Author: Rutha Editor

Journalist,Translator,avid bibliophile

ಭಿನ್ನಮತ-ಟಿ.ಎಂ.ಕೃಷ್ಣ ಅವರ ಆಯ್ದ ಲೇಖನಗಳು

ಕಲಾವಿದ ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಎಂ.ಕೃಷ್ಣ ಕರ್ನಾಟಕ ಸಂಗೀತ ಕ್ಷೇತ್ರದ ಬಹುದೊಡ್ಡ ಹೆಸರು. ಸಂಗೀತದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಅಸಮಾನತೆಗಳ ನಿವಾರಣೆ ಬಗ್ಗೆಯೂ ಮಾತನ್ನಾಡುವ ಮತ್ತು ಕ್ರಿಯಾಶೀಲರಾಗಿರುವ ಅವರು ಸಂಗೀತವನ್ನು ಕಛೇರಿಗೆ ಸೀಮಿತವಾಗಿಸದೆ ಸಾರ್ವಜನಿಕ ಸ್ಥಳಗಳಿಗೂ ತಂದವರು. ಅವರ ವಿಚಾರಧಾರೆಗಳನ್ನುಳ್ಳ ಹೊತ್ತಗೆ. ಅಮರ ಹೊಳೆಗದ್ದೆ, ಉಂಡಾಡಿ ಸಂತೋಷ್‌, ಡಾ.ಆರ್‌. ನಾಗಭೂಷಣ, ಡಾ.ಕವಿತಾ, ಎಸ್.ಬಿ.ಪ್ರಸಾದ್‌,ಡಾ.ನೇತ್ರಾವತಿ, ಡಾ.ಸುಷ್ಮಾ ಕಶ್ಯಪ್‌,ಎಚ್.ಕೆ.ಶರತ್‌, ಶಶಾಂಕ್‌ ಎಸ್.‌ ಆರ್.‌,ಡಾ.ಕಾವ್ಯಶ್ರೀ ಎಚ್.‌, ಗೀತಾ ಬಣಕಾರ್‌, ಡಾ.ಸಂತೋಷ್‌ ನಾಯಕ್‌, ಡಾ.ಸವಿತಾ ಬಿ.ಸಿ. ಮತ್ತಿತರರು ಅನುವಾದಿಸಿದ ಲೇಖನಗಳ ಗುಚ್ಚ.

ವೈವಿಧ್ಯದ ತೊಟ್ಟಿಲು

ಪಶ್ಚಿಮ ಘಟ್ಟ ಕುರಿತ ಲೇಖನಗಳ ಗುಚ್ಛ. ಪಾಂಡುರಂಗ ಹೆಗ್ಡೆ, ಸತೀಶ್‌ ಚಂದ್ರನ್‌ ನಾಯರ್‌, ಪ್ರೊ.ಮಾಧವ ಗಾಡ್ಗೀಳ್‌, ವಂದನಾ ಶಿವ, ಕ್ದಾಲಾಡ್‌ ಅಲ್ವಾರೆಸ್‌, ರಿತ್ವಿಕ್‌ ದತ್ತ, ರೋಮುಲಸ್‌ ವಿಟೇಕರ್‌, ನಿತಿನ್‌ ಡಿ ರೈ, ವಿಜು ಬಿ,ಕಮಲಾಕರ್‌ ಭ‌ಟ್‌ ಮತ್ತು ಕಿಶೋರ್‌ ಕುಮಾರ್‌ ಅವರ ಲೇಖನಗಳನ್ನು ಒಳಗೊಂಡ ಹೊತ್ತಗೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಕಾಳಜಿ ಇರುವವರೆಲ್ಲರೂ ಓದಲೇಬೇಕಾದ ಹೊತ್ತಗೆ.

