Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ನೀರು, ವಿದ್ಯುತ್ ಕಸಿಯುವ ದತ್ತಾಂಶ ಕೇಂದ್ರಗಳು

ಕರ್ನಾಟಕಕ್ಕೆ ಡೇಟಾ ಸೆಂಟರ್(ದತ್ತಾಂಶ ಕೇಂದ್ರ)ಗಳು ಕೈತಪ್ಪಿಹೋಗಿ, ಆಂಧ್ರಪ್ರದೇಶದ ಪಾಲಾಗಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಕರಾವಳಿ ಜಿಲ್ಲೆಯಲ್ಲಿ ಇವುಗಳ ಸ್ಥಾಪನೆಗೆ ಅತ್ಯುತ್ಸಾಹ ವ್ಯಕ್ತವಾಗಿತ್ತು. ಇದು ಮಾಹಿತಿ ತಂತ್ರಜ್ಞಾನ ಮೇಲುಗೈ ಸಾಧಿಸಿರುವ, ದತ್ತಾಂಶವು ಚಿನ್ನ ಆಗಿರುವ ಯುಗ. ಕಟ್ಟು ಜಾಣ್ಮೆ(ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್)ಯ ಉಬ್ಬರದ ಈ ಕಾಲಮಾನದಲ್ಲಿ ದತ್ತಾಂಶ ಕೇಂದ್ರಗಳು ಅತ್ಯವಶ್ಯ. ಆದರೆ, ವಿದ್ಯುತ್‌ ಹಾಗೂ ನೀರಿನ ತೀವ್ರ ಕೊರತೆ ಇರುವಲ್ಲಿ ಇವು ಅಗತ್ಯವೇ? ರಾಜಸ್ಥಾನ ಹೊರತುಪಡಿಸಿದರೆ, ಕರ್ನಾಟಕ ಬರಕ್ಕೆ ತುತ್ತಾಗಬಲ್ಲ ಸಾಧ್ಯತೆ ಹೆಚ್ಚು ಇರುವ ಮತ್ತು ನೀರಿನ ತೀವ್ರ ಕೊರತೆ […]

ಹೋಗಿ ಬನ್ನಿ ಗಾಡ್ಗೀಳ್ ಸರ್‌…ನಮಸ್ಕಾರ

ಪಶ್ಚಿಮ ಘಟ್ಟದಲ್ಲಿ ಬೇಡ್ತಿ-ವರದಾ ಮತ್ತು ಅಘನಾಷಿನಿ-ವೇದಾವತಿ ನದಿ ಜೋಡಣೆ, ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ, ಆಗುಂಬೆ ಸುರಂಗ, ಹೊನ್ನಾವರ ರೈಲು ಮಾರ್ಗ, ಕ್ಯಾಸಲ್‌ರಾಕ್-ಕುಲೆಂ ಜೋಡಿ ಹಳಿ ಮಾರ್ಗ, ಕೊಡಚಾದ್ರಿಗೆ ರೋಪ್‌ವೇ ಸೇರಿದಂತೆ ಹಲವು ಯೋಜನೆಗಳನ್ನು ಉದ್ದೇಶಿಸಲಾಗಿದೆ. ಇದೇ ಹೊತ್ತಿನಲ್ಲಿ ನದಿಗಳಿಗೂ ಜೀವಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ, ಜನವರಿ 11ರಂದು ಶಿರಸಿಯಲ್ಲಿ ಜನ ಸಮಾವೇಶ ನಡೆದಿದೆ. ಪ್ರತಿಯಾಗಿ ಹಾವೇರಿಯಲ್ಲಿ ನದಿ ಜೋಡಣೆ ಪರವಾಗಿ ಸಮಾವೇಶ ನಡೆದಿದೆ. ಇದೆಲ್ಲದರ ನಡುವೆ ಪಶ್ಚಿಮ ಘಟ್ಟಕ್ಕಾಗಿ ತಮ್ಮ ಜೀವವನ್ನೇ ಸವೆಸಿದ್ದ ಮಾಧವ ಗಾಡ್ಗೀಳ್(ಮೇ […]

