ಬಂಗಾಳಕೊಲ್ಲಿ ಮಾಮೂಲಿಗಿಂತ ಹೆಚ್ಚು ಬಿಸಿ
ಯಾಸ್ ಇಂದು ಅಪ್ಪಳಿಸಲಿದ್ದು, ಇನರ ಸ್ಥಳಾಂತರಕ್ಕೆ ಸರ್ಕಾರಗಳು ಪರದಾಡುತ್ತಿವೆ. ಈ ಚಂಡಮಾರುತದ ಮೂಲವಾದ ಬಂಗಾಳ ಕೊಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ, ಹೆಚ್ಚು ಬಿಸಿಯಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಬಂಗಾಳ ಕೊಲ್ಲಿಯಲ್ಲಿ ಉಷ್ಣತೆ 2 ಡಿಗ್ರಿ ಸೆಂಟಿಗ್ರೇಡ್ ಅಧಿಕವಿದೆ ಎಮದು ಪುಣೆಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟ್ರಾಲಜಿಯ ವಿಜ್ಞಾನಿಗಳು ಹೇಳಿದ್ದಾರೆ. ಸಾಧಾರಣವಾಗಿ ಬಂಗಾಳ ಕೊಲ್ಲಿಯ ಚಂಡಮಾರುತಗಳು ಅತ್ಯಂತ ತೀವ್ರವಾಗಿರಲಿದ್ದು, ಕಳೆದ ಮಾರ್ಚ್‍ನಲ್ಲಿ ಪಶ್ಚಿಮ ಬಂಗಾಳದಲ್ಲಿ ಭಾರಿ ಜನ-ಆಸ್ತಿ ನಾಶಕ್ಕೆ ಅಂಫನ್ […]
ನೂತನ ಭೂಮಿ ನಿಯಂತ್ರಣ: ಲಕ್ಷದ್ವೀಪದಲ್ಲಿ ಭುಗಿಲೆದ್ದ ಆಕ್ರೋಶ
ಹಚ್ಚ ಹಸಿರು ವಾತಾವರಣವಿರುವ ಲಕ್ಷದ್ವೀಪದಲ್ಲಿ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಭೂಮಿ ನಿಯಂತ್ರಣ ನಿಯಮಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ. ಭಾರತ ಸೇರಿದಂತೆ ಎಲ್ಲೆಡೆಯಿಂದ ದ್ವೀಪಕ್ಕೆ ಆಗಮಿಸುವವರ ಮೇಲೆ ಕಡ್ಡಾಯ ಕ್ವಾರಂಟೈನ್ ಈ ಮೊದಲು ಜಾರಿಯಲ್ಲಿತ್ತು. ಆದರೆ, ನೂತನವಾಘಿ ನೇಮಕಗೊಂಡ ಆಡಳಿತಗಾರ ಪ್ರಫುಲ್ ಖೋಡಾ ಪಟೇಲ್ ಈ ನಿಯಮವನ್ನು ತೆಗೆದುಹಾಕಿದ್ದರಿಂದ, ಒಂದೇ ಒಂದು ಕೋವಿಡ್ ಪ್ರಕರಣಗಳು ಇಲ್ಲದಿದ್ದ ದ್ವೀಪದಲ್ಲಿ ಮೇ 24ರಂದು 6,847 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಜನವಸತಿ ಇರುವ ದ್ವೀಪಗಳಲ್ಲಿ ಎರಡು ತಿಂಗಳು ಲಾಕ್‍ಡೌನ್ ಘೋಷಿಸಲಾಗಿದೆ. ಇದನ್ನು […]
ದೆಹಲಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆ, ಧೂಳಿನ ಚಂಡಮಾರುತ
ನವದೆಹಲಿ, ಮಾರ್ಚ್ 30: ದೆಹಲಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆಗೊಂಡಿದ್ದು, ಧೂಳಿನ ಚಂಡಮಾರುತ ಆವರಿಸಿದೆ. ಇದು 48 ಗಂಟೆಗಳ ಕಾಲ ಇರಲಿದ್ದು, ಯಾರೂ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದ ಹೊರಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಧೂಳಿನ ಕಣಗಳು ಶ್ವಾಸ ಕೋಶಕ್ಕೆ ಸೇರುವುದರಿಂದ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಧೂಳಿನ ಚಂಡಮಾರುತ ಆವರಿಸಿದ ತಕ್ಷಣ ಕತ್ತಲೆ ಆವರಿಸಿತ್ತು. ಗಾಳಿಯು ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಏನೇ ಆಗಲಿ ಸುಡು ಬಿಸಿಲಿಂದ ಸ್ವಲ್ಪ ಹೊತ್ತು ಬಿಡುವು ದೊರೆತಂತಾಯಿತು. ಮುಂಬರುವ […]
