ʻಗಂಟೆ ಬಾರಿಸುತ್ತಿರುವುದು ಒಬ್ಬರಿಗೆ ಮಾತ್ರವಲ್ಲ, ಎಲ್ಲರಿಗೂʼ
ಸಂಸತ್ತು ವಕ್ಫ್ ಮಸೂದೆಯನ್ನು ಅಂಗೀಕರಿಸಿದೆ. ದೇಶದ ಕೆಲವೆಡೆ ಪ್ರತಿಭಟನೆ ವ್ಯಕ್ತವಾಗಿದೆ ಹಾಗೂ ವ್ಯವಸ್ಥೆ ಕಠೋರವಾಗಿ ದಮನಕ್ಕೆ ಮುಂದಾಗಿದೆ. 11 ವರ್ಷದ ಬಳಿಕ ನಾಗ್ಪುರದಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ʻಆರ್ಎಸ್ಎಸ್ ಆಲದ ಮರʼ ಎಂದು ಶ್ಲಾಘಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಅತ್ಯಂತ ಉತ್ಸಾಹದಿಂದ ವಕ್ಫ್ ಕಾನೂನು ಜಾರಿಗೆ ಮುಂದಾಗಿವೆ. ಮಸೂದೆ ಕುರಿತು ಕೇರಳದ ಕಯಂಕುಲಂ ಮೂಲದ ದೆಹಲಿ ವಾಸಿ, ಕೇರಳ ಕ್ಲಬ್ ಅಧ್ಯಕ್ಷ ಎ.ಜೆ. ಫಿಲಿಪ್ ಎಂಬುವರು ಸಚಿವ ಕಿರಣ್ ರಿಜಿಜು […]
ಕ್ಷೇತ್ರ ಮರುವಿಂಗಡಣೆ ಎಂಬ ಉರುಳು
ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡಣೆ ಕುರಿತ ಜಂಟಿ ಕ್ರಿಯಾ ಸಮಿತಿ(ಜೆಎಸಿ) ಸಭೆ ಚೆನ್ನೈಯಲ್ಲಿ ಮಾರ್ಚ್ 22ರಂದು ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ತೆಲಂಗಾಣದ ರೇವಂತ್ ರೆಡ್ಡಿ, ಪಂಜಾಬಿನ ಭಗವಂತ್ ಮಾನ್, ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಹಾಗೂ ವಿಡಿಯೋ ಕಾನ್ಫೆರೆನ್ಸ್ ಮೂಲಕ ಒಡಿಷಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಳವನ್ನು 25 ವರ್ಷ ಕಾಲ ಅಮಾನತಿನಲ್ಲಿ ಇರಿಸಬೇಕು ಎಂದು ಸಭೆ ಒತ್ತಾಯಿಸಿದೆ. […]
ನರೇಗಾಕ್ಕೆ 20: ವೇತನ ಬಾಕಿ, ಅನುದಾನ ವಿಳಂಬ ಹೆಚ್ಚಳ
ಗ್ರಾಮೀಣರ ಉಪಾದಾಯ ಮೂಲವಾದ ನರೇಗಾ(ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಕ್ಕೆ ಈಗ 20ರ ಹರೆಯ. ಗಟ್ಟಿಯಾಗಿ ಬೆಳೆದು ಗ್ರಾಮೀಣರು-ಕೃಷಿ ಕಾರ್ಮಿಕರ ಕೈ ಹಿಡಿಯಬೇಕಿದ್ದ ಈ ಕಾರ್ಯಕ್ರಮವು ಆಡಳಿಶಾಹಿಯ ನಿರ್ಲಕ್ಷ್ಯದಿಂದ ದಿನೇದಿನೇ ಬಲಗುಂದುತ್ತಿದೆ. ಕೃಷಿ ಸಂಕಷ್ಟ, ಹವಾಮಾನ ಬದಲಾವಣೆಯಿಂದ ಆದ ವ್ಯತ್ಯಯ ಹಾಗೂ ಆದಾಯ ಸ್ಥಗಿತಗೊಂಡಿರುವ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ ಎಂಜಿ ನರೇಗಾದ ಮೊದಲ ಹೆಸರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ […]
ಪಾನಿಪೂರಿ ತಿನ್ನಲು ಹಿಂದಿ ಕಲಿಯಬೇಕೇ?
