ವೇಮುಲ, ತಡ್ವಿ, ಸಾಹಿಲ್; ಸಾಂಸ್ಥಿಕ ಹತ್ಯೆಗಳ ಮುಂದುವರಿಕೆ
ಐಐಟಿ ಬಾಂಬೆಯ ಎನರ್ಜಿ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸೆಪ್ಟೆಂಬರ್ 18,2026 ರಂದು ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ತಕ್ಷಣ ಕಣಕ್ಕಿಳಿದ ಕೆಸರು ಎರಚುವ ಪಡೆ, ʻಸಾಹಿಲ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದರುʼ ಎಂದು ಮಿಥ್ಯಾರೋಪ ಹೊರಿಸಿ, ವಿಡಿಯೋ ಬಿಡುಗಡೆ ಮಾಡಿತು. ಅಂಬೇಡ್ಕರ್, ಪೆರಿಯಾರ್, ಫುಲೆ ಸ್ಟಡಿ ಸರ್ಕಲ್ ಪ್ರತಿಭಟನೆ ಹಿನ್ನೆಲೆಯಲ್ಲಿ ಐಐಟಿ ತನ್ನ ಹಿಂದಿನ ಹೇಳಿಕೆ ಹಿಂಪಡೆಯಿತು. ಆದರೆ, ಅಷ್ಟರಲ್ಲಿ ʻಪರೀಕ್ಷೆಯಲ್ಲಿ ನಕಲುʼ ನರೇಟಿವ್ ವ್ಯಾಪಕವಾಗಿ ಹರಡಿತ್ತು. […]
ಮೆಟಾಕ್ಕೆ ಶತ ಕೋಟಿ ದಂಡ: ಸಾಮಾಜಿಕ ಮಾಧ್ಯಮಗಳಿಗೆ ಅಂಕುಶ ಅಗತ್ಯ
ಅಮೆರಿಕದ ಕ್ಯಾಲಿಫೋರ್ನಿಯಾ, ಕೊಲರಾಡೋ, ಕೆಂಟುಕಿ, ನ್ಯೂಜೆರ್ಸಿ ಸೇರಿದಂತೆ 29 ರಾಜ್ಯಗಳು 2023ರಲ್ಲಿ ಮೆಟಾ ವಿರುದ್ಧ ಪ್ರಕರಣ ದಾಖಲಿಸಿದ್ದವು. ನ್ಯಾಯಾಲಯ ಆಗಸ್ಟ್ 26, 2026ರಂದು ನೀಡಿದ ತೀರ್ಪಿನಲ್ಲಿ 47 ರಾಜ್ಯಗಳಿಗೆ 17.1 ಶತಕೋಟಿ ಡಾಲರ್(ಅಂದಾಜು 1,62,757.80 ಕೋಟಿ ರೂ.) ಪರಿಹಾರ ನೀಡಬೇಕೆಂದು ಹೇಳಿದೆ. ಇದೊಂದು ಅವಿಸ್ಮರಣೀಯ ಆದೇಶವಾಗಿದ್ದು, ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಜಗತ್ತಿ ನೆಲ್ಲೆಡೆಯ ದೇಶಗಳಿಗೆ ಮಾರ್ಗದರ್ಶಿ ಸೂತ್ರವೊಂದನ್ನು ನೀಡಿದೆ. ʻಮೆಟಾ ಪೋಷಕರಿಗೆ ಗೊತ್ತಾಗದಂತೆ 13 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ದತ್ತಾಂಶ ಸಂಗ್ರಹಿಸಿದೆ. ಆಮೂಲಕ ಮಕ್ಕಳ ಖಾಸಗಿತನಕ್ಕೆ […]

