ರಕ್ತಸಿಕ್ತ ಲ್ಯಾಟಿನ್ ಅಮೆರಿಕ: ಪ್ರತಿರೋಧದ ಮೂಲಕ ಸ್ವಾತಂತ್ರ್ಯದ ಮರುವ್ಯಾಖ್ಯಾನ
ವೆನೆಜುವೆಲ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಜ.3, 2026ರಂದು ಅಮೆರಿಕದ ಡೆಲ್ಟಾ ಫೋರ್ಸ್ ಅಪಹರಿಸಿದೆ. ಇದು 1989ರ ಪನಾಮ ಆಕ್ರಮ ಣದ ನಂತರ ಲ್ಯಾಟಿನ್ ಅಮೆರಿಕದಲ್ಲಿ ನಡೆದ ನೇರ ಮಿಲಿಟರಿ ಹಸ್ತಕ್ಷೇಪ. ಈ ಕಾರ್ಯಾಚರಣೆಯು ಟ್ರಂಪ್ ಆಡಳಿತದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ (ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟೆಜಿ) 2025ರ ಭಾಗ. ಅಮೆರಿಕವು ಪಶ್ಚಿಮ ಗೋಳಾರ್ಧದಲ್ಲಿ ತನ್ನ ಆಧಿಪತ್ಯದ ಮರುಸ್ಥಾಪನೆಗೆ ಮನ್ರೋ ಸಿದ್ಧಾಂತದ ಜಾರಿಗೆ ಮುಂದಾಗಿದೆ. ಲ್ಯಾಟಿನ್ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಜುವೆಲ, […]
ರಿತ್ವಿಕ್ ಘಟಕ್ 100: ನೋವಿಗದ್ದಿದ, ಸ್ಪಂದನಶೀಲ ಕ್ಯಾಮೆರಾ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜೀವವಿಮೆ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ, ಸುರಕ್ಷತೆಯ ಖಾತ್ರಿಯಿಲ್ಲದ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅನುಮತಿ ನೀಡುವಿಕೆ ಮಸೂದೆ ಯಲ್ಲದೆ, ಗ್ರಾಮೀಣರ ಜೀವನಾಡಿಯಾಗಿದ್ದ ನರೇಗಾದ ಹೆಸರು ಬದಲಿಸಿ ವಿರೂಪಗೊಳಿಸಲಾಗಿದೆ. ಜನಸಾಮಾನ್ಯರ ಹಿತಾಸಕ್ತಿಗೆ ಧಕ್ಕೆ ತರುವ ಇಂಥ ಮಸೂದೆಗಳ ನಡುವೆಯೇ ಕಟ್ಟಾ ಸಿದ್ಧಾಂತಿ, ಮೂರ್ತಿಭಂಜಕ ಮತ್ತು ಸಿನೆಮಾ ಮಾಧ್ಯಮವನ್ನು ಮಾನವೀಯಗೊಳಿಸಿದ ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ನೂರು ವರ್ಷ(ನವೆಂಬರ್ 4, 1925- ಫೆಬ್ರವರಿ 6,1976) ಪೂರೈಸಿದ್ದಾರೆ. ಬಂಗಾಳದ ಖ್ಯಾತ ತ್ರಿವಳಿ ನಿರ್ದೇಶಕರಲ್ಲಿ ಘಟಕ್ ಕಿರಿಯರು(ಸತ್ಯಜಿತ್ ರೇ, ಮೃಣಾಲ್ […]
ಮಹುವಾದ ಘಮಲು ಮತ್ತು ಪುಟ್ಟ ಹಕ್ಕಿಯ ಅಳಲು
ಸುಪ್ರೀಂ ಕೋರ್ಟ್ ತನ್ನ ನವೆಂಬರ್ 2025ರ ಆದೇಶದಲ್ಲಿ ಸಾರಂಡದ 314 ಚದರ ಕಿಲೋಮೀಟರ್ ಕಾಡನ್ನು ವನ್ಯಜೀವಿಧಾಮ ಎಂದು ಘೋಷಿಸಬೇಕು; ಕಬ್ಬಿಣದ ಸುಸ್ಥಿರ ಗಣಿಗಾರಿಕೆ ಮತ್ತು ಜೈವಿಕ ವೈವಿಧ್ಯದ ನಡುವೆ ಸಮತೋಲನ ಸಾಧಿಸಬೇಕು ಎಂದು ಹೇಳಿತು. ಸಾರಂಡ ಜಗತ್ತಿನ ಅತ್ಯಂತ ಸಮೃದ್ಧ ಸಾಲ್ ಮರಗಳ ಕಾಡು. ಈ ಕಾಡಿನಲ್ಲಿ ನಿರ್ವಂಶದ ಅಂಚಿನಲ್ಲಿರುವ ಆಮೆ, 4 ಕೊಂಬುಗಳ ಜಿಂಕೆ, ಏಷ್ಯಾದ ತಾಳೆ ಮರದ ಪುನುಗಿನ ಬೆಕ್ಕು ಅಲ್ಲದೆ ಕಾಡಾನೆಗಳಿವೆ. ಈ ಅರಣ್ಯದಲ್ಲಿ ಶತಮಾನಗಳಿಂದ ಹೋ, ಮುಂಡಾ, ಉರಾಓನ್ ಮತ್ತಿತರ ಆದಿವಾಸಿಗಳು […]
ಹೊಸ ಕಾರ್ಮಿಕ ಸಂಹಿತೆಗಳಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸಿಗುವುದೇ?
