ನರನು ಕೊಲ್ಲಲು, ಹರನೂ ಕಾಯಲಾರನು

ವಯನಾಡಿನ ಮನುಷ್ಯ ನಿರ್ಮಿತ ಭೂಕುಸಿತದಲ್ಲಿ 231 ಮಂದಿ ಮೃತಪಟ್ಟಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ (ಆಗಸ್ಟ್‌ 13ರ ಮಾಹಿತಿ). ಈ ಭೀಕರ ದುರಂತದ ಬಳಿಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆರು ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಪರ್ವತ ಶ್ರೇಣಿ ಈ ರಾಜ್ಯಗಳ ಜೀವದಾಯಿಯಾಗಿದ್ದರೂ, ತೀವ್ರ ಶೋಷಣೆಗೆ ಒಳಗಾಗಿದ್ದು, ಕೆಲವು ವರ್ಷಗಳಿಂದ ಉಗ್ರವಾಗಿ ಪ್ರತಿಕ್ರಿಯಿಸುತ್ತಿದೆ. ಪ್ರೊ. ಮಾಧವ ಗಾಡ್ಗೀಳ್‌ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನೀಡಿದ್ದ ಅತ್ಯಂತ ನಿಖರ ಹಾಗೂ ವೈಜ್ಞಾನಿಕವಾಗಿ ಪರಿಪೂರ್ಣವಾಗಿದ್ದ ವರದಿಯನ್ನು ಜನರ […]

ಯುರೋಪಿನಲ್ಲಿ ಬಲಪಂಥೀಯರ ಪ್ರಾಬಲ್ಯ ಹೆಚ್ಚಳ

ಯುರೋ 2024 ಫುಟ್ಬಾಲ್‌ ಟೂರ್ನಿ ಆರಂಭಕ್ಕೆ ಮುನ್ನ ಫ್ರಾನ್ಸ್‌ ತಂಡದ ನಾಯಕ ಕೈಲಿಯನ್‌ ಎಂಬಾಪ್ಪೆ ಪತ್ರಿಕಾಗೋಷ್ಟಿಯಲ್ಲಿ, ʻತೀವ್ರವಾದಿಗಳು ಅಧಿಕಾರದ ಹೊಸ್ತಿಲಲ್ಲಿ ಇದ್ದಾರೆ. ನನ್ನ ಮೌಲ್ಯ ಅಥವಾ ನಮ್ಮ ಮೌಲ್ಯ ಗಳಿಗೆ ಹೊಂದಿಕೆಯಾಗದ ದೇಶವನ್ನು ಪ್ರತಿನಿಧಿಸಲು ನಾನು ಇಚ್ಛಿಸುವುದಿಲ್ಲ,ʼ ಎಂದು ಹೇಳಿದ್ದರು. ಇನ್ನೊಂದು ಹೆಜ್ಜೆ ಮುಂದೆ ಹೋದ ಜೊತೆ ಆಟಗಾರ ಮಾರ್ಕಸ್‌ ತುರಂ, ʻಫ್ರೆಂಚರು ಲಿ ಪೆನ್‌ ಅವರ ನ್ಯಾಷನಲ್‌ ರ್ಯಾಲಿ(ಎನ್‌ಆರ್)ಪಕ್ಷ ಬಲಗೊಳ್ಳದಂತೆ ನೋಡಿಕೊಳ್ಳಬೇಕು,ʼ ಎಂದು ಒತ್ತಾಯಿಸಿದ್ದರು. ನಮ್ಮಲ್ಲಿ ಒಬ್ಬನೇ ಒಬ್ಬ ಕ್ರೀಡಾಪಟು ಇಂಥ ಹೇಳಿಕೆ ನೀಡಿದ್ದನ್ನು, ಸರ್ವಾಧಿಕಾರಿ […]

