Category: ಋತ

ಋತ, ರಾಜಕೀಯ-ಸಾಂಸ್ಕøತಿಕ ನಿಯತಕಾಲಿಕವಾಗಿದ್ದು, ಸಮಕಾಲೀನ ಕನ್ನಡ ಪ್ರಮುಖ ಪ್ರಕಟಣೆಗಳಲ್ಲೊಂದು. ಇಂಗ್ಲಿಷ್ ಕೇಂದ್ರಿತವಾದ ಜ್ಞಾನಧಾರೆಯನ್ನು ಸವಿ ಕನ್ನಡದಲ್ಲಿ ಪ್ರಕಟಿಸುವುದು ನಮ್ಮ ಗುರಿ. ಕನ್ನಡಕ್ಕೆ ಜಗತ್ತಿನ ಎಲ್ಲ ಜ್ಞಾನಧಾರೆಗಳು ಬರಬೇಕು ಎನ್ನುವ ಆಶಯವನ್ನು ಆಗುಮಾಡುವ ಪ್ರಯತ್ನ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಪರಿಸರ-ಜೀವಿಶಾಸ್ತ್ರ, ಆಟೋಟ, ಕಲೆ-ಸಂಸ್ಕøತಿ, ಶಿಕ್ಷಣ ಸೇರಿದಂತೆ ದೈನಂದಿನ ಬದುಕನ್ನು ಪ್ರಭಾವಿಸುವ-ಭಾಗವಾಗಿರುವ ಎಲ್ಲ ಜ್ಞಾನಶಾಖೆಗಳ ವಿಮರ್ಶೆ, ವಿಶ್ಲೇಷಣೆ, ವಿಚಾರ, ಸಂವಾದ ನಮ್ಮ ಉದ್ದೇಶ. ಪ್ರತಿ ಸಂಚಿಕೆ ಒಬ್ಬ ಚಿಂತಕ, ಒಂದು ಸಮಸ್ಯೆ ಇಲ್ಲವೇ ಒಂದು ತತ್ತ್ವ-ಸಿದ್ಧಾಂತದ ಬಗ್ಗೆ ಇರುತ್ತದೆ. ಆ ಕುರಿತ ಎಲ್ಲ ದೃಷ್ಟಿಕೋನಗಳನ್ನು ಪರಿಚಯಿಸುವುದು, ಸಂವಾದ ಹಾಗೂ ಚರ್ಚೆಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ.

ಋತ 1 ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಇಕಾಲಜಿ

  ಖ್ಯಾತ ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್‌ ಅವರ ಲೇಖನಗಳ ಗುಚ್ಛ.ಪ್ರೊ.ಟಿ ಎಸ್‌ ವೇಣುಗೋಪಾಲ್‌, ಸುಷ್ಮಾ ಕಶ್ಯಪ್‌, ಅಪೂರ್ವ ಯರಬಹಳ್ಳಿ, ಡಾ.ದಿವ್ಯಮಣಿ ಬಿ ಜಿ., ಮತ್ತಿತರರು ಅನುವಾದಿಸಿದ ಲೇಖನಗಳಿವೆ. ಪುಟ 72 ಬೆಲೆ ರೂ.100  

Back To Top