ಒಕ್ಕೂಟ ತತ್ವ, ಹಣಕಾಸು ಆಯೋಗ ಹಾಗೂ ಜಿಎಸ್‌ಟಿ ಪಾಲಿಗೆ ಹಕ್ಕೊತ್ತಾಯ
ಸೆಪ್ಟೆಂಬರ್ 12ರಂದು ಕೇರಳ ಸರ್ಕಾರವು ಬಿಜೆಪಿಯೇತರ ಸರ್ಕಾರಗಳ ವಿತ್ತ ಸಚಿವರ ಶೃಂಗಸಭೆಯೊಂದನ್ನು ಆಯೋಜಿಸಿತ್ತು. ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳು ಮತ್ತು 16ನೇ ಹಣಕಾಸು ಆಯೋಗದ ಶಿಫಾರಸು ಕುರಿತು ಚರ್ಚಿಸುವುದು ಉದ್ದೇಶ. ಆನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ʻಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಕುರಿತು ಸಿಎಂ ಮಟ್ಟದಲ್ಲಿ ಚರ್ಚಿಸಿ, ಒಟ್ಟಾರೆ ಪ್ರಸ್ತಾವವೊಂದನ್ನು 16ನೇ ಹಣಕಾಸು ಆಯೋಗಕ್ಕೆ ನೀಡುವʼ ಮಾತನಾಡಿದ್ದರು. ಈ ಎರಡೂ ಬಹಳ […]
ʻಲಡಾಖಿನಲ್ಲಿ ಎಲ್ಲವೂ ಚೆನ್ನಾಗಿಲ್ಲʼ
ಸೂಪರ್ ಹಿಟ್ ಸಿನೆಮಾ ʼತ್ರಿ ಈಡಿಯಟ್ಸ್ʼ ಸಿನೆಮಾದಲ್ಲಿ ಆಮಿರ್ ಖಾನ್ ಅವರ ಪಾತ್ರದ ನಿಜರೂಪ- ಲಡಾಖಿನ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣತಜ್ಞ ಸೋನಂ ವಾಂಗ್ಚುಕ್. ಜನವರಿ 26, 2023 ರಿಂದ ಲಡಾಖಿನ ತೆರೆದ ಬಯಲಿನಲ್ಲಿ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ 5 ದಿನ ನಿರಶನ ಮಾಡಿದ್ದ ವಾಂಗ್‌ಚುಕ್, ಈಗ ʻದೆಹಲಿ ಚಲೋʼ ಆರಂಭಿಸಿದ್ದಾರೆ. ಅವರ ತಂಡದ ಪಾದಯಾತ್ರೆಯು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೆಹಲಿಯ ರಾಜ್‌ಘಾಟಿನಲ್ಲಿ ಕೊನೆಗೊಳ್ಳಲಿದೆ. ಅವರ ಬೇಡಿಕೆ ಇದು-ಲಡಾಖಿಗೆ ರಾಜ್ಯದ ಸ್ಥಾನಮಾನ, ಹೆಚ್ಚುವರಿ ಲೋಕಸಭೆ ಸ್ಥಾನ, […]
ಪೇಟೆಂಟ್: ದಕ್ಷಿಣ ಆಫ್ರಿಕ ತೋರಿಸಿದ ಮಾರ್ಗ
ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ಔಷಧ ಕಂಪನಿ ಜಾನ್ಸನ್ ಆಂಡ್ ಜಾನ್ಸನ್(ಜೆ ಆಂಡ್ ಜೆ) ಮತ್ತು ಅದರ ಅಂಗಸಂಸ್ಥೆ ಜಾನ್ಸನ್ ಫಾರ್ಮಾಸ್ಯೂಟಿಕಾದ ಉತ್ಪನ್ನವಾದ ಔಷಧ ಪ್ರತಿರೋಧವಿರುವ ಕ್ಷಯಕ್ಕೆ ಬಳಸುವ ಮುಖ್ಯ ಔಷಧ ಬೆಡಾಕ್ವಿಲಿನ್‌ನ ಎವರ್‌ಗ್ರೀನಿಂಗ್(ಅಂದರೆ, ಔಷಧದ ಸ್ವಲ್ಪ ಮಟ್ಟಿನ, ನಾವೀನ್ಯತೆ ಅಗತ್ಯವಿಲ್ಲದ ಬದಲಾವಣೆ ಮೂಲಕ ಪೇಟೆಂಟ್ ಅವಧಿ ವಿಸ್ತರಿಸುವಿಕೆ) ವಿರುದ್ಧದ ಚರಿತ್ರಾರ್ಹ ಗೆಲುವನ್ನು ಸಂಭ್ರಮಿಸ ಲಾಯಿತು. ರೋಗಿಗಳ ಕಾರ್ಯಜಾಲಗಳು ದಾಖಲಿಸಿದ ದೂರು ಆಧರಿಸಿ, ಬೆಡಾಕ್ವಿಲಿನ್‌ನ ಮಕ್ಕಳಿಗೆ ನೀಡುವ ಸೂತ್ರಕ್ಕೆ ಪೇಟೆಂಟ್ ನಿರಾಕರಿಸಲಾಯಿತು. ಒಂದುವೇಳೆ ಪೇಟೆಂಟ್ ಲಭ್ಯವಾಗಿದ್ದಲ್ಲಿ, ಕಂಪನಿಗೆ […]
ಲ್ಯಾಟರಲ್ ಎಂಟ್ರಿಯೂ, ಐಎಎಸ್ ವ್ಯವಸ್ಥೆಯೂ………..
ಕ್ರೋನಾಲಜಿ ಇಂತಿದೆ: ಆಗಸ್ಟ್ 17ರಂದು ಕೇಂದ್ರ ನಾಗರಿಕ ಸೇವೆಗಳ ಆಯೋಗ(ಯುಪಿಎಸ್‌ಸಿ) ವಿವಿಧ ಮಂತ್ರಾಲಯಗಳ 45 ಜಂಟಿ ಕಾರ್ಯದರ್ಶಿ, ನಿರ್ದೇಶಕ ಹಾಗೂ ಉಪ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಜಾಹೀರಾತು ಪ್ರಕಟಿಸಿತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ʻಇದು ರಾಷ್ಟ್ರವಿರೋಧಿ ಹೆಜ್ಜೆಯಾಗಿದ್ದು, ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ-ವರ್ಗ ಹಾಗೂ ಒಬಿಸಿಗಳ ಮೀಸಲು ಕಿತ್ತುಕೊಳ್ಳುವ ಪ್ರಯತ್ನʼ ಎಂದು ಟೀಕಿಸಿದರು. ಎನ್‌ಡಿಎ 3.0ಯ ಮೈತ್ರಿ ಪಕ್ಷಗಳಾದ ಲೋಕ ಜನಶಕ್ತಿ ಪಾರ್ಟಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಜೆಡಿಯು ಕೂಡ ಪ್ರಸ್ತಾವವನ್ನು […]
ಹಳಿ ತಪ್ಪುತ್ತಿರುವ ರೈಲುಗಳಿಗೆ ದಾರಿ ಯಾವುದು?
