Author: Rutha Editor

Journalist,Translator,avid bibliophile

ಅಹಮದನ 407

ಅಂಜನಾ ಹೆಗಡೆ ಸಾವಿತ್ರಕ್ಕ ಎರಡೇ ದೋಸೆ ತಿಂದು ಚಹಾವನ್ನೂ ಕುಡಿಯದೇ ಗಡಿಬಿಡಿಯಲ್ಲಿ ಬಚ್ಚಲುಮನೆಗೆ ಹೋಗಿ ಬಿಸಿನೀರಿನಲ್ಲಿ ಕೈ ತೊಳೆದು ಸೆರಗಿನಿಂದ ಒರೆಸಿಕೊಳ್ಳುತ್ತ ಜಗಲಿಗೆ ಓಡಿದಳು. ರಾಮಣ್ಣ ಎಡಗೈಯಲ್ಲಿ ತೊಗರು ತುಂಬಿದ ಚೊಂಬನ್ನು ಹಿಡಿದುಕೊಂಡು ಹಳೆಯ ಬ್ರಷ್ಶಿನಿಂದ ಅಡಿಕೆಚೀಲಗಳ ಮೇಲೆ ಸೊಸೈಟಿಯ ನಂಬರನ್ನೂ, ಪರಮಣ್ಣನ ಹೆಸರನ್ನೂ ಬರೆದು ಒಂದೊಂದೇ ಚೀಲವನ್ನು ಎಳೆದು ಪಕ್ಕಕ್ಕಿಡುತ್ತಿದ್ದ. ಪರಮಣ್ಣ ಮಾತ್ರ ಆರಾಮಾಗಿ ನಾಲ್ಕೈದು ದೋಸೆಗಳನ್ನು ಬೆಲ್ಲ-ತುಪ್ಪದಲ್ಲದ್ದಿ ತಿಂದು, ಒಂದು ಲೋಟ ಚಹಾ ಕುಡಿದು ಕವಳದ ಬಟ್ಟಲು ಹಿಡಿದು ಆರಾಮಕುರ್ಚಿಯಲ್ಲಿ ಕಾಲಮೇಲೆ ಕಾಲು ಹಾಕಿ […]

ಈ ರಂಗವಲ್ಲಿಯಾಟ

ದಿವ್ಯಾ ಮಂಡೀರ   ಸಾವು ನೆಮ್ಮದಿಯಂತೆ ಸುದೀರ್ಘ ಕತ್ತಲಲ್ಲಿ ನಿಶ್ಚಲವಾಗಿ ಮಲಗುವುದಂತೆ ವಾಸ್ತವತೆಯ ಭೀಕರ ಕತ್ತಲನ್ನು ಮರೆತು ಪ್ರೀತಿ, ಬದುಕು, ಹರಯ, ದ್ವೇಷ-ರೋಷಗಳ ನಡುವೆ ಒಮ್ಮೆ ಸತ್ತು ನೋಡು ಎಂದಿದ್ದ ಕವಿಯನ್ನೊಮ್ಮೆ ಕೇಳಬೇಕೆನ್ನಿಸಿದೆ * ಇದು ಹೊಲಿಗೆ ಸಂಬಂಧಗಳು ಇಲ್ಲಿ ಬದುಕಬೇಕು ನೋವು, ನಿರಾಸೆ, ಭರವಸೆ, ಕನಸುಗಳನ್ನು ಕೇಳಿಕೊಳ್ಳಬೇಕು ಈ ದ್ವಂದ್ವಗಳಿಗೆ ಒಂದಿಷ್ಟು ಉತ್ತರ ಜಡ್ಡುಗಟ್ಟಿದ ಕಲ್ಲುಬಂಡೆಗೆಲ್ಲಿ ತಿಳಿಯಬೇಕು ಕಲ್ಲುಬಾಳೆಯ ನವಿರು ಭಾವಗಳು ರಾತ್ರಿಗಳು ಖಾಲಿಯಾಗುತ್ತಲೇ ಇವೆ ಎದೆಯೊಳಗಿನ ಸಣ್ಣ ಭಯಕ್ಕೆ ಹರೆಯದ್ದು ನಿರ್ಲಿಪ್ತ ನಗು * […]

