Category: ಪರಿಸರ ಜೀವಿಶಾಸ್ತ್ರ

ಕುಲಾಂತರಿ ಬೆಳೆ: ಆಡಿಸುವಾತನ ಮಾತೇ ಅಂತಿಮವೇ?

ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ(ಎಂಒಇಎಫ್‌ಸಿ) ಮಂತ್ರಾಲಯಕ್ಕೆ ಎಲ್ಲ ಭಾಗಿದಾರರನ್ನು ಒಳಗೊಂಡು ಕುಲಾಂತರಿ(ಜಿಎಂ, ಜೈವಿಕವಾಗಿ ಬದಲಿಸಿದ ಬೆಳೆಗಳು) ಕುರಿತು ರಾಷ್ಟ್ರೀಯ ಕಾರ್ಯನೀತಿಯೊಂದನ್ನು ರೂಪಿಸಬೇಕೆಂದು ಹೇಳಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವನ್ನು ಒಳಗೊಳ್ಳಬೇಕು; ಕೃಷಿ ಸೇರಿದಂತೆ ಕೆಲವು ವಿಷಯಗಳು ರಾಜ್ಯ ಪಟ್ಟಿಗೆ ಸೇರುವುದರಿಂದ, ಸಂವಿಧಾನದ ಚೌಕಟ್ಟಿನಲ್ಲಿ ಇದು ಅಗತ್ಯ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಸಂಜಯ್‌ ಕರೋಲ್‌ ಅವರ ಪೀಠ ಹೇಳಿದೆ. ಕುಲಾಂತರಿಗಳಿಗೆ ಸಂಬಂಧಿಸಿದಂತೆ  ರೈತರು, ಬಳಕೆದಾರರು, ವಿಜ್ಞಾನಿಗಳು ಮತ್ತು ಉತ್ಪಾದಕ ಕಂಪನಿಗಳೊಂದಿಗೆ […]

ʻಲಡಾಖಿನಲ್ಲಿ ಎಲ್ಲವೂ ಚೆನ್ನಾಗಿಲ್ಲʼ

ಸೂಪರ್‌ ಹಿಟ್‌ ಸಿನೆಮಾ ʼತ್ರಿ ಈಡಿಯಟ್ಸ್‌ʼ ಸಿನೆಮಾದಲ್ಲಿ ಆಮಿರ್‌ ಖಾನ್‌ ಅವರ ಪಾತ್ರದ ನಿಜರೂಪ- ಲಡಾಖಿನ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣತಜ್ಞ ಸೋನಂ ವಾಂಗ್ಚುಕ್.‌ ಜನವರಿ 26, 2023 ರಿಂದ ಲಡಾಖಿನ ತೆರೆದ ಬಯಲಿನಲ್ಲಿ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ 5 ದಿನ ನಿರಶನ ಮಾಡಿದ್ದ ವಾಂಗ್‌ಚುಕ್, ಈಗ ʻದೆಹಲಿ ಚಲೋʼ ಆರಂಭಿಸಿದ್ದಾರೆ. ಅವರ ತಂಡದ ಪಾದಯಾತ್ರೆಯು ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ದೆಹಲಿಯ ರಾಜ್‌ಘಾಟಿನಲ್ಲಿ ಕೊನೆಗೊಳ್ಳಲಿದೆ. ಅವರ ಬೇಡಿಕೆ ಇದು-ಲಡಾಖಿಗೆ ರಾಜ್ಯದ ಸ್ಥಾನಮಾನ, ಹೆಚ್ಚುವರಿ ಲೋಕಸಭೆ ಸ್ಥಾನ, […]

