ಅರುಂಧತಿ ಆತ್ಮಕಥನ: ಮೇರಿ ಅವರ ಕ್ರಾಂತಿ ಇನ್ನೂ ಅಪೂರ್ಣ
ನರ್ಮದಾ ಆಂದೋಲನ ಕುರಿತ ಅರುಂಧತಿ ರಾಯ್ ಅವರ ಲೇಖನಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಬ್ರಿಟಿಷ್ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕ ಜಾನ್ ಬರ್ಗರ್, ʻನಿಮ್ಮ ಕಾದಂಬರಿಗಳು ಮತ್ತು ಕಾದಂಬರಿಯೇತರ ಬರಹಗಳು ನಿಮ್ಮೆರಡು ಕಾಲುಗಳಂತೆ ಜಗತ್ತಿನೆಲ್ಲೆಡೆ ಸುತ್ತುತ್ತವೆʼ ಎಂದು ಹೇಳಿದ್ದರು. ಇದನ್ನು ʻಮದರ್ ಮೇರಿ ಕಮ್ಸ್ ಟು ಮಿʼ ಹೊತ್ತಗೆಯಲ್ಲಿ ಉಲ್ಲೇಖಿಸಿರುವ ಅರುಂಧತಿ, ʼತಮ್ಮ ಎರಡು ರೀತಿಯ ಬರಹಗಳು ಒಂದರೊಂದಿಗೆ ಇನ್ನೊಂದು ಸಂಘರ್ಷದಲ್ಲಿ ಇಲ್ಲ ಎಂಬುದನ್ನು ಗುರುತಿಸಿದ ಕೆಲವೇ ಕೆಲವು ಜನರಲ್ಲಿ ಬರ್ಗರ್ ಒಬ್ಬರುʼ ಎಂದು ಹೇಳಿಕೊಂಡಿದ್ದಾರೆ. ಅರುಂಧತಿ ಅವರ […]
ಮತ ಕಳವು ಮತ್ತು ಚುನಾವಣೆ ಆಯೋಗದ ವಿಶ್ವಾಸಾರ್ಹತೆ ಪ್ರಶ್ನೆ
ರಾಹುಲ್ ಗಾಂಧಿ ಆಗಸ್ಟ್ 7, 2025 ರಂದು ಪತ್ರಿಕಾಗೋಷ್ಠಿಯಲ್ಲಿ ʻ1,00,250 ಮತ ಕಳವುʼ ಆರೋಪ ಹೊರಿಸಿದರು. ಆದರೆ, ಈ ಕುರಿತು ತನಿಖೆ ನಡೆಸದ ಚುನಾವಣೆ ಆಯೋಗವು ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕೆಂದು ರಾಹುಲ್ ಅವರಿಗೆ ನೋಟಿಸ್ ನೀಡಿತು; ಸಂದೇಶವಾಹಕನಿಗೆ ಗುಂಡಿಕ್ಕಿ ಸಂದೇಶವನ್ನು ನಿರ್ಲಕ್ಷಿಸಲು ಮುಂದಾಯಿತು. ಇಂಡಿಯಾ ಒಕ್ಕೂಟ ಮತ ಕಳವು ಪ್ರತಿಭಟಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ; ಇದೇ ಹೊತ್ತಿನಲ್ಲಿ ʻಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮತಪಟ್ಟಿ ಸಿದ್ಧಪಡಿಸಲಾಗಿತ್ತುʼ ಎಂದ ಸಚಿವ ಕೆ.ಎನ್.ರಾಜಣ್ಣ […]
ಲಾಭಕೋರತನ, ಮಿಲಿಟರೀಕರಣ ಹಾಗೂ ಹವಾಮಾನ ಬದಲಾವಣೆ
ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಪೋಟದಿಂದ ಊರೊಂದು ಕೊಚ್ಚಿಹೋಗಿದೆ. ಯುರೋಪಿನ ನಾಗರಿಕರು ಉಷ್ಣ ಅಲೆಯಿಂದ ಬಳಲುತ್ತಿರುವ ಹೊತ್ತಿನಲ್ಲೇ ಅಮೆರಿಕ ಪ್ರವಾಹ/ಚಂಡಮಾರುತಕ್ಕೆ ಈಡಾಗಿದೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಳೆ ಋತುಗಳೇ ಬದಲಾಗಿವೆ. ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಪ್ರತಿದಿನ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ಪ್ರಮಾಣ 90.5 ದಶಲಕ್ಷ ಟನ್ ಮುಟ್ಟಿದೆ (2020). 1850ರಲ್ಲಿ ಭೂಮಿಯ ತಾಪಮಾನವನ್ನು ದಾಖಲಿಸಲು ಆರಂಭಿಸಿದ ಬಳಿಕ 2024ರಲ್ಲಿ ಅತಿ ಹೆಚ್ಚು ಉಷ್ಣತೆ ದಾಖಲಾಗಿದೆ. ಹವಾಮಾನ ಸಂಕಷ್ಟ ಎನ್ನುವುದು ಹೊಸಿಲು ದಾಟಿ ಒಳಗೆ ಪ್ರವೇಶಿಸಿದೆ. ಇದರ […]
ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ʻಆಪರೇಷನ್ ಸಿಂಧೂರʼ ಸರ್ಕಾರ-ಪ್ರತಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಗದ್ದಲದಿಂದ ನ್ಯಾಯಾಂಗ, ಕಾರ್ಯಾಂಗ ಮತ್ತು ನ್ಯಾಯಾಧೀಶರ ನೇಮಕ-ವರ್ಗಾವಣೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದ ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ ಅವರ ಪ್ರಕರಣ ಹಿನ್ನೆಲೆಗೆ ಸರಿದಿದೆ. ಮಾರ್ಚ್ 14, 2025ರಂದು ದಿಲ್ಲಿ ಹೈಕೋರ್ಟಿನ ಹಿರಿಯ ನ್ಯಾಯಾಧೀಶ ನ್ಯಾ. ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದ ಹೊರ ಮನೆಯಲ್ಲಿ ಸುಟ್ಟ 500 ರೂ. ನೋಟುಗಳ ಚೀಲಗಳು ಸಿಕ್ಕಿದವು. ಸುಪ್ರೀಂ ಕೋರ್ಟ್ ಮು.ನ್ಯಾ. ಸಂಜೀವ್ ಖನ್ನಾ ಅವರು ಈ […]
ಚುನಾವಣೆ ಆಯೋಗದ ಕುತಂತ್ರ ಮತ್ತು ವೋಟ್‌ಬಂದಿ
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯನ್ನು ʻಅದೊಂದು ಸಾಂವಿಧಾನಿಕ ಹೊಣೆಗಾರಿಕೆʼ ಎಂದಿರುವ ಸುಪ್ರೀಂ ಕೋರ್ಟ್(ಜುಲೈ 10,2025 ರಂದು), ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿದೆ. ತೀರ್ಪಿನಿಂದ ಉತ್ತೇಜಿತವಾಗಿರುವ ಆಯೋಗ, ದೇಶಾದ್ಯಂತ ಈ ಪ್ರಕ್ರಿಯೆಯನ್ನು ನಡೆಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂದು ವಿಡಿಯೋ ಮಾಡಿದ್ದ ಪತ್ರಕರ್ತ/ಯುಟ್ಯೂಬರ್ ಅಜಿತ್ ಅಂಜುಂ ಮೇಲೆ ಜುಲೈ 15ರಂದು ಎಫ್‌ಐಆರ್ ದಾಖಲಿಸಲಾಗಿದೆ. ಪರಿಷ್ಕರಣೆಯನ್ನು ವಿರೋಧಿಸಿದ್ದ ಪ್ರತಿ ಪಕ್ಷಗಳು, ಸುಪ್ರೀಂ ಮೆಟ್ಟಿಲೇರಿವೆ. ಜುಲೈ 28ರಂದು ಈ ಸಂಬಂಧ ವಿಚಾರಣೆ ಬಾಕಿ […]
ನಿಜ ನಾಗರಗಳು ಬಡವರನ್ನೇ ಕಚ್ಚುತ್ತವೆ…….
ಇಂಡಿಯ ಸೇರಿದಂತೆ ಕಡಿಮೆ-ಮಧ್ಯಮ ಆದಾಯದ ದೇಶಗಳಲ್ಲಿ ಹಾವು ಕಡಿತದಿಂದ ಉಂಟಾಗುವ ಸಾವು ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆ. ದೇಶದಲ್ಲಿ 2024ರಲ್ಲಿ 64,000 ಮಂದಿ ಮೃತಪಟ್ಟಿದ್ದಾರೆ. ಇದು ಜಗತ್ತಿನಲ್ಲಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇ.80. ಇದರಿಂದಾಗಿಯೇ ದೇಶವನ್ನು ಹಾವು ಕಡಿತದಲ್ಲಿ ʼಜಗತ್ತಿನ ರಾಜಧಾನಿʼ ಎಂದು ಹೆಸರಿಸಲಾಗಿದೆ. ಈ ಸಮಸ್ಯೆಯ ಮೂಲ-ಹಾವು, ಮಾನವ ಮತ್ತು ಪರಿಸರದ ನಡುವಿನ ಸಂಘರ್ಷ. ಇದು ಸಾಮಾಜಿಕ, ಆರ್ಥಿಕ, ಮಾನವಿಕ, ವೃತ್ತಿ ಸಂಬಂಧಿತ, ಪರಿಸರ ಹಾಗೂ ಧಾರ್ಮಿಕ ಆಯಾಮಗಳಿರುವ ಸಂಕೀರ್ಣ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) […]
ʻಸಂವಿಧಾನ ಹತ್ಯಾ ದಿವಸ್ʼ ಆಚರಣೆಯಿಂದ ವಾಸ್ತವ ಬದಲಾಗುವುದಿಲ್ಲ
