Author: Rutha Editor

Journalist,Translator,avid bibliophile

ಋತ 1 ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಇಕಾಲಜಿ

  ಖ್ಯಾತ ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್‌ ಅವರ ಲೇಖನಗಳ ಗುಚ್ಛ.ಪ್ರೊ.ಟಿ ಎಸ್‌ ವೇಣುಗೋಪಾಲ್‌, ಸುಷ್ಮಾ ಕಶ್ಯಪ್‌, ಅಪೂರ್ವ ಯರಬಹಳ್ಳಿ, ಡಾ.ದಿವ್ಯಮಣಿ ಬಿ ಜಿ., ಮತ್ತಿತರರು ಅನುವಾದಿಸಿದ ಲೇಖನಗಳಿವೆ. ಪುಟ 72 ಬೆಲೆ ರೂ.100  

ಬೀಜ ಸ್ವಾತಂತ್ರö್ಯಕ್ಕೆ ಧಕ್ಕೆ  ರೈತರ ಹಕ್ಕುಗಳಿಗೆ ಅಂಕುಶ.

2004ರಲ್ಲಿ ಬೀಜಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂಬ ಕಾಯಿಸಿ ಸಿದ್ಧಗೊಂಡಿತು. ೧೯೬೬ರ ಬೀಜ ಕಾಯಿದೆಯನ್ನು ವಜಾಗೊಳಿಸಿ ಅನುಷ್ಠಾನಗೊಂಡ ಈ ಕಾಯಿದೆಯ ಉದ್ದೇಶ-ನಕಲಿ ಬೀಜಗಳ ಮಾರಾಟಕ್ಕೆ ತಡೆ. ದೇಶದೆಲ್ಲೇಡೆಯ ಲಕ್ಷಾಂತರ ರೈತರು ಬೀಜದ ಸಂರಕ್ಷಣೆ ಹಾಗೂ ವಿನಿಮಯ ತಮ್ಮ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿ, ಪ್ರಾಧಾನಿಗೆ ಮನವಿ ಸಲ್ಲಿಸಿದರು -ಡಿಸೆಂಬರ್ 2019 ಸಂಚಿಕೆ-07 ಪುಟ-60

ಲಿಚ್ಚಿ ರೂಪದ ಮೃತ್ಯು?.

ಇತ್ತಿಚೆಗಷ್ಟೇ ಲಿಚ್ಚಿ ಹಣ್ಣು ಮಕ್ಕಳ ಸಾವಿಗೆ ಕಾರಣವಾಗಿ ಇನ್ನಿಲ್ಲದ ಸುದ್ದಿಯಾಗಿತ್ತು. ಮೆಥಿಲೀನ್ ಸೈಕ್ಲೋಪ್ರೊಪೈಲ್ ಗ್ಲೆöÊಸೀನ್(ಎಂಸಿಪಿಜಿ) ಏಕೆ ಲಿಚ್ಚಿ ರೂಪದಲ್ಲಿ ಕಾಡಿತ್ತು? ಬಿಹಾರದ ಮುಜಫ್ಫರ್‌ನಗರ, ವೈಶಾಲಿ, ಶೋಹರ್ ಮತ್ತು ಪೂರ್ವ ಚಂಪಾರಣ್‌ನಲ್ಲಿ ತೀವ್ರ ಎನ್ಸೆಫಾಲೈಟಿಸ್ ಸಿಂಡ್ರೋಮ್(ಎಇಎಸ್) ಪ್ರತಿ ವರ್ಷ ಬಡ ಮಕ್ಕಳ ಜೀವಹರಣ ಮಾಡುತ್ತಿದೆ. ಇದಕ್ಕೆ ಕಾರಣ ಗೊತ್ತಿದ್ದರೂ, ಎಲ್ಲರೂ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. -ಆಗಸ್ಟ್2018 ಸಂಚಿಕೆ-03 ಪುಟ-82

ಡಿಜಿಟಲ್ ಜಗತ್ತಿನ ಪರಿಸರ ಅಘಾತ. –

ಪರಿಸರ ಸಮಸ್ಯೆಗೆ ತಂತ್ರಜ್ಞಾನ ಪರಿಹಾgವಾಗಬಲ್ಲುದು ಎನ್ನುವದು ಅರ್ಧ ಸತ್ಯ. ಅದೇ ಹೊತ್ತಿನಲ್ಲೇ ತನ್ನದೇ ಆದ ಸಮಸ್ಯೆಯನ್ನೂ ಸೃಷ್ಟಿಸುತ್ತದೆ ಎನ್ನುವುದು ಕೂಡ ನಿಜ. ಇ-ತ್ಯಾಜ್ಯ ಅವುಗಳಲ್ಲಿ ಒಂದು. ಇನ್ನೊಂದು-ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸುವ ವಿದ್ಯುತ್. ಇಮೇಲ್ ಇಂದು ವ್ಯವಹಾರ-ವೈಯಕ್ತಿಕ ಬದುಕಿನ ಅನಿವರ‍್ಯ ಅಂಗವಾಗಿಬಿಟ್ಟಿದೆ. ಇದಕ್ಕೆಲ್ಲ ವಿದ್ಯತ್ ಬೇಕೇ ಬೇಕು. ಜೂನ್2018 ಸಂಚಿಕೆ-01 ಪುಟ-80

ಪಾಪದ ಪ್ಯಾಂಗೋನ್ ಸಹ ಕಣ್ಮರೆಯಾಗುತ್ತಿದೆ.