ಹವಾಮಾನ ಬದಲಾವಣೆ ವಿರುದ್ಧ ರಕ್ಷಣೆಗೆ ಕಾನೂನಿಗೆ ಮುನ್ನುಡಿ

ಅಂಕೋಲಾ ಬಳಿ ಗುಡ್ಡ ಜರಿದು ನದಿಯಲ್ಲಿ ತೇಲಿಹೋದ ಮತ್ತು ಮಣ್ಣಿನಲ್ಲಿ ಮುಚ್ಚಿಹೋದ 11 ಮಂದಿಗೆ ಕಣ್ಣೀರಾಗೋಣ. 90 ಡಿಗ್ರಿ ಕೋನದಲ್ಲಿ ಗುಡ್ಡೆ ಕೆತ್ತಿ ರಸ್ತೆ ನಿರ್ಮಿಸಿದ ಗುತ್ತಿಗೆದಾರ- ಎಂಜಿನಿಯರ್‌ಗಳಿಗೆ ವಿಷಾದ ವ್ಯಕ್ತಪಡಿಸೋಣ. ಇಂಥ ಮಾನವ ಪ್ರೇರಿತ ಪರಿಸರ ದುರಂತಗಳ ನಡುವೆಯೇ ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟಗಳು, ಹಿಮಾಲಯ, ವಿಂಧ್ಯ, ಅರಾವಳಿ ಮತ್ತಿತರ ಬೆಟ್ಟಸಾಲುಗಳ ಜೊತೆಗೆ ಮನುಷ್ಯರನ್ನೂ ಕಾಪಿಡಬಲ್ಲ ಸಣ್ಣದೊಂದು ಬೆಳಕಿನ ಕಿಂಡಿಯೊಂದು ಕಾಣಿಸಿಕೊಂಡಿದೆ. 2024-25ರ ಬಜೆಟ್‌ಗೆ ಮುನ್ನ ಮಂಡನೆಯಾದ ಆರ್ಥಿಕ ಸಮೀಕ್ಷೆ ಕೂಡ ಹವಾಮಾನ ಬದಲಾವಣೆ ಮತ್ತು […]

ನರನು ಕೊಲ್ಲಲು, ಹರನೂ ಕಾಯಲಾರನು

ವಯನಾಡಿನ ಮನುಷ್ಯ ನಿರ್ಮಿತ ಭೂಕುಸಿತದಲ್ಲಿ 231 ಮಂದಿ ಮೃತಪಟ್ಟಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ (ಆಗಸ್ಟ್‌ 13ರ ಮಾಹಿತಿ). ಈ ಭೀಕರ ದುರಂತದ ಬಳಿಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆರು ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಪರ್ವತ ಶ್ರೇಣಿ ಈ ರಾಜ್ಯಗಳ ಜೀವದಾಯಿಯಾಗಿದ್ದರೂ, ತೀವ್ರ ಶೋಷಣೆಗೆ ಒಳಗಾಗಿದ್ದು, ಕೆಲವು ವರ್ಷಗಳಿಂದ ಉಗ್ರವಾಗಿ ಪ್ರತಿಕ್ರಿಯಿಸುತ್ತಿದೆ. ಪ್ರೊ. ಮಾಧವ ಗಾಡ್ಗೀಳ್‌ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನೀಡಿದ್ದ ಅತ್ಯಂತ ನಿಖರ ಹಾಗೂ ವೈಜ್ಞಾನಿಕವಾಗಿ ಪರಿಪೂರ್ಣವಾಗಿದ್ದ ವರದಿಯನ್ನು ಜನರ […]

ಮರಳಿ ಪಡೆಯಬೇಕಿರುವ ಜೀವಸಂಕುಲ ಲೋಕ

ಇಂದು ಬೆಳಗ್ಗೆ ಪತ್ರಿಕೆಯಲ್ಲಿ `ವಿಶ್ವಪರಿಸರ ದಿನ’ ಎಂದು ತಿಳಿದಾಗ ಬಾಳ್ವೆ ಮತ್ತು ಬಾಳುವೆಯ ವಿಧಾನಗಳೆರಡೂ ಬೇರೆಯಲ್ಲ ಎಂದು ಬದುಕುತ್ತಿರುವ, ನಾನು ಬಹುವಾಗಿ ಗೌರವಿಸುವ ಮೂವರ ಹೆಸರುಗಳು ಕಣ್ಣ ಮುಂದೆ ಸುಳಿದವು. ಮೇಲುಕೋಟೆಯ ಜನಪದ ಟ್ರಸ್ಟ್‌ನ ಸಂತೋಷ ಕೌಲಗಿ, ಎಂಬತ್ತು-ತೊಂಬತ್ತರ ದಶಕದಲ್ಲಿ ಉತ್ಸಾಹದಲ್ಲಿ, ರಾಜ್ಯದ ಆದ್ಯಂತ ಪರಿಸರದ ಕುರಿತು ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ ‘ಅಪ್ಪಿಕೋ’ ಪಾಂಡುರಂಗ ಹೆಗಡೆ ಮತ್ತು ಹಳೆಯ ಗೆಳೆಯ, ’ಗಿಡಬಾಲಕ’ ಎಲ್ಸಿ ನಾಗರಾಜ. ಅಚ್ಚರಿ ಎನ್ನುವಂತೆ ಬೆಳಗ್ಗೆ ಸಂತೋಷ ಕೌಲಗಿಯವರು ಪುಟ್ಟ ಬರಹವನ್ನು ಕೆಲವು […]

