ಸೋಪು, ಪೇಸ್ಟ್ನಲ್ಲಿ ಹಾನಿಕರ ರಾಸಾಯನಿಕ
ಸೋಪು ಮತ್ತು ಪೇಸ್ಟ್ನಲ್ಲಿ ಬಳಸುವ ಟ್ರೈಕ್ಲೋಸಾನ್ ಮನುಷ್ಯನ ನರಮಂಡಲದ ಮೇಲೆ ವಿಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ಐಐಟಿಯ ವಿಜ್ಞಾನಿಗಳು ಹೇಳಿದ್ದಾರೆ. ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಅನಾಮಿಕಾ ಭಾರ್ಗವ ತಂಡದ ನೇತೃತ್ವ ವಹಿಸಿದ್ದರು. ಸೋಪು, ಪೇಸ್ಟ್ ಮತ್ತು ಡಿಆಡರೆಂಟ್‌ಗಳಲ್ಲಿ ಬಳಸಲ್ಪಡುವ ಸಸ್ಯಜನ್ಯ ವಸ್ತುಗಳನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಟ್ಟಾಗ ಅದರಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳವಣಿಗೆ ಆಗುತ್ತವೆ. ಇದನ್ನು ತಡೆಯಲು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಟ್ರೈಕ್ಲೋಸಾನ್ ಎಂಬ ರಾಸಾಯನಿಕ ಬಳಸಲಾಗುತ್ತದೆ. ಮನೆಗಳಲ್ಲಿ ಸಾಕುವ ಜೆಬ್ರಾ ಫಿಶ್‌ನ ಮೇಲೆ ಟ್ರೈಕ್ಲೋಸಿನ್‌ನ ಪರಿಣಾಮಗಳನ್ನು ಪರಿಶೀಲಿಸಲಾಗಿದ್ದು, […]