ಗುಬ್ಬಚ್ಚಿ ಗೂಡು ಕಟ್ಟಲು ಬಿಡಬೇಕಿದೆ: ಇಂದು ವಿಶ್ವ ಗುಬ್ಬಚ್ಚಿ ದಿನ
ಮಂಡ್ಯ(ಮಾ.20): ಇಂದು ವಿಶ್ವ ಗುಬ್ಬಚ್ಚಿ ದಿನಾಚರಣೆ. ವಿನಾಶದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ವಿಶ್ವದಲ್ಲಿ ಮಾರ್ಚ್ 20ನ್ನು ವಿಶ್ವ ಗುಬ್ಬಚ್ಚಿ ದಿನ ಎಂದು ಆಚರಣೆ ಮಾಡಲಾಗ್ತಿದೆ. ಗುಬ್ಬಚ್ಚಿಗಳ ಸಂರಕ್ಷಣೆ ಮಾಡಲು ಕರೆ ನೀಡಿಲಾಗ್ತಿದೆ. ಆದ್ರೆ ಅದನ್ನು ಪಾಲಿಸುತ್ತಿರೋ ಸಂಖ್ಯೆಮಾತ್ರ ಕಡಿಮೆ. ಆದ್ರೆ ಇಲ್ಲೊಂದು ಕುಟುಂಬ ಮಾತ್ರ ಈ ಅಳಿವಿನಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದೆ. ತಮ್ಮ ಮನೆಯಂಗಳದಲ್ಲಿ ನೂರಾರು ಗುಬ್ಬಚ್ಚಿಗಳನ್ನು ಸಾಕುವ ಮೂಲಕ ಸಂರಕ್ಷಣೆ ಮಾಡ್ತಾ, ವಿಶ್ವ ಗುಬ್ಬಚ್ಚಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸ್ತಿದೆ. ಹೌದು! ಇಂದು ವಿಶ್ಚ […]
ಅಭಿವೃದ್ಧಿ ಯೋಜನೆ: ಕಾಳಿ ಹುಲಿ ತಾಣಕ್ಕೆ ಧಕ್ಕೆ
ಕೇಂದ್ರ ಸರ್ಕಾರ ಗೋವಾದಲ್ಲಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಯೋಜನೆಗಳಿಂದ ಕಾಳಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಧಕ್ಕೆಯಾಗಲಿದೆ ಎಂದು ಅಧ್ಯಯನವೊಂದು ಹೇಳಿದೆ. ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ಆರು ಸಂಸ್ಥೆಗಳ ೩೦ ಪರಿಣತರಿದ್ದ ಅಧ್ಯಯನ ತಂಡವು ಯೋಜನೆಗಳಿಂದ ಪರಿಸರ ಮತ್ತು ಹುಲಿಗಳ ಚಲನವಲನಗಳ ಮೇಲೆ ಪರಿಣಾಮ ಉಂಟಾಗಲಿದೆ ಎಂದಿದೆ. ನೈರುತ್ಯ ರೈಲ್ವೆಯಿಂದ ಜೋಡಿ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ-4ರ ಅಭಿವೃದ್ಧಿ ಹಾಗೂ ಕರ್ನಾಟಕ-ಗೋವಾ ನಡುವೆ ವಿದ್ಯುತ್ ಮಾರ್ಗ ನಿರ್ಮಾಣದಿಂದ ಮೇಲಾಗುವ […]
ಹಕ್ಕಿ ಜ್ವರ: ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ
ಕೇರಳದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದರಿಂದ ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪಶುಸಂಗೋಪನೆ ಇಲಾಖೆ ನಿರ್ದೇಶನ ನೀಡಿದೆ. ರಾಜ್ಯಕ್ಕೆ ಹಕ್ಕಿ ಜ್ವರ ಕಾಲಿಟ್ಟಿಲ್ಲ. ಆದರೆ, ಕೇರಳದ ಕೊಟ್ಟಾಯಂನಲ್ಲಿ ಕಾಣಿಸಿಕೊಂಡಿರುವುದರಿದ ಗಡಿಗಳಲ್ಲಿರುವ ಚೆಕ್‌ಪೋಸ್ಟ್ಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕ ಡಾ. ಬಿ.ಎನ್. ಶಿವರಾಂ ತಿಳಿಸಿದರು. ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ: ಕೇರಳ, […]