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ: ಸೌಂದರ್ಯ ಹೆಚ್ಚಿಸಿಕೊಂಡ ಚಾರ್ಮಾಡಿ ಘಾಟ್

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸತತ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದೆ. ಕಳಸ ಪಟ್ಟಣದಿಂದ ಹೊರನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಇದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.ಕುದುರೆಮುಖ ಸುತ್ತಮುತ್ತ ಬಿಟ್ಟು ಬಿಡದೆ ಮುಂಗಾರು ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಪಶ್ಚಿಮ ಘಟ್ಟ ನದಿಗಳು ಜೀವ ಕಳೆ ಪಡೆದಿವೆ. ಆದರೆ ಧಾರಾಕಾರ ಮಳೆಯಿಂದಾಗಿ ಮಲೆನಾಡು ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೌಂದರ್ಯದ […]

ಮಾರುಕಟ್ಟೆಗೆ ಲಾಕ್‌ಡೌನ್ ಅಡಚಣೆ: ಬೆಳೆದ ಬಾಳೆ ಕಡಿದ ರೈತ

ಯಲ್ಲಾಪುರ: ಲಾಕ್‌ಡೌನ್ ಕಾರಣದಿಂದ ಬಾಳೆಕಾಯಿಗೂ ಮಾರುಕಟ್ಟೆ ಕುಸಿದಿದೆ. ಇದರಿಂದ ಚಿಂತಿತರಾದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ರೈತರು ಬಾಳೆ ಗೊನೆ, ಬಾಳೆ ಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ತಾಲ್ಲೂಕು ಅಡಿಕೆಗೆ ಎಷ್ಟು ಪ್ರಖ್ಯಾತವೋ ಬಾಳೆ ಕೃಷಿಗೂ ಅಷ್ಟೇ ಪ್ರಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ‍್ರವಾಸಿಗರು ಪಟ್ಟಣದಲ್ಲಿ ಬಾಳೆಹಣ್ಣುಗಳನ್ನು ಖರೀದಿಸಿ ಮುಂದೆ ಸಾಗುತ್ತಾರೆ. ಆದರೆ, ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ಬಳಿಕ ಬಾಳೆ ಬೆಳೆಗಾರರ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಬಾಳೆಹಣ್ಣುಗಳನ್ನು ಬಹಳ ದಿನ ಶೇಖರಿಸಿ ಇಡಲಾಗದು. ಹಣ್ಣಾದ ನಂತರ ಅವುಗಳನ್ನು ಮಾರಾಟ ಮಾಡದಿದ್ದರೆ […]

ಮರಳಿ ಪಡೆಯಬೇಕಿರುವ ಜೀವಸಂಕುಲ ಲೋಕ

ಇಂದು ಬೆಳಗ್ಗೆ ಪತ್ರಿಕೆಯಲ್ಲಿ `ವಿಶ್ವಪರಿಸರ ದಿನ’ ಎಂದು ತಿಳಿದಾಗ ಬಾಳ್ವೆ ಮತ್ತು ಬಾಳುವೆಯ ವಿಧಾನಗಳೆರಡೂ ಬೇರೆಯಲ್ಲ ಎಂದು ಬದುಕುತ್ತಿರುವ, ನಾನು ಬಹುವಾಗಿ ಗೌರವಿಸುವ ಮೂವರ ಹೆಸರುಗಳು ಕಣ್ಣ ಮುಂದೆ ಸುಳಿದವು. ಮೇಲುಕೋಟೆಯ ಜನಪದ ಟ್ರಸ್ಟ್‌ನ ಸಂತೋಷ ಕೌಲಗಿ, ಎಂಬತ್ತು-ತೊಂಬತ್ತರ ದಶಕದಲ್ಲಿ ಉತ್ಸಾಹದಲ್ಲಿ, ರಾಜ್ಯದ ಆದ್ಯಂತ ಪರಿಸರದ ಕುರಿತು ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ ‘ಅಪ್ಪಿಕೋ’ ಪಾಂಡುರಂಗ ಹೆಗಡೆ ಮತ್ತು ಹಳೆಯ ಗೆಳೆಯ, ’ಗಿಡಬಾಲಕ’ ಎಲ್ಸಿ ನಾಗರಾಜ. ಅಚ್ಚರಿ ಎನ್ನುವಂತೆ ಬೆಳಗ್ಗೆ ಸಂತೋಷ ಕೌಲಗಿಯವರು ಪುಟ್ಟ ಬರಹವನ್ನು ಕೆಲವು […]