ರಕ್ತಸಿಕ್ತ ಲ್ಯಾಟಿನ್‌ ಅಮೆರಿಕ: ಪ್ರತಿರೋಧದ ಮೂಲಕ ಸ್ವಾತಂತ್ರ್ಯದ ಮರುವ್ಯಾಖ್ಯಾನ

ವೆನೆಜುವೆಲ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಜ.3, 2026ರಂದು ಅಮೆರಿಕದ ಡೆಲ್ಟಾ ಫೋರ್ಸ್ ಅಪಹರಿಸಿದೆ. ಇದು 1989ರ ಪನಾಮ ಆಕ್ರಮ ಣದ ನಂತರ ಲ್ಯಾಟಿನ್ ಅಮೆರಿಕದಲ್ಲಿ ನಡೆದ ನೇರ ಮಿಲಿಟರಿ ಹಸ್ತಕ್ಷೇಪ. ಈ ಕಾರ್ಯಾಚರಣೆಯು ಟ್ರಂಪ್ ಆಡಳಿತದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ (ನ್ಯಾಷನಲ್‌ ಸೆಕ್ಯುರಿಟಿ ಸ್ಟ್ರಾಟೆಜಿ) 2025ರ ಭಾಗ. ಅಮೆರಿಕವು ಪಶ್ಚಿಮ ಗೋಳಾರ್ಧದಲ್ಲಿ ತನ್ನ ಆಧಿಪತ್ಯದ ಮರುಸ್ಥಾಪನೆಗೆ ಮನ್ರೋ ಸಿದ್ಧಾಂತದ ಜಾರಿಗೆ ಮುಂದಾಗಿದೆ. ಲ್ಯಾಟಿನ್‌ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಜುವೆಲ, […]

ಅರಾವಳಿ ಪರ್ವತಶ್ರೇಣಿ ಮೇಲೆ ಉದ್ಯಮದ ಕಾಕದೃಷ್ಟಿ

ಸುಪ್ರೀಂ ಕೋರ್ಟ್‌ ಡಿಸೆಂಬರ್‌ 29, 2025ರಂದು ಅರಾವಳಿಯ ಹೊಸ ವ್ಯಾಖ್ಯೆಗೆ ತಡೆ ನೀಡಿದೆ ಮತ್ತು ಈ ಸಂಬಂಧ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿ ರಚಿಸಬೇಕೆಂದು ಹೇಳಿದೆ. ಇದರಿಂದ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ. ಆದರೆ, ಪ್ರಶ್ನೆ ಇರುವುದು- ಪರಿಸರ ಮಂತ್ರಾಲಯದ ಅಧಿಕಾರಿಗಳು ನೀಡಿದ ವ್ಯಾಖ್ಯೆಯನ್ನು ನ್ಯಾಯಾಲಯ ಈಮೊದಲು ಒಪ್ಪಿದ್ದಾದರೂ ಏಕೆ? ನ್ಯಾಯಾಲಯಕ್ಕೆ ವಾಸ್ತವ ಸಂಗತಿ ತಿಳಿಸದೆ ಮುಚ್ಚಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನದೇ ಸಚಿವಾಲಯದ ಅಡಿ ಬರುವ ಭಾರತೀಯ ಅರಣ್ಯ ಸಮೀಕ್ಷೆ(ಎಫ್‌ಎಸ್‌ಐ)ಯ ಶಿಫಾರಸುಗಳನ್ನು ಕೂಡ ಪರಿಸರ ಸಚಿವಾಲಯ […]

