Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಫೆ. 22ರಿಂದ 6,7,8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭ: ಸುರೇಶ್ ಕುಮಾರ್

ಬೆಂಗಳೂರು: ಇದೇ ತಿಂಗಳ 22ರಿಂದ ನಮ್ಮ ರಾಜ್ಯದಲ್ಲಿ 6, 7, 8 ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತೆ. ಜುಲೈ15 ರಿಂದ ಕರ್ನಾಟಕ ರಾಜ್ಯದ ಮುಂದಿನ ಶೈಕ್ಷಣಿಕ ವರ್ಷ ಆರಂಭ ಆಗಲಿದೆ. ಒಂದನೇ ತಾರೀಖಿನಿಂದ ವಿದ್ಯಾಗಮ ಮಾಡುವ ಬಗ್ಗೆ‌ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಶಾಲೆಗಳ ಆರಂಭದ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಒಂದನೇ ತರಗತಿಯಿಂದ ಚಟುವಟಿಕೆ ಆರಂಭ ಮಾಡೋಕೆ ಒತ್ತಾಯ ಬರ್ತಾ ಇದೆ. 6,7,8,9ಕ್ಕೆ ವಿದ್ಯಾಗಮ ತರಗತಿ ಆರಂಭ ಮಾಡಿದ್ದೇವೆ ಎಂದು […]

ಇಂದಿನಿಂದ ಅಡುಗೆ ಅನಿಲ ದರ ಹೆಚ್ಚಳ

ಗೃಹ ಬಳಕೆಯ ಅನಿಲ ಸಿಲಿಂಡರ್ (14.2 ಕೆ.ಜಿ) ಬೆಲೆ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ʼಗೆ 50 ರೂಪಾಯಿ ಏರಿಕೆ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 769 ರೂಪಾಯಿ ಆಗಲಿದೆ. ಕರ್ನಾಟಕದಲ್ಲಿ 724 ರೂ ಆಗಲಿದೆ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ʼಗಳ ಬೆಲೆಯನ್ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ. ಅಂತಾರಾಷ್ಟ್ರೀಯ ಇಂಧನ ದರಗಳು ಮತ್ತು ಯುಎಸ್ ಡಾಲರ್-ರೂಪಾಯಿ ವಿನಿಮಯ ದರಗಳನ್ನ ಅವಲಂಬಿಸಿ, ಬೆಲೆಗಳು ಏರಬಹುದು ಅಥವಾ ಇಳಿಕೆಯಾಗಬಹುದು. ಇಂಧನ […]

ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ: ಪುಸ್ತಕ

ಪ್ರೊ . ಮುಜಾಪ್ಫರ್ ಆಸ್ಸಾದಿ ಯವರ ಮತ್ತೊಂದು ಪುಸ್ತಕ : ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ  ಪುಸ್ತಕ ಈಗ ಋತ ಮೀಡಿಯಾದಲ್ಲಿ , ಪುಸ್ತಕ ಪ್ರತಿಗಳನ್ನು ಕಾಯ್ದಿರಸಲು ಕೆಳಗಿನ ಸಂಖ್ಯೆಗೆ ಕರೆ ಮಾಡಿ. 9448076207 BANK DETAILS Madhava Ithal, ICICI Bank, Malleshwara, Bengaluru – 560003 A/C Number : 007801011206 IFSC/NEFT: ICIC0000078 GOOGLE PAY  9448076207

ಕೂಡ್ಲೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಚನ್ನಪಟ್ಟಣ ದ ಕೂಡ್ಲೂರು ಗ್ರಾಮ ಪಂಚಾಯತಿಯ ಜೆಡಿಎಸ್  ಬಿಜೆಪಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗುಂಡಪ್ಪರವರು ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಆದಂತ  ಶೃತಿ ನರಸಿಂಹ ರವರು ಆಯ್ಕೆಯಾಗಿದ್ದಾರೆ.

ದಶವಾರ ಮತ್ತು ಬಿ.ವಿ.ಹಳ್ಳಿ ಗ್ರಾಮ ಪಂಚಾಯಿತಿ: ಜೆ.ಡಿ.ಎಸ್ ತೆಕ್ಕೆಗೆ

ಚನ್ನಪಟ್ಟಣ ತಾಲ್ಲೂಕು ಬಿ.ವಿ.ಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆ.ಡಿ.ಎಸ್ ಪಕ್ಷದ ಬೆಂಬಲಿತ ಪಾರ್ವತಮ್ಮ ರವರು  ಆಯ್ಕೆಯಾಗುವ ಮೂಲಕ ಬಿ.ವಿ. ಹಳ್ಳಿ ಗ್ರಾಮ ಪಂಚಾಯಿತಿಯು ಜೆ.ಡಿ.ಎಸ್ ಪಾಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಹೆಚ್.ಸಿ. ಜಯಮುತ್ತು ರವರು  ಜೆ. ಡಿ. ಎಸ್ ಮುಖಂಡರಾದ ಶಿವಪ್ಪ ಅರಳಾಳುಸಂದ್ರ. ಗಿರೀಶ್ ಬಾಬು ಬಿ.ವಿ ಪಾಳ್ಯ. ಮಹೇಶ್ ಬಿ.ವಿ ಹಳ್ಳಿ ದೊಡ್ಡೇಗೌಡ. ಬಿ.ವಿ ಹಳ್ಳಿ. ಜಗದೀಶ್ ವಿಠಲೇನಹಳ್ಳಿ. ಕುಮಾರ್  ಅರಳಾಳುಸಂದ್ರ. ರವಿ ಬಿ.ವಿ ಹಳ್ಳಿ ನಾಗೇಶ್. ರಾಜಣ್ಣ .ನೂತನ ಗ್ರಾಮಪಂಚಾಯಿತಿಯ ನಮ್ಮ […]

ಮಲೆನಾಡಿನ ಕಾಫಿ ಬೆಳೆಗಾರ ಸೋತದ್ದೆಲ್ಲಿ ಮತ್ತು ಬೆಲೆಗಳ ಮೇಲೆ ಸರ್ಕಾರಿ ನಿಯಂತ್ರಣ ಯಾಕೆ ಬೇಕು?

