Category: ಸಮಾಜ – ಸಂಸ್ಕೃತಿ

ಡಿಜಿಟಲ್‌ ನಿರಂಕುಶ ರಾಜ್ಯಕ್ಕೆ ಮುನ್ನುಡಿ

ಡಿಜಿಟಲ್‌ ನಿರಂಕುಶ ರಾಜ್ಯಕ್ಕೆ ಮುನ್ನುಡಿ ಚಳಿಗಾಲದ ಅಧಿವೇಶನದ ಕಡೆಯ ದಿನ ಪ್ರತಿಪಕ್ಷಗಳ ಗೈರುಹಾಜರಿಯಲ್ಲಿ ಟೆಲಿಕಾಂ ಮಸೂದೆ ೨೦೨೩ ಅಂಗೀಕಾರಗೊಂಡಿತು. ಬಿಜೆಪಿ ಸಂಸದ ಸುಶೀಲ್‌ ಮೋದಿ, ರಾಷ್ಟ್ರೀಯ ಭದ್ರತೆಗೆ ಮತ್ತು ಸ್ವಾಭಾವಿಕ ಅವಘಡಗಳ ಸಂದರ್ಭದಲ್ಲಿ ಟೆಲಿಕಾಂ ಸೇವೆಗಳನ್ನು ಸರ್ಕಾರ ತಾತ್ಕಾಲಿಕವಾಗಿ ಸುಪರ್ದಿಗೆ ಪಡೆಯುವುದನ್ನು ಮತ್ತು ಉಪಗ್ರಹ ತರಂಗಾಂತರವನ್ನು ಹರಾಜು ಮಾಡದೆ ವಿತರಿಸುವುದನ್ನು ಸಮರ್ಥಿಸಿಕೊಂಡರು. ಟೆಲಿಕಾಂ ಟವರ್‌ಗಳ ಸಂಖ್ಯೆ ೨೦೧೪ರಲ್ಲಿ ೬ ಲಕ್ಷ ಇದ್ದದ್ದು ೨೫ ಲಕ್ಷಕ್ಕೆ ಹಾಗೂ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಸಂಖ್ಯೆ ೧.೫ ಕೋಟಿಯಿಂದ ೮೫ ಕೋಟಿಗೆ ಹೆಚ್ಚಳಗೊಂಡಿದೆ […]

ಹೆಣ್ಣು ಭ್ರೂಣಗಳ ಹತ್ಯೆ ನಿರಂತರ, ನಿರಾತಂಕ

ʻಗಂಗಾಳ ಹೊಡೆಯುವುದುʼ, ʻಚಿಬ್ಬಲು ಬಡಿಯುವುದುʼ ಎನ್ನುವುದು ಜನಿಸಿದ ಮಗುವಿನ ಲಿಂಗ ಯಾವುದು ಎಂಬುದನ್ನು ಸಾರಲು ಹಿಂದಿನವರು ಬಳಸುತ್ತಿದ್ದ ಮಾತುಗಳು; ಮೊದಲಿನದು ಗಂಡು ಹಾಗೂ ಎರಡನೆಯದು ಹೆಣ್ಣು ಮಗು ಜನನವಾಯಿತೆಂಬುದರ ಸೂಚನೆ. ಕಳೆದ ಫೆಬ್ರವರಿಯಲ್ಲಿ ಮಂಡ್ಯದ ಹೈಕಳು ಮದುವೆಗೆ ಹೆಣ್ಣು ಕರುಣಿಸು ಎಂದು ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆಯು ಚಿಬ್ಬಲು ಬಡಿಯುವುದು ಕಡಿಮೆಯಾಗಿದ್ದರ ಪರಿಣಾಮ. ಬರುವ ಜನವರಿಯಲ್ಲಿ ಇಂಥದ್ದೇ ಇನ್ನೊಂದು ಪಾದಯಾತ್ರೆ ನಡೆಯಲಿದೆ. ಅವರಿಗೆ ಗೊತ್ತಿದೆಯೋ ಇಲ್ಲವೋ, ಹೆಣ್ಣು ಸಿಗದೆ ಇರಲು ಕಾರಣ ನಾಗರಿಕರು ಎನ್ನಿಸಿಕೊಳ್ಳುವ […]

