Category: ಸಮಾಜ – ಸಂಸ್ಕೃತಿ

ನಾರಾಯಣ ಗುರುವಿನ ನೆಲದಲ್ಲಿ ಕೋಮುವಾದ ಸೋಲಲಿ

ಕೇರಳ ಈಗ ʻಕೇರಳಂʼ ಆಗಿದೆ. ಪಶ್ಚಿಮ ಬಂಗಾಳಕ್ಕಿಲ್ಲದ ಹೆಸರು ಬದಲಾವಣೆ ಭಾಗ್ಯ ರಾಜ್ಯಕ್ಕೆ ಲಭಿಸಿದೆ. ಇದೇ ಹೊತ್ತಿನಲ್ಲಿ ʻಕೇರಳ ಸ್ಟೋರಿ 2: ಗೋಸ್‌ ಬಿಯಾಂಡ್‌ʼ ಎನ್ನುವ ಸುಳ್ಳುಗಳೇ ತುಂಬಿರುವ ಪ್ರೊಪಗಾಂಡ ಸಿನೆಮಾ ಕೂಡ ಬಿಡುಗಡೆಯಾಗಿದೆ. ಈಮೂಲಕ ಬಿಜೆಪಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಬಿಜೆಪಿ ತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಮತ್ತು ಇತರೆಡೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಗೆಲುವು ಸಾಧಿಸಿವೆ; ಆಡಳಿತ ವಿರೋಧ ಅಲೆಯ ಹಿನ್ನೆಲೆಯಲ್ಲಿ ಎಡರಂಗ ನೇತೃತ್ವದ ಸರ್ಕಾರ ಹಿನ್ನಡೆ ಅನುಭವಿಸಿದೆ. ಪ್ರಶ್ನೆ ಏನೆಂದರೆ, ಗೆಲುವಿನ ಸಾಧ್ಯತೆ ಇರುವಾಗ […]

ತಮಿಳುನಾಡು ಚುನಾವಣೆ: ದ್ರಾವಿಡ ವಿ/ಎಸ್‌ ರಾಷ್ಟ್ರೀಯವಾದಿ ಸಿದ್ಧಾಂತದ ಹಣಾಹಣಿ

ತಮಿಳುನಾಡು ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಾಂಗ್ರೆಸ್‌ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಅವರನ್ನು ಕರೂರು ಕಾಲ್ತುಳಿತ ಹಾಗೂ ವಿಚ್ಛೇದನ ಪ್ರಕರಣಗಳು ಕಾಡುತ್ತಿವೆ. ಎಐಎಡಿಎಂಕೆ ನಿಶ್ಶಕ್ತವಾಗಿದೆ ಮತ್ತು ಬಿಜೆಪಿಯ ಕೋಮುವಾದಿ ಸಂಕ ಥನಗಳಿಗೆ ಜನ ಮರುಳಾದಂತೆ ಕಾಣುತ್ತಿಲ್ಲ. ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲ ಆರ್‌.ಎನ್‌. ರವಿ ಅವರನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ)ವು ಕಾಂಗ್ರೆಸ್‌ಗೆ 28 […]