ಇತ್ತೀಚೆಗೆ ಕಾನ್ಪುರದ ಬಳಿ ಸಬರಮತಿ ಎಕ್ಸ್‌ಪ್ರೆಸ್‌ನ 20 ಬೋಗಿಗಳು ಹಳಿ ತಪ್ಪಿದವು. ಅದಕ್ಕಿಂತ ಮೊದಲು ಜುಲೈ 18ರಂದು ಉತ್ತರಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರೂಗಢ ಎಕ್ಸ್‌ಪ್ರೆಸ್(ಇಬ್ಬರು ಸಾವು, ಹಲವರಿಗೆ ಗಾಯ), ಜುಲೈ 29ರಂದು ಜಾರ್ಖಂಡದಲ್ಲಿ ಹೌರಾ-ಮುಂಬೈ ಎಕ್ಸ್‌ಪ್ರೆಸ್(ಇಬ್ಬರು ಸಾವು, 20 ಮಂದಿಗೆ ಗಾಯ) ಹಾಗೂ ಜುಲೈ 31ರಂದು ಪಶ್ಚಿಮ ಬಂಗಾಳದ ರಂಗಪಾನಿ ರೈಲ್ವೆ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿನ ಎರಡು ವ್ಯಾಗನ್‌ಗಳು ಹಳಿ ತಪ್ಪಿ ಉರುಳಿದವು. 2024ರ ಮೊದಲ 7 ತಿಂಗಳಿನಲ್ಲಿ ರೈಲು ಹಳಿ ತಪ್ಪಿದ 19 ಪ್ರಕರಣಗಳು(ಜನವರಿಯಲ್ಲಿ […]
ನೀಟ್ ಎನ್ನುವುದು ಒಂದು ರಾಜಕೀಯ ಕಾರ್ಯಕ್ರಮ
2017ರಲ್ಲಿ ತಮಿಳುನಾಡು ಪಿಯು ಪರೀಕ್ಷೆಯಲ್ಲಿ 1,176(1,200) ಅಂಕ ಗಳಿಸಿದ ಎಸ್.ಅನಿತಾ ವೈದ್ಯೆಯಾಗುವ ಕನಸು ಕಂಡವರು. ಆದರೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಪಾಸ್ ಆಗಲಿಲ್ಲ. ಸಾಕಷ್ಟು ಹೋರಾಟದ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ನೀಟ್ 720 ಅಂಕಗಳ 3 ಗಂಟೆ ಅವಧಿಯ ಪರೀಕ್ಷೆ. ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ 24,06,079 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶ ಬಂದಾಗ 67 ಮಂದಿ 720/720 ಅಂಕ ಗಳಿಸಿದರು. […]
ಹವಾಮಾನ ಬದಲಾವಣೆ ವಿರುದ್ಧ ರಕ್ಷಣೆಗೆ ಕಾನೂನಿಗೆ ಮುನ್ನುಡಿ
ಅಂಕೋಲಾ ಬಳಿ ಗುಡ್ಡ ಜರಿದು ನದಿಯಲ್ಲಿ ತೇಲಿಹೋದ ಮತ್ತು ಮಣ್ಣಿನಲ್ಲಿ ಮುಚ್ಚಿಹೋದ 11 ಮಂದಿಗೆ ಕಣ್ಣೀರಾಗೋಣ. 90 ಡಿಗ್ರಿ ಕೋನದಲ್ಲಿ ಗುಡ್ಡೆ ಕೆತ್ತಿ ರಸ್ತೆ ನಿರ್ಮಿಸಿದ ಗುತ್ತಿಗೆದಾರ- ಎಂಜಿನಿಯರ್‌ಗಳಿಗೆ ವಿಷಾದ ವ್ಯಕ್ತಪಡಿಸೋಣ. ಇಂಥ ಮಾನವ ಪ್ರೇರಿತ ಪರಿಸರ ದುರಂತಗಳ ನಡುವೆಯೇ ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟಗಳು, ಹಿಮಾಲಯ, ವಿಂಧ್ಯ, ಅರಾವಳಿ ಮತ್ತಿತರ ಬೆಟ್ಟಸಾಲುಗಳ ಜೊತೆಗೆ ಮನುಷ್ಯರನ್ನೂ ಕಾಪಿಡಬಲ್ಲ ಸಣ್ಣದೊಂದು ಬೆಳಕಿನ ಕಿಂಡಿಯೊಂದು ಕಾಣಿಸಿಕೊಂಡಿದೆ. 2024-25ರ ಬಜೆಟ್‌ಗೆ ಮುನ್ನ ಮಂಡನೆಯಾದ ಆರ್ಥಿಕ ಸಮೀಕ್ಷೆ ಕೂಡ ಹವಾಮಾನ ಬದಲಾವಣೆ ಮತ್ತು […]
