Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಇಂಡಿಗೋ ಪ್ರಕರಣ: ಏಕಸ್ವಾಮ್ಯ, ದ್ವಿಸ್ವಾಮ್ಯದ ವಿಪತ್ತಿನ ನಿದರ್ಶನ

ಇಂಡಿಗೋ ವಿಮಾನಗಳ ರದ್ದುಗೊಳಿಸುವಿಕೆಯಿಂದ ದೇಶದೆಲ್ಲೆಡೆ ಪ್ರಯಾಣಿಕರು ನರಳಿದರು ಮತ್ತು ನರಳುತ್ತಿದ್ದಾರೆ. ಟಿಕೆಟ್‌ ಮೊತ್ತ ಮರುಪಾವತಿಸುವುದಾಗಿ ಮತ್ತು 10ರಿಂದ 15 ದಿನಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ದೇಶದಲ್ಲಿ ವಿಮಾನದಲ್ಲಿ ಸಂಚರಿಸುವವರ ಪ್ರಮಾಣ ಶೇ.3-4. ಆದ್ದರಿಂದ, ಇದು ಜನಸಾಮಾನ್ಯರ ಸಮಸ್ಯೆಯಲ್ಲ; ನಾವು ತಲೆ ಕೆಡಿಸಿ ಕೊಳ್ಳಬೇಕಿಲ್ಲ ಎಂದುಕೊಳ್ಳಬಾರದು. ಏಕೆಂದರೆ, ಈ ಪ್ರಕರಣ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ-ದ್ವಿಸ್ವಾಮ್ಯದಿಂದ ಆಗಬಹುದಾದ ವಿಪತ್ತಿಗೆ ಹಿಡಿದ ಕನ್ನಡಿ. 2007ರಲ್ಲಿ ಹೈಕೋರ್ಟ್‌ ಆದೇಶದ ಮೇರೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡೈರೆಕ್ಟೊರೇಟ್‌ ಜನರಲ್‌ ಆಫ್‌ […]

ಹೊಸ ಕಾರ್ಮಿಕ ಸಂಹಿತೆಗಳಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸಿಗುವುದೇ?

ಒಕ್ಕೂಟ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ವೇತನಗಳ ಸಂಹಿತೆ (2019)ಯು ವೇತನ ಪಾವತಿ ಕಾಯಿದೆ 1936, ಕನಿಷ್ಠ ವೇತನ ಕಾಯಿದೆ 1948, ಬೋನಸ್ ಪಾವತಿ ಕಾಯಿದೆ 1965 ಹಾಗೂ ಸಮಾನ ಸಂಭಾವನೆ ಕಾಯಿದೆ 1976 ರ ಕ್ರೋಡೀಕರಣ. ಇದರೊಟ್ಟಿಗೆ ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಸುರಕ್ಷೆ ಸಂಹಿತೆ 2020 ಮತ್ತು ಉದ್ಯೋಗಜನ್ಯ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಒಎಸ್‌ಎಚ್‌ಡಬ್ಲ್ಯುಸಿ ಸಂಹಿತೆಯನ್ನು ಜಾರಿಗೊಳಿಸಿದೆ. 32 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು […]