ಬೆಂಗಳೂರು ಕೆರೆಗಳ ಅಭಿವೃದ್ಧಿ ಸಮಿತಿ: ಎನ್‌ಜಿಟಿ
ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಸಂಬAಧಿಸಿದ ಸಮಸ್ಯೆಗಳನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೇತೃತ್ವದ ಮೇಲ್ವಿಚಾರಣೆ ಸಮಿತಿಯ ಗಮನಕ್ಕೆ ತರಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಸೂಚಿಸಿದೆ. ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳಿಗೆ ತ್ಯಾಜ್ಯ ಹರಿಯುವಿಕೆ ಹಾಗೂ ಕೆರೆಗಳ ಸಮೀಪ ಘನತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕಬೇಕು. ಜಲಾನಯನ ಪ್ರದೇಶದ ಅತಿಕ್ರಮಣವನ್ನು ತಡೆಯಬೇಕು. ಕೆರೆಗಳ ಅಭಿವೃದ್ಧಿಗೆ ಸೂಕ್ತ […]
Delhi: Chilly winter morning, light showers
Light rains shower in the pockets of the national capital on Saturday morning which brought down the temperature even further adding to the biting cold prevailing over North India. According to the India Meteorological Department (IMD), the impact of Western Disturbance has begun over Northwest India including Delhi. Palam has reported 0.4 mm rainfall. Ridge, […]
ಜೈವಿಕ ತಾಣವಾಗಿ ರೋರಿಚ್‌ಎಸ್ಟೇಟ್: ಶಿಫಾರಸು
ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ-ರೋರಿಚ್‌ಎಸ್ಟೇಟ್‌ನ್ನು ಪಾರಂಪರಿಕ ಜೈವಿಕ ತಾಣವೆಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ. ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ತಜ್ಞರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡ ಡಿ.24 ರಂದು ಎಸ್ಟೇಟ್‌ಗೆ ಭೇಟಿ ನೀಡಿ, ಪರಿಸರ, ಜೀವವೈವಿಧ್ಯ ಕುರಿತು ಸಮೀಕ್ಷೆ ನಡೆಸಿ, ಸಿದ್ಧಪಡಿಸಿದ ವರದಿಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಸಲ್ಲಿಸಲಾಗಿದೆÀ. ದೇವಿಕಾರಾಣಿ-ರೋರಿಚ್ ಎಸ್ಟೇಟ್ ರಾಜಧಾನಿಯ ಅದ್ಭುತ ಜೈವಿಕ ಭಂಡಾರವಾಗಿದ್ದು, 2002ರ ಜೀವವೈವಿಧ್ಯ ಕಾಯ್ದೆ ಅಡಿಯಲ್ಲಿ ಪಾರಂಪರಿಕ ತಾಣ ಎಂದು […]