ಹಳದಿ ರೋಗಕ್ಕೆ ಹಾಳಾದ ಅಡಿಕೆ ಬೆಳೆಗಾರರ ಬದುಕು
ಸುಳ್ಯ: ಕರಾವಳಿ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಇದೀಗ ವ್ಯಾಪಕವಾಗಿರುವ ಹಳದಿ ಎಲೆ ರೋಗ ಅಡಿಕೆಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ದ.ಕ. ಜಿಲ್ಲೆಯಲ್ಲಿ ಸಾವಿರಾರೂ ಎಕರೆ ಅಡಿಕೆ ಕೃಷಿ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಜಿಲ್ಲೆಯ ಸುಳ್ಯ ತಾಲೂಕೊಂದರಲ್ಲೇ ಸಾವಿರಾರು ಎಕರೆ ಅಡಿಕೆ ಕೃಷಿ ಈ ರೋಗ ಬಾಧೆಯಿಂದ ತತ್ತರಿಸಿದೆ. ಇದರಿಂದ ಸಾವಿರಾರು ಕೃಷಿಕರು ಕಂಗಾಲಾಗಿದ್ದಾರೆ. 25-30 ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಕಾಣಿಸಿಕೊಂಡ ಈ ಹಳದಿ ಎಲೆ […]