜಲ್‌, ರಚ್ಚೆ ಹಿಡಿದ ಮಗುವಿನಂತೆ ಬೆಂಗಳೂರನ್ನೂ ಬಿಟ್ಟೂ ಬಿಡದೆ ಕಾಡಿತು. ಇದೇ ಹೊತ್ತಿನಲ್ಲಿ ರಾಷ್ಟ್ರಧಾನಿ ದಿಲ್ಲಿಯಲ್ಲಿ ಹೊಂಜು ಒಂದು ವಾರ್ಷಿಕ ಕಾರ್ಯಕ್ರಮದಂತೆ ಜನರ ಜೀವ ಹಿಂಡುತ್ತಿದೆ. ಹವಾಮಾನ ಬದಲಾವಣೆಯಿಂದ ಚಂಡಮಾರುತ, ಭೂಕುಸಿತದಂಥ ಪ್ರಾಕೃತಿಕ ಅವಘಡಗಳ ತೀವ್ರತೆ ಮತ್ತು ಸಂಭವನೀಯತೆ ಎರಡೂ ಹೆಚ್ಚುತ್ತಿದೆ. ಈ ಸಂಬಂಧ ಚರ್ಚಿಸಲು ಅಜರ್‌ಬೈಜಾನಿನ ಬಾಕುವಿನಲ್ಲಿ ನಡೆದ 29ನೇ ಹವಾಮಾನ ಶೃಂಗಸಭೆ ಒಂದರ್ಥದಲ್ಲಿ ಟುಸ್‌ ಎಂದಿದೆ. ರಿಯೋ ಡಿಜನೈರೋನ ಮೊದಲ ಶೃಂಗದಿಂದ ಹಿಡಿದು ಬಾಕು ಶೃಂಗದವರೆಗಿನ ಅವಧಿಯಲ್ಲಿ ಜಗತ್ತಿನ […]

ನಮ್ಮ ಆಯ್ಕೆಗಳ ಮೂಲಕ ಸಂವಿಧಾನವನ್ನು, ಅದರ ಮುಂಗಾಣ್ಕೆಯನ್ನು ಹಾಳುಗೆಡವಿದ್ದೇವೆ

Indians today are governed by 2 different ideologies. Their political ideal set in the preamble of the Constitution affirms a life of liberty, equality and fraternity. Their social ideal, embodied in their religion denies them……I like the religion that teaches liberty, equality anf fraternity. -B. R. Ambedkar ನವೆಂಬರ್‌ 26ಕ್ಕೆ ಸಂವಿಧಾನ ತನ್ನ 75 ವರ್ಷಗಳನ್ನು ಪೂರೈಸಿದೆ. ಅಮೃತ […]

ಟ್ರಂಪ್‌ 2.0 : ಮಾಗಾದ ಮುನ್ನಡೆ ಮತ್ತು ವಲಸೆ ಪ್ರಶ್ನೆ

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಮತ್ತೆ ವಾಪಸಾಗಿದ್ದಾರೆ. ಅಮೆರಿಕದ ರಾಜಕೀಯದಲ್ಲಿ ನಗಣ್ಯ ಎಂದು ಪರಿಗಣಿಸಿದ್ದ ರಾಜಕೀಯ ಚಳವಳಿಯೊಂದು ಟ್ರಂಪ್‌ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದೇ ʻಮಾಗಾʼ(ಮೇಕ್‌ ಅಮೆರಿಕ ಗ್ರೇಟ್‌ ಎಗೇನ್, ಎಂಎಜಿಎ). ಅಮೆರಿಕದ 40ನೇ ಅಧ್ಷಕ್ಷ ರೊನಾಲ್ಡ್‌ ರೇಗನ್‌ ʻಲೆಟ್ಸ್‌ ಮೇಕ್‌ ಅಮೆರಿಕ ಗ್ರೇಟ್‌ ಎಗೇನ್‌ʼ ಘೋಷಣೆಯನ್ನು ಬಳಸಿದ ಮೊದಲಿಗರು(1981-89). ಟ್ರಂಪ್‌ ಪ್ರಕಾರ, ಅವರನ್ನು ಹೊರತುಪಡಿಸಿದರೆ, ರೇಗನ್‌ ಅಮೆರಿಕದ ಅತ್ಯುತ್ತಮ ಅಧ್ಯಕ್ಷರಲ್ಲಿ ಕೊನೆಯವರು. ಮಾಗಾದಂಥ ಚಳವಳಿಗಳಿಗೆ ಹಲವು ಪೂರ್ವನಿದರ್ಶನ ಮತ್ತು ಪರ್ಯಾಯಗಳಿದ್ದರೂ, ಅಮೆರಿಕದಲ್ಲಿ ಮಾಗಾದ ಮುನ್ನಡೆಗೆ […]

ಉಣ್ಣುವ ಅನ್ನ ವಿಷವಾದರೆ, ಕಾಯುವವರು ಯಾರು?

ಮಕ್ಕಳು ಸೇವಿಸುವ ಏಕದಳ ಧಾನ್ಯ(ಸಿರಿಯಲ್‌) ಆಹಾರದಲ್ಲಿ ಅಧಿಕ ಸಕ್ಕರೆ, ಔಷಧಗಳಲ್ಲಿ ವಿಷ ವಸ್ತು, ಸಂಬಾರ ಪದಾರ್ಥದಲ್ಲಿ ಕೀಟನಾಶಕ, ಪೊಟ್ಟಣ ಕಟ್ಟಿದ ಆಹಾರದಲ್ಲಿ ಜಿರಲೆ…… ಇತ್ಯಾದಿ ಸರ್ವೇಸಾಮಾನ್ಯವಾಗಿದೆ. ಆಹಾರ ಸುರಕ್ಷತೆ ಯಲ್ಲಿ ದೇಶ ಏಕೆ ವಿಫಲವಾಗುತ್ತಿದೆ? ಮಕ್ಕಳು-ಯುವಜನರನ್ನು ರೋಗಿಗಳನ್ನಾಗಿಸುವ ಜಂಕ್‌ ಆಹಾರ ಬಳಕೆಯನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಇದಕ್ಕೆ ದುರ್ಬಲ ನಿಯಂತ್ರಣ ವ್ಯವಸ್ಥೆ, ಅವ್ಯವಸ್ಥಿತ ಮೇಲುಸ್ತುವಾರಿ, ಸಂಬಂಧಿ ಸಿದ ಸಂಸ್ಥೆಗಳ ವೈಫಲ್ಯ, ಬಳಕೆದಾರರಲ್ಲಿ ಅರಿವಿನ ಕೊರತೆ ಹಾಗೂ ಕಾರ್ಪೊರೇಟ್‌ ಸಂಸ್ಥೆಗಳ ದುರಾಸೆ ಸೇರಿದಂತೆ ಹಲವು ಕಾರಣಗಳಿವೆ. ಆಹಾರದೊಟ್ಟಿಗೆ ರಾಜಕೀಯ […]

Back To Top