ಎಐ ಶೃಂಗ, ನಿರುದ್ಯೋಗ ಮತ್ತು ಶೈಕ್ಷಣಿಕ ವ್ಯವಸ್ಥೆ

ದಿಲ್ಲಿಯಲ್ಲಿ ನಡೆದ ಎಐ ಶೃಂಗದಲ್ಲಿ ಅಮೆರಿಕ, ಇಂಗ್ಲೆಂಡ್‌, ಬ್ರೆಜಿಲ್‌, ಆಸ್ಟ್ರೇಲಿಯ, ಆಸ್ಟ್ರಿಯ, ಚೀನಾ, ಕೆನಡಾ, ಸ್ವಿಡ್ಜರ್‌ಲ್ಯಾಂಡ್‌ ಸೇರಿದಂತೆ 89 ರಾಷ್ಟ್ರಗಳು ಎಐ ಸಂಪನ್ಮೂಲಗಳ ಪ್ರಜಾಪ್ರಭುತ್ವೀಕರಣ, ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗೌರವ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಿತು, ಸುರಕ್ಷಿತ ಮತ್ತು ನಂಬಿಕಾರ್ಹ ಎಐ, ಸಾಮಾಜಿಕ ಪ್ರವೇಶಾವಕಾಶ, ಮಾನವ ಸಂಪನ್ಮೂಲದ ಪುನಶ್ಚೇತನ ಇತ್ಯಾದಿ ಒಳಗೊಂಡ ಒಪ್ಪಂದಕ್ಕೆ ಸಹಿ ಹಾಕಿವೆ. ಜತೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಬಹುಮುಖ್ಯ ಖನಿಜಗಳ ಕೇಂದ್ರೀಕರಣದ ವಿರುದ್ಧದ ಅಮೆರಿಕ ನೇತೃತ್ವದ ʻಪ್ಯಾಕ್ಸ್‌ ಸಿಲಿಕಾ ಇನಿಷಿಯೇಟಿವ್‌ʼ ಅನ್ನು ಭಾರತ ಸೇರಿದೆ. […]

ಮಹಾಶ್ವೇತಾದೇವಿ, ಹೋರಾಟ ಮತ್ತು ಪ್ರಶಸ್ತಿಗಳಿಗೆ ಪರದಾಟ

ಇದು ಮಹಾಶ್ವೇತಾ ದೇವಿ ಅವರ ಶತಮಾನೋತ್ಸವ ವರ್ಷ(14 ಜನವರಿ 1926- 28 ಜುಲೈ 2016). 100 ಕ್ಕೂ ಅಧಿಕ ಕಾದಂಬರಿ ಮತ್ತು 20 ಕ್ಕೂ ಹೆಚ್ಚು ಸಣ್ಣ ಕಥೆಗಳ ಸಂಕಲನವನ್ನು ಬರೆದಿ ರುವ ಅವರ ಬದುಕು ಮುಖ್ಯವಾಗು ವುದು ಆದಿವಾಸಿಗಳ ಕುರಿತ ಕಾಳಜಿ-ಹೋರಾಟಗಳಿಂದ ಹಾಗೂ ಪ್ರಶಸ್ತಿಗಳ ಹಿಂದೆ ಓಡುವ ಇಂದಿನ ಯುಗಮಾನದಲ್ಲಿ ಆ ಬಗೆಗಿನ ದಿವ್ಯ ನಿರ್ಲಕ್ಷ್ಯದಿಂದ. ಪ್ರಶಸ್ತಿಗಿಂತ ಸೈದ್ಧಾಂತಿಕ ಮೌಲ್ಯಗಳು ಮುಖ್ಯ ಎಂಬ ದೃಢ ನಿಶ್ಚಯದಿಂದ ರಾಜ್ಯ ಸರ್ಕಾರ ಪ್ರಾಯೋಜಿತ ಸಾಹಿತ್ಯ ಪ್ರಶಸ್ತಿಗಳನ್ನು ಅವರು ತಿರಸ್ಕರಿಸಿದರು. […]

ಯುಜಿಸಿ, ಸುಪ್ರೀಂ ಮತ್ತು ಸಮಾನತೆಯ ಅವಸಾನ

ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಹೊಸ ನಿಯಮಗಳನ್ನು ವಿರೋಧಿಸಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೇಲ್ಜಾತಿಗಳು- ಸಾಮಾನ್ಯ ವರ್ಗದ ವಿದ್ಯಾರ್ಥಿ ಗಳು ಪ್ರತಿಭಟನೆ ಆರಂಭಿಸಿದ್ದರು. ಬಿಜೆಪಿಯ ರಾಜಕೀಯ ಶಿಲ್ಪದ ಬುನಾದಿಯಾದ ಯುವಜನರಲ್ಲಿ ಜಾತಿ ಆಧರಿತ ಧ್ರುವೀಕರಣವು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆ ಇತ್ತು. ಆದರೆ, ಸುಪ್ರೀಂ ತೀರ್ಪಿನಿಂದ 2026ರಲ್ಲಿ ನಡೆಯ ಲಿರುವ ಮತ್ತು 2027ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಬೇಕಿರುವ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿದ್ದ ಕಂಟಕವೊಂದು ನಿವಾರಣೆ ಆಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ […]