ಹೆಣ್ಣು ಭ್ರೂಣಗಳ ಹತ್ಯೆ ನಿರಂತರ, ನಿರಾತಂಕ

ʻಗಂಗಾಳ ಹೊಡೆಯುವುದುʼ, ʻಚಿಬ್ಬಲು ಬಡಿಯುವುದುʼ ಎನ್ನುವುದು ಜನಿಸಿದ ಮಗುವಿನ ಲಿಂಗ ಯಾವುದು ಎಂಬುದನ್ನು ಸಾರಲು ಹಿಂದಿನವರು ಬಳಸುತ್ತಿದ್ದ ಮಾತುಗಳು; ಮೊದಲಿನದು ಗಂಡು ಹಾಗೂ ಎರಡನೆಯದು ಹೆಣ್ಣು ಮಗು ಜನನವಾಯಿತೆಂಬುದರ ಸೂಚನೆ. ಕಳೆದ ಫೆಬ್ರವರಿಯಲ್ಲಿ ಮಂಡ್ಯದ ಹೈಕಳು ಮದುವೆಗೆ ಹೆಣ್ಣು ಕರುಣಿಸು ಎಂದು ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆಯು ಚಿಬ್ಬಲು ಬಡಿಯುವುದು ಕಡಿಮೆಯಾಗಿದ್ದರ ಪರಿಣಾಮ. ಬರುವ ಜನವರಿಯಲ್ಲಿ ಇಂಥದ್ದೇ ಇನ್ನೊಂದು ಪಾದಯಾತ್ರೆ ನಡೆಯಲಿದೆ. ಅವರಿಗೆ ಗೊತ್ತಿದೆಯೋ ಇಲ್ಲವೋ, ಹೆಣ್ಣು ಸಿಗದೆ ಇರಲು ಕಾರಣ ನಾಗರಿಕರು ಎನ್ನಿಸಿಕೊಳ್ಳುವ […]

ಬೆಳಕಿನಲಿ ಪ್ರಕಾಶಿಸುವ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’

ಶಾಂತಾರಾಮ ನಾಯಕ, ಹಿಚಕಡ ಹಸಿರು ಸಿರಿಯ ಕಣಜ ಅಚವೆಯ ಸುಂದರ ಪರಿಸರದ ರಸ ರೋಮಾಂಚನಗೊಳಿಸುವ ವಿಭೂತಿ ಜಲಪಾತದ ಧುಮ್ಮಿಕ್ಕುವ ಬೆಳ್ನೊರೆಯ ಜಲಧಾರೆಯ ನಡುವಿಂದ ಕವಿ ಫಾಲ್ಗುಣ ಗೌಡರ ಕಾವ್ಯಧಾರೆ ಹರಿದು ಬಂದು ಓದುಗರ ಮನ ತಣಿಸಿದೆ. ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ನಾಡಿನ ಹೆಮ್ಮೆಯ ಕವಿ ಪ್ರಿಯ ಜಯಂತ ಕಾಯ್ಕಿಣಿಯವರು ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನಕ್ಕೆ ಮನ್ನುಡಿಯ ಕಿರೀಟ ತೊಡಿಸಿ ‘ಬಿಡುಗಡೆ ಮಾಡಿ ತುಂಬಾ ಪ್ರೀತಿ ಅಭಿಮಾನದಿಂದ ಮುನ್ನುಡಿಯ ಶಿಫಾರಸು ನೀಡಿರುವರು. ಅದು ಒಂದು ಮೋಹಕ […]

ನೋಟವೊಂದೆ ಸಾಕು

ಮಾಧವಿ ಭಂಡಾರಿ ಕೆರೆಕೋಣ ಬಿಸಿಲ ಜಳ ಜಾಸ್ತಿಯಾದಂತೆ ರೈಲಿನ ಹೊರಗಡೆಯಿಂದ ಕಿತ್ತ ಕಣ್ಣನ್ನು ಪುಸ್ತಕದಲ್ಲಿ ನೆಟ್ಟೆ. ಎದುರಿನ ಬರ್ತ್‍ನ ಕಿಟಕಿ ಸೀಟ್ ಖಾಲಿಯಾಗೇ ಇತ್ತು. ಯಾರೋ ಕುಳಿತು ಎದ್ದುದರ ಗುರುತಾಗಿ ಒಂದು ನ್ಯೂಸ್ ಪೇಪರ್ ಅಲ್ಲಿ ಇತ್ತು. ಎತ್ತಿ ಒಗೆಯುವ ಬಸ್ಸಿನಲ್ಲೇ ಓದುವ ನನಗೆ ರೈಲು ಆರಾಮ ಖುರ್ಚಿಯಲ್ಲಿ ಕುಳಿತಂತೆ ಭಾಸವಾಯಿತು. ಓದು ನಿರಾತಂಕವಾಗಿ ಸಾಗಿತು. ಒಂದಿಷ್ಟು ಸಮಯದ ನಂತರ ಧಡಕ್ಕನೆ ಯಾರೋ ಬಂದು ಕುಳಿತ ಸದ್ದು ನನ್ನ ಧ್ಯಾನಸ್ಥ ಓದಿಗೆ ಭಂಗ ತಂದರೂ ಒಂದು ಕ್ಷಣ […]

