ವಾಯುಭಾರ ಕುಸಿತ: ಸಂಕಷ್ಟಕ್ಕೆ ಸಿಲುಕಲಿರುವ ರಾಜ್ಯ
ರಾಜ್ಯದ ಅನೇಕ ಜಿಲ್ಲೆಗಳು ಮಹಾಪೂರದಿಂದ ಸಂಕಷ್ಟಕ್ಕೆ ಸಿಲುಕಿವೆ. ಅದರಿಂದ ಸುಧಾರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತಗೊಂಡಿದ್ದು, ಮತ್ತೆ ಮಹಾಪೂರದ ಸಾಧ್ಯತೆ ಹೆಚ್ಚಳಗೊಂಡಿದೆ. ‘ಲಾ ನಿನಾ’ ಪರಿಣಾಮದಿಂದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ೧೨ ಬಾರಿ ವಾಯುಭಾರ ಕುಸಿದಿದೆ. ಇದು ಅತಿ ವಿರಳ ವಿದ್ಯಮಾನ. ಅಕ್ಟೋಬರ್‌ನಲ್ಲೇ ಮೂರು ಬಾರಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳು ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿದ್ದವು. ‘ಲಾ ನಿನಾ’ ಅತ್ಯಂತ ಅಪರೂಪದ ಹವಾಮಾನ ವಿದ್ಯಮಾನ. ಪೆಸಿಫಿಕ್ […]