ತಮಿಳುನಾಡು ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಮತ್ತು ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ಸ್ಫಾರ್ರೈಸಿಂಗ್ಇಂಡಿಯ) ಯೋಜನೆಗಳಿಗೆ ಅನುಮತಿಸದ ಕಾರಣ ಒಕ್ಕೂಟ ಸರ್ಕಾರವು ಸರ್ವ ಶಿಕ್ಷಾ ಅಭಿಯಾನದ ಅನು ದಾನವನ್ನು ತಡೆಹಿಡಿದಿದೆ. ಇದು ಡಿಎಂಕೆ ಸರ್ಕಾರ ಹಾಗೂ ಎನ್ಡಿಎ-3 ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಎನ್ಡಿಎ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರುತ್ತಿದೆ ಎಂದು ತಮಿಳುನಾಡು ದೂರಿದೆ. ಲೋಕಸಭೆಯಲ್ಲೂ ಈ ಸಂಬಂಧ ಟೀಕೆ-ಪ್ರತಿಟೀಕೆ ನಡೆದಿದೆ. ಶಿಕ್ಷಣ ಸಚಿವ ಪ್ರಧಾನ್ಬಳಸಿದ ಪದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಡಿಎಂಕೆ ಸಂಸದರು ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ತಮಿಳುನಾಡಿನಲ್ಲಿ ತ್ರಿಭಾಷಾ […]
ಅಣು ಶಕ್ತಿಯೆನ್ನುವ ಹುಲಿ ಸವಾರಿ
2025-26ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವೆ, ʼಅಣುಶಕ್ತಿ ಕಾಯಿದೆ(ಎಇಅ) ಮತ್ತು ಅಣು ಅವಘಡಗಳಿಗೆ ನಾಗರಿಕ ಹೊಣೆಗಾರಿಕೆ ಕಾಯಿದೆ(ಸಿಎಲ್ಎನ್ಡಿಎ)ಗೆ ತಿದ್ದುಪಡಿ ತರಲಾಗುವುದುʼ ಎಂದು ಘೋಷಿಸಿದರು; ಅಣು ಶಕ್ತಿ ಕ್ಷೇತ್ರಕ್ಕೆ 20,000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದರು. ಅಣು ದುರಂತ ಸಂಭವಿಸಿದಲ್ಲಿ ಸ್ಥಾವರಗಳ ಉತ್ಪಾದಕರು-ಪೂರೈಕೆದಾರರ ಮೇಲೆ ಕನಿಷ್ಠ ಹೊಣೆಗಾರಿಕೆ ಹೊರಿಸುವ ಈ ಕಾಯಿದೆ ಮೇಲೆ ಅಮೆರಿಕದ ಅಣು ಸ್ಥಾವರಗಳ ಉತ್ಪಾದಕರು/ಸಾಧನ-ಸಲಕರಣೆಗಳ ಪೂರೈಕೆ ದಾರರು ಅಸಮಾಧಾನಗೊಂಡಿದ್ದಾರೆ. 2010ರ ಸಿಎಲ್ಎನ್ಡಿಎ ಕಾಯಿದೆಯು ಅಣುಶಕ್ತಿ ಉತ್ಪಾದನೆಗೆ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ. […]
ಯುಜಿಸಿ ತಿದ್ದುಪಡಿ ಪ್ರಸ್ತಾವ: ಕೇಂದ್ರೀಕರಣದ ಕರಾಳ ಶಾಸನ
ರಾಜ್ಯಪಾಲರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯ (ತಿದ್ದುಪಡಿ) ಮಸೂದೆ 2024 ಅನ್ನು ಸರ್ಕಾರಕ್ಕೆ ಹಿಂದಿರುಗಿಸಿ ದ್ದು, ಮಸೂದೆಯನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ವಿವಿ ಕುಲಪತಿಯಾಗಿ ಬದಲಿಸುವ ಈ ಪ್ರಯತ್ನ ವು ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷವನ್ನು ಹೆಚ್ಚಿಸಿದೆ. ರಾಜ್ಯದ ಎಲ್ಲ ವಿವಿಗಳಿಗೂ ಮುಖ್ಯಮಂತ್ರಿಯೇ ಕುಲಪತಿ ಆಗಬೇಕೆಂಬುದು ಸರ್ಕಾರದ ಆಶಯ. ಫೆ.19ರಂದು ಬೆಂಗಳೂರಿನಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಸಚಿವರ ಸಮಾ ವೇಶದಲ್ಲಿ ಯುಜಿಸಿ(ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ) […]