ದಂಡೆ ಹೂ

ಎಂ.ಜಿ ತಿಲೋತ್ತಮೆ, ಭಟ್ಕಳ ಸೆರಗ ತುಂಬಾ ಕೊಯ್ದು ತರುತ್ತಿದ್ದ ಹೂ ಮಾಲೆಯಾಗಿಸಿ ಬಿಡುತ್ತಿದ್ದಳು ಇಲ್ಲ ದಂಡೆಯಾಗುತ್ತಿದ್ದವು ಅವಳ ಬೆರಳುಗಳಿಗಷ್ಟೇ ಗೊತ್ತು ಎನ್ನುವಷ್ಟು ನಾಜೂಕು ದಾರ ಮತ್ತು ಹೂಗಳ ನಡುವೆ ಸಲೀಸಾಗಿ ದಂಡೆ ಮೂಡುತ್ತಿದ್ದವು ತುಂಬಾ ಬಿಗಿದರೆ ನಲುಗುವುದೆಂಬ ಭಯ ಸೂಕ್ಷ್ಮ ಹೆಣಿಗೆ ಅಪ್ಪಟ ಕಲೆ ಅವಳಿಗೆ ಮಾತ್ರ ಕರಗತ ತೋಟದ ತುಂಬಾ ರಂಗೇರುತ್ತಿದ್ದ ಅಬ್ಭಲಿ ಮುತ್ತುಮಲ್ಲಿ ಸೇವಂತಿಗೆ ನೀರು ಸೇದು ಹೋಯ್ದಾಗಲೆಲ್ಲಾ ಗಿಡಗಳ ಉಸಿರಾಟ ಅವಳಿಗೆ ಕೇಳಿಸುತ್ತಿತ್ತು ದಂಡೆ ಹೂವು ಅವಳ ಕೈ ಬಳೆ ಸದ್ದು ಮೂಗುತಿಯ […]

ಮೀರುವುದು ಕ್ರಿಯಾಪದ

 – ವೆಂಕಟ್ರಮಣ ಗೌಡ ಬರೆಯುವುದಿದೆ ಕಥೆಯೊಂದನು ಅವಳೆದೆಯೊಳಗಿನ ಹೂದೋಟವ ತಂದಿರಿಸಿ ಸುಡು ಹಗಲಲಿ ಮೆರೆಸಿ ಮಧುರಾತ್ರಿಯನು ಎಲ್ಲ ಮರೆಯುವಂತೆ ಆಹಾ ಎನ್ನಬೇಡ ರಮ್ಯತೆಯ ಅಧಿದೇವತೆಯೆ, ಮರೆಯುವುದೆಂದರೆ ಇಲ್ಲಿ ನೆನಪುಗಳ ಅಗ್ನಿಪರೀಕ್ಷೆ ಕೇಳು ರಮ್ಯದೇವತೆಯೆ, ಸುಂದರ ಸುಳ್ಳುಗಳ ಹೊದ್ದ ನಿನ್ನಂತಲ್ಲ ಅವಳು ಅವಳೊಳಗಿವೆ ನಿನ್ನ ಬಿನ್ನಾಣವನೆಲ್ಲ ಬಯಲಿಗಿಳಿಸುವ ನಿಗಿನಿಗಿ ಕ್ರಿಯಾಪದಗಳು ಕಥೆ ಬರೆಯುವುದೆಂದರೂ ಹೀಗೆಯೇ ಕ್ರಿಯಾಪದಗಳ ನಡುವೆ ಕನಲುವುದು ಮೊಗೆಮೊಗೆದು ನೆನಪುಗಳೊಳಗೆ ಬಂಧಿಯಾಗುವುದು ವಿಫಲ ಪ್ರೇಮದ ಅಸಹನೀಯತೆಯಲ್ಲಿ ಬೆಳಗುವುದು ಬರೆಯುವುದಿದೆ ಕಥೆಯೊಂದನು ಬರೆಯಲನುವಾಗುವುದನ್ನೇ ಕಾದು ಮೀರುವುದನ್ನು

