ʻಮರಳಿ ಕೃಷಿಗೆʼ ಸಂಭ್ರಮಿಸುವ ಸಂಗತಿಯಲ್ಲ
ಕೋವಿಡ್ ನಂತರ ನಡೆದ ಉದ್ಯೋಗ ನಷ್ಟ ಪರ್ವದಲ್ಲಿ ಕೆಲಸ ಕಳೆದುಕೊಂಡವರು ಹಳ್ಳಿಗೆ ವಾಪಸಾಗಿ, ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ನಿದರ್ಶನಗಳು ವರದಿಯಾಗಿವೆ. ದೇಶದಲ್ಲಿ ಶೇ.86ರಷ್ಟು ಸಣ್ಣ ಮತ್ತು ಅಂಚಿನ ಕೃಷಿಕರಿದ್ದು, ಇವರು 2 ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಪ್ರತಿವರ್ಷ 8ರಿಂದ 15 ದಶಲಕ್ಷ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. 25 ವರ್ಷಕ್ಕಿಂತ ಕೆಳಗಿನ ಶೇ.40ರಷ್ಟು ಪದವೀದರರು ನಿರುದ್ಯೋಗಿಗಳಾಗಿದ್ದಾರೆ. ಸಂಕಷ್ಟ ಕಾಲದಲ್ಲಿ ಗ್ರಾಮೀಣ ಜನರಿಗೆ ನೆರವಾಗುತ್ತಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ತಿರುಚಲಾಗಿದೆ. ಇಂಥ ಸನ್ನಿವೇಶದಲ್ಲಿ ʻಮರಳಿ ಕೃಷಿಗೆʼ ಸಂಭ್ರಮಿಸುವ […]
ಒಕ್ಕೂಟ ತತ್ವ, ಹಣಕಾಸು ಆಯೋಗ ಹಾಗೂ ಜಿಎಸ್‌ಟಿ ಪಾಲಿಗೆ ಹಕ್ಕೊತ್ತಾಯ
ಸೆಪ್ಟೆಂಬರ್ 12ರಂದು ಕೇರಳ ಸರ್ಕಾರವು ಬಿಜೆಪಿಯೇತರ ಸರ್ಕಾರಗಳ ವಿತ್ತ ಸಚಿವರ ಶೃಂಗಸಭೆಯೊಂದನ್ನು ಆಯೋಜಿಸಿತ್ತು. ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳು ಮತ್ತು 16ನೇ ಹಣಕಾಸು ಆಯೋಗದ ಶಿಫಾರಸು ಕುರಿತು ಚರ್ಚಿಸುವುದು ಉದ್ದೇಶ. ಆನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ʻಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಕುರಿತು ಸಿಎಂ ಮಟ್ಟದಲ್ಲಿ ಚರ್ಚಿಸಿ, ಒಟ್ಟಾರೆ ಪ್ರಸ್ತಾವವೊಂದನ್ನು 16ನೇ ಹಣಕಾಸು ಆಯೋಗಕ್ಕೆ ನೀಡುವʼ ಮಾತನಾಡಿದ್ದರು. ಈ ಎರಡೂ ಬಹಳ […]