ಸೂರ್ಯ ಸತ್ತೇ ಇವುಗಳ ಸಂತತಿ ಇಲ್ಲವಾಗಬೇಕು!

ಬೇರೆ ಗ್ರಹಗಳಲ್ಲಿ ಜೀವಿಗಳಿರಬಹುದು, ಇಲ್ಲದಿರಬಹುದು. ಕಾಲವೆ ಉತ್ತರಿಸಬೇಕು. ಆದರೆ ನಮ್ಮ ಭೂಮಿಯೆ ಏಲಿಯನ್ ತರಹ ಕಾಣುವ ಜೀವಿಯೊಂದನ್ನು ವಿಕಾಸಗೊಳಿಸಿದೆ. ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಜೀವಿ  0.5 – 1.0 ಮಿ.ಮೀ. ಉದ್ದವಿದ್ದು ಆಳ ಸಾಗರದಿಂದ ಹಿಡಿದು ಮರುಭೂಮಿಯ ಮರಳು ದಿಬ್ಬಗಳವೆರೆಗೆ ಎಲ್ಲೆಡೆ ವಾಸಿಸಬಲ್ಲದು. ಪಾಚಿ ಬೆಳೆಯುವ ಸಿಹಿನೀರಿನ ಕೊಳ, ಕೆರೆ, ಸರೋವರಗಳಲ್ಲೂ ಯಥೇಚ್ಛ ಕಂಡುಬರುತ್ತದೆ. ಅಂತರಿಕ್ಷದ ನಿರ್ವಾತದಲ್ಲೂ ಸಾಯದೆ ಇರಬಲ್ಲದು. -273 ಡಿಗ್ರಿ ಸೆಲ್ಸಿಯಸ್ ಶೈತ್ಯ(Absolute Zero)ದಿಂದ ಹಿಡಿದು 100 ಡಿಗ್ರಿಗೂ ಹೆಚ್ಚಿನ ತಾಪದಲ್ಲಿ ವಾಸಿಸಬಲ್ಲದು. […]

ಯಸ್‍ನಿಂದ ಅಪಾರ ಹಾನಿ

ಪಶ್ಚಿಮ ಬಂಗಾಳ ಹಾಗೂ ಒಡಿಷಾಕ್ಕೆ ಅಪ್ಪಳಿಸಿರುವ ಯಸ್, ಅಪಾರ ಪ್ರಾಣ ಹಾಗೂ ಆಸ್ತಿ ಹಾನಿಗೆ ಕಾರಣವಾಗಿದೆ. ಒಡಿಷಾದಲ್ಲಿ ನಾಲ್ಕು ಹಾಗೂ ಪಶ್ಚಿಮ ಬಂಗಾಳದಲ್ಲಿ ಒಬ್ಬರು ಪ್ರಾಣ ತೆತ್ತಿದ್ದಾರೆ. ಪೂರ್ವ ಕರಾವಳಿಯ ಪಶ್ಚಿಮ ಬಂಗಾಳ ಹಾಗೂ ಒಡಿಷಾದ ಗಡಿ ಪ್ರದೇಶದಲ್ಲಿ ಅಪಾರ ಹಾನಿಗೆ ಕಾರಣವಾಗಿದೆ. ಒಡಿಷಾದ ಬಾಲಸೋರ್ ಹಾಗೂ ಭದ್ರಕ್ ಜಿಲ್ಲೆಗಳ 128 ಗ್ರಾಮಗಳಿಗೆ ಸಮುದ್ರದ ನೀರು ನುಗ್ಗಿದೆ. ಪಶ್ಚಿಮ ಬಂಗಾಳದಲ್ಲಿ 15 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಡಿಷಾದಲ್ಲಿ 6.5 ಲಕ್ಷ […]

