ಐಟಿ ಕಾಯಿದೆ: ಹೈಕೋರ್ಟ್ ಕದ ತಟ್ಟಿದ ವಾಟ್ಸ್ ಆಪ್
ನಿಗೂಢಲಿಪಿ(ಎನ್‍ಕ್ರಿಪ್ಷನ್)ಯನ್ನು ಬಹಿರಂಗಗೊಳಿಸುವುದು ನಾಗರಿಕರ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದಿರುವ ವಾಟ್ಸ್ ಆಪ್, ನೂತನ ಐಟಿ ಕಾಯಿದೆಯನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಯಾವ ಮೂಲಭೂತ ಹಕ್ಕು ಕೂಡ ನಿರಂಕುಶವಲ್ಲ ಎಂದು ಹೇಳಿದೆ. ಹೊಸ ಐಟಿ ಕಾಯಿದೆಯಿಂದ ನಾಗರಿಕರ ಖಾಸಗಿತನದ ಹಕ್ಕು ಹಾಗೂ ವಾಕ್-ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ಕೆ.ಎಸ್.ಪುಟ್ಟಸ್ವಾಮಿ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದಿದೆ. ಮಧ್ಯಸ್ಥ ಕಂಪನಿಗಳು ಮಾಹಿತಿಯನ್ನು ಸೃಷ್ಟಿಸಿದವರ ಗುರುತನ್ನು ನೀಡುವುದು […]