ಸೂರ್ಯ ಸತ್ತೇ ಇವುಗಳ ಸಂತತಿ ಇಲ್ಲವಾಗಬೇಕು!

ಬೇರೆ ಗ್ರಹಗಳಲ್ಲಿ ಜೀವಿಗಳಿರಬಹುದು, ಇಲ್ಲದಿರಬಹುದು. ಕಾಲವೆ ಉತ್ತರಿಸಬೇಕು. ಆದರೆ ನಮ್ಮ ಭೂಮಿಯೆ ಏಲಿಯನ್ ತರಹ ಕಾಣುವ ಜೀವಿಯೊಂದನ್ನು ವಿಕಾಸಗೊಳಿಸಿದೆ. ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಜೀವಿ  0.5 – 1.0 ಮಿ.ಮೀ. ಉದ್ದವಿದ್ದು ಆಳ ಸಾಗರದಿಂದ ಹಿಡಿದು ಮರುಭೂಮಿಯ ಮರಳು ದಿಬ್ಬಗಳವೆರೆಗೆ ಎಲ್ಲೆಡೆ ವಾಸಿಸಬಲ್ಲದು. ಪಾಚಿ ಬೆಳೆಯುವ ಸಿಹಿನೀರಿನ ಕೊಳ, ಕೆರೆ, ಸರೋವರಗಳಲ್ಲೂ ಯಥೇಚ್ಛ ಕಂಡುಬರುತ್ತದೆ. ಅಂತರಿಕ್ಷದ ನಿರ್ವಾತದಲ್ಲೂ ಸಾಯದೆ ಇರಬಲ್ಲದು. -273 ಡಿಗ್ರಿ ಸೆಲ್ಸಿಯಸ್ ಶೈತ್ಯ(Absolute Zero)ದಿಂದ ಹಿಡಿದು 100 ಡಿಗ್ರಿಗೂ ಹೆಚ್ಚಿನ ತಾಪದಲ್ಲಿ ವಾಸಿಸಬಲ್ಲದು. […]

ಜಿಎಸ್‍ಟಿ ವ್ಯವಸ್ಥೆ: ವಿಶ್ವಾಸಾರ್ಹತೆಗೆ ಧಕ್ಕೆ

43ನೇ ಜಿಎಸ್‍ಟಿ ಮಂಡಳಿ ಸಭೆ ಮುಗಿದಿದೆ. ಕರ್ನಾಟಕ ಸರ್ಕಾರ ತನಗೆ ಬರಬೇಕಿರುವ 11,000 ಕೋಟಿ ರೂ.ಗಳನ್ನು ಕೊಡಬೇಕೆಂದು “ಮನವಿ’ ಸಲ್ಲಿಸಿದೆ! ತಮಿಳುನಾಡು ಹಣಕಾಸು ಸಚಿವ ಪಳನಿವೇಲು ತ್ಯಾಗರಾಜನ್ “ಜಿಎಸ್‍ಟಿ ಸಮಿತಿ ಒಂದು ರಬ್ಬರ್ ಸ್ಟ್ಯಾಂಪ್’ ಎಂದು ಖಂಡಿಸಿದ್ದಾರೆ. ಜಿಎಸ್‍ಟಿ ಪಾಲು ಪಡೆಯುವುದು ರಾಜ್ಯಗಳ ಹಕ್ಕು. ಅದು ಕೇಂದ್ರದ ಭಿಕ್ಷೆಯಲ್ಲ. ರಾಜ್ಯಗಳಿಗೆ ಪಾಲು ಸಲ್ಲಿಸಲು ಕೇಂದ್ರ ಅಂದಾಜು 1.58 ಲಕ್ಷ ಕೋಟಿ ರೂ. ಸಾಲ ಎತ್ತಬೇಕಿದೆ. ಜಿಎಸ್‍ಟಿ ವ್ಯವಸ್ಥೆಯನ್ನು ಜಾರಿಗೊಳಿಸಿದ ರೀತಿ ಹಾಗೂ ಆ ವ್ಯವಸ್ಥೆಯೇ ದೋಷಪೂರಿತ/ಅವೈಜ್ಞಾನಿಕವಾಗಿತ್ತು. ಜಿಎಸ್‍ಟಿ […]

