Author: Rutha Editor

Journalist,Translator,avid bibliophile

ಭೂಮಿ, ಸಾಗರದಲ್ಲೂ ತುಂಬಿರುವ ಪ್ಲಾಸ್ಟಿಕ್‌ ತ್ಯಾಜ್ಯ

ಭೂಮಿ, ತಾಯಿಮಾಸು(ಸೆತ್ತೆ)ಯಿಂದ ಹಿಡಿದು ಮೀನು ಸೇರಿದಂತೆ ಸಮುದ್ರದ ಜೀವಿಗಳಲ್ಲೂ ಇರುವ ವಸ್ತು ಒಂದಿದೆ: ಅದು ಪ್ಲಾಸ್ಟಿಕ್‌. ತಥಾಗಥನು ಹೇಳಿದಂತೆ, ಸಾವಿಲ್ಲದ ಮನೆಯಿಂದ ಸಾಸಿವೆ ತರಬಹುದೇನೋ; ಆದರೆ, ಪ್ಲಾಸ್ಟಿಕ್‌ ಮಾಲಿನ್ಯ ಇಲ್ಲದ ದೇಶ, ವಸ್ತು-ಜೀವಿ ಇರಲಾರದು. ಎಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಯಾಗುತ್ತಿದೆ? ಪರಿಸರದಲ್ಲಿ ಅತಿ ಹೆಚ್ಚು ಕಾಣಸಿಗುವ ಪ್ಲಾಸ್ಟಿಕ್‌ ತ್ಯಾಜ್ಯ ಯಾವುದು? ಪ್ಲಾಸ್ಟಿಕ್‌ ತ್ಯಾಜ್ಯ ಮಾರಕವಾಗಿದ್ದರೂ, ಕೆಲವು ದೇಶಗಳು ಅದರ ಉತ್ಪಾದನೆಯನ್ನು ನಿಯಂತ್ರಿಸಲು ಏಕೆ ಹಿಂಜರಿಯುತ್ತಿವೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ವಿಶ್ವಸಂಸ್ಥೆ ನೇತೃತ್ವದ […]

ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕನ್ನಡ ವಿದ್ವಾಂಸ, ಭಾಷಾ ವಿಜ್ಞಾನಿ, ವಿಮರ್ಶಕ ಪ್ರೊ.ಕೆವಿ ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಅವರ ‘ನುಡಿಗಳ ಅಳಿವು’ ಎಂಬ ಸಾಹಿತ್ಯ ವಿಮರ್ಶೆ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ 1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಕೆವಿ ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓಎಲ್ ನಾಗಭೂಷಣಸ್ವಾಮಿ, ಡಾ.ಹಳೆಮನಿ ನಾಗರಾಜ್ ಮತ್ತು […]

ಬಾಕು ಹವಾಮಾನ ಶೃಂಗ: ಕೈ ತಪ್ಪಿದ ಇನ್ನೊಂದು ಅವಕಾಶ

ತಮಿಳುನಾಡಿನಲ್ಲಿ ಜೀವ-ಆಸ್ತಿ ನಷ್ಟಕ್ಕೆ ಕಾರಣವಾದ ಫೆಂಜಲ್‌, ರಚ್ಚೆ ಹಿಡಿದ ಮಗುವಿನಂತೆ ಬೆಂಗಳೂರನ್ನೂ ಬಿಟ್ಟೂ ಬಿಡದೆ ಕಾಡಿತು. ಇದೇ ಹೊತ್ತಿನಲ್ಲಿ ರಾಷ್ಟ್ರಧಾನಿ ದಿಲ್ಲಿಯಲ್ಲಿ ಹೊಂಜು ಒಂದು ವಾರ್ಷಿಕ ಕಾರ್ಯಕ್ರಮದಂತೆ ಜನರ ಜೀವ ಹಿಂಡುತ್ತಿದೆ. ಹವಾಮಾನ ಬದಲಾವಣೆಯಿಂದ ಚಂಡಮಾರುತ, ಭೂಕುಸಿತದಂಥ ಪ್ರಾಕೃತಿಕ ಅವಘಡಗಳ ತೀವ್ರತೆ ಮತ್ತು ಸಂಭವನೀಯತೆ ಎರಡೂ ಹೆಚ್ಚುತ್ತಿದೆ. ಈ ಸಂಬಂಧ ಚರ್ಚಿಸಲು ಅಜರ್‌ಬೈಜಾನಿನ ಬಾಕುವಿನಲ್ಲಿ ನಡೆದ 29ನೇ ಹವಾಮಾನ ಶೃಂಗಸಭೆ ಒಂದರ್ಥದಲ್ಲಿ ಟುಸ್‌ ಎಂದಿದೆ. ರಿಯೋ ಡಿಜನೈರೋನ ಮೊದಲ ಶೃಂಗದಿಂದ ಹಿಡಿದು ಬಾಕು ಶೃಂಗದವರೆಗಿನ ಅವಧಿಯಲ್ಲಿ ಜಗತ್ತಿನ […]