ಸುಪ್ರೀಂ ತೀರ್ಪು ಮತ್ತು ಮಸುಕಾಗುತ್ತಿರುವ ಸಂವಿಧಾನದ ಬೆಳಕು

ನವೆಂಬರ್‌ 20ರಂದು ಎರಡು ಚರಿತ್ರಾರ್ಹ ಘಟನೆಗಳು ನಡೆದವು- ಪಟಣಾದಲ್ಲಿ ನಿತೀಶ್‌ ಕುಮಾರ್‌ ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಅವಧಿಗೆ ಅಧಿಕಾರ ಸ್ವೀಕರಿಸಿದರು ಮತ್ತು ಮುಖ್ಯ ನ್ಯಾಯಮೂರ್ತಿ ಆರ್‌. ಎಸ್‌. ಗವಾಯಿ ನೇತೃತ್ವದ ಸಂವಿಧಾನ ಪೀಠವು ರಾಜ್ಯಪಾಲರು-ರಾಷ್ಟ್ರಪತಿ ಅವರಿಗೆ ಕಡತವೊಂದಕ್ಕೆ ಸಹಿ ಹಾಕಲು ಕಾಲಾವಧಿ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ನಿತೀಶ್‌ ಕುಮಾರ್‌ ಮತ್ತು ಮೈತ್ರಿ ಪಕ್ಷ ಬಿಜೆಪಿ, ಚುನಾವಣೆಯನ್ನು ತಂತ್ರಗಾರಿಕೆ ಮತ್ತು ಕುಶಲತೆಯಿಂದ ತಿರುಚಿ ಜಯ ಸಾಧಿಸಿತು; ಪ್ರತಿಪಕ್ಷಗಳು ತಂತ್ರಕ್ಕೆ ಶರಣಾದವು. ಆದರೆ, ಸುಪ್ರೀಂ ಕೋರ್ಟ್‌ ತೀರ್ಪು […]

ದೇಶಿ ಕೃಷಿ ಕ್ಷೇತ್ರಕ್ಕೆ ಆಮದು-ಕುಲಾಂತರಿ ಪ್ರಹಾರ

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ಅಮೆರಿಕದ ದಬ್ಬಾಳಿಕೆ ಹೆಚ್ಚಿದೆ. ಮಾಗಾ(ಮೇಕ್‌ ಅಮೆರಿಕ ಗ್ರೇಟ್‌ ಎಗೇನ್‌) ಎಂದು ಘೋಷಿಸುತ್ತ, ಕುಸಿದಿರುವ ಉತ್ಪಾದನೆ ಪ್ರವೃತ್ತಿಯನ್ನು ಪ್ರೋತ್ಸಾಹಿ ಸಲು ಬೇರೆ ದೇಶಗಳ ಕುತ್ತಿಗೆಯನ್ನು ಹಿಚುಕಲಾಗುತ್ತಿದೆ. ಪಾಶ್ಚಾತ್ಯ ದೇಶಗಳ ದಬ್ಬಾಳಿಕೆ ಮನಸ್ಥಿತಿ ಈಗಲೂ ಬದಲಾಗಿಲ್ಲ. 19ನೇ ಶತಮಾನದಲ್ಲಿ ಚೀನಾದ ದೊರೆ ದೇಶದೆಲ್ಲೆಡೆ ಅಫೀಮನ್ನು ನಿಷೇಧಿಸಿದರು. ಭಾರತದಲ್ಲಿ ಬೆಳೆದ ಅಫೀಮನ್ನು ಚೀನಾಕ್ಕೆ ಕಳಿಸಿ ಹಣ ಲೂಟಿ ಹೊಡೆಯುತ್ತಿದ್ದ ಬ್ರಿಟಿಷ್‌ ವರ್ತಕರಿಗೆ ನಷ್ಟವುಂಟಾಗಿ, ಸಿಟ್ಟಿಗೆದ್ದರು. ವ್ಯಾಪಾರ ನೀತಿಯನ್ನು ಬದಲಿಸಬೇಕು ಹಾಗೂ ಚೀನಾದ […]

ದೇಶಕ್ಕೆ ಇನ್ನಷ್ಟು ರಾಡ್ರಿಗಸ್, ಕೌರ್‌ ಮತ್ತು ಖುರೇಷಿಗಳು ಅಗತ್ಯ

ಮಹಿಳಾ ವಿಶ್ವ ಕಪ್‌ ನಮ್ಮ ಪಾಲಾಗಿದೆ. 1983ರಲ್ಲಿ ಪುರುಷರ ವಿಶ್ವ ಕಪ್‌, 2011ರಲ್ಲಿ ಐಸಿಸಿ ವಿಶ್ವ ಕಪ್‌ ಗೆಲುವಿನ ನಂತರದ ಚರಿತ್ರಾರ್ಹ ಗೆಲುವು ಇದು. 2005ರಲ್ಲಿ ಆಸ್ಟ್ರೇಲಿಯ ಹಾಗೂ 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಮಹಿಳಾ ತಂಡ ಸೋಲುಂಡಿತ್ತು. ಗೆಲುವಿನ ಬಳಿಕ ತಂಡ ಘನತೆಯಿಂದ ನಡೆದುಕೊಂಡಿತು. ಪ್ರತಿಯಾಗಿ 2025ರ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಾಯಕ ಸೂರ್ಯಕುಮಾರ್‌ ಯಾದವ್, ಎದುರಾಳಿ ತಂಡದ ನಾಯಕನ ಹಸ್ತಲಾಘವ ಮಾಡಲಿಲ್ಲ; ಎರಡು ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ ಮತ್ತು ಕಾಶ್ಮೀರದಲ್ಲಿ […]

