ನೋಟವೊಂದೆ ಸಾಕು
ಮಾಧವಿ ಭಂಡಾರಿ ಕೆರೆಕೋಣ ಬಿಸಿಲ ಜಳ ಜಾಸ್ತಿಯಾದಂತೆ ರೈಲಿನ ಹೊರಗಡೆಯಿಂದ ಕಿತ್ತ ಕಣ್ಣನ್ನು ಪುಸ್ತಕದಲ್ಲಿ ನೆಟ್ಟೆ. ಎದುರಿನ ಬರ್ತ್‍ನ ಕಿಟಕಿ ಸೀಟ್ ಖಾಲಿಯಾಗೇ ಇತ್ತು. ಯಾರೋ ಕುಳಿತು ಎದ್ದುದರ ಗುರುತಾಗಿ ಒಂದು ನ್ಯೂಸ್ ಪೇಪರ್ ಅಲ್ಲಿ ಇತ್ತು. ಎತ್ತಿ ಒಗೆಯುವ ಬಸ್ಸಿನಲ್ಲೇ ಓದುವ ನನಗೆ ರೈಲು ಆರಾಮ ಖುರ್ಚಿಯಲ್ಲಿ ಕುಳಿತಂತೆ ಭಾಸವಾಯಿತು. ಓದು ನಿರಾತಂಕವಾಗಿ ಸಾಗಿತು. ಒಂದಿಷ್ಟು ಸಮಯದ ನಂತರ ಧಡಕ್ಕನೆ ಯಾರೋ ಬಂದು ಕುಳಿತ ಸದ್ದು ನನ್ನ ಧ್ಯಾನಸ್ಥ ಓದಿಗೆ ಭಂಗ ತಂದರೂ ಒಂದು ಕ್ಷಣ […]