Author: Rutha Editor

Journalist,Translator,avid bibliophile

ಮಮತಾ ಬ್ಯಾನರ್ಜಿ ಅವರ ʻಆಟʼ ಈ ಚುನಾವಣೆಯಲ್ಲೂ ನಡೆಯುವುದೇ?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಐಆರ್‌, ಆಡಳಿತ ವಿರೋಧಿ ಅಲೆ, ರಾಜ್ಯಪಾಲರ ಪ್ರವೇಶ, ಕಣಕ್ಕಿಳಿದಿರುವ ಗಣ ಸಮೂಹ ಮತ್ತು ಚುನಾವಣೆ ಆಯೋಗ ಸಾರಾಸಗಟು ಅಧಿಕಾರಶಾಹಿಯನ್ನು ವರ್ಗಾಯಿಸಿರುವುದು ತೃಣಮೂಲ ಕಾಂಗ್ರೆಸ್‌ಗೆ ತಿರುಗುಬಾಣ ಆಗುವುದೇ? ಅಥವಾ, ಟಿಎಂಸಿ ಪ್ರತಿಪಾದಿಸುವ ಬಂಗಾಳಿ ಉಪರಾಷ್ಟ್ರೀಯತೆಗೆ ಜನ ಮಣೆ ಹಾಕುವರೇ? ರಾಜ್ಯದಲ್ಲಿ ಏಪ್ರಿಲ್‌ 23 ಮತ್ತು 29ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ್‌ ಮೋರ್ಚಾ(ಬಿಜಿಪಿಎಂ) ಡಾರ್ಜಿಲಿಂಗ್‌ ಬೆಟ್ಟ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಎಂಸಿ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. ಟಿಎಂಸಿ 3 ಅವಧಿಯಿಂದ […]

ಸ್ಪೀಕರ್‌, ಮುಖ್ಯ ಚುನಾವಣೆ ಆಯುಕ್ತ ಮತ್ತು ಸುಳ್ಳುಗಳ ಸುಗ್ಗಿ

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಅಂದುಕೊಂಡಂತೆ ಬಿದ್ದುಹೋಗಿದೆ. ಲೋಕಸಭೆ-ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಗೆ ಮಾತನ್ನಾಡಲು ಅವ ಕಾಶ ನೀಡದ ಹಾಗೂ ಮಾತನ್ನಾಡುತ್ತಿದ್ದಾಗ ಧ್ವನಿವರ್ಧಕ ಬಂದ್‌ ಮಾಡುವ ಸ್ಪೀಕರ್‌ಗೆ ಮುಖಭಂಗ ಆಗಿದೆ. ಇದೇ ಹೊತ್ತಿಗೆ ಪ್ರತಿಪಕ್ಷಗಳು ಮುಖ್ಯ ಚುನಾವಣೆ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು ಎಂದು ನೋಟಿಸ್‌ ನೀಡಿವೆ. ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಹಿನ್ನೆ ಲೆಯಲ್ಲಿ ಆಯೋಗದ ಮುಖ್ಯಸ್ಥರ ಪಕ್ಷಪಾತ ಪ್ರವೃತ್ತಿಯನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಹಿಂದಿನ ಎಲ್ಲ ಸ್ಪೀಕರ್‌ಗಳು […]

ನಾರಾಯಣ ಗುರುವಿನ ನೆಲದಲ್ಲಿ ಕೋಮುವಾದ ಸೋಲಲಿ

ಕೇರಳ ಈಗ ʻಕೇರಳಂʼ ಆಗಿದೆ. ಪಶ್ಚಿಮ ಬಂಗಾಳಕ್ಕಿಲ್ಲದ ಹೆಸರು ಬದಲಾವಣೆ ಭಾಗ್ಯ ರಾಜ್ಯಕ್ಕೆ ಲಭಿಸಿದೆ. ಇದೇ ಹೊತ್ತಿನಲ್ಲಿ ʻಕೇರಳ ಸ್ಟೋರಿ 2: ಗೋಸ್‌ ಬಿಯಾಂಡ್‌ʼ ಎನ್ನುವ ಸುಳ್ಳುಗಳೇ ತುಂಬಿರುವ ಪ್ರೊಪಗಾಂಡ ಸಿನೆಮಾ ಕೂಡ ಬಿಡುಗಡೆಯಾಗಿದೆ. ಈಮೂಲಕ ಬಿಜೆಪಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಬಿಜೆಪಿ ತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಮತ್ತು ಇತರೆಡೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಗೆಲುವು ಸಾಧಿಸಿವೆ; ಆಡಳಿತ ವಿರೋಧ ಅಲೆಯ ಹಿನ್ನೆಲೆಯಲ್ಲಿ ಎಡರಂಗ ನೇತೃತ್ವದ ಸರ್ಕಾರ ಹಿನ್ನಡೆ ಅನುಭವಿಸಿದೆ. ಪ್ರಶ್ನೆ ಏನೆಂದರೆ, ಗೆಲುವಿನ ಸಾಧ್ಯತೆ ಇರುವಾಗ […]