ಒಕ್ಕೂಟ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ವೇತನಗಳ ಸಂಹಿತೆ (2019)ಯು ವೇತನ ಪಾವತಿ ಕಾಯಿದೆ 1936, ಕನಿಷ್ಠ ವೇತನ ಕಾಯಿದೆ 1948, ಬೋನಸ್ ಪಾವತಿ ಕಾಯಿದೆ 1965 ಹಾಗೂ ಸಮಾನ ಸಂಭಾವನೆ ಕಾಯಿದೆ 1976 ರ ಕ್ರೋಡೀಕರಣ. ಇದರೊಟ್ಟಿಗೆ ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಸುರಕ್ಷೆ ಸಂಹಿತೆ 2020 ಮತ್ತು ಉದ್ಯೋಗಜನ್ಯ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಒಎಸ್‌ಎಚ್‌ಡಬ್ಲ್ಯುಸಿ ಸಂಹಿತೆಯನ್ನು ಜಾರಿಗೊಳಿಸಿದೆ. 32 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು […]
ಸುಪ್ರೀಂ ತೀರ್ಪು ಮತ್ತು ಮಸುಕಾಗುತ್ತಿರುವ ಸಂವಿಧಾನದ ಬೆಳಕು
ನವೆಂಬರ್ 20ರಂದು ಎರಡು ಚರಿತ್ರಾರ್ಹ ಘಟನೆಗಳು ನಡೆದವು- ಪಟಣಾದಲ್ಲಿ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಅವಧಿಗೆ ಅಧಿಕಾರ ಸ್ವೀಕರಿಸಿದರು ಮತ್ತು ಮುಖ್ಯ ನ್ಯಾಯಮೂರ್ತಿ ಆರ್. ಎಸ್. ಗವಾಯಿ ನೇತೃತ್ವದ ಸಂವಿಧಾನ ಪೀಠವು ರಾಜ್ಯಪಾಲರು-ರಾಷ್ಟ್ರಪತಿ ಅವರಿಗೆ ಕಡತವೊಂದಕ್ಕೆ ಸಹಿ ಹಾಕಲು ಕಾಲಾವಧಿ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ನಿತೀಶ್ ಕುಮಾರ್ ಮತ್ತು ಮೈತ್ರಿ ಪಕ್ಷ ಬಿಜೆಪಿ, ಚುನಾವಣೆಯನ್ನು ತಂತ್ರಗಾರಿಕೆ ಮತ್ತು ಕುಶಲತೆಯಿಂದ ತಿರುಚಿ ಜಯ ಸಾಧಿಸಿತು; ಪ್ರತಿಪಕ್ಷಗಳು ತಂತ್ರಕ್ಕೆ ಶರಣಾದವು. ಆದರೆ, ಸುಪ್ರೀಂ ಕೋರ್ಟ್ ತೀರ್ಪು […]
ದೇಶಕ್ಕೆ ಇನ್ನಷ್ಟು ರಾಡ್ರಿಗಸ್, ಕೌರ್ ಮತ್ತು ಖುರೇಷಿಗಳು ಅಗತ್ಯ
ಮಹಿಳಾ ವಿಶ್ವ ಕಪ್ ನಮ್ಮ ಪಾಲಾಗಿದೆ. 1983ರಲ್ಲಿ ಪುರುಷರ ವಿಶ್ವ ಕಪ್, 2011ರಲ್ಲಿ ಐಸಿಸಿ ವಿಶ್ವ ಕಪ್ ಗೆಲುವಿನ ನಂತರದ ಚರಿತ್ರಾರ್ಹ ಗೆಲುವು ಇದು. 2005ರಲ್ಲಿ ಆಸ್ಟ್ರೇಲಿಯ ಹಾಗೂ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಮಹಿಳಾ ತಂಡ ಸೋಲುಂಡಿತ್ತು. ಗೆಲುವಿನ ಬಳಿಕ ತಂಡ ಘನತೆಯಿಂದ ನಡೆದುಕೊಂಡಿತು. ಪ್ರತಿಯಾಗಿ 2025ರ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಾಯಕ ಸೂರ್ಯಕುಮಾರ್ ಯಾದವ್, ಎದುರಾಳಿ ತಂಡದ ನಾಯಕನ ಹಸ್ತಲಾಘವ ಮಾಡಲಿಲ್ಲ; ಎರಡು ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ ಮತ್ತು ಕಾಶ್ಮೀರದಲ್ಲಿ […]