ಅತಿ ಶ್ರೀಮಂತರಿಗೆ ಅಧಿಕ ತೆರಿಗೆ ವಿಧಿಸಲು ಇದು ಸರಿಯಾದ ಕಾಲ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಮಂಡಿಸಿದ ಕೇಂದ್ರ ಬಜೆಟ್, ಜಿ-20ರ ಬ್ರೆಜಿಲ್‌ಅಧ್ಯಕ್ಷತೆಯಡಿ ಮುಂಚೂಣಿಗೆ ಬಂದಿರುವ ಐಶ್ವರ್ಯ ತೆರಿಗೆ ಹಾಗೂ ಅನಂತ್‌ಅಂಬಾನಿ ವಿವಾಹ-ಇವೆಲ್ಲವೂ ಪರಸ್ಪರ ಜೋಡಿಸಲ್ಪಟ್ಟ ಘಟನೆಗಳು. ಕಳೆದ ಸಾಲಿನ ಜಿ-20 ಸಮಾವೇಶದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿತ್ತು ಹಾಗೂ ಅದನ್ನು ಮೋದಿ ಅವರ ಅಭೂತಪೂರ್ವ ಸಾಧನೆ ಎಂಬಂತೆ ಬಿಂಬಿಸಲಾಯಿತು. ಈ ಸಂಬಂಧ ಸಮಾವೇಶದ ವೇಳೆ ಬಿಡುಗಡೆಯಾದ ದ ರಿಸರ್ಚ್‌ಅಂಡ್‌ಇನ್ಫರ್ಮೇಷನ್‌ಸಿಸ್ಟಮ್‌ಫಾರ್‌ಡೆವಲಪಿಂಗ್‌ಕಂಟ್ರೀಸ್‌ಪ್ರಕಟಿಸಿದ 171 ಪುಟಗಳ ಇ-ದಾಖಲೆ ʼದ ಗ್ರಾಂಡ್‌ಸಕ್ಸೆಸ್‌ಆಫ್‌ಜಿ-20 ಭಾರತ್‌ಪ್ರೆಸಿಡೆನ್ಸಿ: ವಿಷನರಿ ಲೀಡರ್‌ಶಿಪ್, ಇನ್‌ಕ್ಲೂಸಿವ್‌ಅಪ್ರೋಚ್ʼ ನಲ್ಲಿ ಸರ್ಕಾರಿ ಅಧಿಕಾರಿಗಳು/ಕೃಪಾಪೋಷಿತ ಲೇಖಕರು ಬರೆದ ಲೇಖನಗಳಿದ್ದು, […]
ನರನು ಕೊಲ್ಲಲು, ಹರನೂ ಕಾಯಲಾರನು
ವಯನಾಡಿನ ಮನುಷ್ಯ ನಿರ್ಮಿತ ಭೂಕುಸಿತದಲ್ಲಿ 231 ಮಂದಿ ಮೃತಪಟ್ಟಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ (ಆಗಸ್ಟ್ 13ರ ಮಾಹಿತಿ). ಈ ಭೀಕರ ದುರಂತದ ಬಳಿಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆರು ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಪರ್ವತ ಶ್ರೇಣಿ ಈ ರಾಜ್ಯಗಳ ಜೀವದಾಯಿಯಾಗಿದ್ದರೂ, ತೀವ್ರ ಶೋಷಣೆಗೆ ಒಳಗಾಗಿದ್ದು, ಕೆಲವು ವರ್ಷಗಳಿಂದ ಉಗ್ರವಾಗಿ ಪ್ರತಿಕ್ರಿಯಿಸುತ್ತಿದೆ. ಪ್ರೊ. ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನೀಡಿದ್ದ ಅತ್ಯಂತ ನಿಖರ ಹಾಗೂ ವೈಜ್ಞಾನಿಕವಾಗಿ ಪರಿಪೂರ್ಣವಾಗಿದ್ದ ವರದಿಯನ್ನು ಜನರ […]