ಪಿಯುಸಿಗೆ ಆನ್‍ಲೈನ್ ಪರೀಕ್ಷೆ

2ನೇ ಪಿಯುಸಿ ಪರೀಕ್ಷೆಯನ್ನು ಆನ್‍ಲೈನ್‍ನಲ್ಲಿ ನಡೆಸಲು ಸಾಧ್ಯವಿದೆಯೇ ಎಂದು ಪಿಯು ಇಲಾಖೆ ಪರಿಶೀಲಿಸುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ತರಗತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ, ಪ್ರಮುಖ ವಿಷಯಗಳಲ್ಲಿ 90 ನಿಮಿಷಗಳ ಪರೀಕ್ಷೆ ನಡೆಸಬಹುದು ಹಾಗೂ ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎನ್ನುವ ಸಲಹೆಗಳು ಇಲಾಖೆಗೆ ಬಂದಿವೆ. ಆದರೆ, ಆನ್‍ಲೈನ್ ಪರೀಕ್ಷೆ ನಡೆಸಲು ಅಂತರ್ಜಾಲ ಸಂಪರ್ಕ, ವಿದ್ಯುತ್ ಸಂಪರ್ಕ, ಮಾತ್ರವಲ್ಲದೆ ಮೂಲಭೂತ ವ್ಯವಸ್ಥೆಯ ಕೊರತೆ ಇದೆ. ಇದನ್ನು ನಿವಾರಿಸಲು ಎಂಜಿನಿಯರಿಂಗ್ ಕಾಲೇಜುಗಳನ್ನು ಬಳಸಿಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆನ್‍ಲೈನ್ […]

ಮೇಕೆದಾಟು ಜಂಟಿ ಸಮಿತಿ: ರಾಜ್ಯ ಆಕ್ಷೇಪ

ಮೇಕೆದಾಟುವಿನಲ್ಲಿ ಅಕ್ರಮ ನಿರ್ಮಾಣ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಜಂಟಿ ಸಮಿತಿ ರಚನೆಯನ್ನು ಪ್ರಶ್ನಿಸುವುದಾಗಿ ರಾಜ್ಯ ಹೇಳಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ದಕ್ಷಿಣ ವಲಯದ ಪೀಠ ಸೂಮೋಟೋ ಪ್ರಕರಣ ದಾಖಲಿಸಿಕೊಂಡು, ಯೋಜನಾ ಸ್ಥಳದಲ್ಲಿ ಪರಿಸರ ಪರಿಣಾಮ ಲೆಕ್ಕಾಚಾರವನ್ನು ಉಲ್ಲಂಘಿಸಿ ಏನಾದರೂ ಕಾಮಗಾರಿ ನಡೆದಿದೆಯೇ ಎನ್ನುವುದನ್ನು ಪರಿಶೀಲಿಸಲು ಜಂಟಿ ಸಮಿತಿಯನ್ನು ರಚಿಸಿತ್ತು. ಈ ಆದೇಶವನ್ನು ಹಿಂಪಡೆಯಬೇಕೆಂದು ಅರ್ಜಿ ಸಲ್ಲಿಸುವುದಾಗಿ ಸಂಪುಟ ಸಭೆ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಜಂಟಿ ಸಮಿತಿಯು ಜುಲೈ 5ರಂದು ವರದಿ ನೀಡಬೇಕೆಂದು ಎನ್‍ಜಿಟಿ […]

Back To Top