ರಿತ್ವಿಕ್‌ ಘಟಕ್‌ 100: ನೋವಿಗದ್ದಿದ, ಸ್ಪಂದನಶೀಲ ಕ್ಯಾಮೆರಾ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜೀವವಿಮೆ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ, ಸುರಕ್ಷತೆಯ ಖಾತ್ರಿಯಿಲ್ಲದ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅನುಮತಿ ನೀಡುವಿಕೆ ಮಸೂದೆ ಯಲ್ಲದೆ, ಗ್ರಾಮೀಣರ ಜೀವನಾಡಿಯಾಗಿದ್ದ ನರೇಗಾದ ಹೆಸರು ಬದಲಿಸಿ ವಿರೂಪಗೊಳಿಸಲಾಗಿದೆ. ಜನಸಾಮಾನ್ಯರ ಹಿತಾಸಕ್ತಿಗೆ ಧಕ್ಕೆ ತರುವ ಇಂಥ ಮಸೂದೆಗಳ ನಡುವೆಯೇ ಕಟ್ಟಾ ಸಿದ್ಧಾಂತಿ, ಮೂರ್ತಿಭಂಜಕ ಮತ್ತು ಸಿನೆಮಾ ಮಾಧ್ಯಮವನ್ನು ಮಾನವೀಯಗೊಳಿಸಿದ ಚಿತ್ರ ನಿರ್ದೇಶಕ ರಿತ್ವಿಕ್‌ ಘಟಕ್ ನೂರು ವರ್ಷ(ನವೆಂಬರ್‌ 4, 1925- ಫೆಬ್ರವರಿ 6,1976) ಪೂರೈಸಿದ್ದಾರೆ. ಬಂಗಾಳದ ಖ್ಯಾತ ತ್ರಿವಳಿ ನಿರ್ದೇಶಕರಲ್ಲಿ ಘಟಕ್‌ ಕಿರಿಯರು(ಸತ್ಯಜಿತ್‌ ರೇ, ಮೃಣಾಲ್‌ […]

ಮಹುವಾದ ಘಮಲು ಮತ್ತು ಪುಟ್ಟ ಹಕ್ಕಿಯ ಅಳಲು

ಸುಪ್ರೀಂ ಕೋರ್ಟ್‌ ತನ್ನ ನವೆಂಬರ್‌ 2025ರ ಆದೇಶದಲ್ಲಿ ಸಾರಂಡದ 314 ಚದರ ಕಿಲೋಮೀಟರ್‌ ಕಾಡನ್ನು ವನ್ಯಜೀವಿಧಾಮ ಎಂದು ಘೋಷಿಸಬೇಕು; ಕಬ್ಬಿಣದ ಸುಸ್ಥಿರ ಗಣಿಗಾರಿಕೆ ಮತ್ತು ಜೈವಿಕ ವೈವಿಧ್ಯದ ನಡುವೆ ಸಮತೋಲನ ಸಾಧಿಸಬೇಕು ಎಂದು ಹೇಳಿತು. ಸಾರಂಡ ಜಗತ್ತಿನ ಅತ್ಯಂತ ಸಮೃದ್ಧ ಸಾಲ್‌ ಮರಗಳ ಕಾಡು. ಈ ಕಾಡಿನಲ್ಲಿ ನಿರ್ವಂಶದ ಅಂಚಿನಲ್ಲಿರುವ ಆಮೆ, 4 ಕೊಂಬುಗಳ ಜಿಂಕೆ, ಏಷ್ಯಾದ ತಾಳೆ ಮರದ ಪುನುಗಿನ ಬೆಕ್ಕು ಅಲ್ಲದೆ ಕಾಡಾನೆಗಳಿವೆ. ಈ ಅರಣ್ಯದಲ್ಲಿ ಶತಮಾನಗಳಿಂದ ಹೋ, ಮುಂಡಾ, ಉರಾಓನ್‌ ಮತ್ತಿತರ ಆದಿವಾಸಿಗಳು […]