ತುರ್ತು ಪರಿಸ್ಥಿತಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೂನ್ 25ನ್ನು ʻಸಂವಿಧಾನ ಹತ್ಯಾ ದಿವಸ್ʼ ಎಂದು ಆಚರಿಸುವುದಾಗಿ ಹೇಳಿಕೊಂಡಿದೆ. ಕಾಂಗ್ರೆಸ್‌ನ್ನು ಹೀಗಳೆಯುವ ಯಾವುದೇ ಅವಕಾಶವನ್ನು ಬಿಜೆಪಿ ಬಿಡುವುದಿಲ್ಲ; ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಈ ಆಡಳಿತದಲ್ಲಿ ನಿಂತಿದೆಯೇ: ಇಲ್ಲ. ಇನ್ನಷ್ಟು ಬಿರುಸಿನಿಂದ ಮುನ್ನಡೆದಿದೆ. ಸಿನಿಮಾ ಸೇರಿದಂತೆ ಪ್ರದರ್ಶನ ಕಲೆಗಳ ಮೇಲೆ ಸೆನ್ಸಾರ್‌ನ ಕತ್ತಿ ನೇತಾಡುತ್ತಲೇ ಇದೆ. ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಸ್ಟ್ರೀಮಿಂಗ್ ಕಾರ್ಯಕ್ರಮಗಳಿಗೆ ಇದು ಕರಾಳ ಯುಗ. ಇದಕ್ಕೆ ಇತ್ತೀಚಿನ ಉದಾಹರಣೆ- ಜಾನಕಿ ವಿ/ಎಸ್ […]
ಸಿಂಧೂ ಜಲ ಒಪ್ಪಂದದ ಅಮಾನತಿನ ಪರಿಣಾಮಗಳೇನು?
ಪಹಲ್ಗಾಮ್ ಮಾರಕ ದಾಳಿ ನಂತರ ಸಿಂಧೂ ಜಲ ಒಪ್ಪಂದ(ಇಂಡಸ್ ವಾಟರ್ ಟ್ರೀಟಿ, ಐಡಬ್ಯುಟಿ)ವನ್ನು ತಡೆಹಿಡಿಯುವುದಾಗಿ ಭಾರತ ಹೇಳಿದೆ. ಪ್ರತಿಯಾಗಿ, ತಾನು ಸಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗೆ ಮಾಡಿಕೊಂಡಿರುವ ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿ ಇಡುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ನೀರಿನ ಮೂಲಕ ಪಾಕಿಸ್ತಾನದ ಉಸಿರು ಕಟ್ಟಿಸಲು ಸಾಧ್ಯವೇ? ಐಡಬ್ಯ್ಲುಟಿಗೆ ಜವಹರಲಾಲ್ ನೆಹರೂ ಹಾಗೂ ಜನರಲ್ ಅಯೂಬ್ ಖಾನ್ ಸೆಪ್ಟೆಂಬರ್ 19,1960ರಂದು ಸಹಿ ಹಾಕಿದರು. ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಂಜಾಬಿನ ಸಂಸದ ಇಕ್ಬಾಲ್ ಸಿಂಗ್, ಇದರಿಂದ ತಮ್ಮ ರಾಜ್ಯದಲ್ಲಿ ಆಹಾರ […]
ರಾಜ್ಯಪಾಲರ ʻಪಾಕೆಟ್ ವಿಟೋʼ ಅಧಿಕಾರ ಅಂತ್ಯ
ಸುಪ್ರೀಂ ಕೋರ್ಟ್‌ನ ಒಂದು ಮಹತ್ವದ ತೀರ್ಪು ರಾಜ್ಯಪಾಲರ ʻಪಾಕೆಟ್ ವಿಟೋ’ವನ್ನು ಕೊನೆಗೊಳಿಸಿದೆ. ಆದರೆ, ಕಪಾಳಮೋಕ್ಷದಿಂದ ಬುದ್ದಿ ಕಲಿಯದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಮದುರೈನ ಕಾಲೇಜೊಂ ದರಲ್ಲಿ ʻಜೈ ಶ್ರೀರಾಂʼ ಎಂದು ಮೂರು ಬಾರಿ ಘೋಷಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ವಿವಾದ ಸೃಷ್ಟಿಸಿದ್ದಾರೆ. ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆಯಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಬಿಜೆಪಿ ಆಯ್ಕೆಯಾದ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ, ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರದ ಮಗ್ಗಲುಮುಳ್ಳಾಗಿ ಪರಿಣಮಿಸಿದ್ದರು. ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಹೊರನಡೆದಿದ್ದು ಸೇರಿದಂತೆ, ಹಲವು […]