ತಮಿಳುನಾಡು ಚುನಾವಣೆ: ದ್ರಾವಿಡ ವಿ/ಎಸ್‌ ರಾಷ್ಟ್ರೀಯವಾದಿ ಸಿದ್ಧಾಂತದ ಹಣಾಹಣಿ

ತಮಿಳುನಾಡು ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಾಂಗ್ರೆಸ್‌ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಅವರನ್ನು ಕರೂರು ಕಾಲ್ತುಳಿತ ಹಾಗೂ ವಿಚ್ಛೇದನ ಪ್ರಕರಣಗಳು ಕಾಡುತ್ತಿವೆ. ಎಐಎಡಿಎಂಕೆ ನಿಶ್ಶಕ್ತವಾಗಿದೆ ಮತ್ತು ಬಿಜೆಪಿಯ ಕೋಮುವಾದಿ ಸಂಕ ಥನಗಳಿಗೆ ಜನ ಮರುಳಾದಂತೆ ಕಾಣುತ್ತಿಲ್ಲ. ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲ ಆರ್‌.ಎನ್‌. ರವಿ ಅವರನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ)ವು ಕಾಂಗ್ರೆಸ್‌ಗೆ 28 […]

ಎಐ ಶೃಂಗ, ನಿರುದ್ಯೋಗ ಮತ್ತು ಶೈಕ್ಷಣಿಕ ವ್ಯವಸ್ಥೆ

ದಿಲ್ಲಿಯಲ್ಲಿ ನಡೆದ ಎಐ ಶೃಂಗದಲ್ಲಿ ಅಮೆರಿಕ, ಇಂಗ್ಲೆಂಡ್‌, ಬ್ರೆಜಿಲ್‌, ಆಸ್ಟ್ರೇಲಿಯ, ಆಸ್ಟ್ರಿಯ, ಚೀನಾ, ಕೆನಡಾ, ಸ್ವಿಡ್ಜರ್‌ಲ್ಯಾಂಡ್‌ ಸೇರಿದಂತೆ 89 ರಾಷ್ಟ್ರಗಳು ಎಐ ಸಂಪನ್ಮೂಲಗಳ ಪ್ರಜಾಪ್ರಭುತ್ವೀಕರಣ, ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗೌರವ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಿತು, ಸುರಕ್ಷಿತ ಮತ್ತು ನಂಬಿಕಾರ್ಹ ಎಐ, ಸಾಮಾಜಿಕ ಪ್ರವೇಶಾವಕಾಶ, ಮಾನವ ಸಂಪನ್ಮೂಲದ ಪುನಶ್ಚೇತನ ಇತ್ಯಾದಿ ಒಳಗೊಂಡ ಒಪ್ಪಂದಕ್ಕೆ ಸಹಿ ಹಾಕಿವೆ. ಜತೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಬಹುಮುಖ್ಯ ಖನಿಜಗಳ ಕೇಂದ್ರೀಕರಣದ ವಿರುದ್ಧದ ಅಮೆರಿಕ ನೇತೃತ್ವದ ʻಪ್ಯಾಕ್ಸ್‌ ಸಿಲಿಕಾ ಇನಿಷಿಯೇಟಿವ್‌ʼ ಅನ್ನು ಭಾರತ ಸೇರಿದೆ. […]

ಪೀಡೆನಾಶಕಗಳ ಅತಿಬಳಕೆ: ಆಹಾರ, ನೀರು ವಿಷಮಯ

ಕುಡಿಯುವ ನೀರು, ತಿನ್ನುವ ಆಹಾರ ಹಾಗೂ ಉಸಿರಾಡುವ ಗಾಳಿ ಮಲಿನಗೊಂಡು ವಿಷಮಯವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ದಿಲ್ಲಿ ಸೇರಿದಂತೆ ದೇಶದ ಬಹುತೇಕ ನಗರಗಳು ವಾಯುಮಾಲಿನ್ಯದಿಂದ ಬಳ ಲುತ್ತಿವೆ; ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಗೊಂಡು, 23 ಮಂದಿ ಮರಣ ಹೊಂದಿದ ಪ್ರಕರಣ ತೇಲುತ್ತಿರುವ ನೀರ್ಗಲ್ಲಿನ ಕಾಣುತ್ತಿರುವ ತುದಿಯಷ್ಟೇ. ಇದರೊಟ್ಟಿಗೆ ಕೃಷಿಯಲ್ಲಿ ಪೀಡೆನಾಶಕಗಳ ಅತಿ ಬಳಕೆ, ದುರ್ಬಳಕೆ ಹಾಗೂ ವಿನಾಕಾರಣ ಬಳಕೆಯಿಂದ ತಿನ್ನುವ ಆಹಾರ ಮತ್ತು ಅಂತರ್ಜಲ ವಿಷವಾಗಿ ಪರಿಣಮಿಸಿದೆ. ʻನಮ್ಮದು ಕೃಷಿ ಪ್ರಧಾನ ದೇಶʼ […]