ಪ್ರತಿದಿನ 2,000 ರೈತರು ಬೇಸಾಯದಿಂದ ಹೊರಗೆ

ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ(ಇಂಡಿಯನ್‌ ರೋಲರ್‌, ಕೊರಾಸಿಯಸ್‌ ಬೆಂಗಾಲೆನ್ಸಿಸ್)ನ ವೈಶಿಷ್ಟ್ಯವೇನೆಂದರೆ, ಅವನು ಆಂಧ್ರಪ್ರದೇಶ, ಬಿಹಾರ ಮತ್ತು ಒಡಿಷಾದ ರಾಜ್ಯ ಪಕ್ಷಿಯೂ ಹೌದು. ಒಡಿಷಾದಲ್ಲಿ ನೀಲಕಂಠನನ್ನು ತಿಹಾ ಎಂದು ಕರೆಯುತ್ತಾರೆ. ಬೇಡಿದ್ದನ್ನು ನೀಡುತ್ತಾನೆ ಎಂದು ರೈತರು ನಂಬಿರುವುದರಿಂದ, ದಸರಾ ಹಬ್ಬದಂದು ನೀಲಕಂಠನನ್ನು ನೋಡುವ ಸಂಪ್ರದಾಯವಿದೆ. ಆದರೆ, ಈ ವರ್ಷ ಮತುಪಲಿ ಗ್ರಾಮದ ರೈತ ಪಿತಬಷಾ, ಹಕ್ಕಿ ಯನ್ನು ನೋಡಲು ಹೋಗಲಿಲ್ಲ. ಏಕೆ ಎಂಬ ಪ್ರಶ್ನೆಗೆ ʼನಾನು ಬೇಡಿಕೊಳ್ಳುವುದನ್ನು ನಿಲ್ಲಿಸಿದ್ದೇನೆʼ ಎಂಬ ಪ್ರತಿಕ್ರಿಯೆ ಬಂದಿತು. 2025ರ ಸೆಪ್ಟೆಂಬರ್‌ನಲ್ಲಿ ಸುರಿದ ನಿರಂತರ […]

ಜಾತಿಯೆಂಬುದು ಕಣ್ಣಿಗೆ ಇರಿಯುವ ವಾಸ್ತವ, ನಿವಾರಣೆಯಾಗದ ಜಾಡ್ಯ

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಒಂದು ವರ್ಗದ ಜನರು, ಧನಾಡ್ಯರು ಹಾಗೂ ಪ್ರತಿಪಕ್ಷ ಬಿಜೆಪಿ ಸಮೀಕ್ಷೆಯನ್ನು ಹೀನಯಿಸಿದ್ದಲ್ಲದೆ, ಸಮಾಜವನ್ನು ಒಡೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸ್ನೇಹಿತರಾದ ಎಚ್‌.ಎಚ್‌. ರೇಣುಕಾರಾಧ್ಯ ಅವರ ಅನುಭವವು ಜಾತಿ ತನ್ನ ಬೇರನ್ನು ಎಷ್ಟು ಆಳವಾಗಿ ಬಿಟ್ಟಿದೆ ಎಂಬು ದನ್ನು ತೋರಿಸಿಕೊಡುತ್ತದೆ. ಇದೇ ಹೊತ್ತಿನಲ್ಲಿ ಅಧ್ಯಯನವೊಂದು ನಗರಗಳಲ್ಲಿ ಪೌರತ್ವವು ಕಾಗದದ ಮೇಲೆ ಮಾತ್ರ ಸಮಾನವಾಗಿದೆ; ಆದರೆ, ಆಚರಣೆಯಲ್ಲಿ ಅಸಮಾನವಾಗಿದೆ ಎಂದು ಹೇಳಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಸರ್ಕಾರವು […]