ಮೋಹಕತೆಯಾಚೆಗಿನ ಕವಿತೆಗೆ ಕೈಚಾಚಿದ ಧ್ಯಾನ

ವೆಂಕಟ್ರಮಣ ಗೌಡ “ಈ ಚಿಟ್ಟೆ ಕಾಡಿದ ಹಾಗೆ” ಸುಚಿತ್ರಾ ಹೆಗಡೆ ಅವರ ಕವಿತೆಗಳ ಮೊದಲ ಸಂಕಲನ. ಅದೇ ಹೆಸರಿನ ಕವಿತೆಯ ಪ್ರಸ್ತಾಪದೊಂದಿಗೆ ಈ ಪುಸ್ತಕದ ಕುರಿತು ಕೆಲವು ಮಾತುಗಳನ್ನು ಹೇಳಲು ನನಗೆ ಇಷ್ಟ. ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ ಕನ್ನಡ ಕಾವ್ಯವನ್ನು ಎಂದೆಂದೂ ಆವರಿಸಿಕೊಂಡೇ ಇರುವ ದಿವ್ಯ. ‘ಪಾತರಗಿತ್ತಿ ಪಕ್ಕ ನೋಡಿದ್ಯೇನ ಅಕ್ಕ’ ಎಂದು ಶುರುವಾಗುವ ಅದು, ‘ಗಾಳಿ ಕೆನೀಲೇನ ಮಾಡಿದ್ದಾರ ತಾನ’ ಎಂದು ವಿಸ್ತರಿಸಿಕೊಳ್ಳುತ್ತ, ಕೊನೆಗೆ ‘ಇನ್ನು ಎಲ್ಲಿಗೋಟ? ನಂದನದ ತೋಟ!’ ಎಂದು ಅನೂಹ್ಯವಾದುದರ, ಅತೀತವಾದುದರ ಕಡೆಗೆ […]

ಉಮೇಶ ನಾಯ್ಕರ ಕವಿತೆಗಳು: ನಿಷ್ಕಳಂಕ ಜಗಳದಲ್ಲಿನ ನಿಶ್ಚಯ

ವೆಂಕಟ್ರಮಣ ಗೌಡ ‘ಕತ್ತಲ ಧ್ಯಾನಿಸಿದ ನಂತರ’ ಉಮೇಶ ನಾಯ್ಕ ಅವರ ಎರಡನೇ ಕವನ ಸಂಕಲನ (ಪ್ರಕಟಣೆ ವರ್ಷ: 2021). ಇದಕ್ಕೂ 9 ವರ್ಷಗಳ ಕೆಳಗೆ ಅವರ ಮೊದಲ ಸಂಕಲನ ‘ಪೂರ್ಣ ಸತ್ಯವಲ್ಲ ರಸ್ತೆಗಳು’ (2012) ಪ್ರಕಟವಾಗಿತ್ತು. ಮೊದಲನೆಯದರಲ್ಲಿ 40 ಮತ್ತು ಎರಡನೆಯ ಸಂಕಲದಲ್ಲಿ 45 ಕವಿತೆಗಳಿವೆ. ‘ಲೆಕ್ಕಕ್ಕೆ ಅಷ್ಟಾಗಿವೆ’ ಎಂದು ತಮ್ಮನ್ನು ತಾವೇ ಅಣಕಿಸಿಕೊಂಡು ನಕ್ಕುಬಿಡುವ ಜಾಯಮಾನ ಅವರದು. ಹೊಸ ಸಂಕಲನದ ನೆಪದಲ್ಲಿ ಅವರ ಒಟ್ಟಾರೆ ಕವಿತೆಗಳ ಬಗ್ಗೆ ಬರೆಯುವುದು ಇಲ್ಲಿ ನನ್ನ ಉದ್ದೇಶ. ನನ್ನ ಮತ್ತು […]

Back To Top