ಹವಾಮಾನ ಬದಲಾವಣೆಯಿಂದ ವಿದ್ಯುತ್ ಕ್ಷೇತ್ರದಲ್ಲಿ ಬಿಕ್ಕಟ್ಟು
ಫೆಬ್ರವರಿ ಮಧ್ಯ ಭಾಗದಲ್ಲೇ ಸುಡು ಬಿಸಿಲು ನೆತ್ತಿ ಸುಡುತ್ತಿದೆ; ಬೆಂಗಳೂರಿನಲ್ಲಿ ಹಿಂಬಾಗಿಲ ಮೂಲಕ ಲೋಡ್ ಶೆಡ್ಡಿಂಗ್ ಪ್ರವೇಶಿ ಸಿದೆ. ದಿನಕಳೆದಂತೆ ಹವಾಮಾನ ಬದಲಾವಣೆಯ ಕುರುಹುಗಳು ಸ್ಷಷ್ಟವಾಗುತ್ತಿವೆ. ಮುಂಗಾರು ಆಗಮಿಸುವ ಜೂನ್ವರೆಗೆ ಭೂಮಿ ಬೆಂದು ಬವಣೆಗೆ ಕಾರಣವಾಗಲಿದೆ. ಚಂಡಮಾರುತಗಳು, ಇಡೀ ವರ್ಷದ ಮಳೆ ಕೆಲವೇ ದಿನಗಳಲ್ಲಿ ಸುರಿಯುವುದು, ಮೇಘಸ್ಪೋ ಟ, ಭೂಕಂಪ-ಭೂಕುಸಿತ ಹೆಚ್ಚಳ, ತೀವ್ರ ಸುಡು ಗಾಳಿ ಇತ್ಯಾದಿ ಸಂಭವಿಸುವಿಕೆ ಹೆಚ್ಚುತ್ತಿದೆ. ಪ್ರಾಕೃತಿಕ ಘಟನೆಗಳ ಮುನ್ಸೂಚನೆ ನೀಡುವಿಕೆ ಅಸಂಭವವಾಗುತ್ತಿದೆ. ಇತ್ತೀಚೆಗೆ ಪ್ರಕಟಗೊಂಡ ʻಕ್ಲೈಮೇಟ್ ರಿಸ್ಕ್ ಇಂಡೆಕ್ಸ್ 2025ʼ ಪ್ರಕಾರ, […]
ಆಪ್ ಅಪಜಯ ಮತ್ತು ಮೈತ್ರಿಕೂಟದ ಭವಿಷ್ಯ
ಕಂಪ್ಟ್ರೋಲರ್ ಆಂಡ್ ಆಡಿಟರ್ ಜನರಲ್ ಆಗಿದ್ದ ವಿನೋ ದ್ ರೈ ಅವರು ಯುಪಿಎ-2 ಸರ್ಕಾರ ತರಂಗಾಂತರ ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ವರದಿ ನೀಡಿದ್ದರು. ವರದಿಯನ್ನು ಮುಂದಿಟ್ಟು ಕೊಂಡು ಅಣ್ಣಾ ಹಜಾರೆ, ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್, ಬಾಬಾ ರಾಮದೇವ್ ಹೋರಾಟ ಆರಂಭಿಸಿ ದರು; ಸುಬ್ರಮಣಿಯಂ ಸ್ವಾಮಿ ಪ್ರಕರಣವನ್ನು ನ್ಯಾಯಾಂಗ ಕ್ಕೆ ಕೊಂಡೊಯ್ದರು. ಡಿಸೆಂಬರ್ 2017ರಲ್ಲಿ ʻಇದೊಂದು ಕಲ್ಪಿತ ಪ್ರಕರಣʼ ಎಂದ ಸಿಬಿಐ ವಿಶೇಷ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು. ಅಷ್ಟರೊಳಗೆ, ಕೇಜ್ರಿವಾಲ್ […]
ಕಿರು ಸಾಲವೆಂಬ ಉರುಳು
ಕರ್ನಾಟಕ ಸರ್ಕಾರ ಕಿರುಸಾಲ ಸಂಸ್ಥೆ(ಮೈಕ್ರೋ ಕ್ರೆಡಿಟ್ ಸಂಸ್ಥೆಗಳು,ಎಂಎಫ್ಐ) ಗಳಿಂದ ಸಾಲ ಪಡೆದಿರುವವರ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈ ಕಂಪನಿಗಳು ಸಕ್ಷಮ ಪ್ರಾಧಿಕಾರವಾದ ಜಿಲ್ಲಾಧಿಕಾರಿ ಬಳಿ ನೋಂದಣಿ ಮಾಡಿಸ ಬೇಕು, ಬಲವಂತವಾಗಿ ಸಾಲ ವಸೂಲಿ ಕೂಡದು ಹಾಗೂ ನೋಂದಣಿರಹಿತ ಎಂಎಫ್ಐಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತಿಲ್ಲ ಎಂಬೆಲ್ಲ ಅಂಶ ಗಳನ್ನು ಕರಡು ಒಳಗೊಂಡಿದೆ. ಇದರಿಂದ ಈ ಕಂಪನಿಗಳಿಂದ ಕಿರುಕುಳ ಕಡಿಮೆಯಾಗುವುದೇ ಹಾಗೂ ಸಾಲಗಾರರ ಆತ್ಮಹತ್ಯೆಗಳು ನಿಲ್ಲುತ್ತವೆಯೇ? ಬಾಂಗ್ಲಾದ ಡಾ.ಮೊಹಮ್ಮದ್ಯೂನುಸ್ ಅವರಿಂದ ಪ್ರೇರಿತವಾಗಿ 1990ರಲ್ಲಿ ದೇಶದಲ್ಲಿ ಎಂಎಫ್ಐಗಳು ಆರಂಭಗೊಂಡವು. ಎಂಎಫ್ಐಗಳಲ್ಲಿ […]