ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮರುಪರೀಕ್ಷೆ ನಡೆದಿದೆ. ಸರ್ಕಾರ ಪರೀಕ್ಷೆಗೆ ಮುನ್ನ ಟೆಲಿಗ್ರಾಂಗೆ ತಾತ್ಕಾಲಿಕ ನಿಷೇಧ ಹೇರಿತು; ಆನಂತರ ವಾಟ್ಸ್‌ಆಪ್ ತರಲು ಯೋಜಿಸಿದ್ದ ʻಯೂಸರ್‌ನೇಮ್ʼ ಸೌಲಭ್ಯದ ವಿವರ ನೀಡುವಂತೆ ನೋಟಿಸ್ ನೀಡಿತು. ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ಬೀಸುವ ದೊಣ್ಣೆಯಿಂದ ವಾಟ್ಸ್‌ಆಪ್ ತಪ್ಪಿಸಿಕೊಂಡಿದೆ. ಇಂಥದ್ದೇ ನೋಟಿಸ್ ಮೆಟಾ, ಅರಟ್ಟೈ ಹಾಗೂ ಸಿಗ್ನಲ್‌ಗೂ ರವಾನೆಯಾಗಿದೆ. ದೆಹಲಿ ಹೈಕೋರ್ಟ್ ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದೆ. ಗೋದಿ ಮಾಧ್ಯಮಗಳ ಯುಗದಲ್ಲಿ ಜನಸಾಮಾನ್ಯರು ಸಂವಹನಕ್ಕೆ ಬಳಸುತ್ತಿರುವ ಸಾಮಾಜಿಕ ಮಾಧ್ಯಮಗಳ […]
ಇಂಡಿಗೋ ಪ್ರಕರಣ: ಏಕಸ್ವಾಮ್ಯ, ದ್ವಿಸ್ವಾಮ್ಯದ ವಿಪತ್ತಿನ ನಿದರ್ಶನ
ಇಂಡಿಗೋ ವಿಮಾನಗಳ ರದ್ದುಗೊಳಿಸುವಿಕೆಯಿಂದ ದೇಶದೆಲ್ಲೆಡೆ ಪ್ರಯಾಣಿಕರು ನರಳಿದರು ಮತ್ತು ನರಳುತ್ತಿದ್ದಾರೆ. ಟಿಕೆಟ್ ಮೊತ್ತ ಮರುಪಾವತಿಸುವುದಾಗಿ ಮತ್ತು 10ರಿಂದ 15 ದಿನಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ದೇಶದಲ್ಲಿ ವಿಮಾನದಲ್ಲಿ ಸಂಚರಿಸುವವರ ಪ್ರಮಾಣ ಶೇ.3-4. ಆದ್ದರಿಂದ, ಇದು ಜನಸಾಮಾನ್ಯರ ಸಮಸ್ಯೆಯಲ್ಲ; ನಾವು ತಲೆ ಕೆಡಿಸಿ ಕೊಳ್ಳಬೇಕಿಲ್ಲ ಎಂದುಕೊಳ್ಳಬಾರದು. ಏಕೆಂದರೆ, ಈ ಪ್ರಕರಣ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ-ದ್ವಿಸ್ವಾಮ್ಯದಿಂದ ಆಗಬಹುದಾದ ವಿಪತ್ತಿಗೆ ಹಿಡಿದ ಕನ್ನಡಿ. 2007ರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡೈರೆಕ್ಟೊರೇಟ್ ಜನರಲ್ ಆಫ್ […]

