ಸಕ್ಕರೆ ಉತ್ಪಾದನೆ ಹೆಚ್ಚಳ
ಪ್ರಸಕ್ತ ವರ್ಷದಲ್ಲಿ ಡಿ.15ರ ವರೆಗಿನ ಮಾಹಿತಿಯ ಪ್ರಕಾರ ಸಕ್ಕರೆ ಉತ್ಪಾದನೆ ಶೇ. 61ರಷ್ಟು ಹೆಚ್ಚಾಗಿದ್ದು 73.77 ಲಕ್ಷ ಟನ್‌ಗಳಿಗೆ ತಲುಪಿದೆ. ಈ ಬಾರಿ ಕಬ್ಬು ಇಳುವರಿ ಹೆಚ್ಚಾಗಿದೆ. ಇದರ ಜತೆಗೆ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವ ಕಾರ್ಯ ಬೇಗನೆ ಆರಂಭವಾಗಿರುವುದರಿAದ ಉತ್ಪಾದನೆಯಲ್ಲಿ ಏರಿಕೆ ಕಂಡುಬAದಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ತಿಳಿಸಿದೆ. ಹಿಂದಿನ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 45.81 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಸಕ್ಕರೆ ಉತ್ಪಾದನೆಯು ಮಹಾರಾಷ್ಟ್ರದಲ್ಲಿ ಶೇ.7.66 ಲಕ್ಷ ಟನ್‌ಗಳಿಂದ 26.96 […]
ರೈತ ಹೋರಾಟ ನ್ಯಾಯಯುತ
ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಅಹಿಂಸಾತ್ಮಕವಾದ ಪ್ರತಿಭಟನೆ ನಡೆಸಲು ಸಂಪೂರ್ಣ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ಈಗ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹರಿಸುವುದಕ್ಕಾಗಿ ಕೃಷಿ ಪರಿಣತರು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ತಾನು ರಚಿಸಲಿರುವುದರಿಂದ, ಮೂರು ಕಾಯ್ದೆಗಳ ಜಾರಿಯನ್ನು ಸರ್ಕಾರವು ತಡೆ ಹಿಡಿಯಬಹುದು ಎಂಬ ಸಲಹೆಯನ್ನೂ ನ್ಯಾಯಾಲಯವು ಮುಂದಿಟ್ಟಿದೆ. ಮುಕ್ತ ಸಂಚಾರ ಮತ್ತು ಅಗತ್ಯ ವಸ್ತುಗಳು ಹಾಗೂ ಇತರ […]
Cabinet nod to 3,500 cr subsidy for sugar exports
Cabinet Committee on Economic Affairs has approved 3,500 crore subsidy for sugar farmers, said Union Minister Prakash Javadekar on Wednesday.At a press conference, he said 60 lakh tonnes of sugar will be exported. He added that 5 crore sugarcane farmers will benefit from Cabinet’s decision on sugar and that farmers will get subsidy directly in […]
ಕೃಷಿ ಕಾಯಿದೆ: ಸುಪ್ರೀಂ ಅಂಗಳಕ್ಕೆ
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಭಾರತೀಯ ಕಿಸಾನ್ ಯೂನಿಯನ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಆರ್‌ಜೆಡಿ ಸಂಸದ ಮನೋಜ್ ಝಾ, ಡಿಎಂಕೆ ಸಂಸದ ತಿರುಚ್ಚಿ ಶಿವ ಹಾಗೂ ಛತ್ತೀಸಗಡದ ರಾಕೇಶ್ ವೈಷ್ಣವ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠ ಕೇಂದ್ರಕ್ಕೆ ನೋಟಿಸ್ ನೀಡಿತ್ತು. ಅರ್ಜಿಯಲ್ಲಿ ತನ್ನನ್ನೂ ಕಕ್ಷಿದಾರನನ್ನಾಗಿ ಪರಿಗಣಿಸಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ (ಭಾನು ಬಣ) ಅಧ್ಯಕ್ಷ […]
ಮಾತುಕತೆಗೆ ಆಹ್ವಾನ:
