ಪಾತಾಳಕ್ಕಿಳಿದ ರೂಪಾಯಿ ಮತ್ತು ಮೂರು ಭಾರತಗಳು
ಸಂಕ್ರಾತಿ ಹಿಂದಿನ ದಿನ ರೂಪಾಯಿ 66 ಪೈಸೆ ಕುಸಿತ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ; ಡಾಲರ್‌ಗೆ 86.79 ರೂ. ಆಗಿದೆ. ಕಳೆದ 2 ವರ್ಷದಲ್ಲಿ ಕಂಡ ತೀವ್ರ ಕುಸಿತ ಇದಾಗಿದ್ದು, 2024ರಲ್ಲಿ ರೂಪಾಯಿ ಬೆಲೆ ಶೇ.3ರಷ್ಟು ಕುಸಿಯಿತು; ಡಾಲರ್ ಎದುರು ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ. ಇದು ಆರಂಭಗೊಂಡಿದ್ದು-ಅಮೆರಿಕದ ಫೆಡರಲ್ ಬ್ಯಾಂಕ್ ಸೆಪ್ಟೆಂಬರ್ 18, 2024ರಂದು ಬಡ್ಡಿಯನ್ನು 50 ಬೇಸ್ ಪಾಯಿಂಟ್(ಬಿಪಿ ಎಸ್)ಗಳಿಂದ ಕಡಿತಗೊಳಿಸಿದ ಬಳಿಕ. ಆನಂತರ ನವೆಂಬರ್ 17 ಹಾಗೂ ಡಿಸೆಂಬರ್ 18ರಂದು ಮತ್ತೊಮ್ಮೆ 25 […]