ಬಲಪಂಥೀಯತೆ: ಒಂದು ಜಾಗತಿಕ ಪಿಡುಗು

ಇಂಡಿಯ ಸೇರಿದಂತೆ ಪ್ರಜಾಪ್ರಭುತ್ವವಿರುವ ದೇಶಗಳಿಗೆ ೨೦೨೪ ಸಂಕಷ್ಟದ ವರ್ಷವಾಗಲಿದೆಯೇ? ಜಗತ್ತಿನ ದೊಡ್ಡ ಪ್ರಜಾಪ್ರಭುತ್ವಗಳಾದ ಇಂಡಿಯ, ಅಮೆರಿಕ, ಬ್ರಿಟನ್‌, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಥೈವಾನ್‌ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆ ನಡೆಯಬೇಕಿದೆ. ಚುನಾವಣೆಗಳು ಆವರ್ತೀಯ ಪ್ರಕ್ರಿಯೆ ಎಂದು ಹೇಳಿಬಿಡಬಹುದು. ಆದರೆ, ಅಂದಾಜು 2 ಶತಕೋಟಿ ಜನರು ಪ್ರಜ್ಞಾಪೂರ್ವಕವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಈ ಆಯ್ಕೆಗಳು ದೇಶದ-ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತವೆಯೇ ಎನ್ನುವುದು ಪ್ರಶ್ನೆ. ಮತ ಚಲಾವಣೆಯಂಥ ಸಹಜ ಪ್ರಕ್ರಿಯೆಯ ಫಲಿತಾಂಶಗಳು ತಾರ್ಕಿಕವಾಗಿರುತ್ತವೆ ಎಂದು ಭಾವಿಸಬೇಕಿಲ್ಲ. ಅಮೆರಿಕದ ಪ್ರಜಾಸತ್ತೆ […]

ನೋರಾ

– ವಿಜಯಲಕ್ಷ್ಮೀ ದಾನರಡ್ಡಿ   “ನಿನ್ನಲ್ಲಿ ಶಕ್ತಿ ಇಲ್ಲ ಎಂದು ಹೇಳಲಿಲ್ಲ. ಬರಹವನ್ನು ಗಂಭೀರವಾಗಿ ತೆಗೆದುಕೊಳ್ಳಲು ಸೂಚಿಸಿದೆ. ಒಳ್ಳೆಯ ಬರಹಕ್ಕೆ ಹೆಚ್ಚು ಶ್ರಮ ಹಾಕಬೇಕು” ಇವೇ ಸಾಲುಗಳು ಹಗಲು-ರಾತ್ರಿಯೆನ್ನದೆ ನನ್ನನ್ನು ಕಾಡಿ ನಿದ್ರಾಹೀನಳನ್ನಾಗಿ ಮಾಡಿದ್ದವು. ನಾನು ಮಾಡಿದ ಬರಹದ ಬಗ್ಗೆ ನನಗೇ ತೃಪ್ತಿ ಇಲ್ಲವೆಂದಾಗ ನನ್ನ ಗುರುಗಳಿಂದ ಅದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ! ಯೋಚಿಸುತ್ತಲೇ ಮನಸ್ಸಿಲ್ಲದ ಮನಸ್ಸಿನಿಂದ ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ಊಟಕ್ಕೆ ಕುಳಿತೆನು. ನನ್ನ ಗುರುಗಳು ನನ್ನ ಮೇಲೆ ಅಷ್ಟು ನಂಬಿಕೆ ಇಟ್ಟು ನೀಡಿದ ಒಂದೇ […]

ಡಿಜಿಟಲ್‌ ನಿರಂಕುಶ ರಾಜ್ಯಕ್ಕೆ ಮುನ್ನುಡಿ

ಡಿಜಿಟಲ್‌ ನಿರಂಕುಶ ರಾಜ್ಯಕ್ಕೆ ಮುನ್ನುಡಿ ಚಳಿಗಾಲದ ಅಧಿವೇಶನದ ಕಡೆಯ ದಿನ ಪ್ರತಿಪಕ್ಷಗಳ ಗೈರುಹಾಜರಿಯಲ್ಲಿ ಟೆಲಿಕಾಂ ಮಸೂದೆ ೨೦೨೩ ಅಂಗೀಕಾರಗೊಂಡಿತು. ಬಿಜೆಪಿ ಸಂಸದ ಸುಶೀಲ್‌ ಮೋದಿ, ರಾಷ್ಟ್ರೀಯ ಭದ್ರತೆಗೆ ಮತ್ತು ಸ್ವಾಭಾವಿಕ ಅವಘಡಗಳ ಸಂದರ್ಭದಲ್ಲಿ ಟೆಲಿಕಾಂ ಸೇವೆಗಳನ್ನು ಸರ್ಕಾರ ತಾತ್ಕಾಲಿಕವಾಗಿ ಸುಪರ್ದಿಗೆ ಪಡೆಯುವುದನ್ನು ಮತ್ತು ಉಪಗ್ರಹ ತರಂಗಾಂತರವನ್ನು ಹರಾಜು ಮಾಡದೆ ವಿತರಿಸುವುದನ್ನು ಸಮರ್ಥಿಸಿಕೊಂಡರು. ಟೆಲಿಕಾಂ ಟವರ್‌ಗಳ ಸಂಖ್ಯೆ ೨೦೧೪ರಲ್ಲಿ ೬ ಲಕ್ಷ ಇದ್ದದ್ದು ೨೫ ಲಕ್ಷಕ್ಕೆ ಹಾಗೂ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಸಂಖ್ಯೆ ೧.೫ ಕೋಟಿಯಿಂದ ೮೫ ಕೋಟಿಗೆ ಹೆಚ್ಚಳಗೊಂಡಿದೆ […]

