ದೆಹಲಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆ, ಧೂಳಿನ ಚಂಡಮಾರುತ
ನವದೆಹಲಿ, ಮಾರ್ಚ್ 30: ದೆಹಲಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆಗೊಂಡಿದ್ದು, ಧೂಳಿನ ಚಂಡಮಾರುತ ಆವರಿಸಿದೆ. ಇದು 48 ಗಂಟೆಗಳ ಕಾಲ ಇರಲಿದ್ದು, ಯಾರೂ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದ ಹೊರಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಧೂಳಿನ ಕಣಗಳು ಶ್ವಾಸ ಕೋಶಕ್ಕೆ ಸೇರುವುದರಿಂದ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಧೂಳಿನ ಚಂಡಮಾರುತ ಆವರಿಸಿದ ತಕ್ಷಣ ಕತ್ತಲೆ ಆವರಿಸಿತ್ತು. ಗಾಳಿಯು ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಏನೇ ಆಗಲಿ ಸುಡು ಬಿಸಿಲಿಂದ ಸ್ವಲ್ಪ ಹೊತ್ತು ಬಿಡುವು ದೊರೆತಂತಾಯಿತು. ಮುಂಬರುವ […]