ಇದೇ ಹೊತ್ತಿನಲ್ಲಿ ಈ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ದಿಲ್ಲಿಯ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಉತ್ತರ ಪ್ರದೇಶ– ದೆಹಲಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಶುಕ್ರವಾರವೂ ಭಾಗಶಃ ಬಂದ್ ಆಗಿದ್ದವು. ರೈತರು ನಡೆಸುತ್ತಿರುವ ಪ್ರತಿಭಟನೆ 11 ದಿನ ಪೂರ್ಣಗೊಳಿಸಿದೆ. ಸರ್ಕಾರ ಮಾತುಕತೆ ನಡೆಸಲು ಇಚ್ಛಿಸುವುದಾದರೆ ಅಧಿಕೃತ ಆಹ್ವಾನ ನೀಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡುವ ಪ್ರಸ್ತಾಪವಿದ್ದು, ರೈತರು ಯಾವಾಗ ಕರೆದರೂ ಮಾತುಕತೆಗೆ ಸಿದ್ಧ ಎಂದು ಕೇಂದ್ರ ಸರ್ಕಾರ […]
ನರೇಗಾ ಕೂಲಿ ದಿನ 150ಕ್ಕೆ ಹೆಚ್ಚಳ
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದಿನವನ್ನು 100ರಿಂದ 150 ದಿನಗಳಿಗೆ ಏರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ನರೇಗಾ ಯೋಜನೆಯಡಿ ವ್ಯಕ್ತಿಯೊಬ್ಬರು ಗರಿಷ್ಠ 100 ದಿನ ಕೂಲಿ ಪಡೆಯಲು ಅವಕಾಶವಿತ್ತು. ಈಗಾಗಲೇ 100 ದಿನ ಪೂರೈಸಿದವರೆಗೆ ಹೆಚ್ಚುವರಿ 50 ದಿನ ಕೆಲಸ ಮಾಡಲು ಅವಕಾಶವಿದೆ. ರಾಜ್ಯಕ್ಕೆ 800 ಕೋಟಿ ರೂ. ಹೆಚ್ಚುವರಿ ಅನುದಾನ ಲಭ್ಯವಾಗಿದೆ. ಪರಿಷ್ಕೃತ ಆದೇಶ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದ್ದಾರೆ. Courtesyg: Google (photo)
ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ
ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು ಮತ್ತು ಹೆಸರು ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಕೇಂದ್ರ ಸರ್ಕಾರ 2020–21ನೇ ಸಾಲಿಗೆ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಿದ್ದು, ರಾಜ್ಯವು ಹೆಚ್ಚುವರಿ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧರಿಸಿದೆ. ಭತ್ತ ಖರೀದಿಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಜನವರಿ […]
ಯಾವುದೇ ಭೂಮಿಯನ್ನು ಹೆದ್ದಾರಿ ಎಂದು ಘೋಷಿಸಬಹುದು:ಕೋರ್ಟ್
ಪ್ರದೇಶವೊಂದರ ಜನರ ಏಳಿಗೆಗೆ ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಅಥವಾ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಭೂಮಿಯೆಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಭಾರತ್‌ಮಾಲಾ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೆನ್ನೈ–ಕೃಷ್ಣಗಿರಿ–ಸೇಲಂ ನಡುವೆ ನಿರ್ಮಾಣವಾಗಲಿರುವ ಎಂಟು ಪಥಗಳ ಎಕ್ಸ್ಪ್ರೆಸ್‌ವೇಗೆ ಪೀಠ ಹಸಿರು ನಿಶಾನೆ ನೀಡಿದೆ.ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ಬಿ.ಆರ್.ಗವಾಯಿ ಹಾಗೂ ಕೃಷ್ಣ […]
ರೈತರಿಗೆ ಬೆಂಬಲಕ್ಕೆ ವಿಜೇಂದರ್ ನಿರ್ಧಾರ
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಬಾಕ್ಸರ್ ವಿಜೇಂದರ್ ಸಿಂಗ್ ಘೋರ ಕಾಯ್ದೆಗಳನ್ನು ಹಿಂಪಡೆಯದೇ ಇದ್ದರೆ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಎಂದು ಹೇಳಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿಗೆ ತೆರಳಿದ ವಿಜೇಂದರ್ ಬೆಂಬಲ ಸೂಚಿಸಿದರು. ಹರಿಯಾಣದವರಾದ 35 ವರ್ಷದ ವಿಜೇಂದರ್ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿದ ಹೆಗ್ಗಳಿಕೆ ಹೊಂದಿದ ಇವರು ರೈತರ ಪರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. Courtesyg: Google […]