ಮಲೆನಾಡಿನ ಕಾಫಿ ಬೆಳೆಗಾರ ಸೋತದ್ದೆಲ್ಲಿ ಮತ್ತು ಬೆಲೆಗಳ ಮೇಲೆ ಸರ್ಕಾರಿ ನಿಯಂತ್ರಣ ಯಾಕೆ ಬೇಕು?
ಒಂದು ಕಾಲಕ್ಕೆ ಅತ್ಯಂತ ಪ್ರತಿಷ್ಟಿತ ಹಾಗೂ ಸಧೃಡ ಕೃಷಿಯೆಂದು ಹೆಮ್ಮೆ ಪಡುತ್ತಿದ್ದ ಕಾಫಿ ಬೆಳೆಗಾರರೆಂದರೆ ಐಷಾರಾಮೀ ದೊರೆಗಳೆಂದು ಬೇರೆಯವರು ಹೇಳುತ್ತಿದ್ದ ಮಲೆನಾಡಿನ ಕಾಫಿ ಬೆಳೆ ಸೋತದ್ದೆಲ್ಲಿ. ಸುಮಾರಾಗಿ ಎಂಬತ್ತರ ದಶಕದವರೆಗೂ ಕಾಫಿಯ ಸ್ಥಿತಿ ಹಾಗೇ ಇತ್ತು. ಆಂತರಿಕ ಬಳಕೆ ಬಹಳ ಕಡಿಮೆ ಇದ್ದು ಅದು ವರ್ಷಕ್ಕೆ ಐವತ್ತು ಸಾವಿರ ಟನ್ ಮೀರುತ್ತಿರಲಿಲ್ಲ. ಅದರಲ್ಲೂ ತಮಿಳುನಾಡೇ ಮುಖ್ಯ ಗ್ರಾಹಕ ರಾಜ್ಯವಾಗಿತ್ತು. ಉಳಿದ ಎಲ್ಲಾ ಕಾಫಿ ರಫ್ತಾಗುತ್ತಿತ್ತು. ಅಂದಿನ ಕಾಲಕ್ಕೆ ದೊಡ್ಡ ಮೊತ್ತವೆನ್ನಬಹುದಾದ ನಾಲ್ಕು ನೂರು ಕೋಟಿ ರುಪಾಯಿಯಷ್ಟು ವಿದೇಶೀ […]