ಸುಪ್ರೀಂ ಕೋರ್ಟಿಗೆ ಭಿನ್ನಮತದ ಮೆರುಗು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನವು ಸನಾತನ ಮನಸ್ಥಿತಿಯ ಗಂಭೀರ ಪ್ರಕರಣ. ಸನಾತನ ಧರ್ಮಕ್ಕೆ ಅಪಮಾನ ವನ್ನು ಸಹಿಸುವುದಿಲ್ಲ ಎಂದು ಈ ಪ್ರಯತ್ನ ನಡೆಸಿದ ಕ್ರಿಮಿ ಹೇಳಿದೆ. ಆತ ಅಪ್ರಬುದ್ಧನಲ್ಲ; ಮಾನಸಿಕ ಅಸ್ವಸ್ಥನಲ್ಲ; ಅಕ್ಷರಸ್ಥ ಮತ್ತು ವೃತ್ತಿಯಲ್ಲಿ ವಕೀಲ. ನ್ಯಾಯಾಲಯದ ತೀರ್ಮಾನ ತಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಎನ್ನುವ ಅಸಹನೆಯು ಗುಂಪು ಹಲ್ಲೆಗಳು ಮತ್ತು ಬುಲ್ಡೋಜರ್‌ ನ್ಯಾಯದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಜಾಸತ್ತೆಗೆ ಧಕ್ಕೆಯುಂಟು ಮಾಡುತ್ತಿದೆ. ದೇಶದ ನಾಯಕತ್ವ ವಹಿಸಿದವರ […]

ಸಂರಕ್ಷಣೆಯ ದಣಿವರಿಯದ ಧ್ವನಿ ಮೌನವಾಯಿತು

ಹವಾಮಾನ ಬದಲಾವಣೆ, ಯುದ್ಧ, ಸಂಪನ್ಮೂಲಗಳ ಬರಿದಾಗುವಿಕೆ ಸೇರಿದಂತೆ ಹೆಚ್ಚುತ್ತಿರುವ ಜಾಗತಿಕ ಬಿಕ್ಕಟ್ಟುಗಳ ನಡುವೆ ಸಂರಕ್ಷಣೆಗಾಗಿ ದಣಿವರಿಯದೆ ದುಡಿಯುತ್ತಿದ್ದ ಜೇನ್‌ ಗೂಡಾಲ್(91) ಇತ್ತೀಚೆಗೆ ಮೃತಪಟ್ಟರು. ಅವರ ದೀರ್ಘಕಾಲೀನ ಸಂರಕ್ಷಣೆ ಕಾರ್ಯಗಳು ಪ್ರಾಮುಖಿ(ಪ್ರೈಮೇಟ್)‌ ಸ್ತನಿಗಳ ಅಧ್ಯಯನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾದವು. ಚಿಂಪಾಂಜಿಗಳ ಜೀವನವಿವರಗಳನ್ನು ದಾಖಲಿಸಿ, ಬಹಿರಂಗಪಡಿಸಿದ ಅವರು ಆಧುನಿಕ ಜಗತ್ತಿಗೆ ಭರವಸೆಯ ಭಾಷೆಯೊಂದನ್ನು ನೀಡಿದರು. ಪ್ರಸಿದ್ಧ ಮಾನವಶಾಸ್ತ್ರಜ್ಞ ಲೂಯಿಸ್ ಸೇಮೋರ್‌ ಬಝೆಟ್‌ ಲೀಕಿ ಅವರ ಬಳಿ ಕೆಲಸ ಮಾಡಲು ನಿರ್ಧರಿಸಿ, ಜುಲೈ 1960ರಲ್ಲಿ ತಾಂಜಾನಿಯಾದ ತಾಂಗನಿಕಾ ಸರೋವರದ ತೀರದಲ್ಲಿರುವ ಗೊಂಬೆ […]

Back To Top