ನೇಪಥ್ಯಕ್ಕೆ ಸರಿದ ದಂತಕಥೆ ಮಾರ್ಕ್ ಟುಲ್ಲಿ

ಪತ್ರಕರ್ತ ವಿಲಿಯಂ ಮಾರ್ಕ್ ಟುಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು (ಅಕ್ಟೋಬರ್ 24,1935 -ಜನವರಿ 25, 2026), ದಂತಕತೆಯೊಂದು ಕಣ್ಮರೆಯಾಗಿದೆ. ಆದರೆ, ಟುಲ್ಲಿ ಅವರ ಬೆಚ್ಚಗಿನ, ನಿರ್ಭೀತ ಮತ್ತು ನಿಷ್ಪಕ್ಷಪಾತ ಧ್ವನಿಯು ದಕ್ಷಿಣ ಏಷ್ಯಾ ಮತ್ತು ಪ್ರಪಂಚದಾದ್ಯಂತದ ಶ್ರೋತೃಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ. ಕಲ್ಕತ್ತಾದಲ್ಲಿ ಜನನ; ತಂದೆ ವಿಲಿಯಂ ಸ್ಕಾರ್ಥ್‌ ಕಾರ್ಲೈಸ್ಲ್‌ ಟುಲ್ಲಿ ಬ್ರಿಟಿಷ್ ಮ್ಯಾನೇಜಿಂಗ್ ಏಜೆನ್ಸಿ ಗಿಲ್ಯಾಂಡರ್ ಅರ್ಬುತ್‌ನಾಟ್ಸ್‌ನ ಹಿರಿಯ ಪಾಲುದಾರ ಮತ್ತು ತಾಯಿ ಪೇಷನ್ಸ್‌ ಟ್ರೆಬಿ. ತಾಯಿಯ ಹಿರಿಯರು ಬಾಂಗ್ಲಾದಲ್ಲಿ ತಲೆಮಾರುಗಳಿಂದ ನೆಲೆಸಿದ್ದರು. ಡಾರ್ಜಿಲಿಂಗ್‌ನ […]

ರಕ್ತಸಿಕ್ತ ಲ್ಯಾಟಿನ್‌ ಅಮೆರಿಕ: ಪ್ರತಿರೋಧದ ಮೂಲಕ ಸ್ವಾತಂತ್ರ್ಯದ ಮರುವ್ಯಾಖ್ಯಾನ

ವೆನೆಜುವೆಲ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಜ.3, 2026ರಂದು ಅಮೆರಿಕದ ಡೆಲ್ಟಾ ಫೋರ್ಸ್ ಅಪಹರಿಸಿದೆ. ಇದು 1989ರ ಪನಾಮ ಆಕ್ರಮ ಣದ ನಂತರ ಲ್ಯಾಟಿನ್ ಅಮೆರಿಕದಲ್ಲಿ ನಡೆದ ನೇರ ಮಿಲಿಟರಿ ಹಸ್ತಕ್ಷೇಪ. ಈ ಕಾರ್ಯಾಚರಣೆಯು ಟ್ರಂಪ್ ಆಡಳಿತದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ (ನ್ಯಾಷನಲ್‌ ಸೆಕ್ಯುರಿಟಿ ಸ್ಟ್ರಾಟೆಜಿ) 2025ರ ಭಾಗ. ಅಮೆರಿಕವು ಪಶ್ಚಿಮ ಗೋಳಾರ್ಧದಲ್ಲಿ ತನ್ನ ಆಧಿಪತ್ಯದ ಮರುಸ್ಥಾಪನೆಗೆ ಮನ್ರೋ ಸಿದ್ಧಾಂತದ ಜಾರಿಗೆ ಮುಂದಾಗಿದೆ. ಲ್ಯಾಟಿನ್‌ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಜುವೆಲ, […]