ಜಾತಿಯೆಂಬುದು ಕಣ್ಣಿಗೆ ಇರಿಯುವ ವಾಸ್ತವ, ನಿವಾರಣೆಯಾಗದ ಜಾಡ್ಯ
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಒಂದು ವರ್ಗದ ಜನರು, ಧನಾಡ್ಯರು ಹಾಗೂ ಪ್ರತಿಪಕ್ಷ ಬಿಜೆಪಿ ಸಮೀಕ್ಷೆಯನ್ನು ಹೀನಯಿಸಿದ್ದಲ್ಲದೆ, ಸಮಾಜವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸ್ನೇಹಿತರಾದ ಎಚ್.ಎಚ್. ರೇಣುಕಾರಾಧ್ಯ ಅವರ ಅನುಭವವು ಜಾತಿ ತನ್ನ ಬೇರನ್ನು ಎಷ್ಟು ಆಳವಾಗಿ ಬಿಟ್ಟಿದೆ ಎಂಬು ದನ್ನು ತೋರಿಸಿಕೊಡುತ್ತದೆ. ಇದೇ ಹೊತ್ತಿನಲ್ಲಿ ಅಧ್ಯಯನವೊಂದು ನಗರಗಳಲ್ಲಿ ಪೌರತ್ವವು ಕಾಗದದ ಮೇಲೆ ಮಾತ್ರ ಸಮಾನವಾಗಿದೆ; ಆದರೆ, ಆಚರಣೆಯಲ್ಲಿ ಅಸಮಾನವಾಗಿದೆ ಎಂದು ಹೇಳಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಸರ್ಕಾರವು […]
ಸುಪ್ರೀಂ ಕೋರ್ಟಿಗೆ ಭಿನ್ನಮತದ ಮೆರುಗು
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನವು ಸನಾತನ ಮನಸ್ಥಿತಿಯ ಗಂಭೀರ ಪ್ರಕರಣ. ಸನಾತನ ಧರ್ಮಕ್ಕೆ ಅಪಮಾನ ವನ್ನು ಸಹಿಸುವುದಿಲ್ಲ ಎಂದು ಈ ಪ್ರಯತ್ನ ನಡೆಸಿದ ಕ್ರಿಮಿ ಹೇಳಿದೆ. ಆತ ಅಪ್ರಬುದ್ಧನಲ್ಲ; ಮಾನಸಿಕ ಅಸ್ವಸ್ಥನಲ್ಲ; ಅಕ್ಷರಸ್ಥ ಮತ್ತು ವೃತ್ತಿಯಲ್ಲಿ ವಕೀಲ. ನ್ಯಾಯಾಲಯದ ತೀರ್ಮಾನ ತಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಎನ್ನುವ ಅಸಹನೆಯು ಗುಂಪು ಹಲ್ಲೆಗಳು ಮತ್ತು ಬುಲ್ಡೋಜರ್ ನ್ಯಾಯದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಜಾಸತ್ತೆಗೆ ಧಕ್ಕೆಯುಂಟು ಮಾಡುತ್ತಿದೆ. ದೇಶದ ನಾಯಕತ್ವ ವಹಿಸಿದವರ […]
ಲಡಾಖಿನ ಗಾಯಗಳು ಮಾಯುವುದು ಎಂದು?
ಕಾಶ್ಮೀರ-ಜಮ್ಮು, ಲಡಾಖ್ ಸೇರಿದಂತೆ ಹಿಮಾವೃತ ಪರ್ವತಗಳು ಮತ್ತು ಅಲ್ಲಿನ ವಾಸಿಗಳು ಗಾಯಗೊಂಡಿದ್ದಾರೆ. ದೇಶದ ರಕ್ಷಣಾ ಕಾರ್ಯತಂತ್ರದ ದೃಷ್ಟಿಯಲ್ಲಿ ಲಡಾಖ್ ವಿಶಿಷ್ಟ ಸ್ಥಾನ ಹೊಂದಿದೆ; ಪಶ್ಚಿಮದಲ್ಲಿ ಪಾಕಿಸ್ತಾನ ಆಕ್ರಮಿತ ಪ್ರದೇಶ(ಪಿಒಕೆ) ಮತ್ತು ಪೂರ್ವದಲ್ಲಿ ಚೀನಾ ನಿಯಂತ್ರಿತ ಟಿಬೆಟ್ ಇದೆ. ದೇಶದ ಉತ್ತರ ಗಡಿಯನ್ನು ಲಡಾಖಿನ ಹಿಮಭರಿತ ಶಿಖರಗಳು ಮತ್ತು ಕಣಿವೆಗಳು ಬಹಳ ಹಿಂದಿನಿಂದಲೂ ಕಾಯ್ದುಕೊಂಡಿದೆ. ಆದರೆ, ಇಂದು ಲಡಾಖ್ ಜನರಲ್ಲಿ ಅಸಮಾಧಾನ ಕುದಿಯುತ್ತಿದೆ. ಲೆಹ್ ಅಪೆಕ್ಸ್ ಬಾಡಿ(ಎಲ್ಎಬಿ) ಮಾತುಕತೆಯಿಂದ ಹಿಂದೆ ಸರಿದಿರುವುದರಿಂದ, ಎಲ್ಲವೂ ಅಯೋಮಯವಾಗಿದೆ. ಕೇಂದ್ರ ಸರ್ಕಾರ ಆಗಸ್ಟ್ […]