ಇಂಡಿಗೋ ಪ್ರಕರಣ: ಏಕಸ್ವಾಮ್ಯ, ದ್ವಿಸ್ವಾಮ್ಯದ ವಿಪತ್ತಿನ ನಿದರ್ಶನ

ಇಂಡಿಗೋ ವಿಮಾನಗಳ ರದ್ದುಗೊಳಿಸುವಿಕೆಯಿಂದ ದೇಶದೆಲ್ಲೆಡೆ ಪ್ರಯಾಣಿಕರು ನರಳಿದರು ಮತ್ತು ನರಳುತ್ತಿದ್ದಾರೆ. ಟಿಕೆಟ್‌ ಮೊತ್ತ ಮರುಪಾವತಿಸುವುದಾಗಿ ಮತ್ತು 10ರಿಂದ 15 ದಿನಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ದೇಶದಲ್ಲಿ ವಿಮಾನದಲ್ಲಿ ಸಂಚರಿಸುವವರ ಪ್ರಮಾಣ ಶೇ.3-4. ಆದ್ದರಿಂದ, ಇದು ಜನಸಾಮಾನ್ಯರ ಸಮಸ್ಯೆಯಲ್ಲ; ನಾವು ತಲೆ ಕೆಡಿಸಿ ಕೊಳ್ಳಬೇಕಿಲ್ಲ ಎಂದುಕೊಳ್ಳಬಾರದು. ಏಕೆಂದರೆ, ಈ ಪ್ರಕರಣ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ-ದ್ವಿಸ್ವಾಮ್ಯದಿಂದ ಆಗಬಹುದಾದ ವಿಪತ್ತಿಗೆ ಹಿಡಿದ ಕನ್ನಡಿ. 2007ರಲ್ಲಿ ಹೈಕೋರ್ಟ್‌ ಆದೇಶದ ಮೇರೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡೈರೆಕ್ಟೊರೇಟ್‌ ಜನರಲ್‌ ಆಫ್‌ […]

ಹೊಸ ಕಾರ್ಮಿಕ ಸಂಹಿತೆಗಳಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸಿಗುವುದೇ?

ಒಕ್ಕೂಟ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ವೇತನಗಳ ಸಂಹಿತೆ (2019)ಯು ವೇತನ ಪಾವತಿ ಕಾಯಿದೆ 1936, ಕನಿಷ್ಠ ವೇತನ ಕಾಯಿದೆ 1948, ಬೋನಸ್ ಪಾವತಿ ಕಾಯಿದೆ 1965 ಹಾಗೂ ಸಮಾನ ಸಂಭಾವನೆ ಕಾಯಿದೆ 1976 ರ ಕ್ರೋಡೀಕರಣ. ಇದರೊಟ್ಟಿಗೆ ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಸುರಕ್ಷೆ ಸಂಹಿತೆ 2020 ಮತ್ತು ಉದ್ಯೋಗಜನ್ಯ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಒಎಸ್‌ಎಚ್‌ಡಬ್ಲ್ಯುಸಿ ಸಂಹಿತೆಯನ್ನು ಜಾರಿಗೊಳಿಸಿದೆ. 32 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು […]

ಸುಪ್ರೀಂ ತೀರ್ಪು ಮತ್ತು ಮಸುಕಾಗುತ್ತಿರುವ ಸಂವಿಧಾನದ ಬೆಳಕು

ನವೆಂಬರ್‌ 20ರಂದು ಎರಡು ಚರಿತ್ರಾರ್ಹ ಘಟನೆಗಳು ನಡೆದವು- ಪಟಣಾದಲ್ಲಿ ನಿತೀಶ್‌ ಕುಮಾರ್‌ ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಅವಧಿಗೆ ಅಧಿಕಾರ ಸ್ವೀಕರಿಸಿದರು ಮತ್ತು ಮುಖ್ಯ ನ್ಯಾಯಮೂರ್ತಿ ಆರ್‌. ಎಸ್‌. ಗವಾಯಿ ನೇತೃತ್ವದ ಸಂವಿಧಾನ ಪೀಠವು ರಾಜ್ಯಪಾಲರು-ರಾಷ್ಟ್ರಪತಿ ಅವರಿಗೆ ಕಡತವೊಂದಕ್ಕೆ ಸಹಿ ಹಾಕಲು ಕಾಲಾವಧಿ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ನಿತೀಶ್‌ ಕುಮಾರ್‌ ಮತ್ತು ಮೈತ್ರಿ ಪಕ್ಷ ಬಿಜೆಪಿ, ಚುನಾವಣೆಯನ್ನು ತಂತ್ರಗಾರಿಕೆ ಮತ್ತು ಕುಶಲತೆಯಿಂದ ತಿರುಚಿ ಜಯ ಸಾಧಿಸಿತು; ಪ್ರತಿಪಕ್ಷಗಳು ತಂತ್ರಕ್ಕೆ ಶರಣಾದವು. ಆದರೆ, ಸುಪ್ರೀಂ ಕೋರ್ಟ್‌ ತೀರ್ಪು […]

Back To Top