ಭ್ರಷ್ಟಾಚಾರದ ಅನಿರ್ವಾಯತೆ-ಶಿವ್‌ ವಿಶ್ವನಾಥನ್‌ ಅನುವಾದ:ಶಶಿಧರ ಡೋಂಗ್ರೆ

ಭ್ರಷ್ಟಾಚಾರದ ಅನಿವಾರ್ಯತೆ ಮೂಲ: ಶಿವ್ ವಿಶ್ವನಾಥನ್ ಅನುವಾದ: ಶಶಿಧರ ಡೋಂಗ್ರೆ ಭ್ರಷ್ಟಾಚಾರದ ಬಗೆಗಿನ ನನ್ನ ನಿಲುವು ವೆಬರ್ ನಂತರದಲ್ಲಿ ಚಾಲ್ತಿಯಲ್ಲಿರುವ `ಆಧುನಿಕತೆ ಎಂದರೆ ಭ್ರಷ್ಟಾಚಾರವಿಲ್ಲದಿರುವುದು’ ಎಂಬ ಕಲ್ಪನೆಗೆ ಸವಾಲು ಎಸೆಯುವಂಥದ್ದು. ಆಧುನಿಕತೆಯ ಬಗೆಗಿನ ಪಾಶ್ಚಿಮಾತ್ಯ ಸಿದ್ಧಾಂತದ ಪ್ರಕಾರ, ಆಧುನಿಕ ಮತ್ತು ಹಿಂದಿನ ಕಾಲಗಳು ಒಂದಕ್ಕೆ ಇನ್ನೊಂದು ಹೆಣೆದುಕೊಂಡಿರದೆ, ಪ್ರತ್ಯೇಕವಾಗಿರುತ್ತದೆ. ಆದರೆ, ನಮ್ಮ ಸಮಾಜದಲ್ಲಿ ಹೊಸತು ಮತ್ತು ಹಳೆಯದೆರಡೂ ಒಟ್ಟಿಗೆ ಇದ್ದು ಒಂದಕ್ಕೊAದು ಬೆಸೆದುಕೊಂಡಿರುತ್ತದೆ ಮತ್ತು ಭ್ರಷ್ಟಾಚಾರವೆಂಬುದು ಈ ಹೆಣಿಗೆಯ ಒಂದು ಸೂಚಿಯಾಗಿದೆ. ಪಶ್ಚಿಮ ಕೂಡ ಸಂಪೂರ್ಣವಾಗಿ ಆಧುನಿಕವಾಗಿಲ್ಲ […]

