ಯಕ್ಷಗಾನ ಪ್ರಿಯರಿಗೆ ಆನ್‌ಲೈನ್ ಸಾಥ್!
ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸಾಲು ಸಾಲು ಯಕ್ಷಗಾನ ಕಾರ್ಯಕ್ರಮಗಳು ಆನ್ಲೈನ್ನಲ್ಲೇ ‘ಲೈವ್’ ಪ್ರದರ್ಶನ ಕಂಡಿವೆ. ವೃತ್ತಿ ಮೇಳಗಳು ತಿರುಗಾಟ ನಿಲ್ಲಿಸಬೇಕಾಗಿ ಬಂದಾಗ ಯಕ್ಷಗಾನ ಪ್ರೇಕ್ಷಕರಿಗೆ ಆಸರೆಯಾಗಿದ್ದು ಆನ್ಲೈನ್. ಬಡಗುತಿಟ್ಟಿನ ಮೊದಲ ಆನ್‌ಲೈನ್ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ ಹೆಗ್ಗಳಿಕೆಯ ಬೆಂಗಳೂರಿನ ‘ಟೀಂ ಉತ್ಸಾಹಿ’, ಒಂದು ಹೆಜ್ಜೆ ಮುಂದೆ ಹೋಗಿ, ಯಕ್ಷಗಾನ ಗುರುಗಳಿಗೆ ಸನ್ಮಾನವನ್ನೂ ಏರ್ಪಡಿಸಿತ್ತು, ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದೆ. ತಿಂಗಳಿಗೆ ಕನಿಷ್ಠ ಎರಡು ಪ್ರದರ್ಶನಗಳನ್ನು ಆನ್ಲೈನ್ನಲ್ಲೇ […]