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಕಿರು ಪರಿಚಯ

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಒಂದು ಕಿರು ಪರಿಚಯ , ಆಶಾ ಸಿದ್ದಲಿಂಗಯ್ಯ ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು. ನಶಿಸಿಹೋಗುತ್ತಿರುವ ಈ ಕಲಾಪ್ರಕಾರದ ಮಹತ್ವ ಹಾಗೂ ಅದರ ವಿಶೇಷತೆ, ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯ ಪರಿಚಯ ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಅರಿವಿರಬೇಕಾದುದು ಅಗತ್ಯ. ನಂದೀಧ್ವಜ ಕುಣಿತ: ನಂದೀಧ್ವಜವನ್ನು ನಂದೀಕಂಬ, ನಂದೀಕೋಲು, ವ್ಯಾಸಗೋಲು, ನಂದೀಪಟವೆಂದೂ ಕರೆಯುತ್ತಾರೆ. ಕೊಡಗು ಕರಾವಳಿಯಲ್ಲಿ ಬಿಟ್ಟರೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಕಲೆ ರೂಢಿಯಲ್ಲಿದೆ. ವೀರಗಾಸೆ: ಶೈವ ಸಂಪ್ರದಾಯದ ಒಂದು ಮಹತ್ವಪೂರ್ಣ […]

ಆಲಮಟ್ಟಿ ಪಾರ್ಕ್‌ ಇಂದಿನಿಂದ  ಮುಕ್ತ

ಮಾಹ-ಮಾರಿ ಕೋವಿಡ್‌ನಿಂದಾಗಿ ಎಲ್ಲಾ ಉದ್ಯಾನಗಳು ಮುಚ್ಚಲಾಗಿತ್ತು. ಆಲಮಟ್ಟಿಯ ವಿವಿಧ ಉದ್ಯಾನಗಳು ಸೋಮವಾರದಿಂದ ಪ್ರವೇಶಕ್ಕೆ ಅನುಮತಿ ನೀಡಿ ಜನರಲ್ಲಿ ಮಂದಹಾರ ಮೊಡಿಸಿದ್ದಾರೆ. ಸೋಮವರದಿಂದ ಪ್ರವಾಸಿಗರಿಗೆ ಪ್ರವೇಶಕ್ಕೆ ಸೈ ಎಂದಿದೆ. ಏಳು ತಿಂಗಳಿಂದ ಮುಚ್ಚಿದ್ದ ಆಲಮಟ್ಟಿಯ ಉದ್ಯಾನಗಳಲ್ಲಿ ಸಮರ್ಪಕ ನಿರ್ವಹಣೆಯ ಫಲವಾಗಿ ಹಚ್ಚ-ಹಸಿರಾಗಿ ಮೈದುಂಬಿ ಕೊಂಡು ನಳನಳಿಸುತ್ತಿದೆ. ಈ ಬಾರಿಯ ಆಕರ್ಷಣೆಯ ಕೇಂದ್ರ ರಾಕ್ ಉದ್ಯಾನದಲ್ಲಿ ಆಕ್ಟೋಪಸ್, ಮೀನು, ಡ್ರಾಗನ್ ಮಾದರಿಯಲ್ಲಿ ನಿರ್ಮಿಸಿದ ಮೂರು ಪ್ರತ್ಯೇಕ ಜಾರುಬಂಡೆಗಳು, ತೂಗು ಸೇತುವೆ ಹಾಗೂ ಸಂಗೀತ ಕಾರಂಜಿ ಬಳಿ ಸುಮಾರು 2,500 ಗುಲಾಬಿ […]

ಯಕ್ಷಗಾನ ಪ್ರಿಯರಿಗೆ ಆನ್‌ಲೈನ್ ಸಾಥ್!

ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸಾಲು ಸಾಲು ಯಕ್ಷಗಾನ ಕಾರ್ಯಕ್ರಮಗಳು ಆನ್ಲೈನ್ನಲ್ಲೇ ‘ಲೈವ್’ ಪ್ರದರ್ಶನ ಕಂಡಿವೆ. ವೃತ್ತಿ ಮೇಳಗಳು ತಿರುಗಾಟ ನಿಲ್ಲಿಸಬೇಕಾಗಿ ಬಂದಾಗ ಯಕ್ಷಗಾನ ಪ್ರೇಕ್ಷಕರಿಗೆ ಆಸರೆಯಾಗಿದ್ದು ಆನ್ಲೈನ್. ಬಡಗುತಿಟ್ಟಿನ ಮೊದಲ ಆನ್‌ಲೈನ್ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ ಹೆಗ್ಗಳಿಕೆಯ ಬೆಂಗಳೂರಿನ ‘ಟೀಂ ಉತ್ಸಾಹಿ’, ಒಂದು ಹೆಜ್ಜೆ ಮುಂದೆ ಹೋಗಿ, ಯಕ್ಷಗಾನ ಗುರುಗಳಿಗೆ ಸನ್ಮಾನವನ್ನೂ ಏರ್ಪಡಿಸಿತ್ತು, ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದೆ. ತಿಂಗಳಿಗೆ ಕನಿಷ್ಠ ಎರಡು ಪ್ರದರ್ಶನಗಳನ್ನು ಆನ್‌ಲೈನ್‌ನಲ್ಲೇ […]

ಈ ಬಾರಿ ದಸರಾಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ….

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಹಾವಳಿಯಿಂದ ಈ ಬಾರಿ ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಶಿಫಾರಸು ಮಾಡಿದೆ. ಅ.17ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೆ 200 ಜನ, ಅ.26ರಂದು ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ 300 ಜನರಿಗೆ ಪ್ರವೇಶ ನೀಡಬೇಕೆಂದು ನಿರ್ಧಾರಿಸಲಾಗಿದೆ. ಗಣ್ಯರು, ಸಿಬ್ಬಂದಿ, ಕಲಾವಿದರು ಹಾಗೂ ಭದ್ರತಾ ಸಿಬ್ಬಂದಿ ಕೂಡ ಈ ಸಂಖ್ಯೆಯಲ್ಲಿ ಸೇರಿದ್ದಾರೆ. ವರ್ಚುಯಲ್ (ಆನ್‌ಲೈನ್) ಆಗಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು’ […]

ಏತ್ತು ಏರಿಗೆ ಎಳೆದರೆ ಕೋಣ ನೀರಿಗೆ..-

ಕೇಂದ್ರ ಪರಿಸರ ಮಂತ್ರಾಲಯ ಎರಡು ವರ್ಷಕ್ಕೊಮ್ಮೆ ಅರಣ್ಯ ವರದಿ(ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್)ಯನ್ನು ಪ್ರಕಟಿಸುತ್ತದೆ. ಉಪಗ್ರಹದ ನೆರವಿನಿಂದ ಸಿದ್ಧ ಈ ವರದಿ ಪ್ರಕಾರ, ದೇಶದ ಶೇ.೨೪ರಷ್ಟು ಭೂಪ್ರದೇಶದಲ್ಲಿ ಅರಣ್ಯ ಇಲ್ಲವೇ ಮರಗಳು ಇವೆಯಂತೆ. ಎರಡು ವರ್ಷಗಳ ಮಾಹಿತಿ ಅರಣ್ಯ ಪ್ರದೇಶ ಶೇ.೧ರಷ್ಟು ಹೆಚ್ಚಳ ಆಗಿದೆ ಎನ್ನುತ್ತದೆ ವರದಿ. 01ಮಾರ್ಚ್ 2018 ಸಂಚಿಕೆ-17 ಪುಟ-66

Back To Top