ದೇಶಿ ಕೃಷಿ ಮೇಲೆ ಎಲ್ ನಿನೋ ʻಗಾಡ್ಜಿಲ್ಲಾ’ ಆಘಾತ
ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮುಂಗಾರು ಹಿನ್ನಡೆ ಅನುಭವಿಸಿದೆ. 2026ರಲ್ಲಿ ಮುಂಗಾರು ವಾಡಿಕೆಗಿಂತ ದುರ್ಬಲ ಆಗಲಿದೆ ಎಂದು ಈ ಹಿಂದೆಯೇ ಸೂಚನೆ ಇತ್ತು. ರಾಷ್ಟ್ರ ಮಟ್ಟದಲ್ಲಿ ಶೇ.43 ಹಾಗೂ ರಾಜ್ಯದಲ್ಲಿ ಸರಾಸರಿ ಶೇ.37 ರಷ್ಟು ಮಳೆ ಕೊರತೆ ಆಗಿದೆ; ದಕ್ಷಿಣ ಒಳನಾಡಿನ 3, ಉತ್ತರ ಒಳನಾಡಿನ 5, ಮಲೆನಾಡಿನ 4 ಮತ್ತು ಕರಾವಳಿಯ 3 ಸೇರಿದಂತೆ 15 ಜಿಲ್ಲೆಗಳಲ್ಲಿ ಕೊರತೆ ತೀವ್ರವಾಗಿದೆ; ಬೀದರ್ ಗರಿಷ್ಠ(ಶೇ.67) ಮತ್ತು ಮೈಸೂರು ಕನಿಷ್ಠ(ಶೇ.42). ತುಂಗಭದ್ರಾ ಸೇರಿದಂತೆ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಮಲೆನಾಡು […]
ಬಾಕು ಹವಾಮಾನ ಶೃಂಗ: ಕೈ ತಪ್ಪಿದ ಇನ್ನೊಂದು ಅವಕಾಶ
ತಮಿಳುನಾಡಿನಲ್ಲಿ ಜೀವ-ಆಸ್ತಿ ನಷ್ಟಕ್ಕೆ ಕಾರಣವಾದ ಫೆಂಜಲ್, ರಚ್ಚೆ ಹಿಡಿದ ಮಗುವಿನಂತೆ ಬೆಂಗಳೂರನ್ನೂ ಬಿಟ್ಟೂ ಬಿಡದೆ ಕಾಡಿತು. ಇದೇ ಹೊತ್ತಿನಲ್ಲಿ ರಾಷ್ಟ್ರಧಾನಿ ದಿಲ್ಲಿಯಲ್ಲಿ ಹೊಂಜು ಒಂದು ವಾರ್ಷಿಕ ಕಾರ್ಯಕ್ರಮದಂತೆ ಜನರ ಜೀವ ಹಿಂಡುತ್ತಿದೆ. ಹವಾಮಾನ ಬದಲಾವಣೆಯಿಂದ ಚಂಡಮಾರುತ, ಭೂಕುಸಿತದಂಥ ಪ್ರಾಕೃತಿಕ ಅವಘಡಗಳ ತೀವ್ರತೆ ಮತ್ತು ಸಂಭವನೀಯತೆ ಎರಡೂ ಹೆಚ್ಚುತ್ತಿದೆ. ಈ ಸಂಬಂಧ ಚರ್ಚಿಸಲು ಅಜರ್‌ಬೈಜಾನಿನ ಬಾಕುವಿನಲ್ಲಿ ನಡೆದ 29ನೇ ಹವಾಮಾನ ಶೃಂಗಸಭೆ ಒಂದರ್ಥದಲ್ಲಿ ಟುಸ್ ಎಂದಿದೆ. ರಿಯೋ ಡಿಜನೈರೋನ ಮೊದಲ ಶೃಂಗದಿಂದ ಹಿಡಿದು ಬಾಕು ಶೃಂಗದವರೆಗಿನ ಅವಧಿಯಲ್ಲಿ ಜಗತ್ತಿನ […]