ಘೇಂಡಾಮೃಗ ಕೊಂಬು ಕಾಮಪ್ರಚೋದಕವಂತೆ. ಇದಕ್ಕಾಗಿ ಅವುಗಳ ಕೊಂಬು ಕತ್ತರಿಸಿ, ರಕ್ತಸ್ರಾವದಿಂದ ಒದ್ದಾಡಿ ಸಾಯುವಂತೆ ಮಾಎಲಾಗುಂತ್ತದೆ. ಜಗತ್ತಿನ ಅತ್ಯಂತ ಶ್ರೇಷ್ಠ ಗುಣಮಟ್ಟದ ಸುಗಂಧವನ್ನು ಹೊಂದಿರುವ ಕಸ್ತೂರಿ ಮೃಗಗಳ ಅದೇ ಸುಗಂಧ. ದಂತಕ್ಕಾಗಿ ಆನೆ, ಉಗುರು-ಚರ್ಮಕ್ಕಾಗಿ ಹುಲಿ ಹೀಗೆ ಮನುಷ್ಯನ ತೆಚಲು, ದುರಾಸೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಾಣಿಗಳು ಒಂದೆರಡಲ್ಲ.. – ಮಾರ್ಚ್2019 ಸಂಚಿಕೆ-10 ಪುಟ-82

ಆನೆಯನ್ನು ಹಿಂದಿಕ್ಕಬಹುದು!-

ಅಮೇರಿಕದ ರಕ್ಷಣಾ ಇಲಾಖೆಯನ್ನು ವಿಜ್ಞಾನಿಗಳು ಹಾಗೂ ಜಗತ್ತಿನೆಲ್ಲೆಡೆಯ ವಿಶ್ಚ ವಿದ್ಯಾಲಯಗಳು ಪ್ರೊಫೆಸರ್‌ಗಳೊಂದಿಗೆ ಸಂಪರ್ಕಿಸಲು ಸಾರ್ವಜನಿಕರ ತೆರಿಗೆ ಹಣದಿಂದ ಸೃಷ್ಟಿಯಾದ ಅಂತರ್ಜಾಲ, ಕಾಲಕ್ರಮೇಣ ಹೇಗೆ ಖಾಸಗಿ ಕಂಪನಿಗಳಿಗೆ ಹಣ ಟಂಕಿಸುವ ಯಂತ್ರವಾಯಿತು ಎನ್ನುವದು ಗೊತ್ತಿರುವ ವಿಷಯವೇ. ಈ ಅಂತರ್ಜಾಲವನ್ನು, ಮಾಹಿತಿಯನ್ನು, ತಂತ್ರಾAಶಗಳನ್ನು ಬಲಿಷ್ಟರ ಕೈಯಿಂದ ಬಿಡುಗಡೆಗೊಳಿಸಲು ರಿಚರ್ಡ್ ಸ್ಟಾಲ್ಮನ್ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. -ಫೆಬ್ರವರಿ 2019 ಸಂಚಿಕೆ-09 ಪುಟ-82

ದೇಶದ ಕೃಷಿ ಬಿಕ್ಕಟ್ಟು ಉಲ್ಬಣ.

2015-16ನೇ ಸಾಲಿನ ಕೃಷಿ ಸೆನ್ಸ್ಸ್, ಭೂಮಿಭಜೀಕರಣ ಪ್ರಕ್ರಿಯೆ ಮುಂದುವರಿಕೆ ಮತ್ತು ಭೂ ಹಿಡುವಳಿಯ ಧ್ರುವೀಕರಣವನ್ನು ದೃಢಪಡಿಸಿದೆ. ಭೂ ಹಿಡುವಳಿಯ ಗ್ರಾತ ಕೃಷಿಯಿಂದ ಬರುವ ಆದಾಯದ ಸ್ಥಿರತೆಯನ್ನು ತೀರ್ಮಾನಿಸುವ ನಿರ್ಣಾಯಕ ಅಂಶವಾದ್ಧರಿAದ, ಕೃಷಿ ಕ್ಷೇತ್ರದ ಬಿಕ್ಕಟ್ಟು ಮತ್ತು ಗ್ರಾಮೀಣ ಭಾರತದ ಅಸಮಾಧಾನಕ್ಕೆ ಸೆನ್ಸ್ಸ್ ಪುರಾವೆ ನೀಡುತ್ತದೆ. – ಜನವರಿ 2019 ಸಂಚಿಕೆ-02 ಪುಟ-67

ಕುಡಿವ ನೀರಿನಲ್ಲಿ ಯುರೇನಿಯಂ. –

ಕೈಗಾ ಅಣು ಸ್ಥಾವರ ಸ್ಥಾಪನೆ ವಿರುದ್ಧ ನಡೆದ ಚಳುವಳಿ ನೆನಪು ಕೆಲವರಿಗಾದರೂ ಇರಬಹುದು. ಜಿಲ್ಲೆಯ ಬಹುತೇಕ ಗ್ರಾಮಪಂಚಾಯಿತಿಗಳು ಯೋಜನೆಯನ್ನು ವಿರೋಧಿಸಿದ್ದವು. ಡಾ.ಶಿವರಾಮ ಕಾರಂತರ ನೇತೃತ್ವದಲ್ಲಿ ಹೋರಾಟ ನಡೆದು, ಬಳಿಕ ಅವರು ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡುದ್ದೂ ಆಯಿತು. 15 ಜುಲೈ 2018 ಸಂಚಿಕೆ-2 ಪುಟ-66

Back To Top