ಮಹಾಶ್ವೇತಾದೇವಿ, ಹೋರಾಟ ಮತ್ತು ಪ್ರಶಸ್ತಿಗಳಿಗೆ ಪರದಾಟ

ಇದು ಮಹಾಶ್ವೇತಾ ದೇವಿ ಅವರ ಶತಮಾನೋತ್ಸವ ವರ್ಷ(14 ಜನವರಿ 1926- 28 ಜುಲೈ 2016). 100 ಕ್ಕೂ ಅಧಿಕ ಕಾದಂಬರಿ ಮತ್ತು 20 ಕ್ಕೂ ಹೆಚ್ಚು ಸಣ್ಣ ಕಥೆಗಳ ಸಂಕಲನವನ್ನು ಬರೆದಿ ರುವ ಅವರ ಬದುಕು ಮುಖ್ಯವಾಗು ವುದು ಆದಿವಾಸಿಗಳ ಕುರಿತ ಕಾಳಜಿ-ಹೋರಾಟಗಳಿಂದ ಹಾಗೂ ಪ್ರಶಸ್ತಿಗಳ ಹಿಂದೆ ಓಡುವ ಇಂದಿನ ಯುಗಮಾನದಲ್ಲಿ ಆ ಬಗೆಗಿನ ದಿವ್ಯ ನಿರ್ಲಕ್ಷ್ಯದಿಂದ. ಪ್ರಶಸ್ತಿಗಿಂತ ಸೈದ್ಧಾಂತಿಕ ಮೌಲ್ಯಗಳು ಮುಖ್ಯ ಎಂಬ ದೃಢ ನಿಶ್ಚಯದಿಂದ ರಾಜ್ಯ ಸರ್ಕಾರ ಪ್ರಾಯೋಜಿತ ಸಾಹಿತ್ಯ ಪ್ರಶಸ್ತಿಗಳನ್ನು ಅವರು ತಿರಸ್ಕರಿಸಿದರು. […]

ಯುಜಿಸಿ, ಸುಪ್ರೀಂ ಮತ್ತು ಸಮಾನತೆಯ ಅವಸಾನ

ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಹೊಸ ನಿಯಮಗಳನ್ನು ವಿರೋಧಿಸಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೇಲ್ಜಾತಿಗಳು- ಸಾಮಾನ್ಯ ವರ್ಗದ ವಿದ್ಯಾರ್ಥಿ ಗಳು ಪ್ರತಿಭಟನೆ ಆರಂಭಿಸಿದ್ದರು. ಬಿಜೆಪಿಯ ರಾಜಕೀಯ ಶಿಲ್ಪದ ಬುನಾದಿಯಾದ ಯುವಜನರಲ್ಲಿ ಜಾತಿ ಆಧರಿತ ಧ್ರುವೀಕರಣವು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆ ಇತ್ತು. ಆದರೆ, ಸುಪ್ರೀಂ ತೀರ್ಪಿನಿಂದ 2026ರಲ್ಲಿ ನಡೆಯ ಲಿರುವ ಮತ್ತು 2027ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಬೇಕಿರುವ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿದ್ದ ಕಂಟಕವೊಂದು ನಿವಾರಣೆ ಆಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ […]

ನೇಪಥ್ಯಕ್ಕೆ ಸರಿದ ದಂತಕಥೆ ಮಾರ್ಕ್ ಟುಲ್ಲಿ

ಪತ್ರಕರ್ತ ವಿಲಿಯಂ ಮಾರ್ಕ್ ಟುಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು (ಅಕ್ಟೋಬರ್ 24,1935 -ಜನವರಿ 25, 2026), ದಂತಕತೆಯೊಂದು ಕಣ್ಮರೆಯಾಗಿದೆ. ಆದರೆ, ಟುಲ್ಲಿ ಅವರ ಬೆಚ್ಚಗಿನ, ನಿರ್ಭೀತ ಮತ್ತು ನಿಷ್ಪಕ್ಷಪಾತ ಧ್ವನಿಯು ದಕ್ಷಿಣ ಏಷ್ಯಾ ಮತ್ತು ಪ್ರಪಂಚದಾದ್ಯಂತದ ಶ್ರೋತೃಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ. ಕಲ್ಕತ್ತಾದಲ್ಲಿ ಜನನ; ತಂದೆ ವಿಲಿಯಂ ಸ್ಕಾರ್ಥ್‌ ಕಾರ್ಲೈಸ್ಲ್‌ ಟುಲ್ಲಿ ಬ್ರಿಟಿಷ್ ಮ್ಯಾನೇಜಿಂಗ್ ಏಜೆನ್ಸಿ ಗಿಲ್ಯಾಂಡರ್ ಅರ್ಬುತ್‌ನಾಟ್ಸ್‌ನ ಹಿರಿಯ ಪಾಲುದಾರ ಮತ್ತು ತಾಯಿ ಪೇಷನ್ಸ್‌ ಟ್ರೆಬಿ. ತಾಯಿಯ ಹಿರಿಯರು ಬಾಂಗ್ಲಾದಲ್ಲಿ ತಲೆಮಾರುಗಳಿಂದ ನೆಲೆಸಿದ್ದರು. ಡಾರ್ಜಿಲಿಂಗ್‌ನ […]

Back To Top