ನೂತನ ಭೂಮಿ ನಿಯಂತ್ರಣ: ಲಕ್ಷದ್ವೀಪದಲ್ಲಿ ಭುಗಿಲೆದ್ದ ಆಕ್ರೋಶ
ಹಚ್ಚ ಹಸಿರು ವಾತಾವರಣವಿರುವ ಲಕ್ಷದ್ವೀಪದಲ್ಲಿ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಭೂಮಿ ನಿಯಂತ್ರಣ ನಿಯಮಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ. ಭಾರತ ಸೇರಿದಂತೆ ಎಲ್ಲೆಡೆಯಿಂದ ದ್ವೀಪಕ್ಕೆ ಆಗಮಿಸುವವರ ಮೇಲೆ ಕಡ್ಡಾಯ ಕ್ವಾರಂಟೈನ್ ಈ ಮೊದಲು ಜಾರಿಯಲ್ಲಿತ್ತು. ಆದರೆ, ನೂತನವಾಘಿ ನೇಮಕಗೊಂಡ ಆಡಳಿತಗಾರ ಪ್ರಫುಲ್ ಖೋಡಾ ಪಟೇಲ್ ಈ ನಿಯಮವನ್ನು ತೆಗೆದುಹಾಕಿದ್ದರಿಂದ, ಒಂದೇ ಒಂದು ಕೋವಿಡ್ ಪ್ರಕರಣಗಳು ಇಲ್ಲದಿದ್ದ ದ್ವೀಪದಲ್ಲಿ ಮೇ 24ರಂದು 6,847 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಜನವಸತಿ ಇರುವ ದ್ವೀಪಗಳಲ್ಲಿ ಎರಡು ತಿಂಗಳು ಲಾಕ್‍ಡೌನ್ ಘೋಷಿಸಲಾಗಿದೆ. ಇದನ್ನು […]