ಬಂಗಾಳಕೊಲ್ಲಿ ಮಾಮೂಲಿಗಿಂತ ಹೆಚ್ಚು ಬಿಸಿ

ಯಾಸ್ ಇಂದು ಅಪ್ಪಳಿಸಲಿದ್ದು, ಇನರ ಸ್ಥಳಾಂತರಕ್ಕೆ ಸರ್ಕಾರಗಳು ಪರದಾಡುತ್ತಿವೆ. ಈ ಚಂಡಮಾರುತದ ಮೂಲವಾದ ಬಂಗಾಳ ಕೊಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ, ಹೆಚ್ಚು ಬಿಸಿಯಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಬಂಗಾಳ ಕೊಲ್ಲಿಯಲ್ಲಿ ಉಷ್ಣತೆ 2 ಡಿಗ್ರಿ ಸೆಂಟಿಗ್ರೇಡ್ ಅಧಿಕವಿದೆ ಎಮದು ಪುಣೆಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟ್ರಾಲಜಿಯ ವಿಜ್ಞಾನಿಗಳು ಹೇಳಿದ್ದಾರೆ. ಸಾಧಾರಣವಾಗಿ ಬಂಗಾಳ ಕೊಲ್ಲಿಯ ಚಂಡಮಾರುತಗಳು ಅತ್ಯಂತ ತೀವ್ರವಾಗಿರಲಿದ್ದು, ಕಳೆದ ಮಾರ್ಚ್‍ನಲ್ಲಿ ಪಶ್ಚಿಮ ಬಂಗಾಳದಲ್ಲಿ ಭಾರಿ ಜನ-ಆಸ್ತಿ ನಾಶಕ್ಕೆ ಅಂಫನ್ […]

ನೂತನ ಭೂಮಿ ನಿಯಂತ್ರಣ: ಲಕ್ಷದ್ವೀಪದಲ್ಲಿ ಭುಗಿಲೆದ್ದ ಆಕ್ರೋಶ

ಹಚ್ಚ ಹಸಿರು ವಾತಾವರಣವಿರುವ ಲಕ್ಷದ್ವೀಪದಲ್ಲಿ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಭೂಮಿ ನಿಯಂತ್ರಣ ನಿಯಮಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ. ಭಾರತ ಸೇರಿದಂತೆ ಎಲ್ಲೆಡೆಯಿಂದ ದ್ವೀಪಕ್ಕೆ ಆಗಮಿಸುವವರ ಮೇಲೆ ಕಡ್ಡಾಯ ಕ್ವಾರಂಟೈನ್ ಈ ಮೊದಲು ಜಾರಿಯಲ್ಲಿತ್ತು. ಆದರೆ, ನೂತನವಾಘಿ ನೇಮಕಗೊಂಡ ಆಡಳಿತಗಾರ ಪ್ರಫುಲ್ ಖೋಡಾ ಪಟೇಲ್ ಈ ನಿಯಮವನ್ನು ತೆಗೆದುಹಾಕಿದ್ದರಿಂದ, ಒಂದೇ ಒಂದು ಕೋವಿಡ್ ಪ್ರಕರಣಗಳು ಇಲ್ಲದಿದ್ದ ದ್ವೀಪದಲ್ಲಿ ಮೇ 24ರಂದು 6,847 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಜನವಸತಿ ಇರುವ ದ್ವೀಪಗಳಲ್ಲಿ ಎರಡು ತಿಂಗಳು ಲಾಕ್‍ಡೌನ್ ಘೋಷಿಸಲಾಗಿದೆ. ಇದನ್ನು […]

Back To Top