ರಿತ್ವಿಕ್‌ ಘಟಕ್‌ 100: ನೋವಿಗದ್ದಿದ, ಸ್ಪಂದನಶೀಲ ಕ್ಯಾಮೆರಾ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜೀವವಿಮೆ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ, ಸುರಕ್ಷತೆಯ ಖಾತ್ರಿಯಿಲ್ಲದ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅನುಮತಿ ನೀಡುವಿಕೆ ಮಸೂದೆ ಯಲ್ಲದೆ, ಗ್ರಾಮೀಣರ ಜೀವನಾಡಿಯಾಗಿದ್ದ ನರೇಗಾದ ಹೆಸರು ಬದಲಿಸಿ ವಿರೂಪಗೊಳಿಸಲಾಗಿದೆ. ಜನಸಾಮಾನ್ಯರ ಹಿತಾಸಕ್ತಿಗೆ ಧಕ್ಕೆ ತರುವ ಇಂಥ ಮಸೂದೆಗಳ ನಡುವೆಯೇ ಕಟ್ಟಾ ಸಿದ್ಧಾಂತಿ, ಮೂರ್ತಿಭಂಜಕ ಮತ್ತು ಸಿನೆಮಾ ಮಾಧ್ಯಮವನ್ನು ಮಾನವೀಯಗೊಳಿಸಿದ ಚಿತ್ರ ನಿರ್ದೇಶಕ ರಿತ್ವಿಕ್‌ ಘಟಕ್ ನೂರು ವರ್ಷ(ನವೆಂಬರ್‌ 4, 1925- ಫೆಬ್ರವರಿ 6,1976) ಪೂರೈಸಿದ್ದಾರೆ. ಬಂಗಾಳದ ಖ್ಯಾತ ತ್ರಿವಳಿ ನಿರ್ದೇಶಕರಲ್ಲಿ ಘಟಕ್‌ ಕಿರಿಯರು(ಸತ್ಯಜಿತ್‌ ರೇ, ಮೃಣಾಲ್‌ […]

ಮಹುವಾದ ಘಮಲು ಮತ್ತು ಪುಟ್ಟ ಹಕ್ಕಿಯ ಅಳಲು

ಸುಪ್ರೀಂ ಕೋರ್ಟ್‌ ತನ್ನ ನವೆಂಬರ್‌ 2025ರ ಆದೇಶದಲ್ಲಿ ಸಾರಂಡದ 314 ಚದರ ಕಿಲೋಮೀಟರ್‌ ಕಾಡನ್ನು ವನ್ಯಜೀವಿಧಾಮ ಎಂದು ಘೋಷಿಸಬೇಕು; ಕಬ್ಬಿಣದ ಸುಸ್ಥಿರ ಗಣಿಗಾರಿಕೆ ಮತ್ತು ಜೈವಿಕ ವೈವಿಧ್ಯದ ನಡುವೆ ಸಮತೋಲನ ಸಾಧಿಸಬೇಕು ಎಂದು ಹೇಳಿತು. ಸಾರಂಡ ಜಗತ್ತಿನ ಅತ್ಯಂತ ಸಮೃದ್ಧ ಸಾಲ್‌ ಮರಗಳ ಕಾಡು. ಈ ಕಾಡಿನಲ್ಲಿ ನಿರ್ವಂಶದ ಅಂಚಿನಲ್ಲಿರುವ ಆಮೆ, 4 ಕೊಂಬುಗಳ ಜಿಂಕೆ, ಏಷ್ಯಾದ ತಾಳೆ ಮರದ ಪುನುಗಿನ ಬೆಕ್ಕು ಅಲ್ಲದೆ ಕಾಡಾನೆಗಳಿವೆ. ಈ ಅರಣ್ಯದಲ್ಲಿ ಶತಮಾನಗಳಿಂದ ಹೋ, ಮುಂಡಾ, ಉರಾಓನ್‌ ಮತ್ತಿತರ ಆದಿವಾಸಿಗಳು […]

Back To Top