ಪಂಜಾಬಿನ ಹಳೆಯ ಗಾಯಗಳನ್ನು ತೆರೆದ ʻಸಟ್ಲಜ್ʼ
ಜುಲೈ 5,2026ರಂದು ಜೀ5 ತನ್ನ ಒಟಿಟಿ ವೇದಿಕೆಯಿಂದ ʻಸಟ್ಲಜ್ʼ ಚಲನಚಿತ್ರವನ್ನು ತೆಗೆದುಹಾಕಿತು. ಸರ್ಕಾರ ಹೇಳಿದ್ದರಿಂದ ತೆಗೆಯಲಾಗಿದೆ ಎಂದು ಚಿತ್ರನಿರ್ಮಾಪಕರು ಹೇಳಿದರು. ಕೆಲವೊಮ್ಮೆ ಚಲನಚಿತ್ರಗಳು ಸುದ್ದಿಯಾಗುವುದಿಲ್ಲ; ಬದಲಾಗಿ, ಅವುಗಳ ಹಿಂದಿನ ರಾಜಕೀಯ, ಜನರ ಪೂರ್ವಗ್ರಹಗಳು ಮತ್ತು ಸಮಾಜದಲ್ಲಿನ ಗಾಯಗಳನ್ನು ಕೆದಕುವ ಮೂಲಕ ಸುದ್ದಿಯಾಗುತ್ತವೆ. ಸಿದ್ಧಾಂತ/ಹಿಂಸೆ/ನಾಯಕನನ್ನು ವೈಭವೀಕರಿಸುವ ಸಾವಿರಾರು ಸಿನೆಮಾಗಳು ಬಂದಿವೆ; ಮುಂದೆಯೂ ಬರಲಿವೆ. ಆದರೆ, ʻಸಟ್ಲಜ್ʼನಂಥ ಚಿತ್ರಗಳು ಸಾಮಾಜಿಕ/ರಾಜಕೀಯ ಕಾರಣದಿಂದಾಗಿ ಮುಖ್ಯವಾಗುತ್ತವೆ. ಸಟ್ಲಜ್ ಪ್ರದರ್ಶನ ಜುಲೈ 3ರಿಂದ ಆರಂಭಗೊಂಡಿತು. ಹನಿ ಟ್ರೆಹಾನ್ ನಿರ್ದೇಶನ, ಆರ್‌ಎಸ್‌ವಿಪಿ ಮೂವೀಸ್ ಮತ್ತು ಮ್ಯಾಕ್‌ಗಫಿನ್ […]
ʻಸಂವಿಧಾನ ಹತ್ಯಾ ದಿವಸ್ʼ ಆಚರಣೆಯಿಂದ ವಾಸ್ತವ ಬದಲಾಗುವುದಿಲ್ಲ
ತುರ್ತು ಪರಿಸ್ಥಿತಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೂನ್ 25ನ್ನು ʻಸಂವಿಧಾನ ಹತ್ಯಾ ದಿವಸ್ʼ ಎಂದು ಆಚರಿಸುವುದಾಗಿ ಹೇಳಿಕೊಂಡಿದೆ. ಕಾಂಗ್ರೆಸ್‌ನ್ನು ಹೀಗಳೆಯುವ ಯಾವುದೇ ಅವಕಾಶವನ್ನು ಬಿಜೆಪಿ ಬಿಡುವುದಿಲ್ಲ; ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಈ ಆಡಳಿತದಲ್ಲಿ ನಿಂತಿದೆಯೇ: ಇಲ್ಲ. ಇನ್ನಷ್ಟು ಬಿರುಸಿನಿಂದ ಮುನ್ನಡೆದಿದೆ. ಸಿನಿಮಾ ಸೇರಿದಂತೆ ಪ್ರದರ್ಶನ ಕಲೆಗಳ ಮೇಲೆ ಸೆನ್ಸಾರ್‌ನ ಕತ್ತಿ ನೇತಾಡುತ್ತಲೇ ಇದೆ. ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಸ್ಟ್ರೀಮಿಂಗ್ ಕಾರ್ಯಕ್ರಮಗಳಿಗೆ ಇದು ಕರಾಳ ಯುಗ. ಇದಕ್ಕೆ ಇತ್ತೀಚಿನ ಉದಾಹರಣೆ- ಜಾನಕಿ ವಿ/ಎಸ್ […]