ಕಾರಣವಿಲ್ಲದ ಭಯ ಭೀತಿಗಳು

ಆಂಟನ್ ಚೆಕಾವ್ ಅನು: ನಾಗರೇಖಾ ಗಾಂವಕರ ಈ ಜಗದಲ್ಲಿ ಇಷ್ಟು ವರ್ಷಗಳ ಬದುಕಿನುದ್ದಕ್ಕೂ ನಾನು ಬರಿಯ ಮೂರು ಬಾರಿ ಮಾತ್ರ ಭಯಗೊಂಡಿದ್ದೆ. ಮೊದಮೊದಲ ಭಯ ಹೇಗಿತ್ತೆಂದರೆ ಅದು ನನ್ನ ರೋಮಗಳು ನೆಟ್ಟಗಾಗುವಂತೆ ಮಾಡಿತ್ತು. ಇಡೀ ದೇಹವನ್ನು ಥರಥರ ಕಂಪಿಸುವಂತೆ ಮಾಡಿತ್ತು. ಅದು ತೀರಾ ಕ್ಷುಲಕವಾದ ಭಯ. ಆದರೆ ಒಂದು ಬಗೆಯಲ್ಲಿ ವಿಚಿತ್ರವಾಗಿತ್ತು. ಜುಲೈ ತಿಂಗಳ ಒಂದು ಸಂಜೆ ಮಾಡಲು ಏನೂ ಕೆಲಸವಿಲ್ಲದ್ದರಿಂದ ಪತ್ರಿಕೆ ತರೋಣವೆಂದು ನಾನು ನಿಲ್ದಾಣಕ್ಕೆ ಗಾಡಿ ಚಲಾಯಿಸಿದೆ. ಜುಲೈ ತಿಂಗಳ ಒಂದೇ ನಮೂನೆಯ ಸಂಜೆಗಳಂತೆ […]

ಉರಿವ ಜಾತ್ರೆ

ಪತ್ರಕರ್ತ ವೆಂಕಟ್ರಮಣ ಗೌಡರ ಕವನ ಸಂಕಲನ. ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್‌ ಈ ಮೂರೂ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕೆಲ ಕಾಲ ʻಹಂಗಾಮʼ ಸಾಹಿತ್ಯ ಮಾಸಿಕ ಪತ್ರಿಕೆಯನ್ನು ಸಂಪಾದಿಸಿದ್ದರು. ಅದು ಈಗ ಡಿಜಿಟಲ್‌ ಮಾಸಿಕವಾಗಿ ಪ್ರಕಟಗೊಳ್ಳುತ್ತಿದೆ. ʻಪಾಂಗುʼ ಕವನಸಂಕಲನ, ʻಈ ಸರ್ತಿಯ ಸುಗ್ಗಿʼ ಕಥಾ ಸಂಕಲನ ಮತ್ತು ʻತರುವಾಯʼ ಕಿರು ಕಾದಂಬರಿ ಅವರ ಪ್ರಕಟಿತ ಪುಸ್ತಕಗಳು.  

ಸತ್ಯಜಿತ್‌ ರೇ-ವೈದೃಶ್ಯ, ಲಯ ಮತ್ತು ಗತಿ

ಜಗತ್ತಿನ ೧೦ ಅತಿ ಮುಖ್ಯ ಸಿನೆಮಾ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್‌ ರೇ ಕುರಿತ ಲೇಖನಗಳ ಗುಚ್ಚ. ರಾಘವನ್‌ ಚಕ್ರವರ್ತಿ, ಅರ್ಪಣ ಎಚ್.‌ ಎಸ್.‌,ಎಂ.ಕೆ. ರಾಘವೇಂದ್ರ, ಪ್ರೊ.ಶಿವಲಿಂಗಸ್ವಾಮಿ, ಗೌತಮ್‌ ಜ್ಯೋತ್ಸ್ನ, ಬಾಬು ಸುಬ್ರಮಣಿಯನ್‌, ಪರಮೇಶ್ವರ ಗುರುಸ್ವಾಮಿ, ಸಿ.ಎಸ್.‌ ವೆಂಕಿಟೇಶ್ವರನ್‌, ಸುಹ್ರಿದ್‌ ಶಂಕರ್‌ ಚಟ್ಟೋಪಾಧ್ಯಾಯ, ಆದಿತ್ಯ ಶ್ರೀಕೃಷ್ಣ, ಮೇರಿ ಸೇಟನ್‌, ಶ್ರುತಿ ತಲನೇರಿ, ಫಿರೋಜ್‌ ರಂಗೂನ್ವಾಲಾ, ಮುರುಳೀಧರ ಖಜಾನೆ, ಆಂಡ್ರ್ಯೂ ರಾಬಿನ್ಸನ್‌, ಚಿದಾನಂದ ದಾಸ್‌ ಗುಪ್ತಾ ಮತ್ತಿತರ ಲೇಖನಗಳನ್ನು ಒಳಗೊಂಡಿದೆ. ಸಂಚಿಕೆಯನ್ನು ಡಾ. ಹರೀಶ್‌ ಎಂ.ಜಿ. ಸಂಪಾದಿಸಿದ್ದಾರೆ.

Back To Top