ನಮ್ಮ ಆಯ್ಕೆಗಳ ಮೂಲಕ ಸಂವಿಧಾನವನ್ನು, ಅದರ ಮುಂಗಾಣ್ಕೆಯನ್ನು ಹಾಳುಗೆಡವಿದ್ದೇವೆ

Indians today are governed by 2 different ideologies. Their political ideal set in the preamble of the Constitution affirms a life of liberty, equality and fraternity. Their social ideal, embodied in their religion denies them……I like the religion that teaches liberty, equality anf fraternity. -B. R. Ambedkar ನವೆಂಬರ್‌ 26ಕ್ಕೆ ಸಂವಿಧಾನ ತನ್ನ 75 ವರ್ಷಗಳನ್ನು ಪೂರೈಸಿದೆ. ಅಮೃತ […]

ಟ್ರಂಪ್‌ 2.0 : ಮಾಗಾದ ಮುನ್ನಡೆ ಮತ್ತು ವಲಸೆ ಪ್ರಶ್ನೆ

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಮತ್ತೆ ವಾಪಸಾಗಿದ್ದಾರೆ. ಅಮೆರಿಕದ ರಾಜಕೀಯದಲ್ಲಿ ನಗಣ್ಯ ಎಂದು ಪರಿಗಣಿಸಿದ್ದ ರಾಜಕೀಯ ಚಳವಳಿಯೊಂದು ಟ್ರಂಪ್‌ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದೇ ʻಮಾಗಾʼ(ಮೇಕ್‌ ಅಮೆರಿಕ ಗ್ರೇಟ್‌ ಎಗೇನ್, ಎಂಎಜಿಎ). ಅಮೆರಿಕದ 40ನೇ ಅಧ್ಷಕ್ಷ ರೊನಾಲ್ಡ್‌ ರೇಗನ್‌ ʻಲೆಟ್ಸ್‌ ಮೇಕ್‌ ಅಮೆರಿಕ ಗ್ರೇಟ್‌ ಎಗೇನ್‌ʼ ಘೋಷಣೆಯನ್ನು ಬಳಸಿದ ಮೊದಲಿಗರು(1981-89). ಟ್ರಂಪ್‌ ಪ್ರಕಾರ, ಅವರನ್ನು ಹೊರತುಪಡಿಸಿದರೆ, ರೇಗನ್‌ ಅಮೆರಿಕದ ಅತ್ಯುತ್ತಮ ಅಧ್ಯಕ್ಷರಲ್ಲಿ ಕೊನೆಯವರು. ಮಾಗಾದಂಥ ಚಳವಳಿಗಳಿಗೆ ಹಲವು ಪೂರ್ವನಿದರ್ಶನ ಮತ್ತು ಪರ್ಯಾಯಗಳಿದ್ದರೂ, ಅಮೆರಿಕದಲ್ಲಿ ಮಾಗಾದ ಮುನ್ನಡೆಗೆ […]

ಉಣ್ಣುವ ಅನ್ನ ವಿಷವಾದರೆ, ಕಾಯುವವರು ಯಾರು?

ಮಕ್ಕಳು ಸೇವಿಸುವ ಏಕದಳ ಧಾನ್ಯ(ಸಿರಿಯಲ್‌) ಆಹಾರದಲ್ಲಿ ಅಧಿಕ ಸಕ್ಕರೆ, ಔಷಧಗಳಲ್ಲಿ ವಿಷ ವಸ್ತು, ಸಂಬಾರ ಪದಾರ್ಥದಲ್ಲಿ ಕೀಟನಾಶಕ, ಪೊಟ್ಟಣ ಕಟ್ಟಿದ ಆಹಾರದಲ್ಲಿ ಜಿರಲೆ…… ಇತ್ಯಾದಿ ಸರ್ವೇಸಾಮಾನ್ಯವಾಗಿದೆ. ಆಹಾರ ಸುರಕ್ಷತೆ ಯಲ್ಲಿ ದೇಶ ಏಕೆ ವಿಫಲವಾಗುತ್ತಿದೆ? ಮಕ್ಕಳು-ಯುವಜನರನ್ನು ರೋಗಿಗಳನ್ನಾಗಿಸುವ ಜಂಕ್‌ ಆಹಾರ ಬಳಕೆಯನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಇದಕ್ಕೆ ದುರ್ಬಲ ನಿಯಂತ್ರಣ ವ್ಯವಸ್ಥೆ, ಅವ್ಯವಸ್ಥಿತ ಮೇಲುಸ್ತುವಾರಿ, ಸಂಬಂಧಿ ಸಿದ ಸಂಸ್ಥೆಗಳ ವೈಫಲ್ಯ, ಬಳಕೆದಾರರಲ್ಲಿ ಅರಿವಿನ ಕೊರತೆ ಹಾಗೂ ಕಾರ್ಪೊರೇಟ್‌ ಸಂಸ್ಥೆಗಳ ದುರಾಸೆ ಸೇರಿದಂತೆ ಹಲವು ಕಾರಣಗಳಿವೆ. ಆಹಾರದೊಟ್ಟಿಗೆ ರಾಜಕೀಯ […]