ಒಂದು ಕಾಲಕ್ಕೆ ಅತ್ಯಂತ ಪ್ರತಿಷ್ಟಿತ ಹಾಗೂ ಸಧೃಡ ಕೃಷಿಯೆಂದು ಹೆಮ್ಮೆ ಪಡುತ್ತಿದ್ದ  ಕಾಫಿ ಬೆಳೆಗಾರರೆಂದರೆ ಐಷಾರಾಮೀ ದೊರೆಗಳೆಂದು ಬೇರೆಯವರು ಹೇಳುತ್ತಿದ್ದ  ಮಲೆನಾಡಿನ ಕಾಫಿ ಬೆಳೆ ಸೋತದ್ದೆಲ್ಲಿ. ಸುಮಾರಾಗಿ ಎಂಬತ್ತರ ದಶಕದವರೆಗೂ ಕಾಫಿಯ ಸ್ಥಿತಿ ಹಾಗೇ ಇತ್ತು. ಆಂತರಿಕ ಬಳಕೆ ಬಹಳ ಕಡಿಮೆ ಇದ್ದು ಅದು ವರ್ಷಕ್ಕೆ ಐವತ್ತು ಸಾವಿರ ಟನ್ ಮೀರುತ್ತಿರಲಿಲ್ಲ. ಅದರಲ್ಲೂ ತಮಿಳುನಾಡೇ ಮುಖ್ಯ ಗ್ರಾಹಕ ರಾಜ್ಯವಾಗಿತ್ತು. ಉಳಿದ ಎಲ್ಲಾ ಕಾಫಿ ರಫ್ತಾಗುತ್ತಿತ್ತು. ಅಂದಿನ ಕಾಲಕ್ಕೆ ದೊಡ್ಡ ಮೊತ್ತವೆನ್ನಬಹುದಾದ ನಾಲ್ಕು ನೂರು ಕೋಟಿ ರುಪಾಯಿಯಷ್ಟು ವಿದೇಶೀ […]

ರಾಷ್ಟ್ರೀಯ ತೋಟಗಾರಿಕಾ ಮೇಳ 2021: ರೈತ ಮಹಿಳೆಯರಲ್ಲಿ ಹೆಚ್ಚಿದ ಉತ್ಸಾಹ

ತೋಟಗಾರಿಕಾ ಮೇಳ  2021 ರ ವಿಶೇಷ ಎಂದರೆ ರೈತ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ, ಮತ್ತು ತರಕಾರಿ ಬೆಳೆಗಳಾದ ಟೊಮೇಟೊ, ಕುಂಬಳಕಾಯಿ, ಹೀರೇಕಾಯಿ ,ಬದನೇಕಾಯಿ ಮತ್ತು ಬೇಬಿ ಕಾರ್ನ್( ಮೆಕ್ಕೆ ಜೋಳ) ದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವಲ್ಲಿ ಉತ್ಸುಕರಾಗಿದ್ದರು.

ಫೆಬ್ರುವರಿ 8 ರಿಂದ 12 ವರೆಗೆ ನಡೆಯಲಿದೆ ರಾಷ್ಟ್ರೀಯ ತೋಟಗಾರಿಕೆ ಮೇಳ

ಕೊರೊನಾ ಇರುವುದರಿಂದ ಈ ಬಾರಿ ಭೌತಿಕ ಹಾಗೂ ಆನ್‌ಲೈನ್ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಮೇಳಕ್ಕೆ ಭೌತಿಕವಾಗಿ 30 ಸಾವಿರ ರೈತರಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ಕೊರೊನಾ ಇರುವುದರಿಂದ ಹೆಚ್ಚು ಜನ ಸೇರದಂತೆ ತಡೆಯಲು ನೋಂದಣಿ ಕಡ್ಡಾಯ ಮಾಡಲಾಗಿದೆ. ‘‌ಪ್ರತಿದಿನ ಆರು ಸಾವಿರ ನೋಂದಾಯಿತ ರೈತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಎರಡು ಅವಧಿಗಳಲ್ಲಿ ಮೇಳ ವೀಕ್ಷಿಸಬಹುದು. ಹೊರ ರಾಜ್ಯಗಳಿಂದ ಬರುವ ರೈತರು ಮೇಳದಲ್ಲಿ ಭಾಗವಹಿಸಲು ಕೆಲವು ನಿಯಮಗಳನ್ನು ಪಾಲಿಸಬೇಕು.  ಮೇಳದ ಬಗ್ಗೆ ಮೂರು ಭಾಷೆಗಳಲ್ಲಿ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ, ರೈತರಿಗೆ […]

ಗ್ರಾಮಪಂಚಾಯ್ತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಗ್ರಾಮಪಂಚಾಯ್ತಿಗಳ  ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಗೊಂಡು  ಗ್ರಾಮ ಪಂಚಾಯ್ತಿಗಳಲ್ಲಿ  ಹಲವಾರು ರೀತಿಯ ವಿಧ್ಯಮಾನಗಳು ನಡೆದು ಅಂತಿಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿವೆ.

Back To Top