ಮರಗಳನ್ನು ನೋಡುತ್ತ ಕಾಡನ್ನೇ ಮರೆತವರು

2024ರ ಅರ್ಥಶಾಸ್ತ್ರ ನೊಬೆಲ್‌ ಪುರಸ್ಕಾರವು ಡರಾನ್‌ ಅಸೆಮೊಗ್ಲು, ಸೈಮನ್‌ ಜಾನ್ಸನ್‌ ಹಾಗೂ ಜೇಮ್ಸ್‌ ಎ. ರಾಬಿನ್ಸನ್(ಎಜೆಆರ್) ತ್ರಿವಳಿಗೆ ಸಂದಿದೆ. ಈ ಮೂವರು ನವ ಸಾಂಸ್ಥಿಕ ಅರ್ಥಶಾಸ್ತ್ರದಲ್ಲಿ ಪರಿಣತರಾಗಿದ್ದು, ಅಭಿವೃದ್ಧಿ ಪಥದಲ್ಲಿ ಸಂಸ್ಥೆಗಳ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ಇವರೆಲ್ಲರೂ ಅಮೆರಿಕದಲ್ಲಿ ನೆಲೆಸಿರುವ ವಲಸಿಗರು. ಅಸೆಮೊಗ್ಲು ಅವರು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಜನಿಸಿ, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಿಂದ ಪಿಎಚ್‌.ಡಿ ಪಡೆದು, 1993ರಿಂದ ಮಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಎಂಐಟಿ)ಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸೈಮನ್‌ ಜಾನ್ಸನ್‌ ಇಂಗ್ಲೆಂಡ್‌ ಮೂಲದವರು. ಎಂಐಟಿಯಿಂದ ಪಿಎಚ್‌.ಡಿ ಪಡೆದು, ಕೆಲಕಾಲ ಅಂತಾರಾಷ್ಟ್ರೀಯ […]

ಎಲ್ಲರಿಗೂ ಆರೋಗ್ಯ ಎಂಬ ಕೈಗೆಟುಕದ ಮರೀಚಿಕೆ

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ)ಯನ್ನು 70 ವರ್ಷ ದಾಟಿದ ಎಲ್ಲರಿಗೂ ವಿಸ್ತರಿಸಲಾಗುತ್ತದೆ ಎಂದು ಒಕ್ಕೂಟ ಸರ್ಕಾರ ಇತ್ತೀಚೆಗೆ ಹೇಳಿದೆ. ವಾರ್ಷಿಕ 5 ಲಕ್ಷ ರೂ. ನಗದುರಹಿತ ಆರೋಗ್ಯ ಸೇವೆ ಕಲ್ಪಿಸುವ ಈ ಯೋಜನೆಯು ಖಾಸಗಿ ವಿಮೆ ಕಂಪನಿಗಳ ಆರೋಗ್ಯ ಪಾಲಿಸಿದಾರರು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಸಂಘಟನೆ(ಇಎಸ್‌ಐಸಿ)ಯಡಿ ಪ್ರಯೋಜನ ಪಡೆಯುತ್ತಿರುವವರಿಗೂ ಅನ್ವಯವಾಗಲಿದೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(ಸಿಜಿಎಚ್‌ಎಸ್)ಯಡಿ ಇರುವವರು ಅದರಲ್ಲೇ ಮುಂದುವರಿಯಬಹುದು ಇಲ್ಲವೇ ಪಿಎಂಎಜೆವೈ ಆಯ್ಕೆ ಮಾಡಿಕೊಳ್ಳಬಹುದು. ದೇಶದ ಸಮಸ್ತರಿಗೂ 2030ರೊಳಗೆ ಸಾರ್ವತ್ರಿಕ ಆರೋಗ್ಯ ಸುರಕ್ಷೆ(ಯುಎಚ್‌ಸಿ) […]

Back To Top